ಉಸಿರಾಟ ತೊಂದರೆಯುವತಿ ಮೃತ್ಯು

ನೀರ್ಚಾಲು: ಯುವತಿ ಉಸಿರಾಟ ತೊಂದರೆಯಿಂದ ಮೃತಪಟ್ಟ ಘಟನೆ ನಡೆದಿದೆ. ಮಾನ್ಯ ಉಳ್ಳೋಡಿ ಬಳಿಯ ಮುಳಿಪರಂಬ್ ಎಂಬಲ್ಲಿನ ಸತೀಶ್ ಎಂಬವರ ಪತ್ನಿ ಸವಿತ (46) ಮೃತಪಟ್ಟ ಯುವತಿ.  ಮೊನ್ನೆ ರಾತ್ರಿ ಇವರಿಗೆ ಕೆಮ್ಮು ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಇವರನ್ನು ಚೆಂಗಳದ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ನಿಧನ ಸಂಭವಿಸಿದೆ. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು. ಕಡಂಬಾರ್‌ಕಟ್ಟೆಯ ಶಂಕರ- ಕಮಲ ದಂಪತಿಯ ಪುತ್ರಿಯಾದ ಸವಿತ …

ವಿದ್ಯಾರ್ಥಿಗಳಿಗೆ ಗಾಂಜಾ ವಿತರಿಸಿದ ಆರೋಪಿ ‘ಕಾಪಾ’ ಪ್ರಕಾರ ಬಂಧನ

ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವೇಳೆ ಅವರಿಗೆ ಗಾಂಜಾ ಪೂರೈಸಿದ ಪ್ರಕರಣ ಸೇರಿದಂತೆ ಇತರ ಹಲವು ಪ್ರಕರಣಗಳ ಆರೋಪಿಯ ಮೇಲೆ ಕಾಪಾ ಕಾನೂನು ಹೇರಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಕಳನಾಡು ಕೆ.ಕೆ. ಸಮೀರ್ (34) ಬಂಧಿತ ಆರೋಪಿ. ಆತನನ್ನು ನಂತರ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಕೂಡಿಹಾಕಲಾಗಿದೆ. ಕಾಸರಗೋಡಿನ ಶಾಲೆಯೊಂದರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವೇಳೆ ಗಾಂಜಾ ಸೇವಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ವಿಚಾರಿಸಿದಾಗ ತಮಗೆ ಗಾಂಜಾ ನೀಡಿದ್ದು ಸಮೀರ್ ಆಗಿರುವುದಾಗಿ  …

ತೆಂಗಿನಮರದಿಂದ ಬಿದ್ದು ಮೂರ್ತೇದಾರ ಮೃತ್ಯು

ತಲಪಾಡಿ: ತೆಂಗಿನಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೇದಾರ ಮೃತಪಟ್ಟ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ಸಂಭವಿಸಿದೆ. ಇಲ್ಲಿನ ನಡುಪೊಲಿಕೆ ನಿವಾಸಿ ಯಶೋಧರ (46) ಮೃತಪಟ್ಟವರು. ಇಂದು ಬೆಳಿಗ್ಗೆ ತನ್ನ ಮನೆ ಬಳಿಯ ತೋಟವೊಂದರಲ್ಲಿ ಮೂರ್ತೆದಾರಿಕೆ ನಡೆಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಲೋ ಬಿಪಿಯಿಂದ ಬಳಲುತ್ತಿದ್ದರೆನ್ನ ಲಾಗಿದೆ. ಇದೇ ತೆಂಗಿನ ಮರದಿಂದ ಬೀಳಲು ಕಾರಣವಾಗಿರಬೇಕೆಂದು ಶಂಕಿಸಲಾಗು …

ಜ್ಯುವೆಲ್ಲರಿ ನೌಕರೆ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹತ್ತಿದ ಯುವಕನಿಂದ ಕಿರುಕುಳ- ದೂರು

ಕಾಸರಗೋಡು: ಜ್ಯುವೆಲ್ಲರಿ ನೌಕರೆ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿ ಕುಳಿತು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ನೀಲೇಶ್ವರ ಚಾಯೋತ್ ನಿವಾಸಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಕಾರಣವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರೂ ಕಾಸರಗೋಡು ನಗರದ ಜ್ಯುವೆಲ್ಲರಿಯೊಂದರ ನೌಕರರಾಗಿದ್ದಾರೆ. ಮಂಗಳವಾರ ರಾತ್ರಿ 9.30ರ ವೇಳೆ ಅವರು ಕೆಲಸ ಮುಗಿಸಿ ಮನೆಗಳಿಗೆ ಹೊರಟಿದ್ದರು. ಯುವಕ ಬೈಕ್‌ನಲ್ಲೂ, ಯುವತಿ ಸ್ಕೂಟರ್‌ನಲ್ಲಿ ಸಂಚರಿಸಿದ್ದಾರೆ. ಮೇಲ್ಪರಂಬಕ್ಕೆ ತಲುಪಿದಾಗ ಯುವಕ ಚಲಾಯಿಸುತ್ತಿದ್ದ ಬೈಕ್ ಯುವತಿಯ …

ಪುಟ್ಟ ಮಗುವಿನ ಕುತ್ತಿಗೆಯಿಂದ ಕಳವುಗೈದ ಚಿನ್ನದ ಸರವನ್ನು ನುಂಗಿದ ಕಳ್ಳಸರ ಹೊರಬರಲು ಪೊಲೀಸರು ಕಾದು ಕುಳಿತದ್ದು ಮೂರುದಿನ

ಪಾಲಕ್ಕಾಡ್: ಪುಟ್ಟ ಮಗುವಿನ ಕುತ್ತಿಗೆಯಿಂದ ಚಿನ್ನದ ಸರವನ್ನು ಕಳವುಗೈದ ಕಳ್ಳನನ್ನು ನಾಗರಿಕರು ಸೆರೆಹಿಡಿಯುವುದರೊಂದಿಗೆ ಅದನ್ನು ಆತ ನುಂಗಿದ್ದು, ಅದು ಲಭಿಸಲು ಪೊಲೀಸರು ಮೂರು ದಿನಗಳ ಕಾಲ ಕಾಯಬೇಕಾಗಿ ಬಂದ ಪ್ರಸಂಗವೊಂದು ನಡೆದಿದೆ. ಆಲತ್ತೂರು ಬಳಿಯ ಮೇಲಾರ್ ಕೋಡ್ ಎಂಬಲ್ಲಿ ನಡೆದ ಉತ್ಸವ ಕಾರ್ಯಕ್ರಮದಲ್ಲಿ ಕಳೆದ ಆದಿತ್ಯವಾರ ಘಟನೆ ನಡೆದಿದೆ. ಪಟ್ಟಂಚೇರಿ ನಿವಾಸಿ ವಿನೋದ್ ಎಂಬವರ ಎರಡೂವರೆ ವರ್ಷ ಪ್ರಾಯದ ಮಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮಧುರೈ ನಿವಾಸಿಯಾದ ಮುತ್ತಪ್ಪನ್ ಎಂಬಾತ ಕಳವು ನಡೆಸಿದ್ದನು. ವಿಷಯ ತಿಳಿದ ನಾಗರಿಕರು …

ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ ಜಿಲ್ಲಾ ಸಮಾವೇಶ

ಕಾಸರಗೋಡು: ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ (ಬಿಎಂಎಸ್) ಜಿಲ್ಲಾ ಸಮಾವೇಶ ಜರಗಿತು. ಜಿಲ್ಲಾಧ್ಯಕ್ಷ ಅನಿಲ್ ಬಿ. ನಾಯರ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಉದ್ಘಾಟಿಸಿದರು. ಎಡರಂಗ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ  ಕೆಎಸ್‌ಆರ್‌ಟಿಸಿಯನ್ನು ನಾಶಪಡಿಸುವ ಕ್ರಮಗಳ ವಿರುದ್ಧ   ಎಂಪ್ಲೋಯೀಸ್ ಸಂಘ್‌ನ ಹೋ ರಾಟ ಅನಿವಾರ್ಯವೆಂದು ಉದ್ಘಾಟನೆ ವೇಳೆ ಅವರು ನುಡಿದರು. ಕೆಎಸ್‌ಆರ್ ಟಿಸಿಯಲ್ಲಿ ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ ಅತ್ಯಂತ ದೊಡ್ಡ ಅಂಗೀಕಾರವಿರುವ ಕಾರ್ಮಿಕರ ಸಂಘಟನೆಯಾಗಿ ಬೆಳೆಯಬೇಕಾಗಿರು ವುದು …

ಉಪ್ಪಳ ಅಗ್ನಿಶಾಮಕದಳಕ್ಕೆ ಪ್ರತಾಪನಗರದಲ್ಲಿ ನೂತನ ಕಟ್ಟಡ ನಿರ್ಮಾಣ

ಉಪ್ಪಳ: ಕಳೆದ 15 ವರ್ಷಗಳಿಂದ ಚೆರುಗೋಳಿ ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಕಾಯÁðಚರಿಸುತ್ತಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರದ 7ನೇ ವಾರ್ಡ್ ಗುಳಿಗ ಬನದ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕಾಮಗಾರಿ ಆರಂಭಗೊAಡಿದ್ದು, ಕಟ್ಟಡ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಪ್ರಸ್ತುತ ಇರುವ ಕಟ್ಟಡದಲ್ಲಿ ಸೌಕರ್ಯದ ಕೊರತೆ ಉಂಟಾಗಿದ್ದು, ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ನಿರ್ಮಾಣ ಗೊಳ್ಳುತ್ತಿರುವ ಎರಡು ಹಂತಸ್ತಿನ ಕಟ್ಟಡದಲ್ಲಿ ಕಚೇರಿ, ಶೆಡ್ಡ್, ಗ್ಯಾರೇಜ್, ವಿಶ್ರಾಂತಿ ಕೊಠಡಿ ಮೊದಲಾದ ಸೌಕರ್ಯಗಳÀÄ ಹೊಂದಿದ್ದು, …

6 ವರ್ಷದ ಬಾಲಕನ ಮೃತದೇಹ ಕೊಳದಲ್ಲಿ ಪತ್ತೆ: ಕೊಲೆ ಶಂಕೆ

ತೃಶೂರು: ಇಲ್ಲಿಗೆ ಸಮೀಪದ ಮಾಳ ಎಂಬಲ್ಲಿ ಕೊಳದಲ್ಲಿ ಆರು ವರ್ಷ ಪ್ರಾಯದ ಬಾಲಕನ ಮೃತದೇಹ ಪತ್ತೆಯಾಗಿದೆ. ಇದು ಕೊಲೆ ಕೃತ್ಯವೆಂದು ಪೊಲೀಸರು ಶಂಕಿಸಿದ್ದು, ನೆರೆಮನೆ ನಿವಾಸಿ ಜೋಜೊ (20)ನನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕನಿಗೆ ದೌರ್ಜನ್ಯಗೈಯ್ಯಲು ಆರೋಪಿ ಯತ್ನಿಸಿದ್ದನೆನ್ನಲಾಗಿದೆ. ಈ ವೇಳೆ ಬಾಲಕ ಪ್ರತಿಭಟಿಸಿರುವುದೇ ಕೊಲೆಗೆ ಕಾರಣವೆಂದು ತಿಳಿಯಲಾಗಿದೆ. ಜೋಜೊ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡ ವ್ಯಕ್ತಿಯಾಗಿದ್ದಾನೆಂದು, ಬೈಕ್ ಕಳವು ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಬೈಕ್ ಕಳವು ಪ್ರಕರಣದಲ್ಲಿ ಜಾಮೀನಿನಲ್ಲಿ ಈತ ಬಿಡುಗಡೆಗೊಂಡಿದ್ದನು. ಬಾಲಕನ …

ತಹವೂರ್ ರಾಣಾ 18 ದಿನ ಎನ್‌ಐಎ ವಶಕ್ಕೆ

ನವದೆಹಲಿ: 2008 ನವಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವೂರ್ ಹುಸೈನ್ ರಾಣಾನನ್ನು 18 ದಿನಗಳ ತನಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಎಐ) ವಶಕ್ಕೆ ಒಪ್ಪಿಸಲಾಗಿದ. ಮುಂಬೈ ದಾಳಿಯ ಹಿಂದಿನ ಪಿತೂರಿಯ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಎನ್‌ಐಎಯ ಪ್ರಮುಖ ಹೆಜ್ಜೆಯಾಗಿದೆ ಇದು.

ಸಾಲದ ಹೊರೆ: ಕುಟುಂಬದ ನಾಲ್ಕು ಮಂದಿ ನೇಣುಬಿಗಿದು ಸಾವು

ತೊಡುಪುಳ: ಇಡುಕ್ಕಿಯಲ್ಲಿ ಕುಟುಂಬವೊಂದರ ನಾಲ್ಕು ಮಂದಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಉಪ್ಪುತ್ತರ ಒಂಬದೆಕ್ಕೆರೆಯಲ್ಲಿ ಘಟನೆ ನಡೆದಿದೆ.  ಸಜೀವ್‌ಮೋಹನನ್ (34), ಪತ್ನಿ ರೇಷ್ಮಾ (30), ಪುತ್ರ ದೇವನ್ (5), ಪುತ್ರಿ ದಿಯಾ (3) ಎಂಬಿವರು ಮೃತಪಟ್ಟವರು. ಕೆಲಸ ಮುಗಿಸಿ ಸಜೀವ್‌ರ ತಾಯಿ  ಬಂದು ನೋಡಿದಾಗ ಮನೆ  ಬಾಗಿಲು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ  ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.  ಚಾವಡಿಯಲ್ಲಿ  ಮೃತದೇಹಗಳು ಕಂಡುಬಂದಿದೆ. ಉಪ್ಪುತ್ತರದಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದಾರೆ ಸಜೀವ್. ಸಾಲದ ಹೊರೆ ಹಿನ್ನೆಲೆ …