ಕಾರ್ಯಾಚರಣೆ ವೇಳೆ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಸ್ವಯಂ ಕೈಗೆ ಇರಿದು ಗಾಯಗೊಳಿಸಿದ ಆರೋಪಿ: ಮದ್ಯ ವಶ

ಪೆರ್ಲ: ಅಕ್ರಮ ಮದ್ಯ ಮಾರಾಟ ಪತ್ತೆಗಾಗಿ  ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಯೋರ್ವ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಬಳಿಕ ಸ್ವಯಂ ತನ್ನ ಕೈಗೆ ಗಾಯಗೊಳಿಸಿದ ಘಟನೆ ಪೆರ್ಲದಲ್ಲಿ ನಡೆದಿದೆ. ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ಎಂ.ವಿ. ಸುಧೀಂದ್ರನ್ ನೇತೃತ್ವದ ತಂಡ ಪೆರ್ಲದಲ್ಲಿ ಮೊನ್ನೆ ಮಧ್ಯಾಹ್ನ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಬೆಳವಣಿಗೆ ನಡೆದಿದೆ. ನಾವು ಅಬಕಾರಿ ಕಾರ್ಯಾಚರಣೆಗಿಳಿದಾಗ ಕನ್ನಡಿಕ್ಕಾನ ನಿವಾಸಿ ಮೊಯ್ದೀನ್ ಕುಂಞಿ (60) ಎಂಬಾತ 2.52 ಲೀಟರ್ ಕರ್ನಾಟಕ ಮದ್ಯ …

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹೆಡ್ಲಿ: ರಾಣಾನಿಂದ ಮಹತ್ತರ ಸುಳಿವು

ನವದೆಹಲಿ: 2008 ನವಂಬರ್ 11ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ    ಪ್ರಧಾನ ಸೂತ್ರಧಾರ  ಡೇವಿಡ್ ಕೋಲ್‌ಮ್ಯಾನ್ ಹೆಡ್ಲಿ  ಆಗಿದ್ದಾನೆಂದು ಈ ಪ್ರಕರಣ ಇನ್ನೋರ್ವ ಪ್ರಧಾನ ಆರೋಪಿ ತಹವೂರ್ ಹುಸೈನ್ ರಾಣಾ ವಿಚಾರಣೆ ವೇಳೆ  ಬಹಿರಂಗಪಡಿಸಿದ್ದು ಅದರಂತೆ ಹೆಡ್ಲಿಯನ್ನು ವಿಚಾರಣೆಗೊಳಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದಾಗಿದೆ. ಹೆಡ್ಲಿ  ಅಮೆರಿಕಾದ ಪ್ರಜೆಯಾಗಿದ್ದು, ಆದ್ದರಿಂದ ಅಲ್ಲಿ ಆತನನ್ನು ವಿಚಾರಣೆಗೊಳಪಡಿಸಲು ಎನ್‌ಐಎ ಅಮೆರಿಕಾದ ಸಹಾಯ ಕೋರಿದೆ. ಹೆಡ್ಲಿ ಈಗ ಅಮೆರಿಕಾದ ಜೈಲಿನಲ್ಲಿದ್ದಾನೆ. ಇತರ ದೇಶಗಳಿಗೆ ನನ್ನು  ಹಸ್ತಾಂತರಿಸಬಾರದೆಂಬ ನಿಬಂಧನೆ ಮುಂದಿರಿಸಿದ ಬಳಿಕ  …

ಮನೆ ಬಳಿಯಿಂದ ಸ್ಕೂಟರ್ ಕಳವು

 ಉಪ್ಪಳ: ಕಣ್ವತೀರ್ಥ ನಿವಾಸಿ ಮಹಮ್ಮದ್ ಮಸೂದ್ ಎಂಬವರ ಸ್ಕೂಟರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಈ ತಿಂಗಳ 13ರಂದು ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಸ್ಕೂಟರ್ ಮರುದಿನ ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿದೆ ಯೆಂದು ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬಿ.ವಿ. ವಿಜಯಭಾರತ್ ರೆಡ್ಡಿ ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ

ಕಾಸರಗೋಡು: ರಾಜ್ಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ವಿ. ವಿಜಯಭಾರತ್ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ. 2019ನೇ ಐಪಿಎಸ್ ಬ್ಯಾಚ್‌ನವರಾಗಿದ್ದಾರೆ. ತಿರುವನಂತಪುರ ಸಿಟಿ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಿರುವನಂತಪುರದಲ್ಲಿ ಸ್ಪೆಷಲ್ ಆಪರೇಶನ್ಸ್ ವಿಭಾಗ ಸುಪರಿಂಟೆಂಡೆಂಟ್ ಆಗಿದ್ದ ಪರಶ್‌ಟಿ ಐಪಿಎಸ್‌ರವರನ್ನು ಆ ಹುದ್ದೆಗೆ ನೇಮಕಗೊಳಿಸಲಾಗಿದೆ. ದೀಪಕ್ ಧನ್‌ಕರ್ ಐಪಿಎಸ್‌ರನ್ನು ಸ್ಪೆಷಲ್ ಆಪರೇಶನ್ ಸೂಪರಿಂಟೆಂಡೆಂಟ್‌ರಾಗಿ ನೇಮಕಗೊಳಿಸಲಾಗಿದೆ. ಎರ್ನಾಕುಳಂ ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವೈಭವ್ ಸಕ್ಸೇನಾರನ್ನು ಎನ್.ಐ.ಎ.ಗೆ ಡೆಪ್ಯು ಟೇಶನ್‌ನಲ್ಲಿ ನೇಮಕಗೊಳಿಸಲಾಗಿದೆ. …

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ರಾಮನಗರ: ಮಾಜಿ ಡೋನ್ ಮುತ್ತಪ್ಪ ರೈಯ ಪುತ್ರ ರಿಕ್ಕಿ ರೈಯ ಮೇಲೆ ನಿನ್ನೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಮನೆ ಬಳಿ  ಗುಂಡಿನ ದಾಳಿ ನಡೆದಿದೆ. ಆದರೆ ಕೂದಲೆಳೆ ಅಂತರದಲ್ಲಿ ರಿಕ್ಕಿ ರೈ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ  ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.   ನಿನ್ನೆ ರಾತ್ರಿ ಸುಮಾರು 11.30ರ ವೇಳೆ ಈ ಗುಂಡಿನ ದಾಳಿ ನಡೆದಿದೆ. ಡ್ರೈವಿಂಗ್ ಸೀಟನ್ನು ಟಾರ್ಗೆಟ್ ಮಾಡಿ ದುಷ್ಕರ್ಮಿಗಳು …

ಬಪ್ಪನಾಡು ಕ್ಷೇತ್ರ ರಥೋತ್ಸವ ವೇಳೆ ಮುರಿದು ಬಿದ್ದ ಬ್ರಹ್ಮರಥ

ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವ ವೇಳೆ ರಥ ಮುರಿದು ಬಿದ್ದ ದುರ್ಘಟನೆ ನಿನ್ನೆ  ತಡರಾತ್ರಿ ಸಂಭವಿಸಿದೆ. ವಾರ್ಷಿಕ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಭಾಗ ಮುರಿದು ಬಿದ್ದಿದೆ. ಈ ವೇಳೆ ಕ್ಷೇತ್ರದಲ್ಲಿ ಭಾರೀ ಭಕ್ತರು ನೆರೆದಿದ್ದರು. ಅರ್ಚಕರು ರಥದಲ್ಲಿ ಕುಳಿತಿದ್ದರೂ ಕೂಡಾ ಯಾರಿಗೂ ಯಾವುದೇ ಹಾನಿ ಸಂಭವಿಸಲಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ಉತ್ಸವದ ವಿಧಿ ವಿಧಾನಗಳನ್ನು ಮುಂದುವರಿಸಲಾಗಿದೆ.

ದೆಹಲಿಯಲ್ಲಿ ಮನೆ ಸಮುಚ್ಛಯ ಕುಸಿದು ನಾಲ್ವರು ಮೃತ್ಯು: ಹಲವರು ಸಿಲುಕಿಕೊಂಡಿರುವ ಶಂಕೆ

ನವದೆಹಲಿ: ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ಮುಂಜಾನೆ ವಸತಿ ಸಮುಚ್ಛಯ ಕಟ್ಟಡ ಕುಸಿದುಬಿದ್ದು ನಾಲ್ವರು ಸಾವನ್ನಪ್ಪಿದ ಘೋರ ದುರಂತ ನಡೆದಿದೆ.  ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವುದಾಗಿ  ಶಂಕಿಸ ಲಾಗಿದೆ. ರಕ್ಷಣಾ ಕಾರ್ಯಾ ಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ಪೊಲೀಸರು ತೊಡಗಿದ್ದಾರೆ. ಜೊತೆಗೆ ಅಗ್ನಿಶಾಮಕ ದಳವೂ ಸಹಕರಿಸುತ್ತಿದೆ. ಇಂದು ಮುಂಜಾನೆ 2.50ರ ವೇಳೆಗೆ  ಈ ದುರಂತವುಂಟಾಗಿದೆ. ಆ ವೇಳೆ  ಭಾರೀ ಗುಡುಗುಮಳೆ ಇತ್ತೆಂದು ಅಧಿಕಾರಿಗಳು ಹೇಳಿದ್ದಾರೆ.

ಕೂಲಿ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಉಪ್ಪಳ: ಕೂಲಿ ಕಾರ್ಮಿಕ ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಳಿಯ ಪೊಲ್ಲರಕೋಡಿ ನಿವಾಸಿ ಮೋಣು ಮೊಗೇರ (62) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಸಮೀಪ ಕೆಲಸ ನಿರತರಾಗಿದ್ದ ವೇಳೆ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ  ನಿಧನ ಸಂಭವಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚೆರುಗೋಳಿ ಹಿಂದೂ  ರುದ್ರಭೂಮಿ ಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ಬೇಬಿ, ಮಕ್ಕಳಾದ …

ಹಿಂದೂ ಮುಸ್ಲಿಂ ಬಾಂಧವ್ಯದ ಸಂಕೇತದೊಂದಿಗೆ ಉದ್ಯಾವರ ದೈವಗಳಿಂದ ಸಾವಿರ ಜಮಾಯತ್ ಮಸೀದಿ ಭೇಟಿ

ಮಂಜೇಶ್ವರ: ಪ್ರಸಿದ್ಧವಾದ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಅಣ್ಣ ತಮ್ಮ ದೈವಗಳ ಕ್ಷೇತ್ರ ಜಾತ್ರೆಯ ಪೂರ್ವಭಾವಿ ಯಾಗಿ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ದೈವಗಳ ಭೇಟಿ ನಿನ್ನೆ ಸಾಂಪ್ರದಾಯಿಕ ರೀತಿಯಲ್ಲಿ ಜರಗಿತು. ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತದೊಂ ದಿಗೆ ಕಳೆದ 800 ವರ್ಷಗಳಿಂದ ಆಚರಿಸುತ್ತಿರುವ ಉದ್ಯಾವರ ಶ್ರೀ ಅರಸು ದೈವಗಳ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ನಿನ್ನೆ ಸಾವಿರ ಜಮಾಯತ್‌ಗೆ ಭೇಟಿ ನೀಡಿದಾಗ ಮುಸ್ಲಿಂ ಬಾಂಧವರು ಹೃತ್ಪೂರ್ವಕ ಸ್ವಾಗತ ನೀಡಿದರು. ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ …

ರಾಜ್ಯ ಸರಕಾರದ ೪ನೇ ವಾರ್ಷಿಕಾಚರಣೆಯನ್ನು ಜನಪರ ಉತ್ಸವವನ್ನಾಗಿ ಮಾಡಬೇಕು- ಸಚಿವ ಎ.ಕೆ. ಶಶೀಂದ್ರನ್

ಕಾಸರಗೋಡು: ಈ ತಿಂಗಳ 21ರಿಂದ 23ರವರೆಗೆ ಜಿಲ್ಲೆಯಲ್ಲಿ ನಡೆಯುವ ಪಿಣರಾಯಿ ವಿಜಯನ್ ಸರಕಾರದ ೪ನೇ ವಾರ್ಷಿಕ ಆಚರಣೆಯನ್ನು ಜನಪರ ಉತ್ಸವವಾಗಿ ಬದಲಿಸಬೇಕೆಂದು ಜಿಲ್ಲೆಯ ಹೊಣೆಗಾರಿಕೆಯಿರುವ ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ನುಡಿದರು. ಕಾಲಿಕ್ಕಡವ್ ಪಡುವಳಂ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದುಳಿದಿದ್ದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಪ್ರಗತಿಗೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯ ಸರಕಾರದ …