ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾಮಂದಿರದ ರಜತ ವಾರ್ಷಿಕೋತ್ಸವ 12ರಂದು

ಬದಿಯಡ್ಕ: ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾಮಂದಿರದ 25ನೇ ವಾರ್ಷಿಕೋತ್ಸವ ಈ ತಿಂಗಳ 12ರಂದು ಜರಗಲಿದೆ. ಅಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಭಜನೆ 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ, 10ರಿಂದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಮತ್ತು ಬಳಗದವರಿಂದ ಹರಿಕಥೆ, ಮಧ್ಯಾಹ್ನ ಮಹಾಪೂಜೆ, ಅಪರಾಹ್ನ 2ರಿಂದ ವಿಷ್ಣು ಫ್ರೆಂಡ್ಸ್ ಬಾಂಜತ್ತಡ್ಕ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಉದನೇಶ್ವರ ಭಜನಾ ಮಂಡಳಿ ಪೆರಡಾಲ ಇವರಿಂದ ಭಜನೆ, 4ಕ್ಕೆ ರಾಮ ಇಕ್ಕೇರಿ ಇವರಿಂದ ಭಾಗವತ ಪಾರಾಯಣ, 6 ಗಂಟೆಗೆ ವೃಂದಾವನ ಮಹಿಳಾ …

ಐಲ ಕ್ಷೇತ್ರದಲ್ಲಿ ವಿಷು ಜಾತ್ರೆ 13ರಿಂದ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರೆ ಎಪ್ರಿಲ್ 13ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 13ರಂದು ಪೂರ್ವಾಹ್ನ 10ರಿಂದ ಧ್ವಜಾರೋಹಣ, ಬಲಿ ಉತ್ಸವ, ಹರಿಶ್ಚಂದ್ರ ಆಚಾರ್ಯ ಬೇಕೂರು ಸೇವಾರ್ಥವಾಗಿ ನೀಡಿದ ನೂತನ ಪಲ್ಲಕ್ಕಿ ಕ್ಷೇತ್ರಕೆÀ್ಕ ಸಮರ್ಪಣೆ, ರಾತ್ರಿ 7.45ರಿಂದ ಬಲಿಉತ್ಸವ, 14ರಂದು 5.30ರಿಂದ ವಿಷುಕಣಿ ದರ್ಶನ, 7ರಿಂದ ಹೂವಿನ ಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ಭಜನೆ, 9.30ರಿಂದ ಪಂಚಾAಗ ಶ್ರವಣ, 10ರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 7.45ರಿಂದ ಬಲಿ ಉತ್ಸವ, …

ಚಿನ್ನ ಕಳ್ಳ ಸಾಗಾಟ: ಇಬ್ಬರು ಯುವಕರನ್ನು ಕೊಲೆಗೈದು ಮೃತದೇಹಗಳನ್ನು ಹೂತುಹಾಕಿದ ಪ್ರಕರಣ:  ಚೆಂಗಳ, ಅಣಂಗೂರು ನಿವಾಸಿಗಳಾದ ಮೂವರು ಆರೋಪಿಗಳು ತಪ್ಪಿತಸ್ಥರು

ಕಾಸರಗೋಡು/ಮಂಗಳೂರು: ಕಳ್ಳಸಾಗಾಟ ಚಿನ್ನವನ್ನು ಅಪಹರಿಸಿದು ದಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಇಬ್ಬರು ಯುವಕರನ್ನು  ಕುತ್ತಿಗೆ ಕೊಯ್ದು ಕೊಲೆಗೈದ ಬಳಿಕ ಮೃತದೇಹಗಳನ್ನು ಡಸ್ಟರ್ ಕಾರಿನ ಢಿಕ್ಕಿಯಲ್ಲಿ ತುಂಬಿಸಿ  ಕೊಂಡೊಯ್ದು ಕುಂಡಂಕುಳಿ, ಮರುದಡ್ಕ ಎಂಬಲ್ಲಿನ  ನಿರ್ಜನಪ್ರದೇಶದಲ್ಲಿ ಹೂತುಹಾಕಿದ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಪತ್ತೆಹಚ್ಚಿದೆ. ಚೆಂಗಳದ ಮುಹಮ್ಮದ್ ಮುಹಾ ಜೀರ್ ಸನಾಫ್ (25), ಅಣಂಗೂರು ನಿವಾಸಿಗಳಾದ ಮೊಹಮ್ಮದ್ ಇರ್ಷಾದ್ (24), ಮುಹಮ್ಮದ್ ಸಫ್ವಾನ್ (24) ಎಂಬಿವರನ್ನು ಮಂಗಳೂರು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಪ್ಪಿತಸ್ಥರೆಂದು  ಘೋಷಿಸಿದೆ. 2014 ಜುಲೈ 1ರಂದು …

ಅಬಕಾರಿ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗಿ ಅಪಘಾತಕ್ಕೀಡಾದ ಕಾರಿನಿಂದ ಚಿನ್ನ, ಬೆಳ್ಳಿ, ಮಾರಕಾಯುಧ ಪತ್ತೆ: ಇಬ್ಬರು ಪರಾರಿ

ಆದೂರು: ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ಪರಿಶೀ ಲನೆಗಾಗಿ ತಡೆದು ನಿಲ್ಲಿಸಲೆತ್ನಿಸಿದ ವೇಳೆ ಅದು ನಿಲ್ಲದೆ ಪರಾರಿಯಾಗಿ ಬಳಿಕ ಅಪ ಘಾತಕ್ಕೊಳಗಾಗಿ ಅದರಲ್ಲಿ ಚಿನ್ನ, ಬೆಳ್ಳಿ ಹಾಗೂ ಮಾರಕಾಯುಧಗಳು ಪತ್ತೆಯಾ ದ ಘಟನೆ ಇಂದು ಮುಂಜಾನೆ ನಡೆದಿದೆ.ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಕೇರಳ ಎಕ್ಸೈಸ್ ಮೊಬೈಲ್ ಇಂಟರ್ವೆನ್ಶನ್ ಯೂನಿಟ್ (ಕೆಮು) ಘಟಕದ ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದ ಅಬಕಾರಿ ತಂಡ ಇಂದು ಮುಂಜಾನೆ …

ಮುಂಬೈದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಇಂದು ಭಾರತಕ್ಕೆ

ದೆಹಲಿ: 2008 ನವಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಪಾಕ್ ಮೂಲದ ನಿವಾಸಿ ಹಾಗೂ ಕೆನಡಾ ಪ್ರಜೆಯಾಗಿರುವ ತಹವೂರ್ ರಾಣಾನನ್ನು ಇಂದು ಅಮೆರಿಕಾದಿಂದ ಭಾರತಕ್ಕೆ ತರಲಾಗುವುದು. ಆ ಹಿನ್ನೆಲೆಯಲ್ಲಿ  ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಬಿಗಿ ಬಂದೋಬಸ್ತ್ ಹಾಗೂ ಕಟ್ಟೆಚ್ಚರ ಪಾಲಿಸಲಾಗುತ್ತಿದೆ. ತಹಾವೂರ್ ರಾಣಾ ಈಗ ಅಮೇರಿಕಾದ ಜೈಲಿನಲ್ಲಿದ್ದು, ಪ್ರಧಾನಮಂತ್ರಿ ಮೋದಿ ಮಾಡಿಕೊಂಡ ಮನವಿಯಂತೆ  ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮುಂದಾಗಿದ್ದರು. ಅದಕ್ಕೆ ಯುಎಸ್‌ನ ಸರ್ವೋಚ್ಛ ನ್ಯಾಯಾಲಯವೂ ಅನುಮತಿ …

ಯುವತಿಯನ್ನು ಅಂಗಡಿಯೊಳಗೆ ಕಿಚ್ಚಿರಿಸಿ ಕೊಲೆಗೈಯ್ಯಲೆತ್ನ: ವ್ಯಾಪಾರಿ ಪೊಲೀಸ್ ವಶಕ್ಕೆ

ಕಾಸರಗೋಡು:  ಯುವತಿ ಯನ್ನು ಅಂಗಡಿಯೊಳಗೆ ಟಿನ್ನರ್ ಎರೆದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಮುನ್ನಾಡ್ ಮಣ್ಣಡ್ಕ ಎಂಬಲ್ಲಿ ಜೀನಸು ಅಂಗಡಿ ನಡೆಸುವ ರಮಿತ ಎಂಬವರ ಮೇಲೆ ನಿನ್ನೆ ಸಂಜೆ  3.30ರ ವೇಳೆ ದಾಳಿ ನಡೆದಿದೆ.  ಕರ್ನಾಟಕ ನಿವಾಸಿ ರಾಮಾಮೃತ ಎಂಬಾತ ಯುವತಿ ಮೇಲೆ ಕಿಚ್ಚಿರಿಸಿದ್ದಾನೆ. ರಮಿತಾರ ಅಂಗಡಿಗೆ ಸಮೀಪದಲ್ಲೇ ರಾಮಾಮೃತನ ಪೀಠೋಪಕರಣ ಅಂಗಡಿ ಇದೆ. ಒಂದು ವರ್ಷದಿಂದ ಈತ ಅಲ್ಲಿ ಅಂಗಡಿ ನಡೆಸುತ್ತಿದ್ದನು. ರಾಮಾಮೃತ  ಮದ್ಯ ಸೇವಿಸಿ ನಿರಂತರ  ತನ್ನ ಅಂಗಡಿಗೆ ಬಂದು ಸಮಸ್ಯೆ ಸೃಷ್ಟಿಸುತ್ತಿರುವುದಾಗಿ …

ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಪಾಪಿಯನ್ನು ಗುಂಡಿಕ್ಕಿ ಕೊಲೆಗೈದ ತಂದೆ ನಿಧನ

ಮಲಪ್ಪುರಂ: 13 ವರ್ಷ ಪ್ರಾಯದ ಮಗಳ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಕೊಂದ ಪ್ರಕರಣದ ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಅವಕಾಶ ನೀಡದೆ ಆತನನ್ನು ಗುಂಡಿಕ್ಕಿ ಕೊಲೆಗೈದ ಶಂಕರನಾರಾಯಣನ್ (70)   ನಿಧನಹೊಂದಿದ್ದಾರೆ. ‘ಮಗಳ ತಂದೆ’ ಎಂದೇ ವಿಶೇಷಣದಿಂದ ಕೇರಳದಲ್ಲಿ ಕರೆಯ ಲಾಗುತ್ತಿದ್ದ ಶಂಕರನಾರಾಯಣನ್ ಮಲಪ್ಪುರಂ ಮಂಜೇರಿ ಚಾರಂಗಾವ್ ಚೇನೋಟುಕುನ್ನು ಪೂವಂಚೇರಿ ತೆಕ್ಕೇ ವೀಟಿಲ್ ನಿವಾಸಿಯಾಗಿದ್ದಾರೆ. ಶಂಕರನಾರಾಯಣನ್‌ರ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಪುತ್ರಿ 2001 ಫೆಬ್ರವರಿ 9ರಂದು ಶಾಲೆಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ  ನೆರೆಮನೆ ನಿವಾಸಿ ಮುಹಮ್ಮದ್ ಕೋಯಾ …

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬೀಳ್ಕೊಡುಗೆ

ಕಾಸರಗೋಡು: ಸಿಬಿಐಯಲ್ಲಿ ಪೊಲೀಸ್ ಸೂಪರಿಂಟೆಂ ಡೆಂಟ್ ಆಗಿ ಬೆಂಗಳೂರು ಘಟಕಕ್ಕೆ ಡೆಪ್ಯುಟೇಶನ್‌ನಲ್ಲಿ ತೆರಳಿದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪ ಡಿ. ಅವರಿಗೆ ಪೊಲೀಸ್ ಸಂಘಟನೆಗಳ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ಡಿವೈಎಸ್‌ಪಿಗಳಾದ ಸಿ.ಕೆ. ಸುನಿಲ್ ಕುಮಾರ್, ಉತ್ತಮ್ ದಾಸ್ ಟಿ, ಕೆಪಿಒಎ ರಾಜ್ಯ ನಿರ್ವಾಹಕ ಸಮಿತಿ ಸದಸ್ಯ ಎಂ. ಸದಾಶಿವನ್, ಜಿಲ್ಲಾ ಉಪಾಧ್ಯಕ್ಷ ಶ್ರೀದಾಸ್ ಎಸ್.ಐ, ಎ.ಪಿ. ಸುರೇಶ್, ಬಿ. ರಾಜ್‌ಕುಮಾರ್ ಶುಭ ಕೋರಿದರು. ಕೆಪಿಎ ಜಿಲ್ಲಾ …

ರೈಲ್ವೇ ಯಾರ್ಡ್ ಮುಚ್ಚುಗಡೆ ಇಲ್ಲ

ಮಂಜೇಶ್ವರ: ಇಂದಿನಿಂದ ಎಪ್ರಿಲ್ 18ರವರೆಗೆ ರೈಲ್ವೇ ಯಾರ್ಡ್‌ನ ಮಂಜೇಶ್ವರ ಲೆವೆಲ್ ಕ್ರಾಸಿಂಗ್ ನಂ.291 ಮುಚ್ಚುಗಡೆ ಗೊಳಿಸಲಾಗುವುದು ಎಂಬ ಬಗ್ಗೆ ನೀಡಿದ್ದ ಆದೇಶವನ್ನು ಹಿಂತೆಗೆಯಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ದುರಸ್ತಿ ಕೆಲಸಗಳನ್ನು ಮುಂದೂಡಿದ ಹಿನ್ನೆಲೆಯಲ್ಲಿ ಈ ದಾರಿಯನ್ನು ಮುಚ್ಚುಗಡೆಗೊ ಳಿಸಲಾಗುತ್ತಿಲ್ಲವೆಂದು ಪಾಲಕ್ಕಾಡ್ ಡಿವಿಶನ್ ದಕ್ಷಿಣ ರೈಲ್ವೆ ಮಂಗಳೂರು ಅಸಿಸ್ಟೆಂಟ್ ಡಿವಿಶನಲ್ ಇಂಜಿನಿಯರ್ ತಿಳಿಸಿದ್ದಾರೆ.

ಮದ್ರಸ ವಿದ್ಯಾರ್ಥಿನಿಗೆ ಚಿನ್ನದ ಉಂಗುರ ನೀಡಿ ಕಿರುಕುಳ: ಉಸ್ತಾದ್‌ಗೆ 187 ವರ್ಷ ಕಠಿಣ ಸಜೆ

ಕಣ್ಣೂರು: ಹದಿನಾರರ ಹರೆಯದ ಮದ್ರಸ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ಉಸ್ತಾದ್‌ಗೆ ನ್ಯಾಯಾಲಯ 187 ವರ್ಷ ಸಜೆ ಹಾಗೂ 9 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಆಲಕ್ಕೋಡು ನಿವಾಸಿಯಾದ ಮುಹಮ್ಮದ್ ರಾಫಿ (37) ಎಂಬಾತನಿಗೆ ತಳಿಪರಂಬ ಕ್ಷಿಪ್ರ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಣ್ಣೂರು ಪಳಯಂಗಾಡಿಗೆ ಸಮೀಪ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. 16ರ ಹರೆಯದ ವಿದ್ಯಾರ್ಥಿನಿಗೆ ಚಿನ್ನದ ಉಂಗುರ ನೀಡಿ  ಆಕೆಯನ್ನು ಪುಸಲಾಯಿಸಿ ವಶೀಕರಿಸಿದ ಬಳಿಕ 2020ರಿಂದ 2021ರವರೆಗೆ ಕಿರುಕುಳ ನೀಡಿರುವುದಾಗಿ …