ಟ್ರೋಲಿಂಗ್ ನಿಷೇಧ ಇಂದು ಕೊನೆ: ಮಾರುಕಟ್ಟೆಗಳಲ್ಲಿ ಹೆಚ್ಚಿದ ಮೀನಿನ ಲಭ್ಯತೆ

ಕಾಸರಗೋಡು: ಬಿರುಸಿನ ಮಳೆ, ಕಡಲಬ್ಬರ, ಟ್ರೋಲಿಂಗ್ ನಿಷೇಧದಿಂದಾಗಿ ಮೀನುಗಳು ಶುಷ್ಕವಾಗಿದ್ದ ಮಾರುಕಟ್ಟೆಗಳಲ್ಲಿ ಈಗ ಯಥೇಚ್ಚ ಮೀನುಗಳು ಲಭ್ಯವಾಗುತ್ತಿರುವುದು ಮೀನುಪ್ರಿಯರಿಗೆ ಆಶ್ವಾಸಕರವಾಗಿದೆ. ಇಂದು ಟ್ರೋಲಿಂಗ್ ನಿಷೇಧ ಕೊನೆಗೊಳ್ಳುವುದರೊಂದಿಗೆ ಮೀನಿನ ಕ್ಷಾಮ ಮಾರುಕಟ್ಟೆಯಲ್ಲಿ ತಲೆದೋರದೆಂಬ ನಿರೀಕ್ಷೆ ಮೀನು ಮಾರಾಟಗಾರರು, ಕಾರ್ಮಿಕರು ಇರಿಸಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಗಳಲ್ಲಿ ಸಿಗಡಿ ಮೀನು ಭಾರೀ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಮಧ್ಯಮ ಗಾತ್ರದ ಸಿಗಡಿ ಮೀನಿಗೆ ಕಿಲೋಗೆ 200 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಗ್ರಾಮ ಪ್ರದೇಶಗಳಲ್ಲಿ ಇದು 220ರಿಂದ 250ರ ವರೆಗೆ ಏರಿತ್ತು. ಆದರೆ ದೊಡ್ಡ …

ಅಮೂಲ್ಯವಾದ ಕುಡಿಯುವ ನೀರು ಎರಡು ತಿಂಗಳಿಂದ ಪೋಲಾಗುತ್ತಿದ್ದರೂ ತಡೆಗೆ ಅಧಿಕಾರಿಗಳಿಂದ ಕ್ರಮವಿಲ್ಲ

ಕುಂಬಳೆ: ಜಲಪ್ರಾಧಿಕಾರದ ಕುಡಿಯುವ ನೀರು ವಿತರಣೆಯ ಪೈಪು ಬಿರುಕುಬಿಟ್ಟ ಪರಿಣಾಮ ಎರಡು ತಿಂಗಳಿಂದ ನೀರು ಪೋಲಾಗುತ್ತಿದೆ. ಈ ವಿಷಯ ಸಂಬಂಧಪಟ್ಟ ಜಲಪ್ರಾಧಿಕಾರದ ಅಧಿಕಾರಿಗಳಿಗೆ  ತಿಳಿಸಿದ್ದರು. ದುರಸ್ತಿಗೆ  ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.  ಉಳುವಾರು ಹೊಳೆಯಿಂದ ಸಂಗ್ರಹಿಸುವ ನೀರನ್ನು  ಶುದ್ಧೀಕರಿಸಿ ಅಂಬಿಲಡ್ಕದಲ್ಲಿರುವ ಟ್ಯಾಂಕ್‌ಗೆ ತುಂಬಿಸಿ ಅಲ್ಲಿಂದ ಕೊಡ್ಯಮ್ಮೆ, ಬಂಬ್ರಾಣ, ಆರಿಕ್ಕಾಡಿ ಮೊದಲಾದೆಡೆಗೆ ನೀರು ವಿತರಣೆ ಮಾಡಲಾಗುತ್ತಿದೆ. ಈ ಪೈಪ್ ಕೊಡ್ಯಮ್ಮೆ ಊಜಾರು ಎಂಬಲ್ಲಿ ೨ ತಿಂಗಳ ಹಿಂದೆ  ಬಿರುಕುಬಿಟ್ಟಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ಫಲಾನುಭವಿಗಳಿಗೆ …

ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಬದಿಯ ಕಾಲುದಾರಿಗೆ ಕಟ್ಟಡಗಳು ವಿಘ್ನ: ಜನರಿಗೆ ಆತಂಕ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಭೂಮಿ ಸರಿಯಾಗಿ ವಶಪಡಿಸಿದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ, ಅದಕ್ಕೆ ಹೊಂದಿಕೊಂಡು ಸರ್ವೀಸ್ ರಸ್ತೆ, ಚರಂಡಿ ವ್ಯವಸ್ಥೆ, ಕಾಲುದಾರಿ ಸಿದ್ಧವಾಗುವಾಗ ಕೆಲವು ಕಡೆಗಳಲ್ಲಿ ಕಾರುದಾರಿಗೆ ಸ್ಥಳವಿಲ್ಲದೆ ಕೆಲವು ಕಡೆಗಳಲ್ಲಿ ಕಾಲು ದಾರಿ ನಿರ್ಮಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಕಾಲ್ನಡೆ ಪ್ರಯಾಣಿಕರ ಸುರಕ್ಷತೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡೆ ನಿರ್ಮಾಣ ವಿಷಯದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸಿ ಈ ಮೊದಲೇ ನಿರ್ಮಾಣ ಕಂಪೆನಿಗಳಿಗೆ ನಿರ್ದೇಶ ನೀಡಿತ್ತು. ಕಾಲುದಾರಿ ನಿರ್ಮಾಣದ ವಿಳಂಬ ನೀತಿ, ಅಸಡ್ಡೆಯನ್ನು ಈಗ ಜನರು …

ಕುದ್ರೆಕೂಡ್ಲುನಲ್ಲಿ ತೆಂಗಿನ ಮರ ಬಿದ್ದು ಮನೆ, ಆಟೋರಿಕ್ಷಾ ಹಾನಿ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುದ್ರೆಕೂಡ್ಲು ಎಂಬಲ್ಲಿ ವಾಸಿಸುವ ಕೃಷ್ಣ ಹೊಳ್ಳರ  ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಮೊನ್ನೆ ರಾತ್ರಿ 8 ಗಂಟೆ ವೇಳೆ ಬೀಸಿದ ಭಾರೀ ಗಾಳಿಗೆ ಮರ ಬಿದ್ದಿದ್ದು ಈ ವೇಳೆ ಕೃಷ್ಣ ಹೊಳ್ಳರ ಪುತ್ರ ರವಿಶಂಕರ ಹೊಳ್ಳ ಗಾಯಗೊಂಡಿದ್ದಾರೆ. ಇವರು ವಿದ್ಯುತ್ ಚಾಲಿತ ಆಟೋರಿಕ್ಷಾವನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಆಟೋರಿಕ್ಷಾ ಸಹಿತ ಮನೆಗೆ ಮರ ಬಿದ್ದಿದೆ. ಇದರಿಂದ ರಿಕ್ಷಾವು ಹಾನಿಯಾಗಿದೆ. ಘಟನೆ ಸ್ಥಳಕ್ಕೆ ಪೈವಳಿಕೆ ಗ್ರೂಪ್ ವಿಲ್ಲೇಜ್ ಆಫೀಸರ್ …

ಹಿರಿಯ ಬಸ್ ಚಾಲಕ ನಿಧನ

ಉಪ್ಪಳ: ಮೂಲತ: ವರ್ಕಾಡಿ ಕೊಂಡೆವೂರು ನಿವಾಸಿ ಈಗ ಉಪ್ಪಳ ಬಳಿಯ ದಡ್ಡಂಗಡಿಯಲ್ಲಿ ವಾಸವಾಗಿರುವ ಬಸ್ ಚಾಲಕ ಭಾಸ್ಕರ ಶೆಟ್ಟಿ (62) ನಿಧನರಾದರು. ಮಂಗಳವಾರ ರಾತ್ರಿ ಇವರಿಗೆ ಹೃದಯÁಘಾತ ಉಂಟಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿದ ಅಲ್ಪ ಹೊತ್ತಿನಲ್ಲಿಯೇ ನಿಧನ ಸಂಭವಿಸಿದೆ. ಇವರು ಈ ಹಿಂದೆ ದೀರ್ಘಕಾಲ ಮಂಗಳೂರು-ಮುAಬೈಗೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಚಾಲಕರಾಗಿದ್ದರು. ಈಗ ಮಂಗಳೂರಿನ ಖಾಸಗಿ ಕಾಲೇಜು ಬಸ್ ಚಾಲಕರಾಗಿ ದುಡಿಯುತ್ತಿದ್ದರು. ದಿ| ಬಂಟಪ್ಪ ಶೆಟ್ಟಿ -ದಿ| ಕಮಲ ದಂಪತಿ ಪುತ್ರನಾಗಿದ್ದಾರೆ.ಮೃತರು ಪತ್ನಿ ಚಂದ್ರಾವತಿ, ಮಕ್ಕಳಾದ …

ಹೆಚ್ಚುತ್ತಿರುವ ಬೀದಿನಾಯಿಗಳ ಕಾಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮರ್ಚೆಂಟ್ಸ್ ಯೂತ್‌ವಿಂಗ್‌ನಿಂದ ಕುಂಬಳೆ ಪಂ. ಅಧ್ಯಕ್ಷೆಗೆ ಮನವಿ

ಕುಂಬಳೆ: ಪೇಟೆಯಲ್ಲಿ ಹಾಗೂ ಕುಂಬಳೆ ಪಂಚಾಯತ್‌ನ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿ ಉಪಟಳ ತೀವ್ರಗೊಂಡಿದೆ. ಸಾವಿರಾರು ಮಕ್ಕಳು ಕಲಿಯುತ್ತಿರುವ ಕುಂಬಳೆ, ಮೊಗ್ರಾಲ್ ಶಾಲಾ ಮೈದಾನ  ಬೀದಿನಾಯಿಗಳ ವಿಹಾರ ಕೇಂದ್ರವಾಗಿ ಬದಲಾಗಿದೆ. ಇದರಿಂದಾಗಿ ಮಕ್ಕಳು ಭೀತಿಗೊಂ ಡಿದ್ದಾರೆ. ಸರಕಾರಿ ಕಚೇರಿಗಳು, ಶಾಲೆ, ಮದ್ರಸಾಗಳು ಆರಾಧನಾಲಯಗಳು ಎಂಬೆಡೆಗಳಿಗೆ ತೆರಳುವವರಿಗೆ ಬೀದಿ ನಾಯಿಗಳಿಗೆ ಹೆದರಿ ಸಂಚರಿಸಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಮೃಗ ಸಂರಕ್ಷಣಾ ಇಲಾಖೆ ಜಂಟಿಯಾಗಿ ನಾಯಿಗಳಿಗೆ ಅಭಯ ಕೇಂದ್ರವನ್ನು ಸಿದ್ಧಪಡಿಸಬೇಕು, ಬೀದಿನಾಯಿಗಳನ್ನು ಸೆರೆ ಹಿಡಿಯಲು ತುರ್ತು …

ಸಾರಿಗೆ ಇಲಾಖೆ ಕಾರ್ಯದರ್ಶಿ ನಡೆಸಿದ ಚರ್ಚೆ ವಿಫಲ: ಖಾಸಗಿ ಬಸ್ ಮಾಲಕರು ಮತ್ತೆ ಮುಷ್ಕರದತ್ತ

ತಿರುವನಂತಪುರ: ವಿದ್ಯಾರ್ಥಿ ಪ್ರಯಾಣ ದರ ಹೆಚ್ಚಿಸುವ ವಿಷಯದಲ್ಲಿ ನಡೆದ ಚರ್ಚೆ ಪರಾಭವಗೊಂಡ  ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲಕರು ಅನಿರ್ಧಿಷ್ಟಾವಧಿ ಮುಷ್ಕರ ಬಗ್ಗೆ ಆಲೋಚಿಸುತ್ತಿದ್ದಾರೆ. ಓಣಂ ಮುಂಚೆ ಮುಷ್ಕರ ನಡೆಸುವ ಬಗ್ಗೆ ಆಲೋಚಿಸಲಾಗುತ್ತಿದೆ. ರಿಯಾಯಿತಿ ದರ ಹೆಚ್ಚಿಸುವುದನ್ನು ಅಂಗೀಕರಿ ಸುವುದಿಲ್ಲವೆಂದು ವಿದ್ಯಾರ್ಥಿಗಳ ಸಂಘಟನೆಗಳ ನಿಲುವು ಕೈಗೊಂಡಿರು ವುದರಿಂದ ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಚರ್ಚೆ ಪರಾಭವಗೊಂಡಿತು. ಈ ತಿಂಗಳ 22ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲು ಬಸ್ ಮಾಲಕರ ಸಂಘಟನೆ ನಿರ್ಧರಿಸಿತ್ತು. ಆದರೆ ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಳ ಕುರಿತು …

ಸಾಫ್ಟ್ ಬೇಸ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಿರೀಟ: ತಂಡದ ಶ್ರಾವ್ಯ ಕನಿಯಾಲಳಿಗೆ  ಅಭಿನಂದನೆ

ಬಾಯಾರು: ನೇಪಾಳದಲ್ಲಿ ನಡೆದ ಸೌತ್ ಏಷ್ಯನ್ ಸಾಫ್ಟ್ ಬೇಸ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಕಿರೀಟ ಗಳಿಸಿದ ಭಾರತ ತಂಡದ ಶ್ರಾವ್ಯ ಕನಿಯಾಲರನ್ನು ರೆಡ್ ಸ್ಟಾರ್ ಕನಿಯಾರ ಸಂಘದ ಸದಸ್ಯರು ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸ್ವಾಗತಿಸಿದರು. ಕನಿಯಾಲದಲ್ಲಿ ರೆಡ್ ಸ್ಟಾರ್ ಕ್ಲಬ್‌ನ ವತಿಯಿಂದ ಅಭಿನಂದನಾ ಸಮಾರಂಭವನ್ನು ಜರಗಿಸಲಾಯಿತು. ಮುಖ್ಯೋ ಪಾಧ್ಯಾಯಿನಿ ಶೋಭಿತಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದರು. ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿದ್ದರು. ಶಾರದಾಂಬಾ ಶಾಲೆಯ ಮೆನೇಜರ್ ಸಂದಶ್, ಅಧ್ಯಾಪಕರಾದ ಶೋಭಿತ್, ವಾರ್ಡ್ ಪ್ರತಿನಿಧಿ ಮಮತಾ ಶುಭ ಹಾರೈಸಿದರು.ರೆಡ್ ಸ್ಟಾರ್ ಕ್ಲಬ್‌ನ …

ಕೋಳಿ ತ್ಯಾಜ್ಯ ಸಂಸ್ಕರಣಾ ಸ್ಥಾವರದಲ್ಲಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಸ್ಥ್ಥಿತಿಯಲ್ಲಿ ಪತ್ತೆ

ಮಲಪ್ಪುರಂ: ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಲಪ್ಪುರಂ ಅರಿಕೋಡಿನಲ್ಲಿ ರುವ ಈರಂಜಾಟಿರಿ ವಡಕುಂ ಮುರಿಯ ಅನುಗ್ರಹ ಹಾರ್ಚರಿ  ಪೂಲ್ಟ್ರೀ  ಫಾರ್ಮ್ ಆಂಡ್ ರೆಂಡರಿಂಗ್ ಘಟಕದ ಅನೈರೋಬಿಕ್ ಟ್ಯಾಂಕ್‌ನಲ್ಲಿ ನಿನ್ನೆ ಈ ಮೂವರು ವಲಸೆ ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಅಸ್ಸಾಂ  ಗೋಲ್‌ಪಾರ್ ನಿವಾಸಿಗಳಾದ ಹಿತೇಶ್ ಶರಣಿಯಾ (46), ಸಮದ್ ಅಲಿ (20) ಮತ್ತು ಬಿಹಾರ ಸೀತಾಮಾಡಿ ನಿವಾಸಿ ವಿಕಾಸ್ ಕುಮಾರ್ (29) ಎಂದು ಗುರುತಿಸಲಾಗಿದೆ. ಪ್ರಾಣವಾಯುವಾದ …

ಧರ್ಮಸ್ಥಳ ಭಜನಾ ಕಮ್ಮಟದ ಪೂರ್ವಭಾವಿ ಸಭೆ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಸೆ.14ರಿಂದ 21ರ ವರೆಗೆ ಧರ್ಮಸ್ಥಳದಲ್ಲಿ ಜರಗಲಿರುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು. ಧ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಉದ್ಘಾ ಟಿಸಿದರು. ಪರಿಷತ್ ಕಾಸರಗೋಡು ವಲಯ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಭಜನಾ ಪರಿಷತ್ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಮಾತನಾ ಡಿದರು. ಸಂತೋಷ್ ಪೂಜಾರಿ ಪ್ರಸ್ತಾಪಿಸಿದರು. ವೆಂಕಟ್ರಮಣ ಬಾಲಗೋಕುಲದ …