ಹಳಿ ದುರಸ್ತಿ: ರೈಲ್ವೇ ಗೇಟ್ ಮುಚ್ಚುಗಡೆಯಿಂದ ಸಂಚಾರ ಸಮಸ್ಯೆ

ಮಂಜೇಶ್ವರ: ಹಳಿ ದುರಸ್ತಿ ಹಿನ್ನೆಲೆಯಲ್ಲಿ ಮಂಜೇಶ್ವರ ರೈಲ್ವೇ ಗೇಟ್ ಮುಚ್ಚುಗಡೆಗೊಳಿಸಿ ದುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ತಿಂಗಳ 18ರಿಂದ ಗೇಟ್ ಬಳಿ ಹಳಿ ದುರಸ್ತಿಗೊಳಿಸಲು ಆರಂಭಿಸಲಾಗಿದ್ದು, 27ರ ತನಕ ಕಾಮಗಾರಿ ಮುಂದುವ ರಿಯಲಿದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಈ ದಾರಿಯಾಗಿ ತಲಪಾಡಿಗೆ ತೆರಳುವ ಬಸ್‌ಗಳು ಮಂಜೇಶ್ವರ ರೈಲ್ವೇ ನಿಲ್ದಾಣ ತನಕ ಸಂಚರಿಸುತ್ತಿವೆ.  ಈ ಕಾರಣದಿಂದಾಗಿ ಮಂಜೇಶ್ವರ ಒಳ ಭಾಗದ ಜನರು ತಲಪಾಡಿ, ಉದ್ಯಾವರ ಸಹಿತ ವಿವಿಧ ಕಡೆಗಳಿಗೆ ವಾಹನದಲ್ಲಿ ತೆರಳುವವರು ಹೊಸಂಗಡಿ ಮೂಲಕ ಸುತ್ತುಬಳಸಿ …

ಔಷಧಿ ಅಂಗಡಿ ಮಾಲಕ ನಿಧನ

ಕಾಸರಗೋಡು: ಬ್ಯಾಂಕ್ ರಸ್ತೆಯ ಪೋಪ್ಯುಲರ್ ಫಾರ್ಮಸಿ ಮಾಲಕ, ಬೀಚ್ ರಸ್ತೆ ನಿವಾಸಿ ಎಂ. ಈಶ್ವರ (88) ನಿಧನ ಹೊಂದಿದರು. ಕಾಸರಗೋಡು ಬ್ಯಾಂಕ್ ರಸ್ತೆ ನಾಗರಾಜ ಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾಗಿ ದ್ದರು. ಮೃತರು ಪತ್ನಿ ಶಾರದಾ, ಮಕ್ಕಳಾದ ಗಾಯತ್ರಿ, ಕೀರ್ತನ, ಸುಬ್ರಹ್ಮಣ್ಯ, ಅವಿನಾಶ್, ಅಳಿಯ ಜಯಚಂದ್ರ, ಸೊಸೆಯಂದಿರಾದ ಜಯಲಕ್ಷ್ಮಿ, ಆಶಾಲತಾ, ಸಹೋದರಿ ಮೀನಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪರಪ್ಪ ಬ್ಲೋಕ್‌ಗೆ ರಾಷ್ಟ್ರೀಯ ಪುರಸ್ಕಾರ : ಪ್ರಧಾನಮಂತ್ರಿಯಿಂದ ಸ್ವೀಕರಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ದೇಶದ ಅಸ್ಪಿರೇ ಷನ್ ಬ್ಲೋಕ್‌ಗಳ ಪೈಕಿ ಅಭಿನಂದ ನಾರ್ಹ ಸೇವೆಯ ಮೂಲಕ, ಸಾರ್ವ ಜನಿಕ ಆಡಳಿತೆ ಯಲ್ಲಿ ಗಮನಾರ್ಹ ಸಾಧನೆಗೈದಿ ರುವುದನ್ನು ಪರಿಗಣಿಸಿ ಜಿಲ್ಲೆಯ ಪರಪ್ಪ ಬ್ಲೋಕ್‌ಗೆ ಕೇಂದ್ರ ಸರಕಾರ ಘೋಷಿಸಿದ ಪ್ರಧಾನಮಂತ್ರಿ ಯವರ 2024ರ ಪುರಸ್ಕಾರವನ್ನು   ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭ ಶೇಖರನ್ ದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಂದ ಸ್ವೀಕರಿಸಿದರು. ನವದೆಹಲಿಯಲ್ಲಿ ನಡೆದ ಈ ಪುರಸ್ಕಾರ ವಿತರಣಾ ಕಾರ್ಯಕ್ರಮ ದಲ್ಲಿ ಹಲವು ಗಣ್ಯರು ಭಾಗವಹಿಸಿದರು.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋ ಗದೊಂದಿಗೆ ರೂಪು …

ಸಭಾಂಗಣದ ಮಾಲಕ, ಪತ್ನಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆ

ಕೋಟಯಂ: ಸಭಾಂಗಣದ ಮಾಲಕ ಹಾಗೂ ಪತ್ನಿ ಮನೆಯೊಳಗೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೋಟಯಂ ತಿರುವಾದಿಲ್‌ಕಲ್ ವಿಜಯ ಕುಮಾರ್, ಪತ್ನಿ ಮೀರ ಕೊಲೆಗೀಡಾದವರು. ಇವರಿಬ್ಬರೂ ರಕ್ತದ ಮಡುವಿನಲ್ಲಿ ಮನೆಯೊಳಗೆ ಕಂಡು ಬಂದಿದ್ದಾರೆ. ಇಂದು ಮುಂಜಾನೆ ಮನೆಗೆ ತಲುಪಿದ ಮನೆ ಕೆಲಸದಾಳು ಇವರಿಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡಿದ್ದಾಳೆ. ಕೂಡಲೇ ನೆರೆಮನೆಯ ವರನ್ನು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಖಚಿತಪಡಿಸಲಾಗಿದೆ. ಇಂದ್ರಪ್ರಸ್ತಂ ಸಭಾಂಗಣದ ಮಾಲಕನಾಗಿದ್ದಾರೆ. ವಿಜಯಕುಮಾರ್.

ವಾರ್ಷಿಕೋತ್ಸವ ಹೆಸರಲ್ಲಿ ಸರಕಾರದಿಂದ ಹಣ ಪೋಲು : ಅಭಿವೃದ್ಧಿ ಕಾರ್ಯ ಕುಂಟಿತ- ಎನ್‌ಟಿಯು ಆರೋಪ

ಕಾಸರಗೋಡು: ಕೇರಳ ಸರಕಾರದ ನಾಲ್ಕನೇ ವಾರ್ಷಿಕದ ಹೆಸರಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೋಟ್ಯಂತರ ರೂ. ವ್ಯರ್ಥ ಮಾಡಲಾಗುತ್ತಿದೆ ಎಂದು ಎನ್‌ಟಿಯು ಜಿಲ್ಲಾ ಸಮಿತಿ ಆರೋಪಿಸಿದೆ. ವಾರ್ಷಿಕ ಆಚರಣೆಗಳ ಹೆಸರಲ್ಲಿ ಪ್ರತೀ ಜಿಲ್ಲೆಯಲ್ಲೂ ಕೋಟ್ಯಂತರ ರೂ. ವೆಚ್ಚ ಮಾಡಿ ಚಪ್ಪರ, ಜಾಹೀರಾತು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಹಣ ಪೋಲು ಮಾಡಲಾಗುತ್ತಿದೆ. ಸರಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ನೌಕರರು ಮತ್ತು ಶಿಕ್ಷಕರಿಗೆ ಸವಲತ್ತುಗಳನ್ನು ನಿರಾಕರಿಸುತ್ತಿದೆ ಎಂದು ಜಿಲ್ಲಾ ಸಮಿತಿ ಆರೋಪಿಸಿದೆ. ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ಶಾಲಾ ಕಲೋತ್ಸವದಲ್ಲಿ ಎ ಶ್ರೇಣಿಗಳನ್ನು ಪಡೆದ ಮಕ್ಕಳಿಗೆ …

ರೈಲ್ವೇ ನಿಲ್ದಾಣಗಳಲ್ಲಿಳಿದು ಪೇಟೆ ಸುತ್ತಲು ಇ-ಸ್ಕೂಟರ್ ಸೌಕರ್ಯ: ಕಾಸರಗೋಡು ಸಹಿತ 20 ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ವಿವಿಧ ಸೌಲಭ್ಯಗಳು

ಕಾಸರಗೋಡು: ರೈಲ್ವೇ ನಿಲ್ದಾಣಗಳಲ್ಲಿ ಇಳಿದು ನಗರದ ವಿವಿಧೆಡೆಗಳಲ್ಲಿ ಸುತ್ತಾಡಬೇಕಾದರೆ ಪ್ರಯಾಣಿಕರಿಗೆ ಇನ್ನು ಮುಂದೆ ಬಾಡಿಗೆ ವಾಹನಗಳನ್ನು ಆಶ್ರಯಿಸ ಬೇಕಾಗಿಲ್ಲ. ಬದಲಾಗಿ ಹೀಗೆ ಸುತ್ತಾಡಬೇಕಾದವರಿಗೆ ರೈಲ್ವೇ ನಿಲ್ದಾಣಗಳಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೌಕರ್ಯ ಏರ್ಪಡಿ ಸಲಾಗುವುದು. ಕಾಸರಗೋಡು ಸೇರಿ ಪ್ರಮುಖ ಹದಿನೈದು ರೈಲ್ವೇ ನಿಲ್ದಾಣಗಳಲ್ಲಿ ರೈಲ್ವೇ ಇಲಾಖೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲಿದೆ. ಗಂಟೆಗಳು, ದಿವಸ ಲೆಕ್ಕದಲ್ಲಿ ಸ್ಕೂಟರ್‌ಗಳು ಬಾಡಿಗೆಗೆ ಲಭಿಸುವುದು. ಅವುಗಳನ್ನು ಬಾಡಿಗೆಗೆ ಇರಿಸಬೇಕಾದ ಸ್ಥಳವನ್ನು ರೈಲ್ವೇ ನಿರ್ಧರಿಸಲಿದೆ. ಈಗಾಗಲೇ ಇದರ ಗುತ್ತಿಗೆಯನ್ನು ಮಂಗಳೂರಿನಲ್ಲಿ ನೀಡ …

ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಟೆನಿ ಜೋಪನ್ ಕಸ್ಟಡಿಗೆ

ಕೊಲ್ಲಂ: ಕೊಟ್ಟಾರಕ್ಕರದಲ್ಲಿ ವಾಹನ ಅಪಘಾತಕ್ಕೀಡಾಗಿ ಬೈಕ್ ಸವಾರ ಮೃತಪಟ್ಟರು. ಇಂಜಕ್ಕಾಡ್ ನಿವಾಸಿ ಶೈನ್ (34) ಮೃತಪಟ್ಟವರು. ನಿಯಂತ್ರಣ ತಪ್ಪಿದ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ. ಕಾರನ್ನು ಚಲಾಯಿಸಿದ ಟೆನಿ ಜೋಪನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ದಿ| ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರ ಪರ್ಸನಲ್ ಸ್ಟಾಫ್ ಆಗಿದ್ದ ವ್ಯಕ್ತಿಯಾಗಿದ್ದಾನೆ ಟೆನಿಜೋಪನ್. ಈ ವ್ಯಕ್ತಿ ಮದ್ಯದಮಲಿನಲ್ಲಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಪುತ್ತೂರು- ಕೊಟ್ಟಾರಕ್ಕರ ರಸ್ತೆಯಲ್ಲಿ ಅವಣೂರು ಎಂಬಲ್ಲಿ ಅಪಘಾತ ಸಂಭವಿಸಿದೆ. ವೆಂಡಾರಿನಿಂದ ಕೊಟ್ಟಾರಕ್ಕರೆಗೆ ತೆರಳುತ್ತಿದ್ದ …

ಸಚಿವ ರಿಯಾಸ್‌ರಿಂದ ಇಂದು ಫ್ಲೈ ಓವರ್ ನಿರ್ಮಾಣ ಪರಿಶೀಲನೆ

 ಕಾಸರಗೋಡು: ರಾಜ್ಯ ಲೋಕೋಪಯೋಗಿ ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಇಂದು ಅಪರಾಹ್ನ ಕಾಸರಗೋಡು ಫ್ಲೈಓವರ್‌ನ ನಿರ್ಮಾಣ ಕೆಲಸವನ್ನು ಪರಿಶೀಲಿಸುವರು. ಬಳಿಕ ಫ್ಲೈ ಓವರ್‌ನ ಮೇಲೆ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವರು. ಬಳಿಕ ತಲಪಾಡಿಗೆ ಸಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸಗಳನ್ನು ಪರಿಶೀಲಿಸುವರು. ನಂತರ ಕುಂಬಳೆಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುವರು.

ಮಣಿಯೂರಿನಲ್ಲಿ ಮಕ್ಕಳ ಈಜು ತರಬೇತಿ ಶಿಬಿರ ಸಮಾಪ್ತಿ

ಅಡೂರು: ಅರ್ಪಣಾ ಟ್ರಸ್ಟ್ ಮಣಿಯೂರು ಹಾಗೂ ಶಿಶು ಮೈತ್ರಿ ಪೊಲೀಸ್ ಆದೂರು ಇದರ ಜಂಟಿ ವತಿಯಿಂದ ಮಕ್ಕಳಿಗೆ ಈಜು ತರಬೇತಿ ನೀಡಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ಪಯಸ್ವಿನಿ ನದಿ ತಟದಲ್ಲಿ ಜರಗಿತು. ಆದೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಂಬಾನ್, ಅಗ್ನಿಶಾಮಕ ದಳದ ಅಧಿಕಾರಿಗಳು, ವಾರ್ಡ್ ಪ್ರತಿನಿಧಿ ನಿಶಾ ಸಿ.ಎನ್, ಪ್ರಕಾಶ್ ಮಾಸ್ತರ್, ಪ್ರಮೋದ್ ಬೆಳ್ಳಚ್ಚೇರಿ, ಕೊರಗ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದರು. ಉಡುಪಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್, ಕುತ್ತಿಕ್ಕೋಲ್ ಶಶಿಧರನ್ ಹತ್ತು ದಿನಗಳ ಕಾಲ …

ಸಿನಿಮಾ ಶೈಲಿಯಲ್ಲಿ ಸಾಹಸಿಕವಾಗಿ ನಿಷೇಧಿತ ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ತಿರುವನಂತಪುರ: ನೆಯ್ಯಾಟಿಂಗರ ದಲ್ಲಿ ಕಾರಿನಲ್ಲಿ ಸಾಗಿಸಲು ಯತ್ನಿಸಿದ 1000 ಕಿಲೋ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ಅಬಕಾರಿ ತಂಡ ವಶಪಡಿಸಿದೆ. ಕಾರೈಕ ಮಂಟಪ ನಿವಾಸಿ ರಫೀಕ್‌ನನ್ನು ಸೆರೆ ಹಿಡಿಯಲಾಗಿದೆ. ಸಿನಿಮೀಯ ಮಾದರಿಯಲ್ಲಿ ಕಾರನ್ನು ಬೆನ್ನಟ್ಟಿ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಹೊಗೆಸೊಪ್ಪು ಉತ್ಪನ್ನಗಳನ್ನು ಸಾಗಿಸಲೆತ್ನಿಸುತ್ತಿರು ವುದಾಗಿ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಈತನ ಕಾರನ್ನು ಅಬಕಾರಿ ಅಧಿಕಾರಿಗಳು ಬೆನ್ನಟ್ಟಿ ದರು. ನೆಯ್ಯಾಟಿಂಗರಕ್ಕೆ ತಲುಪುವಾಗ ಕಾರನ್ನು ಅಡ್ಡ ನಿಲ್ಲಿಸಿದರು. ಈ ವೇಳೆ ವಾಹನಗಳಿಗೆ ಢಿಕ್ಕಿ ಹೊಡೆಸಿ ಪರಾರಿ ಯಾಗಲು ಆರೋಪಿ …