ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ

ಬದಿಯಡ್ಕ: ಬೆಳ್ಳೂರು ಪೆರುವತ್ತೋಡಿಯಲ್ಲಿ ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ ಸ್ಪೆಕ್ಟರ್ (ಗ್ರೇಡ್) ಕೃಷ್ಣ ಎಂ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6.66 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಬೆಳ್ಳೂರು   ಪೆರುತ್ತೋಡಿ ನಿವಾಸಿ ಶ್ರೇಯಸ್ ಕುಮಾರ್ (23) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಲಿಜು, ವಿನೋದ್ ಕೆ, ಲಿಜಿನ್ ಆರ್, ಶಾಲಿನಿ ಮತ್ತು ಫಾತಿಮತ್ ಶಂಸ …

ಗಾಂಜಾ ಸಹಿತ ಇಬ್ಬರ ಸೆರೆ

ಉಪ್ಪಳ:  ಗಾಂಜಾ ಕೈವಶವಿ ರಿಸಿ ಕೊಂಡ ಇಬ್ಬರನ್ನು ಮಂಜೇ ಶ್ವರ ಎಸ್.ಐ ಉಮೇಶ್ ನೇತೃ ತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ಚೇವಾರು ಬಾಯಾಡಿಯ ಇಬ್ರಾಹಿಂ ಖಲೀಲ್ (38), ಸೋಂಕಾಲು ಬಸ್ ನಿಲ್ದಾಣ ಬಳಿಯ ಮೊಹಮ್ಮದ್ ಹರ್ಷಾದ್ (28) ಎಂಬವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ಇಬ್ರಾಹಿಂ ಖಲೀಲ್ ಕೈಯಿಂ ದ 2.6 ಗ್ರಾಂ ಗಾಂಜಾ, ಮೊಹ ಮ್ಮದ್ ಹರ್ಷಾದ್ ಕೈಯಿಂದ 2.8 ಗ್ರಾಂ ಗಾಂಜಾ ವಶ ಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ : 21ರಂದು ಕಾಲಿಕಡವಿನಲ್ಲಿ ಚಾಲನೆ

ಕಾಸರಗೋಡು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ಕಾರ್ಯಕ್ರಮಗಳಿಗೆ ಈತಿಂಗಳ 21ರಂದು ಜಿಲ್ಲೆಯ ಕಾಲಿಕಡವಿನಲ್ಲಿ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ಕಾಲಿಕಡವು ಮೈದಾನದಲ್ಲಿ ನಡೆಯಲಿರುವ ಸರಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸುವರು. ಇತರ ಸಚಿವರುಗಳಾದ ರೋಷಿ ಅಗಸ್ಟಿನ್, ಕೆ. ಕೃಷ್ಣನ್ ಕುಟ್ಟಿ, ಎ.ಕೆ. ಶಶೀಂದ್ರನ್, ರಾಮಚಂದ್ರನ್ ಕಡನ್ನಪ್ಪಳ್ಳಿ, ಕೆ.ಬಿ. ಗಣೇಶ್ ಕುಮಾರ್, ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ರಾಜ್ಯ ಸರಕಾರದ ಮುಖ್ಯ …

ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ: ಗಲ್ಫ್‌ಗೆ ಹೋದ ಯುವಕ ದೃಶ್ಯಗಳನ್ನು ಸ್ನೇಹಿತರಿಗೆ ರವಾನೆ; ಆರೋಪಿ ಬಂಧನಕ್ಕೆ ಕ್ರಮ

ಕಾಸರಗೋಡು:  ಸ್ನೇಹದಲ್ಲಿದ್ದ 20ರ ಹರೆಯದ ಯುವತಿಯನ್ನು ಮಂಗಳೂರಿನ ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ಯುವಕ ಆ ದೃಶ್ಯಗಳನ್ನು ಸ್ನೇಹಿತರಿಗೆ ರವಾನಿಸಿದ ಬಗ್ಗೆ  ಆರೋಪವುಂಟಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿ ನೀಡಿದ ದೂರಿನಂತೆ ಜಯಕೃಷ್ಣನ್ ಯಾನೆ ಅಪ್ಪು ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಸ್ತುತ ಗಲ್ಫ್‌ನಲ್ಲಿರುವ ಈತನನ್ನು  ಊರಿಗೆ  ತಲುಪಿಸಿ ಬಂಧಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.  ೨೦೨೪ ಫೆಬ್ರವರಿ ೪ರಂದು ಪ್ರಕರಣಕ್ಕೆ ಕಾರಣವಾದ …

ಮಾರಕಾಯುಧಗಳೊಂದಿಗೆ ತಲುಪಿ ಮನೆಗೆ ಹಾನಿ:  ಇರಿತ ಪ್ರಕರಣದ ಆರೋಪಿ ವಿರುದ್ದ ಮತ್ತೆ ಕೇಸು

ಬದಿಯಡ್ಕ: ವ್ಯಕ್ತಿಯೋರ್ವ ಮಾರಕಾಯುಧಗಳೊಂದಿಗೆ  ಮನೆಯೊಂದಕ್ಕೆ ತಲುಪಿ ಕಿಟಿಕಿ ಗಾಜುಗಳನ್ನು ಪುಡಿಗೈದು ಮನೆಯವರಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ನೆಕ್ರಾಜೆ ಚಂದ್ರಂಪಾರೆ  ತೋಟ ಹೌಸ್‌ನ ಹನೀಫ ಎಂಬವರು ನೀಡಿದ ದೂರಿನಂತೆ ಚಂದ್ರಂಪಾರೆಯ ಶರೀಫ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಶರೀಫ್ ಮಾರಕಾಯುಧಗಳ ಸಹಿತ ಹನೀಫರ ಮನೆಗೆ ತಲುಪಿ ದ್ದಾನೆನ್ನಲಾಗಿದೆ. ಘಟನೆ ವೇಳೆ ಮನೆಯಲ್ಲಿ ಹನೀಫರ ಮಗ ಹಾಗೂ ಮಗಳು ಮಾತ್ರವೇ ಇದ್ದರು. ಅವರು ಬಾಗಿಲು  ತೆರೆಯದಿರುವುದರಿಂದ ದ್ವೇಷಗೊಂಡ ಆರೋಪಿ …

ಕ್ಷೇತ್ರದಿಂದ ಚಿನ್ನಾಭರಣ ಕಳವುಗೈದು ಪರಾರಿಯಾದ ಸಹಾಯಕ ಅರ್ಚಕ ಸೆರೆ

ಆಲಪ್ಪುಳ: ಕ್ಷೇತ್ರದಲ್ಲಿ ದೇವರ ವಿಗ್ರಹಕ್ಕೆ ತೊಡಿಸಿದ್ದ 20 ಪವನ್ ಚಿನ್ನಾಭರಣಗಳನ್ನು ಕಳವುಗೈದು ಪರಾರಿಯಾಗಿದ್ದ ಸಹಾಯಕ ಅರ್ಚಕ ಸೆರೆಗೀಡಾಗಿದ್ದಾನೆ. ಕೊಲ್ಲಂ ನಿವಾಸಿ ರಾಮಚಂದ್ರನ್ ಪೋಟಿ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಎಳುಪುನ್ನ ದಿ| ನಾರಾಯಣಪುರಂ ಮಹಾವಿಷ್ಣು ಕ್ಷೇತ್ರದಲ್ಲಿ ಸಹಾಯಕ ಅರ್ಚಕನಾಗಿದ್ದನು. ವಿಷು ದಿನದಂದು ಮುಖ್ಯ ಅರ್ಚಕ ರಜೆಯಲ್ಲಿ ತೆರಳಿದುದರಿಂದ ರಾಮಚಂದ್ರನ್ ಪೂಜೆಯ ಹೊಣೆಗಾರಿಕೆ ವಹಿಸಿಕೊಂಡಿದ್ದನು. ಈ ವೇಳೆ ದೇವರ ವಿಗ್ರಹದಲ್ಲಿದ್ದ 10 ಪವನ್‌ನ ಮಾಲೆ, ಮೂರೂವರೆ  ಪವನ್‌ನ ಕಿರೀಟ, 2 ನೆಕ್ಲೇಸ್ ಮೊದಲಾದವುಗಳನ್ನು  ಈತ ಕಳವು ನಡೆಸಿ ಪರಾರಿಯಾಗಿದ್ದನು. …

ನಕಲಿ ಚಿನ್ನ ಅಡವಿರಿಸಿ ವಂಚನೆ: ಮಹಿಳೆಯರ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು

ಕಾಸರಗೋಡು: ಅಲ್ಪ ಬಿಡುವಿನ ಬಳಿಕ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ವಂಚಿಸಿದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಎgಡು ಕೇಸುಗಳನ್ನು ದಾಖಲಿಸಲಾಗಿದೆ. ಮುತ್ತೂಟ್ ಫಿನ್‌ಕೋರ್ಪ್‌ನ ಕಾಞಂಗಾಡ್, ಕೋಟಚ್ಚೇರಿ ಬ್ರಾಂಚ್ ಮೆನೇಜರ್ ಅದಿಯಾಂಬೂರ್ ಕುನ್ನುಮ್ಮಲ್ ಹೌಸ್‌ನ ಎಂ. ಮಂಜುಳ ನೀಡಿದ ದೂರಿನಂತೆ ಕೊಳವಯಲ್ ಮುಟ್ಟುಂತಲದ ಎ.ನೌಶಾದ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. 2025 ಜನವರಿ 23ರಂದು ವಂಚನೆ ನಡೆದಿರುವುದಾಗಿ ತಿಳಿಸಲಾಗಿದೆ. ಅಂದು ಮಧ್ಯಾಹ್ನ ಸಂಸ್ಥೆಗೆ ತಲುಪಿದ ಆರೋಪಿ 11.9 ಗ್ರಾಂ …

ವಿಳಿಂಞಂ ಬಂದರು ಪ್ರಧಾನಮಂತ್ರಿ ಲೋಕಾರ್ಪಣೆ ಮೇ 2ರಂದು

ತಿರುವನಂತಪುರ: ವಿಳಿಂಞಂ ಅಂತಾರಾಷ್ಟ್ರೀಯ ಬಂದರು ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ ೨ರಂದು ಲೋಕಾರ್ಪಣೆ ಗೊಳಿಸುವರು. ಪ್ರಧಾನಮಂತ್ರಿಯ ಕಚೇರಿಯಿಂದ ಈ ವಿಷಯ ತಿಳಿಸಲಾಗಿದೆ. ಚಟುವಟಿಕೆ ಆರಂಭಿಸಿ 10 ತಿಂಗಳ ಬಳಿಕ ಔಪಚಾರಿಕ ಉದ್ಘಾಟನೆ ನಡೆಯಲಿದೆ. ರಾಜ್ಯ ಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜ ಯನ್, ಕೇಂದ್ರ ಸಚಿವ ಸರ್ಬಾನಂದ ಸೋನೇವಾಲ್, ರಾಜ್ಯ ಕೈಗಾರಿಕಾ ಸಚಿವ ಪಿ. ರಾಜೀವ್, ಬಂದರು ಸಚಿವ ವಿ.ಎನ್. ವಾಸವನ್, ಸಂಸದ ಶಶಿ ತರೂಪ್, ಉದ್ಯಮಿ ಗೌತಮ್ ಅದಾನಿ ಎಂಬಿವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಳೆದ …

ಕುಂಬಳೆಯಲ್ಲಿ ದಾರಿ ತಪ್ಪಿಸುವ ಸೂಚನಾ ಫಲಕ ಸರಿಪಡಿಸಿದ ಅಧಿಕಾರಿಗಳು

ಕುಂಬಳೆ: ಕುಂಬಳೆಯಲ್ಲಿ ಪ್ರಯಾ ಣಿಕರ ದಾರಿ ತಪ್ಪಿಸುತ್ತಿದ್ದ ಸೂಚನಾ ಫಲಕವನ್ನು ಅಧಿಕಾರಿಗಳು ಸರಿಪಡಿ ಸಿದ್ದಾರೆ. ಕುಂಬಳೆ ಪೇಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪ ಊರಾಲುಂಗಲ್  ಸೊಸೈಟಿ ಅಧಿಕಾರಿಗಳು ಸ್ಥಾಪಿಸಿದ್ದ ದಾರಿ ಸೂಚನಾ ಫಲಕ ಪ್ರಯಾ ಣಿಕರಿಗೆ  ಗೊಂದಲ ಸೃಷ್ಟಿಸುತ್ತಿತ್ತು. ಮಂಗಳೂರು ಭಾಗಕ್ಕೆ  ದಾರಿ ಸೂಚಿಸುತ್ತಿರುವುದು ಕಾಸರಗೋಡು  ಭಾಗಕ್ಕಾಗಿತ್ತು. ಅದೇ ರೀತಿ ಸೀತಾಂಗೋಳಿ ಭಾಗಕ್ಕೆ ಸೂಚಿಸಿದ ಭಾಗದಲ್ಲಿ ರಸ್ತೆಯೇ ಇಲ್ಲ.  ಈ ನಾಮಫಲಕದಿಂದ ಪ್ರಯಾ ಣಿಕರು ಸಮಸ್ಯೆಗೊಳಗಾಗುತ್ತಿರುವ ಕುರಿತು ‘ಕಾರವಲ್’ ನಿನ್ನೆ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ …

ಪಶ್ಚಿಮ ಬಂಗಾಳ ನಿವಾಸಿ ಯುವತಿಗೆ ಮದ್ಯ ನೀಡಿ ಸಾಮೂಹಿಕ ಮಾನಭಂಗ: ಮೂವರ ಸೆರೆ

ತಲಪಾಡಿ: ಮಂಜೇಶ್ವರ ಸ್ಟೇಷನ್ ವ್ಯಾಪ್ತಿಯ ಫ್ಲೈವುಡ್ ಫ್ಯಾಕ್ಟ್ರಿ ತಂಡದಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ನಿವಾಸಿ ಯುವತಿಯೋರ್ವೆಯನ್ನು ಸಾಮೂಹಿಕವಾಗಿ ಮಾನಭಂಗಪಡಿಸಿದ ಘಟನೆಯಲ್ಲಿ  ಮೂವರನ್ನು ಸೆರೆ ಹಿಡಿಯಲಾಗಿದೆ. ಉಳ್ಳಾಲ ಕುತ್ತಾರು ರಾಣಿಪುರ ರಿಷಿವನ ಸಮೀಪ ಬುಧವಾರ ಮಧ್ಯರಾತ್ರಿ ಘಟನೆ ನಡೆದಿದೆ. ಮಂಗಳೂರಿನಲ್ಲಿ ಆಟೋ ಚಾಲಕ ನಾಗಿರುವ ಮುಲ್ಕಿ ಕಾರ್ನಾಡು ಲಿಂ ಗಪ್ಪಯ್ಯ ಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕೆಲಸ ಮಾಡುವ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರ್ ಬಾಯ್ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) …