ತಂದೆ, ಮಗ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಮೂವರ ಸೆರೆ

ಕಾಸರಗೋಡು: ಚೆಂಗಳ ನಾಲ್ಕನೇ ಮೈಲ್ನಲ್ಲಿ ಮೊನ್ನೆ ರಾತ್ರಿ ಚೆಂಗಳ ಸಿಟಿಸನ್ ನಗರದ ಇಬ್ರಾಹಿಂ ಸೈನುದ್ದೀನ್ (62) ಅವರ ಪುತ್ರ ಮೊಹಮ್ಮದ್ ಫವಾಸ್ (20) ಮತ್ತು ಅವರ ಸಂಬAಧಿಕರಾದ ಚೆಂಗಳ ತೈವಳಪ್ಪಿನ ರಝಾಕ್ (50), ಸಿಟಿಸನ್ ನಗರದ ಮುನ್ಶೀರ್ ಪಿ.ವಿ. (28) ಎಂಬವರ ಮೇಲೆ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಮೂವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.ತೈವಳಪ್ ವಲಿಯಮೂಲೆಯ ಮೊಹಮ್ಮದ್ ಅಸರುದ್ದೀನ್ (29), ಮಿಥಿಲಾಜ್ (29), ಎರುಮಾಳದ ಮೊಯ್ದು (68) ಎಂಬವರು ಬಂಧಿತರಾದ ಆರೋಪಿಗಳು. ಇವರು ಸೇರಿದಂತೆ …

ಪೊರೋಟ, ಬೀಫ್ ಬೇಡಿಕೆಯೊಡ್ಡಿ ಯುವಕನಿಂದ ಆತ್ಮಹತ್ಯಾ ಬೆದರಿಕೆ

ಕಾಸರಗೋಡು: ಮಾರಕಾಯುಧದೊಂದಿಗೆ ನೆರೆಮನೆಯ ತಾರಸಿಗೆ ಹತ್ತಿ ಆತ್ಮಹತ್ಯಾಬೆದರಿಕೆ ಒಡ್ಡಿದ ಯುವಕನನ್ನು ಸ್ಥಳೀಯರು ಹಾಗೂ ಪೊಲೀಸರ ಪ್ರಯತ್ನದಿಂದ ಸೆರೆ ಹಿಡಿಯಲಾಗಿದೆ. ಆದಿತ್ಯವಾರ ಮಧ್ಯಾಹ್ನ 1.30ರ ವೇಳೆ ಕರಿಂದಳದ ಶ್ರೀಧರನ್ ಎಂಬಾತ ನೆರೆಮನೆಯ ತಾರಸಿಗೆ ಹತ್ತಿ ಪರಾಕ್ರಮ ತೋರಿಸಿದ ಯುವಕ. ನೆರೆಯ ಲಕ್ಷ್ಮಿ ಎಂಬವರ  ಮನೆಯ ತಾರಸಿಗೆ ಹತ್ತಿದ ಈತ ಕೈಯಲ್ಲಿ ಮಾರಕಾಯುಧವನ್ನು ಹಿಡಿದು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ ನೀಲೇಶ್ವರ  ಎಸ್‌ಐ ಕೆ.ವಿ. ಪ್ರದೀಪ್ ಹಾಗೂ ತಂಡ ಸ್ಥಳಕ್ಕೆ ತಲುಪಿದೆ. ಅವರು ಬಂದು ಎಷ್ಟೇ ಭಿನ್ನವಿಸಿದರೂ ಶ್ರೀಧರನ್ …

ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವಾವಡ್ಕ ಮುಚ್ಚೂರ್‌ಕುಳಂ ನಿವಾಸಿ ಸದಾಶಿವನ್ ಕೆ. (50) ಮೃತ ವ್ಯಕ್ತಿ. ಇವರು ನಿನ್ನೆ ಸಂಜೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ದಿ| ನಾರಾಯಣನ್- ಕಲ್ಯಾಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಬಿಂದು, ಮಕ್ಕಳಾದ ನಿರ್ಮಾಲ್ಯ, ನವನೀತ್, ಅಳಿಯ ಜ್ಯೋತಿಷ್, ಸಹೋದರ-ಸಹೋದರಿಯರಾದ ಕುಮಾರನ್, ಚಂದುಞಿ, ಕುಂಞಿರಾಮನ್, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೊಲೀಸ್ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಪತ್ತನಂತಿಟ್ಟ: ಇಲ್ಲಿನ ತಿರುವೆಲ್ಲ ಟ್ರಾಫಿಕ್ ಘಟಕದ ಸಿವಿಲ್ ಪೊಲೀಸ್ ಆಫೀಸರ್ ಆರ್.ಆರ್. ರತೀಶ್ ಎಂಬವರು ಚಿಟ್ಟಾರಿಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಳೆದ ಒಂದು ತಿಂಗಳಿಂದ ಅನಧಿಕೃತವಾಗಿ ರಜೆಯಲ್ಲಿದ್ದರು. ಆ ಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ ಉನ್ನತ ಪೊಲೀಸ್ ಉನ್ನತ ಅಧಿಕಾರಿಗಳಿಗೆ ವರದಿಯನ್ನೂ ಸಲ್ಲಿಸಲಾಗಿತ್ತು. ಈ ವೇಳೆಯಲ್ಲಿ ರತೀಶ್ ನಿನ್ನೆ ರಾತ್ರಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಿ. ಶಿಲ್ಪ ಇನ್ನು ಸಿಬಿಐಗೆ

ಕಾಸರಗೋಡು: ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪರನ್ನು ಕೇಂದ್ರ ಡೆಪ್ಯುಟೇಶನ್ ಕ್ರಮದಂತೆ ಸಿಬಿಐಯಲ್ಲಿ ನೇಮಕಾತಿ ನೀಡಲಾಗಿದೆ. ಬೆಂಗಳೂರು ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಡಿ. ಶಿಲ್ಪ ಅವರು ಇಲೆಕ್ಟ್ರೋನಿಕ್ಸ್ ಇಂಜಿನಿಯ ರಿಂಗ್ ಹಾಗೂ ಬಿಸಿನೆಸ್ ಅಡ್ಮಿನಿ ಸ್ಟ್ರೇಷನ್ ಪದವೀಧರೆಯಾಗಿದ್ದಾರೆ. 2016ರ ಐಪಿಎಸ್ ಬ್ಯಾಚ್‌ನ  ಡಿ. ಶಿಲ್ಪರಿಗೆ 2019ರಲ್ಲಿ ಕಾಸರಗೋಡಿನ ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್  (ಎಎಸ್‌ಪಿ) ಆಗಿ ಮೊದಲ ನೇಮಕಾತಿ ನೀಡಲಾಗಿತ್ತು. 2020ರಲ್ಲೂ ಅವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಇಲ್ಲಿಂದ …

ಇಂದು ಮುಂಜಾನೆ ನಡೆದ ಘಟನೆ: ಲಾರಿ- ಜೀಪು ಢಿಕ್ಕಿ ಹೊಡೆದು ಎರಡು ಸಾವು; ಮೂವರಿಗೆ ಗಂಭೀರ

ಕೋಟಯಂ: ಲಾರಿ ಮತ್ತು ಜೀಪು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಕೋಟಯಂ ಎಂ.ಸಿ. ರೋಡ್‌ನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಅಪಘಾತದಲ್ಲಿ ಜೀಪು ಚಾಲಕ ತೊಡುಪುಳ ನಿವಾಸಿ ಸನೋಷ್ (55) ಹಾಗೂ ಪ್ರಯಾಣಿಕರಾದ ಇಬ್ಬರು ಸಾವನ್ನಪ್ಪಿದ್ದಾರೆ. ಅವರ ಗುರುತು ಪತ್ತೆಹಚ್ಚಲಾಗಿಲ್ಲ. ಜೀಪಿನಲ್ಲಿದ್ದವರೆಲ್ಲ ಇಂಟೀರಿಯರ್ ವರ್ಕ್ಸ್ ಕಾರ್ಮಿಕರಾಗಿದ್ದಾರೆ. ಬೆಂಗಳೂರಿನಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಜೀಪಿನ ಹಿಂದಿನ ಭಾಗಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು …

ಬಸ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಬಸ್‌ನಲ್ಲಿ ಸಾಗಿಸುತ್ತಿದ್ದ 8.64 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಪುತ್ತಿಗೆ ಅಂಗಡಿಮೊಗರು ನಿವಾಸಿ ಸುರೇಶ್ ಎಂ. (43) ಎಂಬಾತ ಬಂಧಿತ ವ್ಯಕ್ತಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 2.15ರ ವೇಳೆ ಬಾಯಾರು ವಿಲ್ಲೇಜ್‌ನ ಬಾಳ್ಯೂರು ಎಂಬಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಪೆರ್ಲದಿಂದ ಕುಂಬಳೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಮದ್ಯ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಎಕ್ಸೈಸ್ ರೇಂಜ್ ಆಫೀಸ್ ಇನ್ಸ್‌ಪೆಕ್ಟರ್ ಮ್ಯಾಥ್ಯು …

ವ್ಯಕ್ತಿ ರೈಲು ಢಿಕ್ಕಿ ಹೊಡೆದು ಸಾವು

ಹೊಸದುರ್ಗ: ತೃಕ್ಕರಿಪುರ ಬಳಿಯ ಒಳವರ ಎಂಬಲ್ಲಿ ವ್ಯಕ್ತಿಯೋರ್ವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾತಮಂಗಲ ನಿವಾಸಿಯೂ ಕರಿವೆಳ್ಳೂರು ನೆಡುವಪ್ರಂ ಶ್ರೀ ಮಹಾವಿಷ್ಣು ಕ್ಷೇತ್ರ ಸಮೀಪ ವಾಸಿಸುವ ಕೆ.ಕೆ.ಪಿ ನಾರಾಯಣ ಪೊದುವಾಳ್ (74) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಒಳವರ ಸೇತುವೆ ಸಮೀಪ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಶಾರದ, ಮಕ್ಕಳಾದ ಸುರೇಶ್ (ಫೋಟೋಗ್ರಾಫರ್), ರಾಹುಲ್ (ಟೆಕ್ನೋಪಾರ್ಕ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚರಂಡಿಗೆ ಬಿದ್ದ ಕಾರು: ಸ್ಥಳೀಯರ ಕಾರ್ಯಾಚರಣೆಯಿಂದ ಪ್ರಯಾಣಿಕರು ಪಾರು

ಮಂಗಲ್ಪಾಡಿ: ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಕಾರೊಂದು ಬಿದ್ದಿದ್ದು, ಸ್ಥಳೀಯರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 8ಗಂಟೆಗೆ ಸುರಿದ ಜೋರಾದ ಮಳೆಯ ವೇಳೆ ಈ ಘಟನೆ ನಡೆದಿದೆ. ಪ್ರತಾಪನಗರದ ಒಳ ರಸ್ತೆಯ ಕಿರು ಸಂಕದ ತೆರೆದ ಸ್ಥಿತಿಯಲ್ಲಿರುವ ಚರಂಡಿಗೆ ಕಾರು ಬಿದ್ದಿದೆ. ಪ್ರತಾಪನಗರ ಪರಿಸರದಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಮಂಗಳೂರು ಭಾಗದಿಂದ ಮಹಿಳೆಯರ ಸಹಿತ 6 ಮಂದಿಯ ಕುಟುಂಬವೊAದು ಸಂಚರಿಸುತ್ತಿರುವಾಗ ಹಿಂಬದಿಯ ಚಕ್ರ ಭಾರೀ ಆಳದ ಚರಂಡಿಗೆ ಬಿದ್ದಿದೆ. ಮಾಹಿತಿ ತಿಳಿದು ಕೂಡಲೇ ಮಳೆಯನ್ನು …

ಮಧೂರು ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆ ಸಮಾರೋಪ: 13ರಿಂದ ವಾರ್ಷಿಕ ಉತ್ಸವ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಳೆದ 12 ದಿನಗಳಿಂದ ಜರಗುತ್ತಿದ್ದ ಅಷ್ಟಬಂಧ ಬ್ರಹ್ಮಕಲಶ ಮೂಡಪ್ಪಸೇವೆಯ ಸಮಾರೋಪ ನಿನ್ನೆ ಜರಗಿತು. ಇದರಂಗವಾಗಿ ಬೆಳಿಗ್ಗೆ ಪಂಚವಿಂಶತಿ ಸಂಪ್ರೋಕ್ಷಣ ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಭಕ್ತಿ ಸಂಗೀತ, ಕುಣಿತ ಭಜನೆ, ಯಕ್ಷಗಾನ ಬೊಂಬೆಯಾಟ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಇದೇ ವೇಳೆ ಕ್ಷೇತ್ರದ ವಾರ್ಷಿಕ ಜಾತ್ರೆಗೆ ನಿನ್ನೆ ಗೊನೆ ಮುಹೂರ್ತ ನಡೆಸಲಾಯಿತು. ಈ ತಿಂಗಳ 13ರಿಂದ 17ರ ವರೆಗೆ ವಾರ್ಷಿಕೋತ್ಸವ ಜರಗಲಿದೆ. 14ರಂದು ಕಣಿ ಉತ್ಸವ, 16ರಂದು ಬೆಡಿ …