ಚಿನ್ನಾಭರಣಕ್ಕಾಗಿ ತಾಯಿಗೆ ಹಲ್ಲೆಗೈದು ಕೊಲೆ : ಸ್ವಾಭಾವಿಕ ಸಾವೆಂದು ತಿಳಿಸಿದ ಪುತ್ರ ಸೆರೆ
ಕಲ್ಲಿಕೋಟೆ: ಪೇರಂಬ್ರ ಕೂತಾಳಿಯಲ್ಲಿ ಗೃಹಿಣಿಯೋರ್ವೆಯ ಸಾವು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕೂತಾಳಿ ನಿವಾಸಿ ಹಾಗೂ ೬೫ರ ಹರೆಯದ ಪದ್ಮಾವತಿ ಅಮ್ಮರನ್ನು ಪುತ್ರ ಲಿಜೀಶ್ ಕೊಲೆಗೈದಿರುವುದಾಗಿ ಪತ್ತೆಹಚ್ಚಲಾಗಿದೆ. ಪ್ರಕರಣದಲ್ಲಿ ಲಿಜೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೇರಂಬ್ರ ಪೂತಾಳಿಯಲ್ಲಿ ಈ ತಿಂಗಳ ೫ರಂದು ಪದ್ಮಾವತಿ ಅಮ್ಮ ಮೃತಪಟ್ಟಿದ್ದರು. ಪ್ರಜ್ಞಾಹೀನೆಯಾಗಿ ಮಲಗಿರುವುದನ್ನು ಕಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಎಂದು ಅಂದು ಆರೋಪಿ ತಿಳಿಸಿದ್ದನು. ಪೇರಂಬ್ರ ಎಂ.ಇ.ಎಸ್. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಪದ್ಮಾವತಿ ಅಮ್ಮ …
Read more “ಚಿನ್ನಾಭರಣಕ್ಕಾಗಿ ತಾಯಿಗೆ ಹಲ್ಲೆಗೈದು ಕೊಲೆ : ಸ್ವಾಭಾವಿಕ ಸಾವೆಂದು ತಿಳಿಸಿದ ಪುತ್ರ ಸೆರೆ”