ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ ನಿಧನ

ಚೆನ್ನೈ: ತಮಿಳುನಾಡಿನ ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ (92) ಎಂಬವರು ನಿಧನಹೊಂದಿದರು.ಕನ್ಯಾಕುಮಾರಿ ಜಿಲ್ಲೆಯ ಕುಮರಿಮಂಗಲದಲ್ಲಿ ಜನಿಸಿದ ಆನಂದನ್ ಅವರು ಕಾಮರಾಜ್ರ ನೀತಿಯಿಂದ ಆಕರ್ಷಿತರಾಗಿ ಕಾಂಗ್ರೆಸ್ ಸೇರಿದ್ದರು. 1977ರಲ್ಲಿ ನಾಗರಕೋವಿಲ್ ಮಂಡಲ ದಿಂದ ಗೆಲುವು ಸಾಧಿಸಿ ಸಂಸತ್ಗೆ ತಲುಪಿದ್ದರು. ಮೊಟ್ಟಮೊದಲ ಬಾರಿಗೆ ಲೋಕಸಭೆಯಲ್ಲಿ ತಮಿಳಿನಲ್ಲಿ ಭಾಷಣ ಮಾಡಿದ ಸಂಸದ ಇವರಾಗಿದ್ದರು. 1980ರಲ್ಲಿ ಗಾಂಧಿ ಕಾಮರಾಜ್ ರಾಷ್ಟ್ರೀ ಯ ಕಾಂಗ್ರೆಸ್ ಪಾರ್ಟಿ ರೂಪೀಕರಿಸಿ ದರು.1980, 1984ರ ಚುನಾವಣೆಯಲ್ಲಿ ಈ ಪಕ್ಷದಿಂದ ಗೆಲುವುಸಾಧಿಸಿ ವಿಧಾನ ಸಭೆಗೆ ತಲುಪಿದ್ದರು. ಅನಂತರ ಕಾಂಗ್ರೆಸ್ಗೆ …

ನವೀಕೃತ ಬಿಂದು ಜ್ಯುವೆಲ್ಲರಿ ಶೋರೂಮ್ ಉದ್ಘಾಟನೆ

ಕಾಸರಗೋಡು: ಅಶ್ವಿನಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ನವೀಕೃತ ಶೋರೂಮ್‌ನ ಉದ್ಘಾಟನೆಯನ್ನು ಜ್ಯುವೆಲ್ಲರಿಯ ಸ್ಥಾಪಕ ದಿ| ಕೆ.ವಿ. ಕುಂಞಿಕಣ್ಣನ್‌ರ ಪತ್ನಿ ಶೋಭನ ಪಿ. ದೀಪ ಪ್ರಜ್ವಲಿಸಿ ನಿರ್ವಹಿಸಿದರು. ಈ ವೇಳೆ ಡೈಮಂಡ್ ಸೆಕ್ಷನ್, ಗ್ರೂಪ್‌ನ ಇನ್ನೊಂದು ಉದ್ಯಮವಾದ ಎಕ್ಸ್‌ಕ್ಲೂಸಿವ್ ಹ್ಯಾಂಡ್ ಪಿಕ್‌ಡ್ ಸಿಲ್ಕ್ ಸಾರಿ ಬ್ಯೂಟಿ ‘ಸಹಸ್ರ’ ಉದ್ಘಾಟನೆಯನ್ನು ಚಲನಚಿತ್ರ ನಟಿ ಶ್ವೇತಾ ಮೆನೋನ್ ನಿರ್ವಹಿಸಿದರು. ಶೋರೂಮ್‌ನ ನವೀಕರಣೆಯಂಗವಾಗಿ ಅತ್ಯಾಕರ್ಷಕವಾದ ಆಫರ್‌ಗಳನ್ನು ಬಿಂದು ಜ್ಯುವೆಲ್ಲರಿಯಲ್ಲಿ ಗ್ರಾಹಕರಿಗಾಗಿ ಸಿದ್ಧಪಡಿಸಲಾಗಿದೆ. ಈ ತಿಂಗಳ 13ರ ವರೆಗೆ ಮಜೂರಿಯಲ್ಲಿ 35 ಶೇ. …

ಬೆಕ್ಕನ್ನು ರಕ್ಷಿಸಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿದ ಯುವಕ ಕಾರು ಢಿಕ್ಕಿ ಹೊಡೆದು ಮೃತ್ಯು

ತೃಶೂರು: ರಸ್ತೆಯಲ್ಲಿ ಸಿಲುಕಿಕೊಂಡ ಬೆಕ್ಕನ್ನು ಪಾರು ಮಾಡಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿದ ಯುವಕ  ಕಾರು ಢಿಕ್ಕಿ ಹೊಡೆ ದು ಮೃತಪಟ್ಟರು. ಕಾಳತ್ತೋಡ್ ಚಿಟ್ಟಿಲ ಪ್ಪಳ್ಳಿ ನಿವಾಸಿ ಸಿಜೋ (42) ಮೃತಪ ಟ್ಟವರು. ನಿನ್ನೆ ರಾತ್ರಿ 9.30ಕ್ಕೆ ಘಟನೆ ನಡೆದಿದೆ. ಸಿಜೋ ಬೈಕ್‌ನಲ್ಲಿ ಮನೆಯತ್ತ ಸಂಚರಿಸುತ್ತಿದ್ದಾಗ ರಸ್ತೆಯಲ್ಲಿ ಬೆಕ್ಕೊಂದು ಮಲಗಿರುವುದನ್ನು ಕಂಡಿದ್ದಾರೆ. ಅದನ್ನು ಬದುಕಿಸಲೆಂದು ಬೈಕ್ ನಿಲ್ಲಿಸಿ ರಸ್ತೆಗಿಳಿ ದಿದ್ದಾರೆ. ಈ ವೇಳೆ ಮುಂಭಾಗ ದಿಂದ ಬಂದ ಕಾರು ಇವರಿಗೆ ಢಿಕ್ಕಿ ಹೊಡೆ ದಿದೆ. ಅಪಘಾತವನ್ನು ಕಂಡ ಸ್ಥಳೀಯರು …

ಹೆಣ್ಮಕ್ಕಳಿಗೆ ಫೋನ್‌ನಲ್ಲಿ ಇಷ್ಟು ಮಾತನಾಡಲು ಏನಿದೆ ಕಾರ್ಯ?: ವಿವಾದವಾಗುತ್ತಿರುವ ಸಲೀಂ ಕುಮಾರ್ ಹೇಳಿಕೆ

ಕಲ್ಲಿಕೋಟೆ: ಹೆಣ್ಮಕ್ಕಳೆಲ್ಲ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವಷ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕೂಡಾ ಫೋನ್ ಕಾಲ್‌ಗಳು ಬಾರದೆಂದು ನಟ ಸಲೀಂ ಕುಮಾರ್ ನೀಡಿದ ಹೇಳಿಕೆ ವಿವಾದವಾಗುತ್ತಿದೆ. ಕಲ್ಲಿಕೋಟೆಯಲ್ಲಿ ನೂತನ ಡಿಸಿಸಿ ಕಚೇರಿಯ ಉದ್ಘಾಟನೆ ಸಂಬಂಧಿಸಿ ಆಯೋಜಿಸಿದ ತ್ರಿವರ್ಣೋತ್ಸವ ಕಾರ್ಯಕ್ರಮದಲ್ಲಿ ಈ ವಿವಾದ ಹೇಳಿಕೆ ಸಲೀಂ ಕುಮಾರ್ ನೀಡಿದ್ದಾರೆ. ಪರವೂರ್‌ನಿಂದ ಆರಂಭಿಸಿ ಕಲ್ಲಿಕೋಟೆ ವರೆಗೆ ಸಂಚರಿಸಿದಾಗ ನಾನು ನೋಡಿದ್ದು ಹೆಣ್ಮಕ್ಕಳೆಲ್ಲಾ ರಸ್ತೆಯಲ್ಲಿ ಫೋನ್ ಕರೆ ಮಾಡಿ ಮಾತನಾಡುತ್ತಾ ನಡೆಯುತ್ತಿರು ವುದನ್ನಾಗಿದೆ. ಇವರೆಲ್ಲಾ ವಿದ್ಯಾರ್ಥಿಗಳಾಗಿದ್ದಾರೆ. ಇವರು …

ಬೆಂಗಳೂರು ಪೊಲೀಸರ ಕಸ್ಟಡಿಯಿಂದ ಪರಾರಿಯಾದ ಆರೋಪಿ ತೃಶೂರಿನಲ್ಲಿ ಸೆರೆ 

ತೃಶೂರು: ಬೆಂಗಳೂರು ಪೊಲೀಸ್ ಕಸ್ಟಡಿಯಿಂದ ಕೈಕೋಳ ಸಹಿತ ಪರಾರಿಯಾದ ಮಾದಕವಸ್ತು ಪ್ರಕರಣದ ಆರೋಪಿಯನ್ನು 9 ದಿನಗಳ ಕಾಲ ನಡೆಸಿದ ತೀವ್ರ ಶೋಧ ಬಳಿಕ ತೃಶರಿನಿಂದ ಸೆರೆಹಿಡಿಯಲಾಗಿದೆ. ಮನಕ್ಕೋಡಿ ಚೆರ್ವತ್ತೂರು ಆಲ್ವಿನ್ (21) ಎಂಬಾತನನ್ನು ನೆಡುಪುಳ ಪೊಲೀಸರು ಬಂಧಿಸಿದ್ದಾರೆ. 70 ಗ್ರಾಮ್ ಮಾದಕವಸ್ತು, 4 ಕಿಲೋ ಗಾಂಜಾ ಮಾರಾಟಗೈದ ಪ್ರಕರಣಕ್ಕೆ ಸಂಬಂಧಿಸಿ ಆಲ್ವಿನ್ ಹಾಗೂ ಪ್ರಾಯಪೂರ್ತಿಯಾಗದ ಮೂವರನ್ನು ಕರ್ನಾಟಕ ಪೊಲೀಸರು ಸೆರೆಹಿಡಿದಿ ದ್ದರು. ಬಳಿಕ ಬೆಂಗಳೂರಿಗೆ ತಲುಪಿಸಿ ಮಾರ್ಚ್ 29ರಂದು  ಮಾಹಿತಿ ಸಂಗ್ರಹಿಸಿದ ಬಳಿಕ ಹೊಸೂರಿನ ಹೋಟೆಲ್‌ನಲ್ಲಿ ಆಲ್ವಿನ್‌ನೊಂದಿಗೆ …

ಕೆಎಸ್‌ಟಿಎ ಮಂಜೇಶ್ವರ ತಾಲೂಕು ಸಮಾವೇಶ

ಮಂಜೇಶ್ವರ: ಕೇರಳ ರಾಜ್ಯ ಟೈಲರ್ಸ್ ಅಸೋಸಿಯೇಶನ್ (ಕೆ.ಎಸ್.ಟಿ.ಎ) ಮಂಜೇಶ್ವರ ತಾಲೂಕು ಸಮಾವೇಶ ಕುಂಬಳೆ ಮಾಧವ ಪೈ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ತಾಲೂಕು ಉಪಾಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಮೋಹನ್‌ದಾಸ್ ಕುಂಬಳೆ ಉದ್ಘಾಟಿಸಿ ಮಾತನಾಡಿ ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಯು ಶಂಕರನ್, ಜಿಲ್ಲಾಧ್ಯಕ್ಷ ಸುರೇಶ್ ಬದಿಯಡ್ಕ, ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ವಿಜಯ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ದಯಾನಂದ ಎಂ …

ಗೃಹಿಣಿಗೆ  ಹಲ್ಲೆ ಗೈದು ಕಾರಿಗೆ ಹಾನಿಗೈದ ಪ್ರಕರಣ: ಆರೋಪಿ ಬಂಧನ

ಕುಂಬಳೆ: ವಿವಾಹ ವಿಚ್ಛೇಧನ ಬಗ್ಗೆ ದೂರು ನೀಡಿದ ದ್ವೇಷದಿಂದ ಮನೆಗೆ ಅತಿಕ್ರಮಿಸಿ ನುಗ್ಗಿ ಗೃಹಿಣಿಗೆ ಹಲ್ಲೆಗೈದು ಕಾರಿಗೆ ಹಾನಿಗೈದ ಬಗ್ಗೆ ನೀಡಿದ ದೂರಿನಂತೆ ಪತಿಯ ಸಂಬಂಧಿಕನಾದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆರಿಕ್ಕಾಡಿ ಕುನ್ನುವಿನ ನವಾಬ್ (35) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಆರೋಪಿಗೆ ನ್ಯಾಯಾ ಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಆರಿಕ್ಕಾಡಿ ಓಲ್ಡ್‌ರೋಡ್‌ನ 40ರ ಹರೆಯದ ಗೃಹಿಣಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಎಪ್ರಿಲ್ ೩ರಂದು ರಾತ್ರಿ ದೂರುದಾತೆಯ ಮನೆಗೆ ಅತಿಕ್ರಮಿಸಿ …

ಬಾಲಕಿಯ ಭಾವಚಿತ್ರ ಮೋರ್ಫ್ ಮಾಡಿ ಪ್ರಚಾರ: ತನಿಖೆ ಬದಿಯಡ್ಕ ಪೊಲೀಸರಿಗೆ ಹಸ್ತಾಂತರ: ಆರೋಪಿಗಾಗಿ ಶೋಧ

ಬದಿಯಡ್ಕ: ಪ್ರಾಯಪೂರ್ತಿಯಾಗದ ಬಾಲಕಿಯ ಭಾವಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರಗೈದ ಬಗ್ಗೆ ಲಭಿಸಿದ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಪ್ರಕರಣ ನಡೆದಿರುವುದು ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ತನಿಖೆಯನ್ನು ಬದಿಯಡ್ಕ ಪೊಲೀಸರಿಗೆ ವಹಿಸಿಕೊಡಲಾಗಿದೆ. ತನ್ನ ಭಾವಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರ ಗೈದಿರುವ ಬಗ್ಗೆ ಆರೋಪಿಸಿ ಬಾಲಕಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೂರು ಮೊಬೈಲ್ ನಂಬ್ರಗಳನ್ನು ಹೊಂದಿರುವ ವ್ಯಕ್ತಿ ಬಾಲಕಿಯ ಫೋಟೋವನ್ನು ಮೋರ್ಫ್ ಮಾಡಿ ಪ್ರಚಾರಗೈದಿರುವುದಾಗಿ ತನಿಖೆಯಲ್ಲಿ ತಿಳಿದು …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಇಬ್ಬರ ಬಂಧನ

ಕುಂಬಳೆ: ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 6.90ಗ್ರಾಂ ಎಂಡಿಎAಎ ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಿರಿಬಾಗಿಲು ನೇಶನಲ್ ನಗರ ಅಪ್ಸಲ್ ಮಂಜಿಲ್ನ ಮುಹಮ್ಮದ್ ಸುಹೈಲ್ (27), ಎಡನಾಡು ಕಟ್ಟತ್ತಡ್ಕ ಸಜಂಕಳದ ಮುಹಮ್ಮದ್ ರಫೀಕ್ (39) ಎಂಬಿವರನ್ನು ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.ನಿನ್ನೆ ರಾತ್ರಿ 10.15ರ ವೇಳೆ ಎಡನಾಡು ಕಟ್ಟತ್ತಡ್ಕದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ ಇಬ್ಬರು ಮಾದಕವಸ್ತು ಸಹಿತ ಸೆರೆಗೀಡಾಗಿದ್ದಾರೆ. ಎಎಸ್ಐ ಮನೋಜ್, ಬಾಲಕೃಷ್ಣ ಪ್ರಸಾದ್, ಡಾನ್ಸಾಫ್ ತಂಡದ ಸದಸ್ಯರಾದ ನಿಜಿನ್, ರತೀಶ್ …

ರಾಜ್ಯದ ವಿವಿಧೆಡೆ ಇಂದು ಮಳೆ ಸಾಧ್ಯತೆ

ತಿರುವನಂತಪುರ: ರಾಜ್ಯದ ಕೆಲವೆಡೆ ಇಂದು ಮಳೆಗೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಬಲವಾದ ಗಾಳಿ ಹಾಗೂ ಸಿಡಿಲು ಸಹಿತ ತೀವ್ರ ಮಳೆ ಸುರಿಯಲಿದೆಯೆಂದು ತಿಳಿಸಲಾಗಿದೆ. ತಿರುವನಂತಪುರ, ಪತ್ತನಂತಿಟ್ಟ, ಕೊಲ್ಲಂ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಬಂಗಾಲ ಸಮುದ್ರದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನತ್ತ ಸಾಗಲಿದೆ. ಇದರ ಫಲವಾಗಿ ಮಳೆ ಸುರಿಯಲಿದೆ ಎನ್ನಲಾಗಿದೆ.