ಅಮೈ ಶ್ರೀಕೃಷ್ಣ ಭಜನಾಮಂದಿರ ವಾರ್ಷಿಕೋತ್ಸವ 25ರಂದು

ಕಾಸರಗೋಡು: ಅಮೈ ಕೃಷ್ಣನಗರ ಶ್ರೀಕೃಷ್ಣ ಭಜನಾಮಂದಿರ ದಲ್ಲಿ 24ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಈ ತಿಂಗಳ 25ರಂದು ನಡೆಯಲಿದೆ. ಅಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, 9 ಗಂಟೆಗೆ ಭಗವದ್ಗೀತಾ ಪಾರಾಯಣ, ಶ್ರೀಕೃಷ್ಣ ಅಷ್ಟೋತ್ತರ ಶತನಾಮಾರ್ಚನೆ, 10.30ಕ್ಕೆ ಶ್ರೀ ಸತ್ಯನಾರಾಯಣ ಪೂಜಾ ಕಲಶ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6.42ಕ್ಕೆ ದೀಪ ಪ್ರತಿಷ್ಠೆ, ಏಕಾಹ ಭಜನೆ ಆರಂಭ, ರಾತ್ರಿ 12 ಗಂಟೆಗೆ ಮಹಾಪೂಜೆ, 26ರಂದು ಬೆಳಿಗ್ಗೆ 6.20ಕ್ಕೆ ಮಂಗಳA …

ನಗರದ ಕ್ವಾರ್ಟರ್ಸ್‌ನಲ್ಲಿ ಘರ್ಷಣೆ ವಲಸೆ ಕಾರ್ಮಿಕ ಸಾವು:  ಪರಾರಿಯಾದ ಆರು ಮಂದಿ ಪೈಕಿ ನಾಲ್ವರು ಒಟ್ಟಪಾಲಂನಿಂದ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ನಗರದ ಆನೆಬಾಗಿ ಲಿನಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿ ರುವ ಕ್ವಾರ್ಟರ್ಸ್‌ನಲ್ಲಿ ಕಾರ್ಮಿಕರ ಮಧ್ಯೆ ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.  ಮೃತನನ್ನು ಪಶ್ಚಿಮ ಬಂಗಾಲ ಬರೋಘರಿಯಾ ಜಿಲ್‌ಫೈಗುರಿ, ಭಿಮ್ಚಿಯಾಬಾರ್ ಘರಿಯಾ ನಿವಾಸಿ ಸುಭಾಷ್ ರಾಯ್ ಎಂಬವರ ಮಗ ಸುಶಾಂತ್ ರಾಯ್ (28) ಎಂದು ಗುರುತಿಸಲಾಗಿದೆ. ಈತ ಮತ್ತು ಇತರ ಆರು ಮಂದಿ ವಲಸೆ ಕಾರ್ಮಿಕರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕಾಗಿ ಕಾಸರಗೋಡಿಗೆ ಆಗಮಿಸಿ ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ವೊಂ ದರಲ್ಲಿ  …

ಎಡರಂಗ ಸರಕಾರದ ರಾಜ್ಯ ಮಟ್ಟದ 4ನೇ ವಾರ್ಷಿಕಕ್ಕೆ ಅದ್ದೂರಿಯ ಚಾಲನೆ

ಕಾಲಿಕಡವು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಕಾಲಿಕಡವಿನಲ್ಲಿ ಇಂದು ಬೆಳಿಗ್ಗೆ ಅದ್ದೂರಿಯ ಚಾಲನೆ ದೊರಕಿದೆ. ಕಾಲಿಕಡವು ಮೈದಾನದಲ್ಲಿ ಇಂದು ಬೆಳಿಗ್ಗೆ  ಆರಂಭಗೊಂಡ ಕಾರ್ಯಕ್ರಮ ವನ್ನು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸಿದರು. ಬೃಹತ್ ಜನಸ್ತೋಮವೇ ಇಲ್ಲಿಗೆ ಹರಿದುಬಂದಿದೆ.  ಸಚಿವರುಗಳಾದ ಕೆ.ಎನ್. ಬಾಲಗೋಪಾಲನ್, ಪಿ. ರಾಜೀವ್, ಪಿ.ಎ. ಮುಹಮ್ಮದ್ ರಿಯಾಸ್, ವಿ.ಎನ್. ವಾಸನ್, ಸಜಿ ಚೆರಿಯಾನ್, ಜೆ.ಪಿ. ಚಿಂಜುರಾಣಿ, ಕಡನ್ನಪ್ಪಳ್ಳಿ ರಾಮಚಂದ್ರನ್, ಜಿ.ಆರ್. ಅನಿಲ್, ಎಂ.ಬಿ. ರಾಜೇಶ್,  ವಿ. …

ನೀರ್ಚಾಲು, ಬಂದ್ಯೋಡಿನಲ್ಲಿ ಅಪಘಾತ: ರಸ್ತೆ ದಾಟುತ್ತಿದ್ದ ಇಬ್ಬರು ವ್ಯಕ್ತಿಗಳು ಕಾರು ಢಿಕ್ಕಿಹೊಡೆದು ದಾರುಣ ಮೃತ್ಯು: ಮೂರು ಕಾರುಗಳ ವಶ

ನೀರ್ಚಾಲು/ ಕುಂಬಳೆ: ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಕಾರುಗಳು ಢಿಕ್ಕಿ ಹೊಡೆದು ಇಬ್ಬರು ವ್ಯಕ್ತಿಗಳು ಮೃತ ಪಟ್ಟ ದಾರುಣ ಘಟನೆ ನೀರ್ಚಾಲು ಹಾಗೂ ಬಂದ್ಯೋಡು ಮುಟ್ಟಂನಲ್ಲಿ  ಸಂಭವಿಸಿದೆ. ನೀರ್ಚಾಲ್‌ನಲ್ಲಿ ಮೊನ್ನೆ ರಾತ್ರಿ ಅಪಘಾತ ಸಂಭವಿಸಿದ್ದು, ಮಾನ್ಯ ಉಳ್ಳೋಡಿಯ ಗೋಪಾಲ (60) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೊನ್ನೆ ರಾತ್ರಿ 8.30ರ ವೇಳೆ ಬದಿಯಡ್ಕ- ಕುಂಬಳೆ ಕೆಎಸ್‌ಟಿಪಿ ರಸ್ತೆಯಲ್ಲಿ ನೀರ್ಚಾಲು ವಿಷ್ಣುಮೂರ್ತಿ ನಗರದಲ್ಲಿ ಅಪಘಾತವುಂಟಾಗಿದೆ. ಗೋಪಾಲ ಅವರು ರಸ್ತೆ ದಾಟುತ್ತಿದ್ದ ವೇಳೆ ಬದಿಯಡ್ಕ ಭಾಗದಿಂದ ಕುಂಬಳೆಯತ್ತ ಸಂಚರಿಸುತ್ತಿದ್ದ ಎರಡು ಕಾರುಗಳ …

ಕರ್ನಾಟಕ ಮಾಜಿ ಡಿಜಿಪಿ ಕೊಲೆ: ಪತ್ನಿ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಕರ್ನಾಟಕದ ಮಾಜಿ ಡಿಜಿಪಿ ಓಂಪ್ರಕಾಶ್ (68) ಎಚ್‌ಎಸ್ ಆರ್ ಲೇಔಟ್‌ನಲ್ಲಿರುವ ವಸತಿಯಲ್ಲಿ ಇರಿತದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪತ್ನಿ ಪಲ್ಲವಿ, ಪುತ್ರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಐಪಿಎಸ್ ಅಧಿಕಾರಿಯ ಪತ್ನಿಗೆ ಫೋನ್‌ನಲ್ಲಿ ಕರೆದು ತಾನು ಪ್ರಕಾಶ್‌ರನ್ನು ಕೊಲೆಗೈದಿರುವುದಾಗಿ ಪಲ್ಲವಿ ತಿಳಿಸಿದಳು. ಇವರು ಪೊಲೀಸರಿಗೆ ಮಾಹಿತಿ ನೀಡಿ ದರು. ಮೂರು ಮಹಡಿಯ ವಸತಿಗೃಹದ ನೆಲ ಅಂತಸ್ತಿನಲ್ಲಿ ಮೃತದೇಹ ಕಂಡು ಬಂದಿದೆ. ಹಲವು ಕಾಲದಿಂದ ಡಿಜಿಪಿ ಹಾಗೂ ಪತ್ನಿ ಮಧ್ಯೆ ವೈಮನಸ್ಸು ಉಂಟಾ …

ಹೃದಯಾಘಾತ: ಬಿಜೆಪಿ ಕಾರ್ಯಕರ್ತ ನಿಧನ

ಅಡೂರು: ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯ್ಕ್‌ರ ಸಹೋದರ ಸಕ್ರಿಯ ಬಿಜೆಪಿ ಕಾರ್ಯಕರ್ತ ಅಡೂರು ಬಲ್ಲಕಾನ ನಿವಾಸಿ ಪ್ರದೀಪ್ ಕುಮಾರ್ (42) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಎದೆನೋವು ಕಂಡು ಬಂದಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ. ಕೃಷಿಕರಾಗಿರುವ ಇವರು ಬಿಜೆಪಿ ದೇಲಂಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾಗಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಮೃತರು ತಂದೆ ಜಯನಾರಾಯಣ ನಾಯ್ಕ್, ತಾಯಿ ಭಾಗೀರಥಿ, ಸಹೋದರ …

ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣು

ಪೆರಿಯ:  ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದಾರೆ. ಪೆರಿಯಾಟಡ್ಕದ  ಸುಕುಮಾರನ್-ಪುಷ್ಪಾ ದಂಪತಿ ಪುತ್ರ ಬಿಕೇಶ್ (27) ಆತ್ಮಹತ್ಯೆಗೈದವರು. ಇಂದು ಮುಂಜಾನೆ ಮಲಗುವ ಕೊಠಡಿಯಲ್ಲಿ  ನೇಣುಬಿಗಿದಸ್ಥಿತಿ ಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾವರದಲ್ಲಿರಿಸಲಾಗಿದೆ.

ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ರೈಲ್ವೇ ಸ್ಟೇಷನ್ ಮಾಸ್ತರ್ ವಿರುದ್ಧ ಕೇಸು

ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ರೈಲ್ವೇ ಸ್ಟೇಷನ್ ಮಾಸ್ತರ್ ವಿರುದ್ಧ ಕೇಸು ಕಾಸರಗೋಡು: ಮದ್ಯದ ಅಮಲಿ ನಲ್ಲಿ ಕರ್ತವ್ಯಕ್ಕೆ ಹಾಜರಾದ ನೀಲೇಶ್ವರ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ತರ್‌ರ ವಿರುದ್ಧ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ರಾಜಸ್ತಾನ ನಿವಾಸಿ ಘನ್ ಶ್ಯಾಮ್ ಮಹವಾ (36)ರ ವಿರುದ್ಧ ರೈಲ್ವೇ ಆಕ್ಟ್ ಪ್ರಕಾರ ಈ ಪ್ರಕರಣ ದಾಖಲಿಸ ಲಾಗಿದೆ. ಇವರು ಶನಿವಾರದಂದು ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾ ಗಿದ್ದರು. ಅದನ್ನು ಗಮನಿಸಿದ ಆರ್‌ಪಿಎ ಫ್‌ನ ಎಸ್‌ಐ ಕದಿರೇಶ್ ಬಾಬು ನೇತೃ ತ್ವದ ಪೊಲೀಸರು …

ನೆರೆಮನೆಯವರಿಗೆ ಬೆದರಿಕೆ: ತಡೆಯಲು ಬಂದ ಪೊಲೀಸ್ ಸೇರಿದಂತೆ ಇಬ್ಬರಿಗೆ ಇರಿತ

ಕಾಸರಗೋಡು: ನೆರೆಮನೆ ಯವರಿಗೆ ಬೆದರಿಕೆಯೊಡ್ಡುತ್ತಿದ್ದ ವೇಳೆ ಅದನ್ನು ತಡೆಯಲು ಬಂದ ಪೊಲೀಸ್ ಸಹಿತ ಇಬ್ಬರನ್ನು ಸಹೋದರರು ಸೇರಿ ಕತ್ತಿಯಿಂದ ಕಡಿದು ಗಾಯಗೊಳಿಸಿ   ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ. ಬೇಡಡ್ಕ ಕಾಂಞಿರತ್ತಿಂಗಾಲ್ ಕೊರತ್ತಿಕುಂಡಿನಲ್ಲಿ ಮೊನ್ನೆ ರಾತ್ರಿ ಈ ಘಟನೆ ನಡೆದಿದೆ. ಕೊರತ್ತಿಕುಂಡು ನಿವಾಸಿಗಳು ಹಾಗೂ  ಸಹೋದರರಾದ ವಿಷ್ಣು (25) ಮತ್ತು ಜಿಷ್ಣು (ಜಿತ್ತು 24)  ಎಂಬವರು ಈ ಭೀಕರ ವಾತಾವರಣ ಸೃಷ್ಟಿಸಿರುವುದಾಗಿ ಆರೋಪಿಸಲಾಗಿದೆ. ಇವರಿಬ್ಬರು ಮೊನ್ನೆ ರಾತ್ರಿ ನೆರೆಮನೆಯವರಿಗೆ ಬೆದರಿಕೆಯೊಡ್ಡ ತೊಡಗಿದರೆಂದೂ ಅದನ್ನು ತಿಳಿದು ತಡೆಯಲು ಬಂದ ಬೀಂಬುಗಾಲ್ …

ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್ ವಸ್ತುಗಳ ಪ್ರಮಾಣ ಹೆಚ್ಚಳ: ಆರೋಗ್ಯಕ್ಕೆ ಹಾನಿಕರ

ತಿರುವನಂತಪುರ: ಭಾರತ ಮತ್ತು ಏಷ್ಯಾ ಖಂಡದ ಮನೆಗಳಲ್ಲಿ ಅನ್ನವು ಕೇವಲ ಆಹಾರ ಮಾತ್ರವಲ್ಲ, ಅದು ಸಂಸ್ಕೃತಿಯ ಒಂದು ಭಾಗವೂ ಆಗಿದೆ. ಇದೇ ಸಂದರ್ಭದಲ್ಲಿ ಅಕ್ಕಿಯ ಗುಣಮಟ್ಟದ ಬಗ್ಗೆ ಇತ್ತೀಚೆಗೆ ನಡೆಸಲಾದ ಸಂಶೋಧನೆಯಲ್ಲಿ ಅಕ್ಕಿಯಲ್ಲಿ ಆರ್ಸೆನಿಕ್‌ನಂತಹ ವಿಷಕಾರಿ ಅಂಶ ಪ್ರಮಾಣ ಹೆಚ್ಚುತ್ತಿದೆ ಎಂದು ಪತ್ತೆಹಚ್ಚಲಾಗಿದೆ. ಇದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದೆಂಬ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಈ ಸುದ್ಧಿ ಭಾರತಕ್ಕೆ ಮಾತ್ರವಲ್ಲ ಕೋಟ್ಯಂತರ ಮಂದಿಯ ಪ್ರಧಾನ ಆಹಾರವಾಗಿರುವ ಇಡೀ ಏಷ್ಯಾಕ್ಕೆ ಒಂದು ಗಂಭೀರ ಎಚ್ಚರಿಕೆಯಾಗಿದೆ. ದಿ ಲ್ಯಾನ್ಸೆಟ್ ಪ್ಲಾನರೀ ಹೆಲ್ತ್ …