ಕಡಲ್ಕೊರೆತ: ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿಯಿಂದ ಸಚಿವರಿಗೆ ಮನವಿ

ಉಪ್ಪಳ: ಉಪ್ಪಳ, ಮಂಜೇಶ್ವರ ತೀರ ಪ್ರದೇಶದ ವಿವಿಧ ಕಡೆಗಳಲ್ಲಿ ಕಡಲ್ಕೊರೆತದಿಂದ ಉಂಟಾಗಿರುವ ಹಾನಿ ಹಾಗೂ ಸ್ಥಳೀಯರು ಅನುಭವಿಸುವ ಸಂಕಷ್ಟಗಳ ಬಗ್ಗೆ ವಿವರಿಸಿ ಮೀನುಗಾರಿಕೆ, ಬಂದರು ಸಚಿವ ಸಜಿ ಚೆರಿಯಾನ್‌ಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಮನವಿ ನೀಡಿದೆ. ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ, ನಾಶನಷ್ಟಗಳ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಲಾಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಲು ಮನವಿಯಲ್ಲಿ ಆಗ್ರಹಿಸಲಾಗಿದೆ. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ.ಆರ್. ಜಯಾನಂದ ಮನವಿ ಪತ್ರವನ್ನು …

ಕರ್ನಾಟಕ ಮದ್ಯ ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಖಾಸಗಿ ಬಸ್ಸೊಂದನ್ನು ತಪಾಸಣೆಗೊಳಪಡಿ ಸಿದಾಗ ಅದರಲ್ಲಿ ೪.೫ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಕೃಷ್ಣನಗರದ ತುಳಸೀಧರನ್ (43) ಎಂಬಾತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ಜಿನು ಜೇಮ್ಸ್ ನೇತೃತ್ವದ  ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.  ಈ ತಂಡದಲ್ಲಿ ಎಇಐ ಗ್ರೇಡ್ ವಿನಯರಾಜ್, ಇತರ ಸಿಬ್ಬಂದಿಗಳಾದ ಜನಾರ್ದನ, ಪ್ರಭಾಕರನ್ ಒಳಗೊಂಡಿದ್ದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉಚಿತ ಪುಸ್ತಕ ವಿತರಣೆ 4ರಂದು

ಕುಂಬಳೆ: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರದ ವತಿಯಿಂದ ಜಿಲ್ಲೆಯ ಕನ್ನಡ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಉಚಿತ ಪುಸ್ತಕ ವಿತರಣೆ ಆ.4 ರಂದು ಬೆಳಿಗ್ಗೆ 10.ರಿಂದ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುವರು. ಮುಖ್ಯ ಅತಿಥಿಯÁಗಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ …

ಡಾ| ಬಿ.ಎಸ್. ರಾವ್‌ರಿಗೆ ನುಡಿನಮನ

ಕಾಸರಗೋಡು: ಸುಮಾರು ಆರು ದಶಕಗಳ ಕಾಲ ವೈದ್ಯರಾಗಿ ಜನಾನುರಾಗಿಯಾಗಿದ್ದ ಡಾ|ಬಿ.ಎಸ್. ರಾವ್ ಸಜ್ಜನಿಕೆಯ ಸಾಕಾರಮೂರ್ತಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ನಾರಾಯ ಣಯ್ಯ ಮಧೂರು ಹೇಳಿ ದರು. ಅವರು ಮಧೂರು ದೇª Àಸ್ಥಾನದ ಪರಿಸರದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಮಧೂರು ದೇವಸ್ಥಾನದ ನವೀಕರಣ ಸಮಿತಿಯ ಉಪಾಧ್ಯಕ್ಷ ರಾಗಿ, ನಿರ್ಮಾಣ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ನವೀಕರಣ ಕಾರ್ಯದಲ್ಲಿ ನಿಸ್ವಾರ್ಥವಾಗಿ ಡಾ|ಬಿ.ಎಸ್.ರಾವ್ ದುಡಿದಿರುವು ದಾಗಿ ಅವರು ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಮಂಜುನಾಥ ಕಾಮತ್ …

ಕೂಲಿ ಕಾರ್ಮಿಕ ನಾಪತ್ತೆ : ಬದಿಯಡ್ಕದಲ್ಲಿ ಕೇಸು ದಾಖಲು

ಬದಿಯಡ್ಕ: ಕುಂಬ್ಡಾಜೆ ಪಂಚಾಯತ್‌ನ ಬಾಳೆಗದ್ದೆ ನಿವಾಸಿ ನಾರಾಯಣ ಮಣಿಯಾಣಿ (48) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಗ್ಗು ಮಣಿಯಾಣಿ- ಚಂದ್ರಾವತಿ ದಂಪತಿ ಪುತ್ರನಾದ ಇವರು ಕಳೆದ ೨೮ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಆ ಬಳಿಕ ನಾಪತ್ತೆಯಾಗಿದ್ದಾರೆ. ಪರಿಸರದಲ್ಲೆಲ್ಲಾ ಹುಡುಕಾಡಿದರೂ ಪತ್ತೆಯಾಗದ ಕಾರಣ ಸಹೋದರ ಉದಯ ಕುಮಾರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗುವಾಗ ಕಪ್ಪು ಬಣ್ಣದ ಅಂಗಿ ಹಾಗೂ ಕಾವಿ ಬಣ್ಣದ ಪಂಚೆ ಧರಿಸಿದ್ದರೆನ್ನಲಾಗಿದೆ. ಕಾಯಿಮಲೆ ಪೆರ್ವತ್ತೋಡಿ ಪರಿಸರದಲ್ಲಿ ಕೂಲಿ ಕೆಲಸ …

ಮಸೀದಿ ಆವರಣದಲ್ಲಿದ್ದ ಕಾರು ನಿಗೂಢ ಸ್ಥಿತಿಯಲ್ಲಿ ಬೆಂಕಿಗಾಹುತಿ

ಬದಿಯಡ್ಕ: ಮಸೀದಿ ಆವರಣ ದೊಳಗೆ ನಿಲ್ಲಿಸಿದ್ದ ಕಾರು ನಿಗೂಢ ರೀತಿಯಲ್ಲಿ ಬೆಂಕಿಗಾಹುತಿಯಾದ ಘಟನೆ ಪೈಕದಲ್ಲಿ ನಡೆದಿದೆ. ಪೈಕ ಜುಮಾ ಮಸೀದಿಯ ಉಸ್ತಾದ್ ರಾಸಬಾಖಫಿ ಹೈದಮಿ ಎಂಬವರ ಕಾರು ಉರಿದು ನಾಶಗೊಂಡಿದೆ. ಕಾರಿನಲ್ಲಿದ್ದ ಪಾಸ್‌ಪೋರ್ಟ್ ಸಹಿತ ಬೆಲೆಬಾಳುವ ದಾಖಲೆಪತ್ರಗಳು ಕೂಡಾ ಉರಿದು ನಾಶಗೊಂಡಿರುವುದಾಗಿ ತಿಳಿಸಲಾಗಿದೆ. ಇಂದು ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಕಾರಿಗೆ ಬೆಂಕಿ ತಗಲಿರುವುದನ್ನು ಕಂಡ ಸ್ಥಳೀಯರು ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್, ವಿ.ಎಂ. ಸತೀಶನ್ …

ವಿವಾಹ ಭರವಸೆ ನೀಡಿ ದೌರ್ಜನ್ಯ: ಯುವತಿಯ ದೂರಿನಂತೆ ರಾಪರ್‌ವೇಡನ್ ವಿರುದ್ಧ ಕೇಸು

ಕೊಚ್ಚಿ: ರಾಪರ್‌ವೇಡ ದೌರ್ಜನ್ಯಗೈದ ಬಗ್ಗೆ ಡಾಕ್ಟರ್ ಆದ ಯುವತಿ  ದೂರು ನೀಡಿದ್ದಾರೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೊಚ್ಚಿ ತೃಕ್ಕಾಕರ ಪೊಲೀಸರು ಈ ದೂರಿನಂತೆ ಕೇಸು ದಾಖಲಿಸಿದ್ದಾರೆ. 2021 ಆಗಸ್ಟ್‌ನಿಂದ 2023 ಮಾರ್ಚ್ ವರೆಗೆ ವಿವಿಧ ಸ್ಥಳಗಳಲ್ಲಿ ವೇಡನ್ ತನ್ನನ್ನು ದೌರ್ಜನ್ಯಗೈದಿ ರುವುದಾಗಿ ದೂರಿದ್ದಾರೆ. ಸತತವಾಗಿ ದೌರ್ಜನ್ಯಗೈದ ಬಳಿಕ ವಿವಾಹ ಭರವಸೆಯಿಂದ ರಾಪರ್‌ವೇಡನ್ ಹಿಂದೆ ಸರಿದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಇದರಿಂದ ತನಖೆ ಮಾನಸಿಕ ಆಘಾತ ಉಂಟಾಗಿದೆ ಎಂದು ಯುವತಿ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ವೇಡನ್ …

ಯುವತಿಯನ್ನು ದಾರಿ ಮಧ್ಯೆ ಅಪ್ಪಿ ಹಿಡಿದ  ಪ್ರಕರಣ: ಸೆರೆಗೀಡಾದ ಆರೋಪಿ ವಿರುದ್ಧ ಇನ್ನೊಂದು ಕೇಸು ದಾಖಲು

ಕುಂಬಳೆ: ನಡೆದು ಹೋಗುತ್ತಿದ್ದ ಯುವತಿಯನ್ನು ತಡೆದು ನಿಲ್ಲಿಸಿ ಅಪ್ಪಿ ಹಿಡಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ವಿರುದ್ಧ ಇದೇ ರೀತಿಯ ಇನ್ನೊಂದು  ಕೇಸು ದಾಖಲಿಸಲಾಗಿದೆ. ಕರ್ನಾಟಕದ ಸಕಲೇಶಪುರ ನಿವಾಸಿಯೂ ಕುಂಬಳೆ ಆರಿಕ್ಕಾಡಿ ಕಡವತ್ತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶುಹೈಬ್ (25) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಇದೀಗ ಮತ್ತೊಂ ದು ಕೇಸು  ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರ ಕಾಲೇಜು  ವಿದ್ಯಾರ್ಥಿ ನಿಯಾದ 19ರ ಹರೆಯದ ಯುವತಿ ನೀಡಿದ ದೂರಿನಂತೆ ಶುಹೈಬ್ ವಿರುದ್ಧ ಈಗ ಕೇಸು ದಾಖಲಿಸಲಾಗಿದೆ. ಕಳೆದ ಜೂನ್ ೫ರಂದು ಬೆಳಿಗ್ಗೆ ಕಾಲೇಜಿಗೆ …

ಜನರಿಗೆ ಭೀತಿ ಹುಟ್ಟಿಸಿದ್ದ ಕಾಡುಹಂದಿ ಗುಂಡಿಗೆ ಬಲಿ

ಬೋವಿಕ್ಕಾನ: ಮುಳಿಯಾರು ಪಂಚಾಯತ್‌ನ ಆಲನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ಜನರಿಗೆ ಭೀತಿ ಸೃಷ್ಟಿಸಿದ್ದ ಕಾಡು ಹಂದಿಯನ್ನು  ಗುಂಡಿಕ್ಕಿ ಕೊಲ್ಲಲಾಯಿತು. ಡಿಎಫ್‌ಒಕೆ ಅಶ್ರಫ್, ಡೆಪ್ಯುಟಿ ಫಾರೆಸ್ಟ್ ರೇಂಜ್ ಆಫೀಸರ್ (ಆರ್‌ಆರ್‌ಟಿ) ಎನ್.ವಿ. ಸತ್ಯನ್ ಎಂಬಿವರ ನೇತೃತ್ವದಲ್ಲಿ ರಾತ್ರಿ ಹೊತ್ತಿನಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಕಾಡು ಹಂದಿಯನ್ನು ಕೊಲ್ಲಲಾಗಿದೆ.  ಆಲನಡ್ಕದ ಮದ್ರಸಾ  ಪರಿಸರದಲ್ಲಿ ಅವಿತುಕೊಂಡಿದ್ದ ಹಂದಿಯನ್ನು ಸೀನಿಯರ್ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ  ತಂಡ ಇಂದು ಮುಂಜಾನೆ ಗುಂಡಿಕ್ಕಿ ಕೊಂದಿದೆ. ಹಂದಿಯ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸ ಲಾಗುವುದೆಂದು …

ಮದುವೆ ಭರವಸೆ ನೀಡಿ ಯುವತಿಗೆ ಲೈಂಗಿಕ ಕಿರುಕುಳ: ಯುವಕ ಸೆರೆ

ಕಾಸರಗೋಡು: ಮದುವೆಯಾಗುವು ದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದ ಖಾಸಗಿ ನೇತ್ರ ಚಿಕಿತ್ಸಾಲಯವೊಂದರ ಸಿಬ್ಬಂದಿ ಕಣ್ಣೂರು ನಿವಾಸಿ ನಿಜಾರ್ (30) ಬಂಧಿತ ಆರೋಪಿ. ದೂರುದಾತೆ ಯುವತಿ ತನ್ನ ಸಹೋದರನೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿದ್ದ ವೇಳೆ ಅಲ್ಲಿ ಆಕೆಯನ್ನು ಆರೋಪಿ ಪರಿಚಯಗೊಂಡಿದ್ದನು. ನಂತರ ಅವರಿಬ್ಬರು ಪರಸ್ಪರ ಪ್ರೀತಿಸತೊಡಗಿದರು. ಈ ಮಧ್ಯೆ ಮದುವೆಯಾಗುವುದಾಗಿ ಆರೋಪಿ ಯುವತಿಯನ್ನು ವಿವಿಧೆಡೆಗಳಿಗೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದನೆಂದು ಆರೋಪಿಸಲಾಗಿದೆ. ಆ ಬಳಿಕ ಆರೋಪಿ …