ವಕ್ಫ್ ತಿದ್ದುಪಡಿ ಮಸೂದೆ: 36 ಕೇಂದ್ರಗಳಲ್ಲಿ ಸಮಸ್ತದ ಪ್ರತಿಭಜನಾ ಧರಣಿ 23ರಂದು

ಕಾಸರಗೋಡು: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸಮಸ್ತ ಕೇರಳ ಜಂಇಯತ್ತುಲ್ ಉಲಮ ನಡೆಸುವ ಕಾನೂನು ಹೋರಾಟಗಳಿಗೆ, ಆಂದೋಲನಗಳಿಗೆ ಬೆಂಬಲ ನೀಡಲು ಹಾಗೂ ಅದರಂಗವಾಗಿ ಈ ತಿಂಗಳ 23ರಂದು ಬೆಳಿಗ್ಗೆ ಜಿಲ್ಲೆಯ 39 ರೇಂಜ್ ಕೇಂದ್ರಗಳ ಕೇಂದ್ರ ಸರಕಾರಿ ಕಚೇರಿಗಳ ಮುಂಭಾಗ ಪ್ರತಿಭಟನಾ ಧರಣಿ ನಡೆಸಲು ಸಮಸ್ತ ಕೇರಳ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಜಿಲ್ಲಾಧ್ಯಕ್ಷ ಎಂ.ಎಸ್. ತಂಙಳ್ ಮದನಿ ಈ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರಶೀದ್ ಬೆಳಿಂಜ, ಕೋಶಾಧಿಕಾರಿ …

ಮಕ್ಕಳ ಮುಂದೆ ನಗ್ನತೆ ಪ್ರದರ್ಶನ: ಆರೋಪಿ ಸೆರೆ

ತೃಶೂರು: ಪ್ರಾಯಪೂರ್ತಿಯಾಗದ ಮಕ್ಕಳ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪಿ ಸೆರೆಯಾಗಿದ್ದಾನೆ. ಕೋಡಾಲಿ ನಿವಾಸಿ ಗೋಪಾಲ್ (28)ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ತಿಂಗಳ ೧೧ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮುಂದೆ ಈತ ನಗ್ನತೆ ಪ್ರದರ್ಶಿಸಿದ್ದನು. ಮಕ್ಕಳಲ್ಲಿ ಇಲ್ಲಿ ಹಿರಿಯರು ಯಾರೂ ಇಲ್ಲವೇ ಎಂದು ಕೇಳಿ ತಿಳಿದುಕೊಂಡು ಬಳಿಕ ತನ್ನ ಪರಿಚಯ ಮಾಡಿ, ತಾನೊಂದು ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದನು. ಅದರ ಬಳಿಕ ತನ್ನ ನಿಜ ಸ್ವರೂಪ ಈತ …

ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಹೊಸಂಗಡಿ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ದಲ್ಲಿ ನಡೆದ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಿನ್ನೆ ಸಮಾಪ್ತಿ ಗೊಂಡಿತು. ಶ್ರೀ ಮಾತಗೆ ಪಂಚಾಮೃತ ಸಹಿತ 108 ಸೀಯಾಳ ಅಭಿಷೇಕ, ಪ್ರಧಾನ ಹೋಮಗಳು, ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ ನಡೆಯಿತು. ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಕಾಸರಗೋಡು ಆರ್ಟಿಸನ್ ವೆಲ್ಫೇರ್ ಸೊಸೈಟಿ …

ಗಡಿನಾಡ ಸಾಹಿತ್ಯ ಉತ್ಸವ: ಬಸವರಾಜ ಎಸ್. ಹೊರಟ್ಟಿಯವರಿಗೆ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸ್ವಾಗತ

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಒಮಾನ್ ಘಟಕ ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನ್‌ನ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಳೆ ಮಸ್ಕತ್‌ನ ಮಝಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿಯವರನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಒಮಾನ್ ಇಂಡ್ಯನ್ ಸೋಶ್ಯಲ್ ಕ್ಲಬ್‌ನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್‌ಡಿಟಿ ಪ್ರಸಾದ್, …

ಕಾಂಗ್ರೆಸ್ ನೇತಾರನಿಗೆ ಹಲ್ಲೆ : ಸೀತಾಂಗೋಳಿಯಲ್ಲಿ ಪ್ರತಿಭಟನೆ

ಸೀತಾಂಗೋಳಿ: ಪುತ್ತಿಗೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಊಜಂಪದವಿನ ಸುಲೈಮಾನ್‌ರಿಗೆ ಹಲ್ಲೆಗೈದ ಘಟನೆಯನ್ನು ಪ್ರತಿಭಟಿಸಿ ಕಾಂಗ್ರೆಸ್‌ನಿಂದ ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಅವರು ಮಾತನಾಡಿ ಸುಲೈಮಾನ್‌ರಿಗೆ ಹಲ್ಲೆಗೈದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಕುಂಬಳೆ ಬ್ಲೋಕ್ ಅಧ್ಯಕ್ಷ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ನಾಸರ್ ಮೊಗ್ರಾಲ್, ಲಕ್ಷ್ಮಣ ಪ್ರಭು, ಶ್ರೀನಾಥ್ ಬದಿಯಡ್ಕ, ಸತ್ಯನ್ ಉಪ್ಪಳ, ಖಮರುದ್ದೀನ್, ಶುಕೂರ್ ಕಾಣಾಜೆ, ಜುನೈದ್ ಉರ್ಮಿ, ಗಾಂಭೀರ್, …

ಅಮೀಬಿಕ್ ಮೆದುಳು ಜ್ವರ: ಜಾಗ್ರತೆ ಪಾಲಿಸಲು ಆರೋಗ್ಯ ಇಲಾಖೆ ಕರೆ

ತಿರುವನಂತಪುರ: ಬೇಸಿಗೆಕಾಲವಾದುದರಿಂದ ಅಮೀಬಿಕ್ ಮೆದುಳು ಜ್ವರ ವಿರುದ್ಧ ಜಾಗ್ರತೆ ಪಾಲಿಸಬೇಕೆಂದು ಆರೋಗ್ಯ ಇಲಾಖೆ ನಿರ್ದೇಶಿಸಿವೆ. ಬೇಸಿಗೆ ಕಾಲದಲ್ಲಿ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಸರಿನಲ್ಲಿ ಅಮೀಬದ ಸಂಪರ್ಕ ಹೆಚ್ಚಿರಲು ಸಾಧ್ಯತೆಯಿದೆ. ಆದ್ದರಿಂದ ಕೆರೆಗಳ ಸಹಿತ ಜಲಾಶಯಗಳಲ್ಲಿ ಸ್ನಾನ ಮಾಡುವವರು ಜಾಗ್ರತರಾಗಿರಬೇಕು. ನೀರಿನ ಟ್ಯಾಂಕ್ಗಳಲ್ಲಿ ಕೆಸರು ಕಟ್ಟಿ ನಿಲ್ಲದಂತೆ ನೋಡಿಕೊಂಡು ಶುಚಿಯಾಗಿಡಬೇಕು. ಈಜುಕೊಳಗಳು, ಅಮ್ಯೂಸ್ಮೆಂಟ್ ಪಾರ್ಕ್ಗಳ ನೀರನ್ನು ಕ್ಲೋರಿನೇಟ್ ನಡೆಸಬೇಕು. ಕಲುಷಿತ ನೀರಿನೊಂದಿಗೆ ಯಾವುದಾದರೂ ರೀತಿಯಲ್ಲಿ ಸಂಪರ್ಕವುಳ್ಳವರಿಗೆ ಅಸಹನೀಯ ತಲೆನೋವು, ಜ್ವರ, ವಾಂತಿ, ಕುತ್ತಿಗೆ ತಿರುಗಲು ತೊಂದರೆ ಅನುಭವಗೊಳ್ಳಲಿದೆ. …

ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ 20ರಂದು

ಪೈವಳಿಕೆ: ಕೊಂಡೆವೂರು ಶ್ರೀ ನಿತ್ಯಾನಂದ ಮಹಾಪೀಠಂ ಚಾರಿಟೇ ಬಲ್ ಟ್ರಸ್ಟ್,ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲಪಾಡಿ, ಶ್ರೀ ಅಯ್ಯಪ್ಪ ಮಂದಿರ ಬಾಯಿಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಹಾಗೂ ಎಎಸ್ಕೆ ಕ್ಲಬ್ ಬಾಯಿಕಟ್ಟೆ ಇವರ ಸಹಯೋಗದಲ್ಲಿ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಈ ತಿಂಗಳ 20ರಂದು ಬೆಳಿಗ್ಗೆ 9ರಿಂದ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ನಡೆಯಲಿದೆ. ಸಂಧಿವಾತ, ಡಿಸ್ಕ್ ಸಮಸ್ಯೆ, ಬೆನ್ನು, ಸೊಂಟನೋವು, ಸೋರಿಯಾಸಿಸ್, ಚರ್ಮದ ಅಲರ್ಜಿ, ತರಿಕೆ, …

ಧನ್‌ರಾಜ್ ಪ್ರತಾಪನಗರ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ

ಉಪ್ಪಳ: ಧನ್‌ರಾಜ್ ಪ್ರತಾಪನಗರ ರವರ ಸ್ಮರಣಾರ್ಥ ಶ್ರೀ ವಿನಾಯಕ ಕಲಾವೃಂದ ಅಶೋಕನಗರ ಅಡ್ಕ ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಆಟಗಾರರನ್ನೊಳಗೊಂಡ ಕಬಡ್ಡಿ ಪಂದ್ಯಾಟ ಅಶೋಕನಗರ ಅಡ್ಕದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರ ವಿಜಯ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು. ಸುಧಾಮ ಗೋಸಾಡ, ಸುಕುಮಾರ ಕುದೆÀ್ರಪ್ಪಾಡಿ ಸಹಿತ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು. ವರದರಾಜ್ ಭಂಡಾರಿ ಸ್ವಾಗತಿಸಿದರು.

ಪೊನೆಂಗಳದಲ್ಲಿ ಸಿಪಿಎಂ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ: ಮೂವರಿಗೆ ಗಾಯ

ಕುಂಬಳೆ: ಪುತ್ತಿಗೆ ಪಂಚಾಯತ್‌ನ ಮುಗು ಪೊನ್ನೆಂಗಳದಲ್ಲಿ ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾಂಗ್ರೆಸ್ ಪುತ್ತಿಗೆ ಮಂಡಲ ಅಧ್ಯಕ್ಷ ಊಜಂಪದವಿನ ಸುಲೈಮಾನ್ (51)ರನ್ನು ಕಾಸರಗೋಡು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ, ಸಿಪಿಎಂ ಕಾರ್ಯಕರ್ತರಾದ ಮುಗು ವಿನ ನವಾಬ್ (32), ಅಬೂಬಕ್ಕರ್ ಸಿದ್ದಿಕ್ (32) ಎಂಬಿವರನ್ನು  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಪೊನ್ನೆಂಗಳದಲ್ಲಿ ಘರ್ಷಣೆ ನಡೆದಿದೆ. ಈ ಮೂರು ಮಂದಿ ಪೊನ್ನೆಂಗಳದಲ್ಲಿ ನಿನ್ನೆ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು. …

ಬಸ್ ನೌಕರ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಬಸ್ ನೌಕರನೋರ್ವ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಮಾವಿನಕಟ್ಟೆಯಲ್ಲಿ ಸಂಭವಿಸಿದೆ. ಮಾವಿನಕಟ್ಟೆ ನಿವಾಸಿ ಕೃಷ್ಣ ಚೆಟ್ಟಿಯಾರ್‌ರ ಪುತ್ರ ದಿನೇಶನ್ (48) ಎಂಬಿವರು ಮೃತಪಟ್ಟ ವ್ಯಕ್ತಿ.  ಕೃಷ್ಣ ಚೆಟ್ಟಿಯಾರ್ ಅಸೌಖ್ಯ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಿಂದ ಮನೆಯವರು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ದಿನೇಶನ್ ಮಾತ್ರವೇ ಮನೆಯಲ್ಲಿದ್ದರೆನ್ನಲಾಗಿದೆ. ನಿನ್ನೆ ಸಂಜೆ ಸಹೋದರ ಮನೆಗೆ ತಲುಪಿ ನೋಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಕರೆದರೂ  ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಕಿಟಿಕಿ ಮೂಲಕ ನೋಡಿದಾಗ ದಿನೇಶನ್ …