ಮತ್ತೆ ಕಾಡಾನೆಗಳ ದಾಳಿ: ಇಬ್ಬರ ಸಾವು

ತೃಶೂರು:  ಕಾಡಾನೆಗಳ ದಾಳಿಯಿಂದ ಮತ್ತೆ ಇಬ್ಬರು  ದಾರುಣ ವಾಗಿ ಸಾವನ್ನಪ್ಪಿದ ಘಟನೆ ಚಾಲ ಕುಡಿಗೆ ಸಮೀಪದ ವಾಳಚ್ಚಾಲಿನಲ್ಲಿ ನಡೆದಿದೆ. ಶಾಸ್ತಾಂ ಪೂವಂ ವಾಳಚ್ಚಾರ್ ನಿವಾಸಿಗಳಾದ  ಅಂಬಿಕ (30),  ಸತೀಶನ್ (34) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಇವರು ಸೇರಿದಂತೆ ನಾಲ್ವರು ನಿನ್ನೆ ಕಟ್ಟಿಗೆ  ಸಂಗ್ರಹಿಸಲೆಂದು ಅಲ್ಲೇ ಪಕ್ಕದ ವಂಚಿಕಡವು ಕಾಡಿಗೆ ತೆರಳಿದ್ದರು.  ಕಟ್ಟಿಗೆ ಸಂಗ್ರಹಿಸಿದ ನಂತರ ಕಾಡಿನಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ವೇಳೆ ಕಾಡಾನೆಗಳ ಹಿಂಡು ಅಲ್ಲಿಗೆ ನುಗ್ಗಿ ಬಂದಾಗ  ಹೆದರಿ ಆ ನಾಲ್ವರು ಅಲ್ಲಿಂದ …

ಪೆರ್ಲ ಬಳಿ ಮನೆಯಿಂದ 8 ಪವನ್ ಚಿನ್ನಾಭರಣ, 1 ಲಕ್ಷ ರೂ. ಕಳವು

ಬದಿಯಡ್ಕ: ಪೆರ್ಲ ಬಳಿಯ ಇಡಿಯಡ್ಕದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿದ ಘಟನೆ ನಡೆದಿದೆ. ಇಡಿಯಡ್ಕ ದಾರುಲ್ ಹನ ಎಂಬಲ್ಲಿನ ಕೆ. ಅಬ್ಬಾಸ್ ಅಲಿಯವರ ಮನೆಯಲ್ಲಿ ನಿನ್ನೆ ಮುಂಜಾನೆ ಈ ಕಳವು ನಡೆದಿದೆ. ಮನೆಯ ಬೆಡ್‌ರೂಂನಲ್ಲಿದ್ದ ಕಪಾಟಿನ ಬೀಗ ಮುರಿದು ಅದರಲ್ಲಿದ್ದ ಎಂಟು ಪವನ್ ಚಿನ್ನಾಭರಣ ಹಾಗೂ ಒಂದುಲಕ್ಷ ರೂಪಾಯಿಯನ್ನು ಕಳ್ಳರು ದೋಚಿ ದ್ದಾರೆ. ಮನೆಯ ಹಿಂಭಾಗದ ಬಾಗಿಲು ತೆರೆದು ಕಳ್ಳರು ಒಳಗೆ ನುಗ್ಗಿದ್ದಾರೆ. ಮನೆಯ ಕೆಳ ಮಹಡಿಯಲ್ಲಿರುವ ಬೆಡ್‌ರೂಂನ ಕಪಾಟಿನಲ್ಲಿ …

ಯುವಕ ಕುಸಿದುಬಿದ್ದು ಮೃತ್ಯು

ಕುಂಬಳೆ: ಯುವಕನೋರ್ವ ಕುಸಿದುಬಿದ್ದು ಮೃತಪಟ್ಟರು. ಸೂರಂಬೈಲು ನಿವಾಸಿ ಯಶ್ವಂತ್ ಶೆಟ್ಟಿ (45) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ವಿಠಲ ಶೆಟ್ಟಿ-ಗೀತಾ ಶೆಟ್ಟಿ ದಂಪತಿಯ ಪುತ್ರನಾದ ಮೃತರು ಪತ್ನಿ  ಮೈನ, ಮಕ್ಕಳಾದ ಮನ್ವಿತ್, ಮೌಲ್ಯ, ಸಹೋದರ-ಸಹೋದರಿಯರಾದ ಸುರೇಶ್ ಶೆಟ್ಟಿ, ಬೇಬಿ, ರೇವತಿ, ಶೋಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಡುಗೆ ತಯಾರಿ ವೇಳೆ ಸೀರೆಗೆ ಬೆಂಕಿ ತಗಲಿ ಗಾಯಗೊಂಡ ವೃದ್ಧೆ ಮೃತ್ಯು

ಕುಂಬಳೆ: ಅಡುಗೆ ತಯಾರಿ ವೇಳೆ ಸೀರೆಗೆ ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಮೃತಪಟ್ಟರು. ಪೆರುವಾಡ್ ನಿವಾಸಿ ದಿ| ಕೃಷ್ಣ  ಗಟ್ಟಿಯವರ ಪತ್ನಿ ಸುಂದರಿ (82) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಬೆಂಕಿ ತಗಲಿ ಇವರು ಗಂಭೀರ ಸುಟ್ಟು ಗಾಯಗೊಂ ಡಿದ್ದರು. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ಸಹೋದರ ಲೋಕೇಶ್, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ …

ವಾಹನದಲ್ಲಿ 20 ಕಿಲೋ ಗಾಂಜಾ ಸಹಿತ ಬದಿಯಡ್ಕದ ಮೂವರ ಸೆರೆ

ಬದಿಯಡ್ಕ: ವಾಹನದಲ್ಲಿ ಸಾಗಿಸುತ್ತಿದ್ದ ೨೦ ಕಿಲೋ ಗಾಂಜಾ ಸಹಿತ ಬದಿಯಡ್ಕ ನಿವಾಸಿಗಳಾದ ಮೂವರನ್ನು ಕಲ್ಲಿಕೋಟೆಯಿಂದ ಅಲ್ಲಿನ ಸಿಟಿ ನರ್ಕೋಟಿಕ್ಸ್ ಸೆಲ್‌ನ ಅಸಿಸ್ಟೆಂಟ್ ಕಮೀಷನರ್ ಕೆ.ಎ. ಬೋಸ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ನಿವಾಸಿಗಳಾದ ಕೊಂಬ್ರಾಚೆ ಹೌಸ್‌ನ ಜಿ.ಸಿ. ಶ್ರೀಜಿತ್ (30) ಉಳ್ಳೋಡಿ ಹೌಸಿನ ಕೆ.  ಕೃತಿಗುರು (32) ಮತ್ತು ಫಾತಿಮಾ ಮಂಜಿಲ್‌ನ ಮುಹಮ್ಮದ್ ಅಶ್ರಫ್ (37) ಬಂಧಿತ ಆರೋಪಿಗಳು. ಕಲ್ಲಿಕೋಟೆ ನಗರದ ಮಲಪರಂಬು ಜಂಕ್ಷನ್‌ನಲ್ಲಿ ಪೊಲೀಸರು ಮೊನ್ನೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಆ ದಾರಿಯಾಗಿ ಆರೋಪಿಗಳು …

ಉಪ್ಪಳ: ಇಲೆಕ್ಟ್ರೋನಿಕ್ಸ್ ಅಂಗಡಿಯ ಗೋದಾಮು ಕಳವು; ತನಿಖೆಗೆ ಚಾಲನೆ

ಉಪ್ಪಳ: ಉಪ್ಪಳ ವೈಟ್ ಮಾರ್ಟ್ ಇಲೆಕ್ಟೊçÃನಿಕ್ಸ್ ಅಂಗಡಿಯ ಹಿಂಬದಿಯಲ್ಲಿರುವ ಗೋಡೌನ್‌ನ ಬೀಗ ಮುರಿದು ಬೆಲೆ ಬಾಳುವ ಕಬ್ಬಿಣದ ಸರಳು, ಪೈಪ್‌ಗಳನ್ನು ಕಳವುಗೈದ ಘಟನೆಯಲ್ಲಿ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 12ರಂದು ರಾತ್ರಿ 7 ಗಂಟೆಯಿAದ ಮರು ದಿನ ಮಧ್ಯಾಹ್ನ 12 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ಸಂಸ್ಥೆಯ ಮೆನೇಜರ್ ಅಶ್ರಫ್.ಬಿ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 50 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಪೊಲೀ ಸರು ಕೇಸು ದಾಖಲಿಸಿದ್ದಾರೆ.

ವಿಷು ದಿನದಂದು ದುರಂತ: ಗರ್ಭಿಣಿ ಯುವತಿಯ ಕತ್ತು ಹಿಸುಕಿ ಕೊಲೆಗೈದ ಪತಿ

ವಿಶಾಖಪಟ್ಟಣ: ಆಂಧ್ರ ಪ್ರದೇಶದಲ್ಲಿ ಜಗಳ ಮಧ್ಯೆ ೮ ತಿಂಗಳ ಪ್ರಾಯದ ಗರ್ಭಿಣಿ ಯುವತಿಯನ್ನು ಪತಿ ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿದೆ. ವಿಶಾಖಪಟ್ಟಣದ ಉಡ ಕಾಲನಿಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ಅನುಷ (27) ಮೃತಪಟ್ಟ ಗರ್ಭಿಣಿ ಯುವತಿ. ಪತಿ ಗ್ಯಾನೇಶರ್ (28) ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ನಿನ್ನೆ ಬೆಳಿಗ್ಗೆ ಇವರಿಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಅದು ತೀವ್ರಗೊಂಡ ವೇಳೆ ಪತಿ ಪತ್ನಿಯ ಕತ್ತು ಹಿಸುಕಿದ್ದಾನೆ. ಪ್ರಜ್ಞಾಹೀನಳಾದ ಯುವತಿಯನ್ನು ಪತಿಯೇ ಆಸ್ಪತ್ರೆಗೆ ತಲುಪಿಸಿದನಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ …

ಪೊಲೀಸರ ಮೇಲೆ ಹಲ್ಲೆ: ಆಟೋ ಚಾಲಕ ಸೆರೆ

ಕಾಸರಗೋಡು: ಚೌಕಿಯಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಎಸ್‌ಐಯ ಸಮವಸ್ತ್ರ ಹಿಡಿದೆಳೆದು ನೇಮ್‌ಪ್ಲೇಟ್ ಹಾನಿಗೊಳಿಸಿ, ಪೊಲೀಸರಿಗೆ ತುಳಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯಾದ ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿ ಎಂ. ಮುಹಮ್ಮದ್ ಶರೀಫ್ (40) ಎಂಬಾತನನ್ನು ನಗರ ಠಾಣೆ ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ನಿನ್ನೆ ಸಂಜೆ ೭ ಗಂಟೆಗೆ ಚೌಕಿ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಕಾಸರಗೋಡು ಟೌನ್ ಎಸ್.ಐ. ಎನ್. …

ಎಡಿಎಂ ನವೀನ್‌ಬಾಬು ಆತ್ಮಹತ್ಯೆ: ಸಿಬಿಐ ತನಿಖೆ ಆಗ್ರಹಿಸಿ ಕುಟುಂಬ ಸುಪ್ರೀಂಕೋರ್ಟ್‌ಗೆ ಅರ್ಜಿ

ಕಣ್ಣೂರು: ಎಡಿಎಂ ಆಗಿದ್ದ ಕೆ. ನವೀನ್‌ಬಾಬುರವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕುಟುಂಬ ನ್ಯಾಯಾಲಯವನ್ನು ಸಮೀಪಿಸಿದೆ. ಈಗ ನಡೆಯುತ್ತಿರುವ ತನಿಖೆಯಲ್ಲಿ ವಿಶ್ವಾಸವಿಲ್ಲವೆಂದು ಸೂಚಿಸಿ ನವೀನ್ ಬಾಬುರವರ ಪತ್ನಿ  ಮಂಜುಷ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಬೇಕೆಂಬ ಕುಟುಂಬದ ಬೇಡಿಕೆಯನ್ನು ಹೈಕೋ ರ್ಟ್ ಈ ಮೊದಲು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟನ್ನು ಸಮೀಪಿಸಲಾಗಿದೆ. ಕಳೆದ ಅಕ್ಟೋಬರ್ 15ರಂದು ನವೀನ್ ಬಾಬು ವಾಸ ಸ್ಥಳದಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿ …

ಅಸ್ವಸ್ಥ ಸ್ಥಿತಿಯಲ್ಲಿ ರಸ್ತೆ ಬದಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನ

ಮಂಜೇಶ್ವರ: ರಸ್ತೆ ಬದಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನರಾದರು. ಕಣ್ವತೀರ್ಥ ರಾಮಾಡಿ ರಾಮ ಭಜನಾ ಮಂದಿರ ಬಳಿಯ ನಿವಾಸಿ ಅಮರ್‌ನಾಥ ದೇವಾಡಿಗ (52) ನಿಧನ ಹೊಂದಿದವರು. ಒಬ್ಬಂಟಿಯಾಗಿ ವಾಸಿಸುತ್ತಿದ್ದ ಇವರು ಈ ತಿಂಗಳ 6ರಂದು ತಲಪಾಡಿಯ ರಸ್ತೆ ಬದಿಯಲ್ಲಿ ಅಸ್ವಸ್ಥ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಹಾಗೂ ಅಲ್ಲಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಮೃತರು ಪತ್ನಿ …