ಕ್ವಾರ್ಟರ್ಸ್‌ನಿಂದ 1ಲಕ್ಷ ರೂ. ಕಳವು

ಕಾಸರಗೋಡು: ಕ್ವಾರ್ಟರ್ಸ್ ನೊಳಗೆ ಡಬ್ಬದಲ್ಲಿರಿಸಿದ್ದ 1 ಲಕ್ಷ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಅಣಂಗೂರಿನ ರಾಸಿಕ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕರ್ನಾಟಕದ ವಿಜಯಪುರ ನೆರಬೆಂಜು ಎಂಬಲ್ಲಿನ ರಮಣ ಸಿದ್ಧಪ್ಪ ಎಂಬವರ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಮಣ ಸಿದ್ಧಪ್ಪ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದು, ಸಂಜೆ 6 ಗಂಟೆಗೆ ಮರಳಿದ್ದರು. ಈ ವೇಳೆ ಹಣ ಕಳವಿಗೀಡಾಗಿರುವುದು ಅರಿವಿಗೆ ಬಂದಿದೆ. ಕ್ವಾರ್ಟರ್ಸ್‌ನ ಸೀಲಿಂಗ್ ಅಳವಡಿಸದ ಭಾಗದಲ್ಲಾಗಿ ಕಳ್ಳ ಒಳಗೆ ನುಗ್ಗಿದ್ದಾನೆಂದು …

ಕಳಪೆ ಕಾಮಗಾರಿ: ಕುಡಿಯುವ ನೀರಿನ ಪೈಪ್ ಸ್ಥಾಪಿಸಿದ ಹೊಂಡದಲ್ಲಿ ಸಿಲುಕಿದ ಕಾರು

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿ ಕುಡಿಯುವ ನೀರಿನ ಪೈಪು ಅಳವಡಿ ಸಲು ತೋಡಿದ ಹೊಂಡವನ್ನು ಸರಿಯಾಗಿ ಮುಚ್ಚದಿರುವುದು ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಈ ರೀತಿ ಕಳಪೆ ಕಾಮಗಾರಿ ನಡೆಸಿದ ಪರಿಣಾಮ ವಾಹನಗಳು ಹೊಂಡದಲ್ಲಿ ಸಿಲುಕಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ಕಾರೊಂದು ಹೊಂಡದಲ್ಲಿ ಸಿಲುಕಿಕೊಂಡಿತ್ತು. ರಸ್ತೆ ಬದಿಗೆ ಕಾರನ್ನು ಚಲಾಯಿಸಿದಾಗ ಅದು ಹೊಂಡದಲ್ಲಿ ಹೂತುಹೋಗಿದೆ. ಅನಂತರ ಪಿಕಪ್ ವಾಹನದ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಯಿತು. ಸರ್ವೀಸ್ ರಸ್ತೆ …

ಸಾರ್ವಜನಿಕರಿಗೆ ಸಮಸ್ಯೆಯ ಕೇಂದ್ರವಾದ ಕಾಸರಗೋಡು ಹಳೆ ಬಸ್ ನಿಲ್ದಾಣ

ಕಾಸರಗೋಡು: ಕಾಸರಗೋಡು ನಗರ ಸುಂದರ ನಗರ ಎಂದು ಕರೆಯಲ್ಪಡುತ್ತಿರುವಾಗಲೇ ಕಾಸರಗೋಡು ನಗರ ಅವ್ಯವಸ್ಥೆಯ ಕೇಂದ್ರವಾಗಿ ಬದಲಾಗಿದೆ ಎಂಬ ಆರೋಪ ವಿವಿಧ ಭಾಗಗಳಿಂದ ಕೇಳಿ ಬರುತ್ತಿದೆ. ಕಾಸರಗೋಡು ನಗರ ಸಭೆಯ ವ್ಯಾಪ್ತಿಯಲ್ಲಿರುವ ಕಾಸರಗೋಡು ನಗರದಲ್ಲಿ ಸಾರ್ವಜನಿಕರಿಗೆ ಬೇಕಾದ ಯಾವುದೇ ಸೌಕರ್ಯಗಳಿಲ್ಲದೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿದೆಯೆಂದು ದೂರಲಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಕಾಸರಗೋಡು ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ  ಬಸ್‌ಗಾಗಿ ಕಾದು ನಿಲ್ಲಲು ತಂಗುದಾಣವಿಲ್ಲದಿರುವುದು ಪ್ರಧಾನ ಸಮಸ್ಯೆಯಾಗಿಯೇ ಮುಂದುವರಿದಿದೆ. ತಂಗುದಾಣವಿಲ್ಲದಿ ರುವುದರಿಂದ ಮಳೆ-ಬಿಸಿಲಿಗೆ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. …

ಉಪ್ಪಳ ಪೇಟೆಯಲ್ಲಿ ವಾಹನ ದಟ್ಟಣೆ: ಸಂಚಾರ ಸಮಸ್ಯೆ

ಉಪ್ಪಳ: ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವೇಳೆ ಉಂಟಾಗುತ್ತಿರುವ ವಾಹನಗಳ ದಟ್ಟಣೆಯಿಂದ ತೀವ್ರ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಫ್ಲೈಓವರ್ ಕೆಲಸ ಶೀಘ್ರ ಮುಗಿಸಿ ಸಂಚಾರ ಆರಂಭಿಸಿದರೆ ಮಾತ್ರವೇ ಇಲ್ಲಿನ ಸಂಚಾರ ಸಮಸ್ಯೆಗೆ ಪರಿಹಾರವಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿ ದ್ದಾರೆ. ಈಗ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಕಾಸರ ಗೋಡಿನಿಂದ ಮಂಗಳೂರು ಕಡೆಗೆ ಸಂಚರಿಸುವ  ವಾಹನಗಳು ಕೈಕಂಬ ದಿಂದ ಉಪ್ಪಳ ಪೇಟೆ ತನಕ ಅರ್ಧ ಗಂಟೆ ಅಥವಾ ಒಂದು ಗಂಟೆ ತನಕ ರಸ್ತೆ …

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ

ಹೊಸದುರ್ಗ: ಗೃಹಿಣಿ ಮನೆ ಸಮೀಪದ ಶೆಡ್‌ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಿನಾನೂರು ಕರಿಂದಳಂ ಪಂಚಾಯತ್‌ನ ನರಿಮಾಳಂ ಕಾರಿಮೂಲೆ ನಿವಾಸಿ ಕೆ. ಲೀಲಾ (56) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀಲೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.  ದಿನೇಶ್ ಬೀಡಿ ಕಂಪೆನಿ ಕಾರ್ಮಿಕೆಯಾಗಿದ್ದರು. ದಿ| ಪಿ.ಪಿ. ರಾಮಚಂದ್ರನ್ ಪತಿಯಾಗಿದ್ದು, ಮೃತರು ಮಕ್ಕಳಾದ ಅಖಿಲ್, ಅತುಲ್, ಸೊಸೆ ನಯನ, ಸಹೋದರಿ ರತ್ನಾವತಿ, ಸಹೋದರರಾದ ನಾರಾಯಣನ್, …

ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕೆಎಸ್‌ಆರ್‌ಟಿಸಿ : ಮೊಗ್ರಾಲ್‌ನಲ್ಲಿ ಪ್ರಯಾಣಿಕರಿಗೆ ಸಂಕಷ್ಟ

ಕಾಸರಗೋಡು: 22 ದಿನಗಳು ಮುಚ್ಚಿದ ಬಳಿಕ ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ತೆರೆದು ಕೊಟ್ಟರೂ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸದೆ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಸಂಚರಿಸುತ್ತಿರುವು ದಾಗಿ ಸ್ಥಳೀಯರು ದೂರಿದ್ದಾರೆ. ಪ್ರಯಾಣಿಕರಿಗೆ ಇದು ಭಾರೀ ಸಂಕಷ್ಟ ಉಂಟುಮಾಡುತ್ತಿದೆ. ದುರಸ್ತಿ ಕೆಲಸದ ಹೆಸರಲ್ಲಿ ಮೊಗ್ರಾಲ್ ಪೇಟೆಯ ಸರ್ವೀಸ್ ರಸ್ತೆಯನ್ನು 22 ದಿನಗಳ ಕಾಲ ಮುಚ್ಚಲಾಗಿತ್ತು. ಸ್ಥಳೀಯ ಪ್ರತಿನಿಧಿ ರಿಯಾಸ್ ಯುಎಲ್‌ಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರಸ್ತೆಯನ್ನು ತಾತ್ಕಾಲಿಕವಾಗಿ ತೆರೆದು ನೀಡಲಾಗಿತ್ತು. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮೂಲಕ ಸಂಚರಿಸದಿರು …

ಬಸ್ ಮಾಲಕ ಕುಸಿದು ಬಿದ್ದು ನಿಧನ

ಕಾಸರಗೋಡು: ಬಸ್ ಮಾಲಕ ಕುಸಿದು ಬಿದ್ದು ಮೃತಪಟ್ಟರು. ಹಕೀಂ ಬಸ್‌ಗಳ ಮಾಲಕ ಹಾಗೂ ಪಾಲಕುನ್ನು ಮುದಿಯಕ್ಕಾಲ್ ನಿವಾಸಿ ಎನ್.ಪಿ. ಇಬ್ರಾಹಿಂ (65) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಅಂಗಡಿಗೆ ತೆರಳಿ ಸಾಮಗ್ರಿಗಳನ್ನು ಖರೀದಿಸಿದ ಬಳಿಕ ಮಧುಮೇಹ ತಪಾಸಣೆ ನಡೆಸಿ ಮನೆಗೆ ಹಿಂತಿರುಗಿದ್ದರು. ಮನೆಯಲ್ಲಿ ವಿಶ್ರಾಂತಿಯಲ್ಲಿ ರುವ ವೇಳೆ ಕುಸಿದು ಬಿದ್ದಿದ್ದಾರೆ. ಈ ಮೊದಲು ಹೃದಯ ಶಸ್ತ್ರಚಿಕಿತ್ಸೆ ನಡೆಸಲಾ ಗಿತ್ತು. ಮೃತರು ಪತ್ನಿ ಸಫಿಯ, ಮಕ್ಕಳಾದ ಸಬೀರ್, ರಾಶಿದ್, ಫಿರೋಸ್, ಇಸ್ಮಾಯಿಲ್, ಇಝಾಮ್ ಹಾಗೂ ಅಪಾರ ಬಂಧು-ಮಿತ್ರರನ್ನು …

ತ್ರೀ ಸ್ಟಾರ್‌ಗಿಂತ ಮೇಲಿನ ಹೋಟೆಲ್‌ಗಳಲ್ಲಿ 1ನೇ ತಾರೀಕಿನಂದು ಮದ್ಯ ಮಾರಾಟ ಮಾಡಲು ಅನುಮತಿ

ಕಾಸರಗೋಡು: ರಾಜ್ಯದಲ್ಲಿ ಹೊಸ ಮದ್ಯನೀತಿಗೆ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಡ್ರೈ ಡೇ ಆಗಿ ಆಚರಿಸುತ್ತಿದ್ದ ೧ನೇ ತಾರೀಕಿನಂದು ಇನ್ನು ತ್ರೀ ಸ್ಟಾರ್‌ಗಿಂತ ಮೇಲಿನ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಬಹುದೆಂದು ಹೊಸ ಮದ್ಯನೀತಿಗೆ ನಿನ್ನೆ ಸೇರಿದ ಸಚಿವ ಸಂಪುಟ  ಸಭೆ ಅಂಗೀಕಾರ ನೀಡಿದೆ. ಆದರೆ 1ನೇ ದಿನಾಂಕದ ಡ್ರೈ ಡೇ ಪೂರ್ಣವಾಗಿ ತೆಗೆದು ಹಾಕುವ ಬೇಡಿಕೆಯನ್ನು ಅಂಗೀಕರಿಸಲಾಗಿಲ್ಲ. ಟೂರಿಸಂ ಕಾನ್ಫಸೆನ್ಸ್‌ಗಳು, ಇವೆಂಟ್‌ಗಳು ಬುಕ್ ಮಾಡಿದ್ದರೆ ಅಬಕಾರಿ ಕಮಿಷನರ್‌ಗೆ ಅರ್ಜಿ ನೀಡಬೇಕು. ಪ್ರತ್ಯೇಕ ಶುಲ್ಕ ವಸೂಲು ಮಾಡಿ ಹೋಟೆಲ್‌ಗಳಲ್ಲಿ …

ಅಸೌಖ್ಯ: ಯುವಕ ನಿಧನ

ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನೆಲ್ಲಿಕುಂಜೆ ನಿವಾಸಿ ಕೆ. ನೌಶಾದ್ (48) ನಿಧನ ಹೊಂದಿದರು. ಅನಿವಾಸಿಯಾಗಿದ್ದರು. ದಿ| ಕೋಟಿಕುಳಂ ಅಬ್ದುಲ್ಲ- ಆಯಿಷಾ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಶಂಸೀರಾ ಸೂರ್ಲು, ಮಕ್ಕಳಾದ ನಹ್ಯಾನ್, ನೌರೀನ, ಸೈಹಾನ್, ಮೆಹರಾ, ಸಹೋದರರಾದ ಕೆ.ಎ. ಮುಸ್ತಫ, ಕೆ.ಎ. ನಾಸರ್, ಕೆ.ಎ. ಮುನೀರ್, ಸಹೋದರಿಯರಾದ ರಶೀದ, ಸಾಫಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಎರ್ನಾಕುಳಂನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ತಳಂಗರೆ ಜದೀದ್ ರಸ್ತೆ ನಿವಾಸಿ ಹಾಗೂ ದುಬೈಯಲ್ಲಿ ಬ್ಯಾಂಕ್ ಉದ್ಯೋಗಿಯಾ ಗಿರುವ ಪಿ.ಎ. ಮುಜೀಬ್ ರಹ್ಮಾನ್‌ರ ಪುತ್ರ ಮುನೀಬ್ ಮುಜೀಬ್ (23) ಮೃತಪಟ್ಟವರು. ನಿನ್ನೆ ಮುಂಜಾನೆ ನಿಧನ ಸಂಭವಿಸಿದೆ. ಕಳೆದ ಕೆಲವು ತಿಂಗಳು ಗಳಿಂದ ಚಿಕಿತ್ಸೆಯಲ್ಲಿದ್ದರು. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರನಾಗಿ ದ್ದಾರೆ. ಮೃತರು ತಂದೆ, ತಾಯಿ ಮಾಶಿತಾ, ಸಹೋದರ- ಸಹೋದರಿಯರಾದ ಡಾ. ಮುಬಶಿರ, ಮುಬೈನ, ಮುಹ್‌ಶಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.