ಎಡರಂಗ ಸರಕಾರದಿಂದ ದುಂದುವೆಚ್ಚ-ಕಾಂಗ್ರೆಸ್ ಆರೋಪ

ಪೈವಳಿಕೆ: ಕೇರಳದ ಎಡರಂಗ ಸರಕಾರ ಜನಸಾಮಾನ್ಯರನ್ನು ಮರೆತು ಆಡಳಿತ ನಡೆಸುತ್ತಿದ್ದು ದುಂದುವೆಚ್ಚ ಹಾಗೂ ಸ್ವಜನಪಕ್ಷಪಾತದಿಂದ ಕೂಡಿದ ಆಡಳಿತ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಯು ಡಿ ಎಫ್ ವಿಧಾನಸಭಾ ಕ್ಷೇತ್ರ ಸಂಚಾಲಕ ಮಂಜುನಾಥ ಆಳ್ವ ನುಡಿದರು. ಯು ಡಿ ಎಫ್ ರಾಜ್ಯ ಸಮಿತಿ ಆಹ್ವಾನದಂತೆ ರಾಜ್ಯದಾದ್ಯಂತ ಪಂಚಾಯತು ಮಟ್ಟದಲ್ಲಿ ನಡೆದ ಅಹೋ ರಾತ್ರಿ ಮುಷ್ಕರವನ್ನು ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತುಗಳ ಅನುದಾನವನ್ನು ಕಡಿತಗೊಳಿಸಿ ಪಂ. ಆಡಳಿತದ ಕತ್ತು ಹಿಸುಕುವ ಕೆಲಸ ರಾಜ್ಯ ಸರಕಾರ ನಡೆಸುತ್ತಿದೆ ಎಂದು ಅವರು …

ಹಿರಿಯ ಕೃಷಿಕ ನಿಧನ

ಕಾಸರಗೋಡು:  ನೆಲ್ಲಿಕುಂಜೆ ಶಾಂತಿ ನಿಲಯ ತೋಟತ್ತಿಲ್ ನಿವಾಸಿ ಎನ್.ಬಿ. ಪದ್ಮನಾಭನ್ (74) ನಿಧನ ಹೊಂದಿದರು. ಇವರು ಹಿರಿಯ ಭತ್ತ ಕೃಷಿಕನಾಗಿದ್ದರು. ಇವರಿಗೆ ಹಲವು ಪುರಸ್ಕಾರಗಳೂ ಲಭಿಸಿವೆ. ಇವರ ಪತ್ನಿ ನಿರ್ಮಲ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರಿ ಯರಾದ ಲಕ್ಷ್ಮಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೊಗ್ರಾಲ್ ಪುತ್ತೂರು ರಸ್ತೆಯಲ್ಲಿ ಹಂಪ್ ತೆಗೆದು ಬಾರಿಕೇಡ್ ಸ್ಥಾಪನೆ: ಅಪಘಾತ ಸಾಧ್ಯತೆ- ನಾಗರಿಕರಿಗೆ ಆತಂಕ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯ ಸಾರಿಗೆ ಪರಿಷ್ಕಾರಗಳು ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಮೊಗ್ರಾಲ್ ಪುತ್ತೂರಿನಲ್ಲಿ ಯಾವುದೇ ಮುಂದಾಲೋಚನೆಯಿಲ್ಲದೆ ನಡೆಯುವ ಹೆದ್ದಾರಿ ನಿರ್ಮಾಣ ಚಟುವಟಿಕೆಯಿಂ ದಾಗಿ ಅಪಘಾತಗಳಿಗೆ ಕಾರಣವಾಗು ತ್ತಿರುವುದಾಗಿಯೂ ದೂರಲಾಗಿದೆ. ಒಂದು ಭಾಗದಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿಸಿ ಮೂರು ವಾರಗಳಾಯಿತು. ಮತ್ತೊಂದೆಡೆ ಸಾವಿರಾರು ವಿದ್ಯಾರ್ಥಿಗಳು ತಲುಪುವ ಶಾಲಾ ರಸ್ತೆಯೂ ಇದೆ. ಇಲ್ಲಿನ ಕೆಳ ಸೇತುವೆ ಸಮೀಪ ನಾಗರಿಕರ ವಿನಂತಿ ಮೇರೆಗೆ ಸ್ಥಾಪಿಸಿದ ಹಂಪ್ ಹೊರತು ಪಡಿಸಿ ಬಾರಿಕೇಡ್ ಸ್ಥಾಪಿಸಲಾಗಿದೆ. ಹಂಪ್ ತೆರವುಗೊಳಿಸಿದುದರಿಂದ ಜಂಕ್ಷನ್‌ನಲ್ಲಿ …

ಯಕ್ಷಗಾನ ಕಲಾವಿದ ನಿಧನ

ಮುಳ್ಳೇರಿಯ: ಸಾಮಾಜಿಕ, ರಾಜಕೀಯ, ಸಹಕಾರಿ ಹಾಗೂ ಕಲಾರಂಗದಲ್ಲಿ ಸಕ್ರಿಯರಾಗಿದ್ದ ಶಾಂತಿನಗರ ಬಳಿಯ ಕರಣಿ ನಿವಾಸಿ ಎ ಗೋಪಾಲನ್ ನಾಯರ್ (ಎ.ಜಿನಾಯರ್ (76) ನಿನ್ನೆ ನಿಧನ ಹೊಂದಿದರು. ಯಕ್ಷಗಾನ ಕಲಾವಿದರಾಗಿದ್ದ ಇವರು 100ಕ್ಕೂ ಹೆಚ್ಚು ಕನ್ನಡ ಯಕ್ಷಗಾನ ಕಥಾ ಭಾಗವನ್ನು ಮಲೆಯಾಳಕ್ಕೆ ಅನುವಾದ ಮಾಡಿದ್ದಾರೆ. ಕೇರಳ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿತ್ತು. ಕಾಂಗ್ರೆಸ್ ಮಂಡಲ ಅಧ್ಯಕ್ಷ ಜಿಲ್ಲಾ ಸಮಿತಿ ಸದಸ್ಯರಾಗಿಯೂ ದುಡಿದಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ತ್ಯಾಜ್ಯಮುಕ್ತ ಜಿಲ್ಲೆ ಘೋಷಣೆ

ಕಾಸರಗೋಡು: ತ್ಯಾಜ್ಯಮುಕ್ತ ನವಕೇರಳದಂಗವಾಗಿ ಜನಪರ ಕಾರ್ಯಾಗಾರದ ಚಟುವಟಿಕೆಗಳಂಗ ವಾಗಿ ಜಿಲ್ಲೆಯನ್ನು ತ್ಯಾಜ್ಯಮುಕ್ತ ಜಿಲ್ಲೆಯಾಗಿ ಘೋಷಿಸಲಾಯಿತು. ಕಾಸರಗೋಡು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಘೋಷಣೆ ನಡೆಸಿದರು. ವಿದ್ಯಾಸಂಪನ್ನರಾದ ಕೇರಳೀಯರು ವ್ಯಕ್ತಿಶುಚಿತ್ವದಂತೆ ಪರಿಸರ ಶುಚಿತ್ವಕ್ಕೂ ಪ್ರಾಧಾನ್ಯತೆ ನೀಡಬೇಕು ಎಂದು ಸಂಸದರು ಕರೆ ನೀಡಿದರು. ಆರೋಗ್ಯ ಹಾಗೂ ಶಿಕ್ಷಣ ಪರಸ್ಪರ ಪೂರಕವಾಗಿದೆ ಎಂದೂ, ಆದುದರಿಂದ ಶುಚಿತ್ವದ ಕಾರ್ಯದಲ್ಲಿ ಪ್ರತಿಯೊಬ್ಬರಿಗೂ ಸ್ವಯಂ ತಿಳುವಳಿಕೆ ಉಂಟಾಗಬೇಕೆಂದು ಅವರು ನುಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಶಾಸಕ ಇ. ಚಂದ್ರಶೇಖರ್ ಮಾತನಾಡಿ …

ರಂಗಭೂಮಿ ಕಲಾವಿದ ನಿಧನ

ಮಂಜೇಶ್ವರ: ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಕಲಾವಿದ ಸುರೇಶ್ ವಿಟ್ಲ (42) ನಿಧನ ಹೊಂದಿದರು. ವಿಟ್ಲದಲ್ಲಿ ಮುದ್ರಣ ಸಂಸ್ಥೆ ಹೊಂದಿ ರುವ ಇವರು ತುಳು, ಕನ್ನಡ ರಂಗ ಭೂಮಿಯಲ್ಲಿ ಅಭಿನಯದ ಮೂಲಕ ತನ್ನ ಪ್ರತಿಭೆ ಮೆರೆಸಿದ್ದರು. ಜಿಲ್ಲೆಯ ವಿವಿಧ ನಾಟಕ ತಂಡಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ ಕಮಲಾಕ್ಷಿ, ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಂಬೇಡ್ಕರ್ ಸ್ಮಾರಕ ಕೇಂದ್ರ ಜಿಲ್ಲೆಯಲ್ಲಿ ಸ್ಥಾಪಿಸಲು ಬಿಜೆಪಿ ಆಗ್ರಹ

ಕಾಸರಗೋಡು: ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್‌ರ ಸ್ಮಾರಕ ಕೇಂದ್ರವನ್ನು ಕಾಸರಗೋಡಿನಲ್ಲಿ ಸ್ಥಾಪಿಸಲು ಅವರ ಜನ್ಮದಿನವಾದ ಎಪ್ರಿಲ್ 14ರಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕೆಂದು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಗ್ರಹಿಸಿದೆ. ಅಂಬೇಡ್ಕರ್ ಭಾರತದ ಜನಮಾನಸಕ್ಕೆ ಹೊಸ ದಿಕ್ಕು ತೋರಿಸಿದ ಅಸಾಮಾನ್ಯ ವ್ಯಕ್ತಿ. ಬದುಕಲ್ಲಿ ಅನೇಕ ಸವಾಲು ಎದುರಿಸಿ ಸಶಕ್ತ ಸಮಾಜ ಕಟ್ಟಿದ ಧೀಮಂತ ವ್ಯಕ್ತಿ. ಇಂತವರ ಸ್ಮರಣೆ ಮುಂದಿನ ಜನಾಂಗಕ್ಕೂ ಇರಬೇಕಿದ್ದರೆ ಸ್ಮಾರಕ, ಪ್ರತಿಮೆ, ಅಧ್ಯಯನ ಕೇಂದ್ರಗಳು ಇರಬೇಕೆಂದು ಬಿಜೆಪಿ ತಿಳಿಸಿದೆ.

ಏಳು ಕಿಲೋ ಗಾಂಜಾ ಸಹಿತ ಇಬ್ಬರು ಯುವತಿಯರ ಸೆರೆ

ಕೊಚ್ಚಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸಿದ ಯುವತಿಯರನ್ನು ಸೆರೆ ಹಿಡಿಯಲಾಗಿದೆ. ಒಡಿಶ್ಶಾ ನಿವಾಸಿಗಳಾದ ಸ್ವರ್ಣಲತಾ, ಗೀತಾಂಜಲಿ  ಬಹ್ರಾ ಎಂಬಿವರನ್ನು ಸೆರೆ ಹಿಡಿಯಲಾಗಿದ್ದು, ಇವರ ಕೈಯಲ್ಲಿದ್ದ 7 ಕಿಲೋ ಗಾಂಜಾವನ್ನು ಪೆರುಂಬಾವೂರು ಎಎಸ್‌ಪಿ ನೇತೃತ್ವದ ತನಿಖಾ ತಂಡ ವಶಪಡಿಸಿದೆ.

ವರ್ಕಾಡಿಯಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ

ಮಂಜೇಶ್ವರ : ಇಂಡಿಯನ್ ಯೂತ್ ಕಾಂಗ್ರೆಸ್ ವರ್ಕಾಡಿ ಮಂ ಡಲ ಸಮಿತಿಯ ನೇತೃತ್ವದಲ್ಲಿ ವರ್ಕಾಡಿ ಮಜೀರ್ ಪಳ್ಳದಲ್ಲಿ ರಕ್ತದಾನ ಶಿಬಿರ ಜರಗಿತು. ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೇನಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ. ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಅಧ್ಯಕ್ಷೆ ಶರ್ಮಿಳಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಅರಿಬೈಲು, …

ಮಧೂರು ಶ್ರೀ ಮಹಾಗಣಪತಿಗೆ 33 ವರ್ಷಗಳ ಬಳಿಕ ಇಂದು ಮೂಡಪ್ಪಸೇವೆ

ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಮಾನದ ಮೊದಲ ಮೂಡಪ್ಪಸೇವೆ ಇಂದು ಜರಗಲಿದೆ. ಕಳೆದ ಹದಿ ನಾಲ್ಕು ವರ್ಷಗಳಿಂದ ನವೀಕರಣ ಜೀರ್ಣೋದ್ಧಾರ ಪ್ರಕ್ರಿಯೆ ಪೂರ್ತಿಗೊಂಡು ಪುನಃ ಪ್ರತಿಷ್ಟಾ ಬ್ರಹ್ಮಕಲಶ ಸಮಾಪ್ತಿಯಾಗಿದೆ. ಕುಂಬಳೆ ಸೀಮೆಯ ಅತೀ ದೊಡ್ಡ ಸಂಭ್ರಮವಾಗಿ ಮೂಡಪ್ಪ ಸೇವೆಗೆ ಮಧೂರು ದೇಗುಲ ಅಣಿಯಾಗಿದೆ. ಮಹಾ ಉತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಮಧೂರಿಗೆ ಬಂದು ಸೇರಿದ್ದಾರೆ.ಮೂಡಪ್ಪ ಸೇವೆಗೆ ಕ್ಷೇತ್ರ ಸಜ್ಜುಗೊಂಡಿದ್ದು, ಅಕ್ಕಿ ಮುಹೂರ್ತ ನಿನ್ನೆ ನೆರವೇರಿತು. ಬೆಳಿಗ್ಗೆ ದೀಪದ …