ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್‌ನ ಕಾಸರಗೋಡು ಶೋರೂಂ ಉದ್ಘಾಟನೆ

ಕಾಸರಗೋಡು: 162 ವರ್ಷದ ವಿಶ್ವಾಸನೀಯ ಪರಂಪರೆಯಿರುವ ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶ ನಲ್ ಜ್ಯುವೆಲ್ಲರ್ಸ್‌ನ  ಹೊಸ ಶೋರೂಂ ಕಾಸರಗೋಡಿನಲ್ಲಿ ಕಾರ್ಯಾ ರಂಭಗೊಂಡಿದೆ. 812 ಕಿಲೋ ಮೀಟರ್ ರನ್ ಯೂನಿಕ್ ವರ್ಲ್ಡ್ ರೆಕಾರ್ಡ್ ಹೋಲ್ಡರ್, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಡೆದ ಬೋಚೆ, ಸಿನಿಮಾ ನಟಿ ಅಮಲಾ ಪೋಲ್, ಸೋಶ್ಯಲ್ ಮೀಡಿಯಾ ತಾರೆ ಡೋಳಿ ಚಾಯ್‌ವಾಲ ಎಂಬಿವರು ಜಂಟಿಯಾಗಿ ಶೋರೂಂ ಉದ್ಘಾಟಿಸಿ ದರು. ಆರೋಗ್ಯ ಸಮಸ್ಯೆಗಳಿಂದ ಹಾಗೂ ಆರ್ಥಿಕವಾಗಿ ತೊಂದರೆ ಹೊಂದಿದ ಖ್ಯಾತ ಸಿನಿಮಾ ನಟಿ ಚಾಳಮೇರಿ ಯನ್ನು ಉದ್ಘಾಟನಾ ವೇಳೆಯಲ್ಲೇ …

ಬಿಜೆಪಿ ನೇತಾರ ದಿ| ಕೆ. ಜಗದೀಶರ ಪತ್ನಿ ಸುಶೀಲ ನಿಧನ

ಕಾಸರಗೋಡು: ಬಿಜೆಪಿ ಜಿಲ್ಲಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಇತ್ಯಾದಿ ಸ್ಥಾನಗಳನ್ನು ಅಲಂಕರಿಸಿದ್ದ ದಿ| ಕೆ. ಜಗದೀಶ್‌ರ ಪತ್ನಿ  ಕಾಸರಗೋಡು ಕೇಳುಗುಡ್ಡೆ ರಸ್ತೆಯ ಸನತ್ ವಿಹಾರದ ಸುಶೀಲ (72) ಅಸೌಖ್ಯದ ನಿಮಿತ್ತ್ತ ನಿನ್ನೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸುಜಾತ, ಸುನಿತ, ಸನತ್, ಸೊಸೆ ಸಂಧ್ಯಾ, ಅಳಿಯಂದಿರಾದ ವಸಂತ್ ಕೋಟ್ಯಾನ್, ವಸಂತ, ಸಹೋದರ ಸಹೋದರಿಯರಾದ ಸುರೇಶ್, ಕಮಲಾಕ್ಷ, ಸುನಂದ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಶೂರನಾಡ್ ನಿಧನ

ಕೊಚ್ಚಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಶೂರನಾಡ್ ರಾಜಶೇಖರನ್ (76) ನಿಧನ ಹೊಂದಿದರು. ಅಸೌಖ್ಯ ತಗಲಿ ಹಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಸಂಭವಿಸಿದೆ. ಕೆಪಿಸಿಸಿ ನಿರ್ವಾಹಕ ಸಮಿತಿ ಸದಸ್ಯನಾಗಿದ್ದಾರೆ. ಕೊಲ್ಲಂನ ಶೂರನಾಡ್‌ನಲ್ಲಿ ಜನಿಸಿದ ಇವರು ಕೇರಳ ವಿದ್ಯಾರ್ಥಿ ಯೂನಿಯನ್ ಕಾರ್ಯಕರ್ತರಾಗಿ ರಾಜಕೀಯರಂಗ ಪ್ರವೇಶಿಸಿದ್ದರು. ಬಳಿಕ ಕೆಎಸ್‌ಯು, ಯೂತ್ ಕಾಂಗ್ರೆಸ್, ಕೊಲ್ಲಂ ಡಿಸಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೊದಲಾದ ಹುದ್ದೆಗಳನ್ನು ನಿಭಾಯಿಸಿದ್ದರು. ರಾಜ್ಯ ಸಭೆಗೆ, ಸಂಸತ್ತಿಗೆ, ವಿಧಾನಸಭೆಗೆ ಒಂದೊಂದು ಬಾರಿ …

ಪರಾರಿ ವೇಳೆ ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ ಕಳವು ಮಾಲು : ತಂಡದಲ್ಲಿ ನಾಲ್ಕು ಮಂದಿ: ಸೂತ್ರಧಾರ  ಬೆಂಗಳೂರಿನ ಕುಖ್ಯಾತ ಆರೋಪಿ ಎಂಬ ಶಂಕೆ

ಮುಳ್ಳೇರಿಯ: ಅಬಕಾರಿ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗುತ್ತಿದ್ದಾಗ  ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ, ನಗದು ಇತ್ಯಾದಿಗಳು ಕಳವು ಮಾಲುಗಳಾಗಿವೆ ಎಂಬುವುದು ಆದೂರು ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅಪಘಾತಕ್ಕೀಡಾದ ಆ ಕಾರಿನಲ್ಲಿ 140.6 ಗ್ರಾಂ ಚಿನ್ನ, 339.2 ಗ್ರಾಂ ಬೆಳ್ಳಿ, 1,01,700 ರೂ. ನಗದು, ನಾಲ್ಕು ಮೊಬೈಲ್ ಫೋನ್, ಎರಡು ಸುತ್ತಿಗೆಗಳು, ಒಡೆದ ಬೀಗಗಳು ಮಾತ್ರವಲ್ಲದೆ ನಾಲ್ಕು ಎಟಿಎಂ ಕಾರ್ಡ್‌ಗಳೂ ಪತ್ತೆಯಾಗಿದ್ದು ಆದ್ದರಿಂದ ಈ ಕಳ್ಳರ ತಂಡದಲ್ಲಿ ಒಟ್ಟು ನಾಲ್ಕು ಮಂದಿ ಶಾಮೀಲಾಗಿದ್ದಾರೆಂಬ ಮಾಹಿತಿ ಪೊಲೀಸರಿಗೆ …

ಸ್ನೇಹ ಸಂಬಂಧದಿಂದ ಹಿಂಜರಿದ ಯುವತಿಗೆ ಯುವಕನಿಂದ ಇರಿತ: ಮನನೊಂದು ವಿಷ ಸೇವಿಸಿದ ಯುವತಿ

ಹೊಸದುರ್ಗ: ಸ್ನೇಹ ಸಂಬಂಧದಿಂದ ಹಿಂಜರಿದ ದ್ವೇಷದಿಂದ ಬಾಡಿಗೆ ಮನೆಗೆ ಅತಿಕ್ರಮಿಸಿ ನುಗ್ಗಿ ಯುವತಿಗೆ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಇದೇ ವೇಳೆ ಹಲ್ಲೆಯಿಂದ ಮನನೊಂದು ಯುವತಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನೀಲೇಶ್ವರ ಬಳಿಯ ತೈಕಡಪ್ಪುರದ ಮರಕ್ಕಾತ್ ಕಡಪ್ಪುರ ನಿವಾಸಿಯೂ ಕಣ್ಣೂರು ಎಡಕ್ಕಾಡ್ ಕಾಟುಕಚ್ಚೇರಿ ಎಂಬಲ್ಲಿ ವಾಸಿಸುವ ೩೦ರ ಹರೆಯದ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಕಣ್ಣೂರು ಸಿಟಿ ಪೊಲೀಸರು ಕಕ್ಕಾಡ್ ನಿವಾಸಿಯಾದ ವಿನೀತ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಘಟನೆ …

ಸ್ಥಳೀಯಾಡಳಿತ ಸಂಸ್ಥೆಗಳ ಸೇವೆಗಳು ಶರವೇಗದಲ್ಲಿ  ಲಭಿಸುವ ಕೆ-ಸ್ಮಾರ್ಟ್ ಫ್ಲಾಟ್ ಫಾಂ ಜ್ಯಾರಿಗೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಸೇವೆಗಳು ಜನರಿಗೆ ಶರವೇಗದಲ್ಲಿ ಲಭಿಸುವಂತೆ ಮಾಡುವ ಆಧುನಿಕ ರೀತಿಯ ಕೆ ಸ್ಮಾರ್ಟ್ ಫ್ಲಾಟ್‌ಫಾಂ  ಯೋಜನೆ ಇಂದು ಬೆಳಿಗ್ಗೆಯಿಂದ ರಾಜ್ಯದಲ್ಲಿ ವಿದ್ಯುಕ್ತವಾಗಿ ಜ್ಯಾರಿ ಗೊಂಡಿದೆ. ತಿರುವನಂತಪುರದ ಕವಡಿಯಾರ್ ಉದಯ ಪ್ಯಾಲೇಸ್  ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿದರು. ರಾಜ್ಯ ಸ್ಥಳೀಯಾಡಳಿತ-ಅಬಕಾರಿ ಖಾತೆ ಸಚಿವ ಎಂ.ಬಿ. ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆ ಸ್ಮಾರ್ಟ್ ಮೂಲಕ ನೀಡ ಲಾದ ಮೊದಲ ಜನನ …

ಮಾದಕದ್ರವ್ಯ ಹ್ಯಾಶಿಶ್ ಪತ್ತೆ: ಯುವಕ ಸೆರೆ

ಕಾಸರಗೋಡು: ತಳಂಗರೆ ಮಾಲಿಕ್ ದೀನಾರ್ ಮಸೀದಿಗೆ ಹೋಗುವ ಕಮಾನಿನ ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ಮಾದಕದ್ರವ್ಯವಾದ ೫ ಗ್ರಾಂ ಹ್ಯಾಶಿಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದನ್ನು ಕೈವಶವಿರಿಸಿಕೊಂಡಿದ್ದ ಆರೋಪದಂತೆ ತಳಂಗರೆ ಕುನ್ನಿಲ್‌ನ ಅಬ್ದುಲ್ ರಿಯಾಸ್ (40) ಎಂಬಾತ ನನ್ನು ಅಬಕಾರಿ ತಂಡ ಬಂಧಿಸಿ ಎನ್‌ಡಿಪಿ ಎಸ್  ಕಾನೂನುಪ್ರಕಾರ ಕೇಸು ದಾಖಲಿ ಸಿಕೊಂಡಿದೆ. ಕಾಸರಗೋಡಿನ ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆ ಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್)ಗಳಾದ ಪ್ರಮೋದ್ ಕುಮಾರ್, …

ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ: ಎಂ.ಸಿ. ಖಮರುದ್ದೀನ್, ಟಿ.ಕೆ. ಪೂಕೋಯ ತಂಙಳ್ ಇ.ಡಿಯಿಂದ ಸೆರೆ

ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಮಾಜಿ ಶಾಸಕರೂ, ಮುಸ್ಲಿಂ ಲೀಗ್ ನೇತಾರ ನಾಗಿದ್ದ ಎಂ.ಸಿ. ಖಮರುದ್ದೀನ್ ಹಾಗೂ ಮುಸ್ಲಿಂ ಲೀಗ್ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಕೆ. ಪೂಕೋಯ ತಂಙಳ್‌ರನ್ನು ಇ.ಡಿ ಬಂಧಿಸಿದೆ. ಫ್ಯಾಶನ್ ಗೋಲ್ಡ್ ಠೇವಣಿ ವಂಚನೆಗೆ ಸಂಬಂಧಿಸಿ ಹಲವು ಮಂದಿ ನೀಡಿದ ದೂರುಗಳ  ಕುರಿತು ಇ.ಡಿ ಕೂಡಾ ತನಿಖೆ ನಡೆಸುತ್ತಿದೆ. ಎಂ.ಸಿ. ಖಮರುದ್ದೀನ್ ಹಾಗೂ ಟಿ.ಕೆ. ಪೂಕೋಯ ತಂಙಳ್‌ರನ್ನು ತನಿಖೆಗಾಗಿ ಎರಡು ದಿನಗಳ ಹಿಂದೆ ಕಲ್ಲಿಕೋಟೆಗೆ ಕರೆಸಲಾಗಿತ್ತು. ಅದರ …

ಧಾರ್ಮಿಕ ಮುಂದಾಳು ನಿಧನ

ಮಂಗಲ್ಪಾಡಿ: ಪ್ರತಾಪನಗರ ತಿಂಬರ ನಿವಾಸಿ ಧಾರ್ಮಿಕ ಮುಂದಾಳು, ನಿವೃತ ·್ರಒ^್ವ ಔ್ಣÇಔ್ವ% ರಾಮಕೃಷ್ಣ ಹೊಳ್ಳ (85) ನಿನ್ನೆ ಸಂಜೆ ಮನೆಯಲ್ಲಿ ಹೃದಯÁಘಾತದಿಂದ ನಿಧನರಾದರು. ಕಾಸರಗೋಡು ನ್ಯಾಯಾಲಯದಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತಿ ಹೊಂದಿದ್ದರು. ಹಿರಿಯ ಕೃಷಿಕರೂ, ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರ, ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಮಕ್ಕಳಾದ ಶಿವಶಂಕರ ಹೊಳ್ಳ, ಇಂದುಮತಿ, ಮಹಾಲಕ್ಷಿ÷್ಮÃ, ಸೊಸೆ ಭಾಗ್ಯಲಕ್ಷಿ÷್ಮ (ಮುಖ್ಯೋಪಧ್ಯಾಯಿನಿ, ಕಾಯರ್‌ಕಟ್ಟೆ ಶಾಲೆ) ಅಳಿಯಂದಿರಾದ ವಾಸುದೇವ, …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ

ಹೊಸದುರ್ಗ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾಗಿದೆ. ಕಾಞಂಗಾಡ್ ಕೊವ್ವಲ್‌ಪಳ್ಳಿಯ ಹೋಟೆಲ್ ವ್ಯಾಪಾರಿ, ನೀಲೇಶ್ವರ ನಿವಾಸಿಯಾದ ಮುಹಮ್ಮದ್ ನೆಡುಂಕಂಡ ಎಂಬವರ ಕಾರು ಉರಿದು ನಾಶಗೊಂಡಿದೆ. ನಿನ್ನೆ ಸಂಜೆ ಕಾಞಂಗಾಡ್ ಪೇಟೆಯಿಂದ ಸಾಮಗ್ರಿ ಖರೀದಿಸಿ ಮರಳುತ್ತಿದ್ದಾಗ ಅಲಾಮಿಪಳ್ಳಿಗೆ ತಲು ಪಿದಾಗ ಕಾರಿನಲ್ಲಿ ಬೆಂಕಿ ಕಾಣಿಸಿದೆ.   ಹೊಗೆ ಹಾಗೂ ದುರ್ನಾತ ಅನುಭವಗೊಂಡ ಹಿನ್ನೆಲೆಯಲ್ಲಿ ಮುಹಮ್ಮದ್ ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಅವರು ಕಾರಿನಿಂದಿಳಿದೊಡನೆ ಕಾರಿಗೆ ಬೆಂಕಿ ಪೂರ್ಣವಾಗಿ ಆರಿಸಿಕೊಂಡಿದೆ. ಕಾಞಂ ಗಾಡ್‌ನಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ …