ಹಜ್ಜ್ ತೀರ್ಥಾಟನೆ 3ನೇ ಹಂತದ ತರಬೇತಿ ನಾಳೆಯಿಂದ

ಕಾಸರಗೋಡು: ರಾಜ್ಯ ಹಜ್ಜ್ ಸಮಿತಿ ವತಿಯಿಂದ ಈ ವರ್ಷ ಹಜ್ಜ್‌ಗೆ ತೆರಳುವವರಿಗಿರುವ ತೃತೀಯ ಹಂತದ ತಾಂತ್ರಿಕ ತರಬೇತಿ ತರಗತಿಗಳು ನಾಳೆಯಿಂದ ಆರಂಭಗೊಳ್ಳಲಿದೆ. ನಾಳೆ ದೇಳಿ ಸಅದಿಯದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಆಟ್ಟಕ್ಕೋಯ ತಂಙಳ್ ಕುಂಬೋಳ್ ನಿರ್ವಹಿಸುವರು. ಹಜ್ಜ್ ಸಮಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಶಂಸುದ್ದೀನ್ ಭಾಗವಹಿಸುವರು. ಕಾಸರಗೋಡು, ಚೆರ್ಕಳ ವಲಯದ ಹಾಜಿಯವರು ಭಾಗವಹಿಸಬೇಕು. 27ರಂದು ಮಂಜೇಶ್ವರ ಮಳ್‌ಹರ್, 28ರಂದು ಕಾಞಂಗಾಡ್ ಬಿಗ್‌ಮಾಳ್, ಮೇ 1ರಂದು ತೃಕರಿಪುರ ನಡಕ್ಕಾವ್‌ನಲ್ಲಿ ತರಗತಿಗಳು ನಡೆಯಲಿದೆ.

ಅಡುಗೆ ಕಾರ್ಮಿಕನಿಗೆ ಅಸೌಖ್ಯ: ಸಂಕಷ್ಟ ಸ್ಥಿತಿಯಲ್ಲಿರುವ ಕುಟುಂಬದಿಂದ ಚಿಕಿತ್ಸೆಗಾಗಿ ಸಹಾಯ ಯಾಚನೆ

ಕುಂಬಳೆ: ವಿವಿಧ ಹೋಟೆಲ್ ಗಳಲ್ಲಿ ಅನೇಕ ವರ್ಷಗಳಿಂದ ಅಡುಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಈಗ ಅಸೌಖ್ಯ ನಿಮಿತ್ತ ಸಂಕಷ್ಟ ಕ್ಕೀಡಾಗಿದ್ದಾರೆ. ಪುತ್ತಿಗೆ ಎಡನಾಡು ಸಜಂಕಳ ನಿವಾಸಿ ವಿಶ್ವನಾಥ (38) ಅಸೌಖ್ಯ ತಗಲಿ ಕೆಲಸ ಮಾಡಲು ಸಾಧ್ಯವಾಗದೆ ಸಮಸ್ಯೆಗೀಡಾದವರು. ಇದರಿಂದ ಕೆಲಸವಿಲ್ಲದೆ ಕುಟುಂಬ ಸಂಕಷ್ಟಕ್ಕೀಡಾಗಿದೆ. ಕಾಲುನೋವಿನಿಂದ ಬಳಲುತ್ತಿರುವ ಇವರು ವಿವಿಧ ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದರಾದರೂ ಎಲುಬು ಸವೆತ ಮತ್ತು ನರಗಳ ದೌರ್ಬಲ್ಯಗಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸುಮಾರು 6 ಲಕ್ಷ ರೂ. ವೆಚ್ಚ ತಗಲಬಹುದೆಂದು …

ಪೋಕ್ಸೋ ಪ್ರಕರಣಗಳಲ್ಲಿ ಗಣನೀಯ ಏರಿಕೆ: ಅಧ್ಯಾಪಕರ ಸಹಾಯದಿಂದ ಮಕ್ಕಳಿಗೆ ತಿಳುವಳಿಕೆ ಮೂಡಿಸಲು ಯೋಜನೆ

ಕಾಸರಗೋಡು: ಮಕ್ಕಳು ಲೈಂಗಿಕ ಕಿರುಕುಳಕ್ಕೊಳಗಾಗುವುದನ್ನು ತಡೆಗಟ್ಟಲು ಅಧ್ಯಾಪಕರನ್ನು ಬಳಸಿಕೊಂಡು ತಿಳುವಳಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಇತರರು ಯಾವ ಉದ್ದೇಶದಿಂದ ದೇಹವನ್ನು ಸ್ಪರ್ಶಿಸುತ್ತಾರೆ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ. ಮಕ್ಕಳು ಇತರರಿಂದ ತಮಗುಂಟಾಗುವ ಕೆಟ್ಟ ಅನುಭವಗಳ ಕುರಿತು ಅಧ್ಯಾಪಕರು, ಅಧ್ಯಾಪಿಕೆಯರು ಹಾಗೂ ಚೈಲ್ಡ್ ಲೈನ್ ಕಾರ್ಯಕರ್ತರಲ್ಲಿ ತಿಳಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುವುದರಿಂದ ದಾಖಲಾಗುವ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. …

ಹುಡುಗರ ಮೇಲೂ ದೌರ್ಜನ್ಯಕಿರುಕುಳ ಅತೀ ಹೆಚ್ಚು ಮನೆಗಳಲ್ಲಿ

ಕಾಸರಗೋಡು: ಮಕ್ಕಳ ಮೇಲೆ ಶಾರೀರಿಕ ದೌರ್ಜನ್ಯ ಅತೀ ಹೆಚ್ಚು ನಡೆಯುವುದು ಮನೆಗಳಲ್ಲಿ ಎಂಬ ಆರೋಪವೂ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 2024ರಲ್ಲಿ 1535 ಮಕ್ಕಳ ಮೇಲೆ ಕಿರುಕುಳ ನಡೆದಿದೆ. ಈ ಪೈಕಿ 1004 ಮಕ್ಕಳು ಸ್ವಂತ ಮನೆಗಳಲ್ಲೇ ಕಿರುಕುಳಕ್ಕೊಳಗಾ ಗಿದ್ದಾರೆ. ಅದೇ ರೀತಿ ಶಾಲೆಗಳಲ್ಲಿ 133 ಮಂದಿ, ವಾಹನಗಳಲ್ಲಿ- 102, ಹೋಟೆಲ್ಗಳಲ್ಲಿ- 99, ಸ್ನೇಹಿತರ ಮನೆಗಳಲ್ಲಿ- 96, ಧಾರ್ಮಿಕ ಸಂಸ್ಥೆಗಳಲ್ಲಿ- 60 ಆಸ್ಪತ್ರೆಗಳಲ್ಲಿ- 29, ಚೈಲ್ಡ್ ಕೇರ್ ಕೇಂದ್ರಗಳಲ್ಲಿ 12 ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದು …

ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ತಂಬಾಕು, ಸಿಗರೇಟು ಜಾಹೀರಾತು ತೆರವಿಗೆ ಕ್ರಮ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ತಂಬಾಕು, ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪರವಾನಗಿದಾರರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು, ಜಾಹೀರಾತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಪೆರ್ವತ್ತೋಡಿಗುತ್ತು ದೈವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ 22ರಿಂದ

ಬೆಳ್ಳೂರು: ಪೆರ್ವತ್ತೋಡಿಗುತ್ತು ಶ್ರೀ ಧೂಮಾವತಿ ಮತ್ತು ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಈ ತಿಂಗಳ 22ರಿಂದ 25ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದೇ ಸಮಯದಲ್ಲಿ ದೈವನೇಮ ನಡೆಯಲಿದೆ. 22ರಂದು ಸಂಜೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ರಾತ್ರಿ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, 23ರಂದು ಮುಂಜಾನೆ 5ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 7.24ಕ್ಕೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, 10ರಿಂದ ನಾಗ ತಂಬಿಲ ಜರಗಲಿದೆ. 11 ಗಂಟೆಗೆ …

ಸೇತುವೆಯಿಂದ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆ

ಕಾಸರಗೋಡು:   ಚಂದ್ರಗಿರಿ ಹೊಳೆಗೆ ನಿನ್ನೆ ಹಾರಿ   ನಾಪತ್ತೆಯಾದ ಯುವಕನ ಮೃತದೇಹ ಹೊಳೆ ಸಮೀಪ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಅಗ್ನಿಶಾಮಕದಳ, ಪೊಲೀಸರು ಮತ್ತು ಊರವರು ಸೇರಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇವರ ಮೃತದೇಹ  ಪತ್ತೆಯಾಗಿದೆ.   ಚೆಂಗಳ ಪಡಿಞ್ಞಾರ್ ಮೂಲೆ  ಭಾಪಕಿ ನಗರದ ಕಣ್ಣರಂ ಮುಹಮ್ಮದ್ ಎಂಬ ವರ ಪುತ್ರ ಕೆ.ಎಂ.ಶೆರೀಫ್ (45) ಸಾವ ನ್ನಪ್ಪಿದ ಯುವಕ. ಇವರು ನಿನ್ನೆ ಬೆಳಿಗ್ಗಿ ನಿಂದ ಮನೆಯಿಂದ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಯವರು ಹುಡು ಕಾಟದಲ್ಲಿ ತೊಡಗಿದಾಗ ಪೆರುಂಬಳ ಸೇತುವೆ ಬಳಿ ಅವರು ಪ್ರಯಾಣಿಸಿದ್ದ …

ಜ್ಯುವೆಲ್ಲರಿ ನೌಕರೆ ನಾಪತ್ತೆ: ಪೊಲೀಸರಿಂದ ತನಿಖೆ

ಕಾಸರಗೋಡು: ಕಾಸರ ಗೋಡಿನ ಜ್ಯುವೆಲ್ಲರಿಯೊಂದರ ನೌಕರೆಯಾದ ಯುವತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಪರವನಡ್ಕ ಮಣಿಯಂಗಾನ ನಿವಾಸಿ ಎಂ. ಶರಣ್ಯ (35) ನಾಪತ್ತೆಯಾದ ಯುವತಿ. ಪತಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಂದಿನಂತೆ ಬುಧವಾರ ಬೆಳಿಗ್ಗೆ ಈಕೆ ಜ್ಯುವೆಲ್ಲರಿಗೆ ಕೆಲಸಕ್ಕೆಂದು ತೆರಳಿದ್ದರು. ವಾಪ ಸ್ಸಾಗದ ಹಿನ್ನೆಲೆಯಲ್ಲಿ  ಹುಡುಕಾಟ ನಡೆಸಿದಾಗ 5 ಗಂಟೆಗೆ ಜ್ಯುವೆಲ್ಲರಿ ಯಿಂದ ಕೆಲಸ ಮುಗಿಸಿ ತೆರಳಿರು ವುದಾಗಿ ಮಾಹಿತಿ ಲಭಿಸಿತ್ತು. ಆದರೆ ರಾತ್ರಿಯಾದರೂ ಮನೆಗೆ ತಲುಪದ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಮೇಲ್ಪರಂಬ ಪೊಲೀಸರು …

ನಾಗರ ಹಾವಿನ ಕಡಿತದಿಂದ ಮಧ್ಯವಯಸ್ಕ ದಾರುಣ ಮೃತ್ಯು

ಮುಳ್ಳೇರಿಯ: ನಾಗರ ಹಾವಿನ ಕಡಿತದಿಂದ ಮಧ್ಯವಯಸ್ಕ ಮೃತಪಟ್ಟ ಘಟನೆ ಬೆಳ್ಳೂರಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಬೆಳ್ಳೂರು ಬಳಿಯ ಬೊಳ್ಳಂದೂರು ನಿವಾಸಿ ರಮೇಶ್ ಪೂಜಾರಿ (51) ಎಂಬವರು ಹಾವು ಕಡಿತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ  ಬೆಳಿಗ್ಗೆ ಮನೆ ಬಳಿಯ ಕಟ್ಟಿಗೆ ತುಂಬಿಸುವ ಕೊಟ್ಟಿಗೆಯಲ್ಲಿ ಇವರಿಗೆ ನಾಗರಹಾವು ಕಚ್ಚಿದೆ. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದುದರಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿ ದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿದೆ. ರಮೇಶ್ ಪೂಜಾರಿ ಅಡಿಕೆ ಮರವೇರುವ ಕಾರ್ಮಿಕನಾಗಿದ್ದು, ಊರಿನಲ್ಲ್ಲಿ ಚಿರಪರಿಚಿತರಾಗಿದ್ದರು. …

ಕಾಡುಕೋಣದ ದಾಳಿಯಿಂದ ವೃದ್ಧ ಗಂಭೀರ

ಅಡೂರು: ಜಿಲ್ಲೆಯಲ್ಲಿ ಕಾಡುಕೋಣದ ಉಪಟಳ ಮತ್ತೆ ತಲೆಯೆತ್ತಿದೆ. ಅಡೂರಿಗೆ ಸಮೀಪ ಕಾಡುಕೋಣದ ದಾಳಿಗೆ ವೃದ್ಧರೋ ರ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಳ್ಳಂಜಿ ಬಳಾಂಕಯ ನಿವಾಸಿ   ಕುಂಞಿರಾಮನ್ (75) ಗಾಯಗೊಂಡ ವ್ಯಕ್ತಿ. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಇವರು ಅಂಗಡಿಯಿಂದ ಸಾಮಾಗ್ರಿ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ  ವ್ಯಕ್ತಿಯೋರ್ವರ ತೋಟದಿಂದ ಕಾಡುಕೋಣ ದಿಢೀರ್ ಆಗಿ ನುಗ್ಗಿ ಬಂದು ದಾಳಿ ನಡೆಸಿದೆ. ಇದರಿಂದ ಬೆನ್ನುಮೂಳೆ, ಕೈಗಳಿಗೆ ಗಂಭೀರ ಗಾಯಗೊಂಡಿದ್ದ ಅವರು ಮನೆಗೆ ಬಂದು  ನಡೆದ ವಿಷಯವನ್ನು  …