ಶಿರಿಯ ಅಂಗನವಾಡಿ ಮದ್ರಸ ಬಳಿ ಮುರಿದು ಬೀಳುತ್ತಿರುವ ರೆಂಬೆಗಳಿಂದ ಆತಂಕ; ತೆರವುಗೊಳಿಸಲು ನೀಡಿದ ಮನವಿಗೆ ಅಧಿಕಾರಿಗಳ ಮೌನ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿ ಇರುವ ಬೃಹತ್ ಮರಗಳು ಇಲ್ಲಿ ಕಾರ್ಯಾಚರಿ ಸುತ್ತಿರುವ ಅಂಗನವಾಡಿ ಹಾಗೂ ಮದ್ರಸಕ್ಕೆ ಅಪಾಯಕಾರಿಯಾಗಿ ಮಾರ್ಪಾಡುಗೊಂಡಿದೆ. ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮರದ ರೆಂಬೆಗಳು ಅಪಾಯ ಆಹ್ವಾನಿಸುತ್ತಿದೆ. ಕಳೆದ ಶನಿವಾರ ಮುಂಜಾನೆ ಭಾರೀ ಗಾಳಿ, ಮಳೆಗೆ ರೆಂಬೆ ಕಟ್ಟಡದ ಮೇಲೆ ಬಿದ್ದು, ಬಾಗಿಲು, ನೀರಿನ ಟ್ಯಾಂಕ್, ಆವರಣ ಗೋಡೆ ಹಾನಿಗೊಂಡಿದೆ. ಇದು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನ ವಾಡಿ …

ವಾಣೀನಗರ: ಮಿಲ್ಮಾ ವತಿಯಿಂದ ನಿರ್ಮಿಸಿದ ಮನೆಯ ಕೀಲಿಕೈ ಹರಿಣಾಕ್ಷಿಗೆ ಹಸ್ತಾಂತರ

ಪೆರ್ಲ: ಕೇರಳದಲ್ಲಿ 46 ವರ್ಷ ಗಳಿಂದ ಕಾರ್ಯಾಚರಿಸುತ್ತಿರುವ ಮಿಲ್ಮಾ 10.5 ಲಕ್ಷಕ್ಕೂ ಹೆಚ್ಚು ಹೈನುಗಾರರ ಉದ್ಯಮ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಕ್ಷೀರಾಭಿವೃದ್ಧಿಗೆ ಮಿಲ್ಮಾ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸವಲತ್ತುಗಳ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹೇಳಿ ದರು. ಮಲಬಾರ್ ಮಿಲ್ಮಾ ಸಹಕಾರಿ ಕ್ಷೀರೋತ್ಪಾದಕ ಯೂನಿಯನ್ ಅಂಗ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯಂತೆ ಜಿಲ್ಲೆ ಯಿಂದ ಆಯ್ಕೆಯಾಗಿ ಮನೆ ನಿರ್ಮಾ ಣ ಪೂರ್ತಿಗೊಳಿಸಿದ …

ಕುಂಬ್ಡಾಜೆಯಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ

ಬದಿಯಡ್ಕ: ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪಕ್ಷದ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಹಿರಿಯ ಮುಖಂಡ ಎಂ. ಸಂಜೀವ ಶೆಟ್ಟಿ ಧ್ವಜಾರೋಹಣಗೈದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಮಂಡಲ ಉಪಾಧ್ಯಕ್ಷೆ ನಳಿನಿಕೃಷ್ಣ, ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೇಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಬೂತ್ ಅಧ್ಯಕ್ಷ ಶ್ಯಾಮ್, ಜಯಪ್ರಕಾಶ್ ರೈ, ರಘುಮಾಚವು, ಸುನೀತ ಜೆ. ರೈ ಭಾಗವಹಿಸಿದರು.

ಎಡರಂಗ ಸರಕಾರದ ಭ್ರಷ್ಟಾಚಾರ, ದುಂದುವೆಚ್ಚದಿಂದ ಕೇರಳ ನಾಶ-ಟಿ.ಎನ್. ಪ್ರತಾಪನ್

ಕಾಸರಗೋಡು: ಭ್ರಷ್ಟಾಚಾರ, ದುಂದುವೆಚ್ಚದಿಂದ ಮುಳುಗಿ ಹೋದ ಪಿಣರಾಯಿ ವಿಜಯನ್ ಸರಕಾರಕ್ಕೆ ಸಂರಕ್ಷಣೆಯ ಗೋಡೆ ಕಟ್ಟುತ್ತಿರುವುದು ಕೇಂದ್ರದ ನರೇಂದ್ರ ಮೋದಿ ಸರಕಾರ ವಾಗಿದೆಯೆಂದು ಕೆಪಿಸಿಸಿ ಕಾರ್ಯಾ ಧ್ಯಕ್ಷ ಟಿ.ಎನ್. ಪ್ರತಾಪನ್ ನುಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾಸರಗೋಡು ನಗರಸಭಾ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಯೋಜಿಸಿದ ಡಿಸಿಸಿ ನೇತ್ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಕೋಮುವಾದ, ಅಕ್ರಮ ರಾಜಕೀಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ರಾಜಕೀಯ ನೀತಿ ಕೇರಳ ಜನತೆಗೆ ಆಪತ್ತು ತಂದೊಡ್ಡಲಿದೆಯೆಂದು ಅವರು ನೆನಪಿಸಿದರು. ಪಿಣರಾಯಿ ವಿಜಯನ್ ಸರಕಾರದ ಒಂಭತ್ತು ವರ್ಷದ …

ನಿಧನ

ಮುಳ್ಳೇರಿಯ: ಮಿಂಚಿಪದವು ನಿವಾಸಿ ದಿ| ಬಾಬು ಮಣಿಯಾ ಣಿಯವರ ಪತ್ನಿ ಪದ್ಮಾವತಿ (72) ನಿಧನ ಹೊಂದಿದರು. ಮೃತರು ಮಕ್ಕಳಾದ ಸದಾನಂದ, ಗೋಕುಲ್, ಮಣಿರಾಜ್ (ಐಎಸ್‌ಆರ್‌ಒ ತಿರುವನಂತಪುರ), ಶಶಿಕಲ, ಅಳಿಯ-ಸೊಸೆಯಂದಿರಾದ ರಾಮಚಂದ್ರನ್ ಪೆರಿಯ (ಕಾಞಂಗಾಡ್‌ನಲ್ಲಿ ಪಿಡಬ್ಲ್ಯುಡಿ ನೌಕರ), ಅಜಿತ, ಸುಜಾತ, ಶ್ರೀದ, ಸಹೋದರಿಯರಾದ ಪ್ರಭಾವತಿ, ಇಂದಿರಾ, ತೇಯಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆಯಲ್ಲಿ ಹೆರಿಗೆ ವೇಳೆ ಯುವತಿ ಸಾವು: ಪತಿ ಸೆರೆ

ಮಲಪ್ಪುರಂ: ಪೆರುಂಬಾವೂರು ನಿವಾಸಿಯಾದ ಅಸ್ಮಾ ಎಂಬಾಕೆ ಮನೆಯಲ್ಲಿ ಹೆರಿಗೆ ವೇಳೆ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಪತಿ ಸಿರಾಜು ದ್ದೀನ್ ಎಂಬಾತನ ವಿರುದ್ಧ ನರಹತ್ಯಾ ಆರೋಪ ಹೊರಿಸಿ ಬಂಧಿಸಲಾಗಿದೆ. ಆರೋಪಿಯ ಯೂಟ್ಯೂಬ್ ಚಾನೆಲ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಅಸಹಜ ಸಾವು ಎಂದು ಆರಂಭದಲ್ಲಿ ಕೇಸು ದಾಖಲಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷಾ ವರದಿಯ ಆಧಾರದಲ್ಲಿ ನರಹತ್ಯಾ ಕೇಸು ದಾಖಲಿಸಲಾಗಿದೆ. ಪೆರುಂಬಾವೂರು ನಿವಾಸಿಯಾದ ಅಸ್ಮಾ ಎಂಬಾಕೆ 5ನೇ ಹೆರಿಗೆ ವೇಳೆ ಮನೆಯಲ್ಲಿ ಮೃತಪಟ್ಟಿದ್ದಳು. ಅಪರಿಮಿತ ರಕ್ತಸ್ರಾವವೇ ಸಾವಿಗೆ ಕಾರಣವೆಂದು ಮರಣೋತ್ತರ …

ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪ

ನವದೆಹಲಿ: ಇಂಡೋನೇಷ್ಯಾದ ಪಶ್ಚಿಮ ಅಕೆ ಪ್ರಾಂತ್ಯದಲ್ಲಿ ಇಂದು ಮುಂಜಾನೆ 2.48ರ ವೇಳೆಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಏಜೆನ್ಸಿ ವರದಿ ಮಾಡಿದೆ. ಆರಂಭದಲ್ಲಿ ಭೂಕಂಪದ ತೀವ್ರತೆ 6.2ರಷ್ಟು ಇತ್ತು. ಸಿನಾಬಾಂಗಾ ನಗರದ ಆಗ್ನೇಯ 62 ಕಿ.ಮೀ. ದೂರದ ಸಮುದ್ರದ ತಳದ 30 ಕಿ.ಮೀ. ಆಳದಲ್ಲಿ ಭೂಕಂಪದ ಸೃಷ್ಟಿಕೇಂದ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕುಂಬೋಳ್ ಆರಿಕ್ಕಾಡಿ ಕಡವತ್ ಮಖಾಂ ಉರೂಸ್ ಎ. 10ರಿಂದ

ಕುಂಬಳೆ: ಆರಿಕ್ಕಾಡಿ ಕಡವತ್ ಮಖಾಂನಲ್ಲಿ ಶಹೀದ್ ಅರಬಿ ವಲಿಯು ಲ್ಲಾಹಿ ಅವರ ಹೆಸರಲ್ಲಿ ನಡೆಸಲಾಗು ತ್ತಿರುವ ಉರೂಸ್ ಹರಕೆ ಹಾಗೂ ಧಾರ್ಮಿಕ ಪ್ರವಚನ ಈ ತಿಂಗಳ 10ರಿಂದ 20ರ ವರೆಗೆ ನಡೆಯಲಿದೆ ಯೆಂದು ಪದಾಧಿಕಾರಿಗಳು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಮುಖ ಸಾದಾತ್ಗಳು, ಉಲಮಾಗಳು, ಉಮಾರಗಳು, ಸಾಮಾಜಿಕ, ಸಾಂಸ್ಕೃತಿಕ ವಲಯದ ಪ್ರಮುಖರು ಭಾಗವಹಿಸು ವರು. 10ರಂದು ಬೆಳಿಗ್ಗೆ 10 ಗಂಟೆಗೆ ಅತ್ತಾವುಲ್ಲ ತಂಙಳ್ ಉದ್ಯಾವರ ಧ್ವಜಾರೋಹಣಗೈಯ್ಯುವರು. ರಾತ್ರಿ 8.30ಕ್ಕೆ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸು ವರು. ಪ್ರೋ. …

ಮನೆ ಮುಂದೆ ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ ತಂದೆ, ಮಗ ಸೇರಿ ನಾಲ್ವರಿಗೆ ಇರಿತ: 10 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಮನೆ ಮುಂದೆ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ ದ್ವೇಷದಿಂದ ತಂದೆ ಮತ್ತು ಮಗ ಸೇರಿದಂತೆ ನಾಲ್ವರನ್ನು ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ಚೆಂಗಳ ಸಮೀಪದ ೪ನೇ ಮೈಲಿನಲ್ಲಿ ನಿನ್ನೆ ರಾತ್ರಿ ನಡೆದಿದೆ. ಚೆಂಗಳ ಸಿಟಿಸನ್ ನಗರದ ಇಬ್ರಾಹಿಂ ಸೈನುದ್ದೀನ್ (42), ಅವರ ಪುತ್ರ ಫವಾಸ್ (20), ಇವರ ಸ್ನೇಹಿತರಾದ ತೈವಳಪ್‌ನ ರಝಾಕ್ (50) ಹಾಗೂ ಸಿಟಿಸನ್ ನಗರದ ಮುನ್ಶೀದ್ ಪಿ.ಎ. (28) ಎಂಬವರು ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಫವಾಸ್‌ನನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ಉಳಿದವರನ್ನು …

ಕುಂಬಳೆ: ಹಿರಿಯ ಧಾರ್ಮಿಕ ಮುಂದಾಳು ನಿಧನ

ಕುಂಬಳೆ: ಹಿರಿಯ ಧಾರ್ಮಿಕ ಮುಂದಾಳು ಕುಂಬಳೆ ರಾಮನಗರದ ದೇವದಾಸ ಭಟ್ (84) ನಿಧನ ಹೊಂದಿದರು. ಕುಂಬಳೆ ಪೇಟೆಯಲ್ಲಿ ಹಿರಿಯ ವ್ಯಾಪಾರಿಯಾಗಿದ್ದ ಇವರು  ಹುಡಿಭಟ್ರು ಎಂದೇ ಖ್ಯಾತರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಇವರು ಕುಂಬಳೆ ಜಿಎಸ್‌ಬಿ ಸಮಾಜದ ಹಿರಿಯರೂ ಆಗಿದ್ದರು. ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಶ್ರೀ ವೀರವಿಠಲ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು. ಕೊಡು …