ನಟ ಶೈನ್ ಟೋಂ ಚಾಕೊ ವಿರುದ್ಧ ಕ್ರಮ: ನಿರ್ಣಾಯಕ ಸಭೆ ಇಂದು

ಕೊಚ್ಚಿ: ನಟ ಶೈನ್ ಟೋಂ ಚಾಕೊ ಆರೋಪಿಯಾದ ಮಾದಕವಸ್ತು ಪ್ರಕರಣದ ಮುಂದಿನ ತನಿಖೆ ಕುರಿತು ತೀರ್ಮಾನಿಸಲು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಇಂದು ನಡೆಯಲಿದೆ. ಶೈನ್‌ನನ್ನು ಮತ್ತೊಮ್ಮೆ ತನಿಖೆಗೊಳಪಡಿ ಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗು ವುದು. ಶೈನ್ ನಡೆಸಿದ ಹಣಕಾಸು ವ್ಯವಹಾರಗಳ ಸಹಿತ ಪರಿಶೀಲಿಸಿ ಸ್ಪಷ್ಟ ಪುರಾವೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗು ವುದೆಂದು ತಿಳಿದು ಬಂದಿದೆ.

ಸರಕಾರದ 4ನೇ ವಾರ್ಷಿಕಾಚರಣೆ ನಿಸ್ಸಹಾಯಕರಾದ ಒಂದು ವಿಭಾಗದ ಜನರ ಕಣ್ಣೀರಿನಲ್ಲಿ- ಎಂ.ಟಿ. ರಮೇಶ್

ಕಾಸರಗೋಡು: ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಉದ್ಯೋಗಾ ರ್ಥಿಗಳು, ಆಶಾ ಕಾರ್ಯಕರ್ತೆಯರು ಸಹಿತ ನಿಸ್ಸಹಾಯಕರಾದ ಒಂದು ವಿಭಾಗದ ಜನರ ಕಣ್ಣೀರಿನಲ್ಲಿ ಎಡರಂಗ ಸರಕಾರ ನಾಲ್ಕನೇ ವಾರ್ಷಿಕವನ್ನು ಆಚರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನುಡಿದರು. ವಿವಿಧ ಮುಷ್ಕರಗಳ ಬಗ್ಗೆ ನಿಷೇಧಾತ್ಮಕ ನಿಲುವನ್ನು ಕಮ್ಯೂನಿಸ್ಟ್ ಆಡಳಿತ ಕೂಟ ಹೊಂದುತ್ತಿದೆ ಎಂದು ಅವರು ಆರೋಪಿಸಿದರು. ಕೇರಳದಲ್ಲಿ ನಡೆಯುತ್ತಿರುವ ವಿವಿಧ ಮುಷ್ಕರಗಳ ವಿರುದ್ಧ ಎಡರಂಗ ತಳೆಯುತ್ತಿರುವ ನಿಲುವು ಅವರ ಕಮ್ಯೂನಿಸ್ಟ್ ಸ್ವಭಾವವನನ್ನು ಕಳೆದುಕೊಂಡಿರುವುದಕ್ಕೆ ಪುರಾವೆಯಾಗಿದೆ ಎಂದು ಅವರು ನುಡಿದರು. …

ಸಿಪಿಐ ಹಿರಿಯ ನೇತಾರ ಪಿ. ರಾಘವ ಸಂಸ್ಮರಣೆ

ಮಂಜೇಶ್ವರ: ಸಿಪಿಐಯ ಹಿರಿಯ ನೇತಾರರಾಗಿದ್ದ ಪಿ. ರಾಘವರವರ ೧೫ನೇ ಸಂಸ್ಮರಣೆ ವಾರ್ಷಿಕ ನಿನ್ನೆ ಅವರ ಮನೆ ಬಳಿಯ  ಕುಂಜತ್ತೂರುಪದವು ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಮೂಲಕ ಜರಗಿತು. ಬಿಕೆಎಂಯು ಮುಖಂಡ ಗಂಗಾಧರ ಕೊಡ್ಡೆ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಪುಷ್ಪಾರ್ಚ ನೆಗೈದು ಉದ್ಘಾಟಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಎಐಟಿಯುಸಿ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರ್, ಶ್ರೀಧರ ಆರ್.ಕೆ, ನಾರಾಯಣ ಕಾಜೂರ್, ಯತೀಶ್ ಬಿ.ಎಂ, ಉಮೇಶ್ ಪದವು, ಧನರಾಜ್ ಕೀರ್ತೇಶ್ವರ, ಚಂದ್ರಶೇಖರ …

ಸೈಬರ್ ವಂಚನೆ : ಕಳೆದ ಮೂರು ವರ್ಷದಲ್ಲಿ ಕೇರಳದಿಂದ ಲಪಟಾಯಿಸಿದ್ದು 2012 ಕೋಟಿ ರೂ.

ಕಾಸರಗೋಡು: ಕಳೆದ ಮೂರು ವರ್ಷಗಳಲ್ಲಾಗಿ ಸೈಬರ್ ವಂಚನೆ ಮೂಲಕ ಕೇರಳದಿಂದ 1012 ಕೋಟಿ ರೂ.ವನ್ನು ಸೈಬರ್ ವಂಚಕರು ಲಪಟಾಯಿಸಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಅತೀ ಹೆಚ್ಚು ಎಂಬAತೆ ಎರ್ನಾಕುಳಂ ಜಿಲ್ಲೆಯಲ್ಲಿ ಮಾತ್ರವಾಗಿ ಇಂತಹ ವಂಚಕರು 174 ಕೋಟಿ ರೂ. ಲಪಟಾಯಿಸಿದ್ದಾರೆ. ತಿರುವನಂತಪುರ ಜಿಲ್ಲೆಯಲ್ಲಿ 114.9 ಕೋಟಿ ರೂಪಾಯಿಯನ್ನು ಲಪಟಾಯಿಸಲಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಎಂಬAತೆ ವಯನಾಡಿನಲ್ಲಿ 9 ಕೋಟಿ ರೂ. ಲಪಟಾಯಿಸಲಾಗಿದೆ.ಸೈಬರ್ ವಂಚನೆ ಮೂಲಕ ನಷ್ಟಗೊಂಡ ಹಣದಲ್ಲಿ 2022ರಲ್ಲಿ 4.38 ಕೋಟಿ ರೂ. ಹಾಗೂ 2023ರಲ್ಲಿ 37.16 …

ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಜೆ 6ರಿಂದ ರಾತ್ರಿ 6ರ ಮಧ್ಯೆ

ಕಾಸರಗೋಡು: ರಾಜ್ಯದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಜೆ 6ರಿಂದ 9 ಗಂಟೆ ತನಕದ ಅವಧಿಯಲ್ಲಿ ನಡೆಯುತ್ತಿದೆ ಎಂದು ರಾಜ್ಯ ರಸ್ತೆ ಸುರಕ್ಷಾ ಪ್ರಾಧಿಕಾರ ಲೆಕ್ಕಾಚಾರಗಳು ಸೂಚಿಸುತ್ತಿವೆ. 2024ರಲ್ಲಿ ರಾಜ್ಯದ ನಗರಪ್ರದೇಶಗಳಲ್ಲಿ  ಸಂಜೆ 6ರಿಂದ  ರಾತ್ರಿ 9ರ ನಡುವಿನ ಸಮಯದಲ್ಲಿ  ಒಟ್ಟಾರೆಯಾಗಿ 3007 ರಸ್ತೆ ಅಪಘಾತಗಳು ನಡೆದಿವೆ. ಇದರಲ್ಲಿ 568 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಹೊರತುಪಡಿಸಿದಲ್ಲಿ ನಂತರದ ಸಮಯದಲ್ಲಿ ಅತೀ ಹೆಚ್ಚು ವಾಹನ ಅಪಘಾತಗಳು ರಾತ್ರಿ 9ರಿಂದ 12 ಗಂಟೆಯೊಳಗಾಗಿ ನಡೆಯುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ.

ರೈಲು ಹಳಿ ಮೇಲೆ ಕಲ್ಲು, ಮರದ ತುಂಡುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಆರೋಪಿ ಸೆರೆ

ಕಾಸರಗೋಡು: ಕೋಟಿಕುಳಂ-ತೃಕ್ಕನ್ನಾಡ್ ಮಧ್ಯೆ ಉದುಮ ರೈಲ್ವೇ ಗೇಟ್ ಬಳಿ ಹಾಗೂ ಹೊಸದುರ್ಗ ಕಾಸರಗೋಡು ಡೌನ್‌ಲೈನ್ ರೈಲು ಹಳಿಯಲ್ಲಿ ಕಲ್ಲುಗಳು, ಮರದ ತುಂಡುಗಳನ್ನು ಇರಿಸಿ ರೈಲು ಬುಡಮೇಲುಕೃತ್ಯಕ್ಕೆತ್ನಿಸಿದ  ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಮುಳ ಇರಂತ್ತೂರು ನಿವಾಸಿ ಜೋಜಿ ಥೋಮಸ್ (29) ಬಂಧಿತ ಆರೋಪಿ. ಎಪ್ರಿಲ್ 17ರಂದು ಮುಂಜಾನೆ ಬುಡಮೇಲುಯತ್ನ ಕೃತ್ಯ ನಡೆದಿತ್ತು. ನಿಜಾಮುದ್ದೀನ್ ಸೂಪರ್ ಫಾಸ್ಟ್ ರೈಲುಗಾಡಿ ಆ ದಾರಿಯಾಗಿ ಸಾಗುವ ವೇಳೆ ಈ ಯತ್ನ ನಡೆಸಲಾಗಿತ್ತು.  ಆ ಬಗ್ಗೆ ಪ್ರಸ್ತುತ ರೈಲಿನ ಸೀನಿಯರ್ ಸೆಕ್ಷನ್ ಇಂಜಿನಿಯರ್ …

ನಿರಂತರ ನಗ್ನತೆ ಪ್ರದರ್ಶಿಸಿದ ಯುವಕ : ಫೋಟೋ ತೆಗೆದು ಪೊಲೀಸರಿಗೆ ನೀಡಿದ ಬಾಲಕಿ

ಕಾಸರಗೋಡು: ಪದೇ ಪದೇ ನಗ್ನತೆ ಪ್ರದರ್ಶಿಸಿದ ಯುವಕನ ಫೋಟೋವನ್ನು ತೆಗೆದ ಹದಿನಾರರ ಹರೆಯದ ಬಾಲಕಿ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕೇಸು ದಾಖಲಿಸಿಕೊಂಡ ಬೇಕಲ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೆರಿಯ ಸಮೀಪದ ಶ್ರೀನಾಥ್ (27) ಎಂಬಾತ ಕಸ್ಟಡಿಯಲ್ಲಿರುವ ಯುವಕನಾಗಿದ್ದಾನೆ. ಪೆರಿಯ ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಘಟನೆ ನಡೆದಿದೆ. ಬಾಲಕಿಯ  ಮುಂದೆ ಯುವಕ ಹಲವು ಬಾರಿ ನಗ್ನತೆ ಪ್ರದರ್ಶಿಸಿದ್ದಾನೆ. ಇದರಿಂದ ಆತನಿಗೆ ಹಲವು  ಬಾರಿ ತಾಕೀತು ನೀಡಿದರೂ ಪ್ರಯೋಜನವಾಗಲಿಲ್ಲ. ಈತ …

ಅತ್ತೆಯ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿದ ಅಳಿಯ: ಆರೋಪಿ ಕಸ್ಟಡಿಯಲ್ಲಿ

ಕಾಸರಗೋಡು: ಯುವಕನೋರ್ವ ತನ್ನ ಪತ್ನಿಯ ತಾಯಿ ಸ್ನಾನ ಮಾಡುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಆಕೆಗೆ ಕಳುಹಿಸಿಕೊಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಆ ಬಗ್ಗೆ ಲಭಿಸಿದ ದೂರಿನಂತೆ ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ೪೦ರ ಹರೆಯದ ಗೃಹಿಣಿ ಈ ಬಗ್ಗೆ ರಾಜಪುರಂ ಪೊಲೀಸರಿಗೆ ದೂರು ನೀಡಿದ್ದು ಇದರಂತೆ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಕೇಸು ದಾಖಲಿಸಲಾಗಿದೆ.ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣಕ್ಕೆ ಕಾರಣವಾದ  ಘಟನೆ ನಡೆದಿದೆ. ಅಂದು ಯುವಕ ಪತ್ನಿಯ ಮನೆಗೆ ಬಂದಿದ್ದು, ಈ …

ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಯುವಕನಿಗೆ ಗಂಭೀರ

ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಿಂದ  ಯುವಕ ಹೊರಕ್ಕೆಸೆ ಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಾಞಂಗಾಡ್ ಪುಲ್ಲೂರು ನಿವಾಸಿ ನಿತಿನ್ (22) ಎಂಬಾತ ಗಾಯಗೊಂಡಿದ್ದಾನೆ. ಈತ ನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳೂರಿ ನಿಂದ ಕಾಸರಗೋಡು ಭಾಗಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ನಿತಿನ್ ಪ್ರಯಾಣಿಸುತ್ತಿದ್ದನು. ನಿನ್ನೆ ಸಂಜೆ ರೈಲು ಮಂ ಜೇಶ್ವರ ಬಳಿ ಕಣ್ವತೀರ್ಥಕ್ಕೆ ತಲುಪಿ ದಾಗ ಈತ ಹೊರಕ್ಕೆಸೆಯಲ್ಪ ಟ್ಟಿದ್ದಾನೆ. ವಿಷಯ ತಿಳಿದು ಪೊಲೀ ಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ನಾಗರಿಕರು ಆತನನ್ನು ಆಸ್ಪತ್ರೆಗೆ ತಲುಪಿಸಿದ್ದರು. ಗಾಯಗೊಂಡ ವ್ಯಕ್ತಿ ಯ …

ಪೊಲೀಸ್ ತಪಾಸಣೆ ವೇಳೆ  ಹೋಟೆಲ್‌ನಿಂದ ಜಿಗಿದು ಪರಾರಿಯಾದ ನಟ ಶೈನ್ ಠಾಣೆಯಲ್ಲಿ ಹಾಜರು

ಕೊಚ್ಚಿ:  ಮಾದಕದ್ರವ್ಯ ತಪಾ ಸಣೆಗೆಂದು ಕೊಚ್ಚಿಯ ಹೋಟೆ ಲೊಂದಕ್ಕೆ ಬಂದ ಪೊಲೀಸರನ್ನು ಕಂಡು ಅಲ್ಲಿಂದ ಜಿಗಿದು ಪರಾರಿ ಯಾದ ಮಲೆಯಾಳಂ ಸಿನಿಮಾ ನಟ ಶೈನ್ ಟೋಂ ಚಾಕೋ ಇಂದು ಬೆಳಿಗ್ಗೆ ಕೊಚ್ಚಿ ನೋರ್ತ್ ಪೊಲೀಸ್ ಠಾಣೆಯಲ್ಲಿ ನೇರವಾಗಿ ಹಾಜರಾಗಿ ದ್ದಾರೆ.  ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಹೋಟೆಲ್‌ನಿಂದ ಪರಾರಿಯಾದ ಶೈನ್ ಟೋಂನ ಪತ್ತೆಗಾಗಿ ಪೊಲೀ ಸರು ವ್ಯಾಪಕ ಶೋಧ ನಡೆಸಿದ್ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾ ಗಲಿಲ್ಲ.  ಇಂದು ಮುಂಜಾನೆ ಪೊಲೀಸ್ ಠಾಣೆಯಲ್ಲಿ ಹಾಜರಾಗು ವಂತೆ ನಿರ್ದೇಶಿಸಿ ಶೈನ್ …