ಮುಂಬೈ ದಾಳಿ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿದ ಉದ್ದೇಶ: ಸಮಗ್ರ ತನಿಖೆಗೆ ಎನ್‌ಐಎ ನಿರ್ಧಾರ

ಕೊಚ್ಚಿ: ಅಮೆರಿಕಾದಿಂದ ಮೊನ್ನೆ ಭಾರತಕ್ಕೆ ತಲುಪಿಸಿದ ಮುಂಬೈ ದಾಳಿ ಪ್ರಕರಣದ ಆರೋಪಿ ತಹವೂರ್ ರಾಣ  ಕೊಚ್ಚಿಗೆ ಭೇಟಿ ನೀಡಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಆ ಕುರಿತಾಗಿ ತನಿಖೆ ನಡೆಸಲು ಎನ್‌ಐಎ ನಿರ್ಧರಿಸಿದೆ. ತಹವೂರ್ ರಾಣನನ್ನು ಸಮಗ್ರ ತನಿಖೆಗೊಳಪಡಿಸಿದರೆ ನಿರ್ಣಾಯಕ ಮಾಹಿತಿ ಲಭಿಸಬ ಹುದೆಂದು ತನಿಖಾ ತಂಡ ನಿರೀಕ್ಷೆಯಿರಿಸಿದೆ. ಮುಂಬೈ ಭಯೋತ್ಪಾದನಾ ದಾಳಿಯ ಒಂದು ವಾರಹಿಂದೆಯಷ್ಟೇ ರಾಣ ಕೊಚ್ಚಿಗೆ ತಲುಪಿದ್ದನು. 2008  ನವಂಬರ್ 26ರಂದು ಮುಂಬೈಯಲ್ಲಿ ಉಗ್ರರ ದಾಳಿ ನಡೆದಿದ್ದು, ಇದರಲ್ಲಿ 170ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ನವಂಬರ್ 26ರಂದು …

ಸ್ಕೂಟರ್‌ನಲ್ಲಿ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ  ಸೆರೆಗೀಡಾಗಿದ್ದಾನೆ. ಮುಳಿ ಯಾರು ಮಾಸ್ತಿಕುಂಡ್ ಚೂರಿ ಮೂಲೆಯ  ಮುಹಮ್ಮದ್ ರಫೀಕ್ (35) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಇಂದು ಮುಂಜಾನೆ ಚೆರ್ಕಳ ಕೆಕೆಪುರದ ಖಾಸಗಿ ಆಸ್ಪತ್ರೆ ಸಮೀಪ ನಡೆಸಿದ ವಾಹನ ತಪಾಸಣೆ ವೇಳೆ 1.3 ಗ್ರಾಂ ಎಂಡಿಎಂಎ ಸಹಿತ ಯುವಕನನ್ನು ಸೆರೆಹಿಡಿಯಲಾಗಿದೆ. ಸ್ಕೂಟರ್ ಚೆರ್ಕಳ ಭಾಗದಿಂದ ಬೋವಿಕ್ಕಾನ ಭಾಗಕ್ಕೆ ಸಂಚರಿಸುತ್ತಿತ್ತು.

ಕರುಳು ದಾನದ ಹೆಸರಲ್ಲಿ ಹಣ ಪಡೆದು ವಂಚನೆ  ದೂರು: ಕೇಸು ದಾಖಲು

ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿರುವ ಒಂಭತ್ತು ವರ್ಷದ ಗಂಡು ಮಗುವಿಗೆ ಸೂಕ್ತ ಕರುಳುದಾನ ಮಾಡುವ ವ್ಯಕ್ತಿಯನ್ನು ಗುರುತಿಸಿ ಸಹಾಯ ಮಾಡುವುದಾಗಿ ನಂಬಿಸಿ ಹಣ ಪಡೆದು ಬಳಿಕ ವಂಚನೆಗೈದ ಬಗ್ಗೆ ಆ ಮಗುವಿನ ತಾಯಿ ನೀಡಿದ ದೂರಿನಂತೆ ಯುವತಿಯೋರ್ವೆ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ತೆಕ್ಕಿಲ್ ಗ್ರಾಮದ 28ರ ಹರೆ ಯದ ಯುವತಿ ಈ ಬಗ್ಗೆ ಪೊಲೀ ಸರಿಗೆ ದೂರು ನೀಡಿದ್ದು ಅದರ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ. ತನ್ನ ಪುತ್ರನಿಗೆ ಕರುಳುದಾನಹಗೈ ಯ್ಯುವವರನ್ನು ಗುರುತಿಸಿ ಅವರಿಂದ ಕರುಳುದಾನ ನಡೆಸುವುದಾಗಿ ನಂಬಿಸಿ …

ಅಂಗಡಿಗೆ ಸಾಮಗ್ರಿ ಖರೀದಿಸಲು ಬಂದ ಬಾಲಕಿಗೆ ಲೈಂಗಿಕ : ಕಿರುಕುಳ: ಆರೋಪಿಗೆ 95 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಂಗಡಿಗೆ ಸಾಮಗ್ರಿ ಖರೀದಿಸಲು ಬಂದ 11ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾ ಧೀಶರಾದ ರಾಮು ರಮೇಶ್ಚಂ ದ್ರಭಾನು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 95 ವರ್ಷ ಕಠಿಣ ಸಜೆ ಹಾಗೂ 3.75 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 15 ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಅನ್ಷೀರ್ ಮೊಗ್ರಾಲ್ ನಾಂಗಿ ಕಡಪ್ಪುರದ ಅಬ್ದುಲ್ ರಹ್ಮಾನ್ …

ಬಸ್‌ನಲ್ಲಿ ಸಾಗಿಸುತ್ತಿದ್ದ ಐದೂವರೆ ಕಿಲೋ ಗಾಂಜಾ ವಶ: ಇಬ್ಬರ ಸೆರೆ 

ಕಣ್ಣೂರು: ಬಸ್‌ನಲ್ಲಿ ಸಾಗಿಸು ತ್ತಿದ್ದ ಐದೂವರೆ ಕಿಲೋ ಗಾಂಜಾ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಉತ್ತರಪ್ರದೇಶ ನಿವಾಸಿಗಳಾದ ಸುಶೀರ್ ಕುಮಾರ್ ಗಿರಿ (36), ರಾಮ್‌ರತನ್ ಸಾಹ್‌ನಿ (40) ಎಂಬಿವರನ್ನು ವಳಪಟ್ಟಣಂ ಪೊಲೀ ಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಳಿಪರಂಬದಿಂದ ತಲಶ್ಶೇರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಇವರು ಪ್ರಯಾಣಿಸುತ್ತಿದ್ದರು. ಪಾಪಿನಿಶ್ಶೇರಿ ಚುಂಗ ಎಂಬಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ. ವಳಪಟ್ಟಣಂ ಎಸ್‌ಎಚ್‌ಒ ಬಿ. ಕಾರ್ತಿಕ್, ಇನ್‌ಸ್ಪೆಕ್ಟರ್ ಟಿ.ಪಿ.ಸುಮೇಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.

ಅಂಗಡಿಯ ಬೋರ್ಡ್‌ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ನಗರದ  ವ್ಯಾಪಾರ ಸಂಸ್ಥೆಯೊಂದರ ಬೋರ್ಡ್‌ನ ಮೇಲೆ ಕಳೆದ ಎರಡು ದಿನಗಳಿಂದ ಸೇವಿಸಲು ನೀರು, ಆಹಾರ ಲಭಿಸದೆ ಸಿಲುಕಿಕೊಂಡಿದ್ದ ನಾಯಿ ಮರಿಯನ್ನು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ನಗರದ ಹಳೆ ಪ್ರೆಸ್‌ಕ್ಲಬ್ ಜಂಕ್ಷನ್ ಬಳಿಯ ಅಂಗಡಿಯೊಂದರ ಬೋರ್ಡ್‌ನಲ್ಲಿ ಈ ನಾಯಿಮರಿ ಸಿಲುಕಿಕೊಂಡು ಎರಡು ದಿನಗಳಿಂದ ಒದ್ದಾಡುತ್ತಿತ್ತು. ಅದನ್ನು ಕಂಡ ಅಂಗಡಿ ಸಿಬ್ಬಂದಿ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಸ್ ವೇಣುಗೋಪಾಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಅಂಗಡಿ ಬೋರ್ಡ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಮರಿಯನ್ನು …

ಮಾದಕಪದಾರ್ಥ ವಿರುದ್ಧ ಹೋರಾಟ ಮುಖ್ಯಮಂತ್ರಿಯ ಕಪಟತನ-ವಿ.ಡಿ. ಸತೀಶನ್

ಕಾಸರಗೋಡು: ಮಾದಕ ಪದಾರ್ಥ ವಿರುದ್ಧದ ಹೋರಾಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಕಪಟತನವನ್ನು ತೋರಿಸುತ್ತಿದೆಯೆಂದು ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಆರೋಪಿಸಿದರು.  ತೀರದೇಶ ಸಂದೇಶ ಯಾತ್ರೆಯ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಭಾಗವಹಿಸಲು ಕಾಸರಗೋಡಿಗೆ ತಲುಪಿದ ಅವರು ಮಾಧ್ಯಮ ಕಾರ್ಯಕರ್ತರೊಂದಿಗೆ ಮಾತ ನಾಡುತ್ತಿದ್ದರು. ಮಾದಕಪದಾರ್ಥ ವಿರುದ್ಧ ಹೋರಾಡುವುದಾಗಿ ಘೋಷಿಸುವ ಮುಖ್ಯಮಂತ್ರಿ ಸಚಿವ ಸಂಪುಟ ಸಭೆಯಲ್ಲಿ ಒಂದನೇ ತಾರೀಖಿನಂದು ಮದ್ಯ ಮಾರಾಟ ಕ್ಕಿರುವ ತೀರ್ಮಾನ ಕೈಗೊಂಡಿರು ವುದಾಗಿ ಅವರು ಆರೋಪಿಸಿದರು. ಇದು ಕಪಟತನವಾಗಿದೆ.  ಎಸ್ ಎಫ್‌ಐ  ರಾಜ್ಯದಲ್ಲಿ ಮಾದಕಪದಾರ್ಥ ವಿಸ್ತರಿಸುವ  …

ರಾಜ್ಯ ಸರಕಾರದ  ನಾಲ್ಕನೇ ವಾರ್ಷಿಕಾಚರಣೆ : ಕಾಸರಗೋಡಿನ ತುಳು ಸಂಸ್ಕೃತಿ ಉಪನ್ಯಾಸ

ಮಂಜೇಶ್ವರ: ಪಿಣರಾಯಿ ವಿಜಯನ್‌ರ ನೇತೃತ್ವದ ದ್ವಿತೀಯ ಅವಧಿಯ ಸರಕಾರದ ನಾಲ್ಕನೇ ವಾರ್ಷಿಕದಂಗವಾಗಿ  ಈ ತಿಂಗಳ 21ರಿಂದ ನಡೆಯುವ ಪ್ರದರ್ಶನ ಮಾರಾಟ ಮೇಳದಂಗವಾಗಿ ಮಂಜೇಶ್ವರ ಗೋವಿಂದ ಪೈ ಎನ್‌ಎಸ್‌ಎಸ್ ಘಟ ಕದ ಸಹಕಾರದೊಂದಿಗೆ ಕಾಸರಗೋಡು ತುಳು ಸಂಸ್ಕೃತಿ ಎಂಬ ವಿಷಯದಲ್ಲಿ ಉಪನ್ಯಾಸ ನಡೆಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾ ನಂದ ಉದ್ಘಾಟಿಸಿ ಮಾತನಾಡಿದರು. ಕೃಷಿ ಸಂಸ್ಕೃತಿಯಾಗಿದೆ ತುಳುನಾಡಿನ ಗ್ರಾಮಗಳ ಅಡಿಪಾಯ ಎಂದು ಅವರು ನುಡಿದರು. ನಾಗಾರಾಧನೆ, ದೈವಾರಾಧನೆ, ಕಂಬಳ ಈ ನಾಡಿನ ಸಂಸ್ಕೃತಿಯ ಭಾಗವೆಂದು ಅವರು ನುಡಿದರು. …

ಉಪ್ಪಳ ನಿವಾಸಿ ಖತ್ತರ್‌ನಲ್ಲಿ ನಿಧನ

ಉಪ್ಪಳ: ಕನ್ನಾಟಿಪಾರೆ ನಿವಾಸಿ ಮುಹಮ್ಮದ್ ಫಸಲ್‌ನೂರ್ (48) ಖತ್ತರ್‌ನಲ್ಲಿ ಹೃದಯಾಘಾ ತದಿಂದ ನಿಧನಹೊಂದಿದರು. ಖತ್ತರ್‌ನ ಅಲ್ಖೋರ್‌ನಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಿ.ಕೆ. ಮುಹಮ್ಮದ್ ಹಾಜಿ-ಆಯಿಶಾಬಿ ದಂಪತಿಯ ಪುತ್ರನಾದ ಮೃತರು ಪತ್ನಿ ಆಬಿದ, ಮಕ್ಕಳಾದ ಮುಹಮ್ಮದ್ ಹಿಲಾಲ್, ಮುಹಮ್ಮದ್ ಅಶ್ಫಾಕ್, ಆಯಿಶತ್ ಆದಿಲ, ಸಹೋದರ-ಸಹೋದರಿಯರಾದ ಖಮರುದ್ದೀನ್, ಮುನೀರ್, ಇರ್ಶಾದ್, ಮೈಮೂನ, ನೂರ್‌ಜಹಾನ್, ಮಿಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತರಲು ಕ್ರಮ ಕೈಗೊಂಡಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಕೆನಡಾದಲ್ಲಿ ನಾಪತ್ತೆಯಾಗಿದ್ದ ಕೇರಳೀಯ ಯುವಕ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ಕೆನಡಾದಲ್ಲಿ ನಾಪತ್ತೆಯಾಗಿದ್ದ ಕೇರಳೀಯನಾದ ಯುವಕ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಲಯಾಟೂರ್ ನೀಲೇಶ್ವರ ನಿವಾಸಿ ಪುದುಶೇರಿ ಫಿನ್ರೋ ಆಂಟನಿ (39) ಸಾವಿಗೀಡಾದ ವ್ಯಕ್ತಿ. ಈ ತಿಂಗಳ ೫ರಿಂದ ಫಿನ್ರೋ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಮನೆಯಲ್ಲಿ ಪತ್ತೆಯಾಗಿತ್ತು.  ಅವರು ನಾಪತ್ತೆಯಾದ ಸುದ್ದಿಯನ್ನು ಕೆನಡಾ ಪೊಲೀಸರು ಬುಧವಾರ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಅವರಿಗಾಗಿ ಹುಡುಕಾಟ ನಡೆಯುತ್ತಿರುವ ಮಧ್ಯೆ ನಿನ್ನೆ ಸಂಜೆ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣವೇನೆಂಬ ಬಗ್ಗೆ ತಿಳಿದುಬಂದಿಲ್ಲ. 12 ವರ್ಷಗಳಿಂದ ಕೆನಡಾದಲ್ಲಿ ಉದ್ಯೋಗದಲ್ಲಿರುವ …