ಪತಿಯ ಸಂಬಂಧಿಕನಿಂದ ಯುವತಿಗೆ ಹಲ್ಲೆ-ದೂರು

ಕುಂಬಳೆ: ಪತಿಯ ಸಂಬಂಧಿಕನೋರ್ವ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ಯುವತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.  ಹಲ್ಲೆಯಿಂದ ಗಾಯ ಗೊಂಡ ಆರಿಕ್ಕಾಡಿ ಓಲ್ಡ್ ರೋಡ್‌ನ ನಫೀಸತ್ ಶಬಾನಾ (40) ಎಂಬವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಪತಿಯ ಸಂಬಂಧಿಕ ಆರಿಕ್ಕಾಡಿ ಓಲ್ಡ್ ರೋಡ್‌ನ ನವಾಬ್ ಎಂಬಾತ ಮನೆಗೆ ನುಗ್ಗಿ ಹಲ್ಲೆಗೈದಿರುವುದಾಗಿ ನಫೀಸತ್ ಶಬಾನಾ ಆರೋಪಿಸಿದ್ದಾರೆ. 

ಮಧೂರು: ಮಹಾಮೂಡಪ್ಪ ಸೇವೆಗೆ ಅಕ್ಕಿ ಮುಹೂರ್ತ

ಮಧೂರು: ಶ್ರೀ ಮದನಂತೇ ಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಹಾಮೂಡಪ್ಪಸೇವೆಯಂಗವಾಗಿ ಇಂದು ಬೆಳಿಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ಬಳಿಕ ಮಹಾ ಮೂಡಪ್ಪ ಸೇವೆಯ ಅಕ್ಕಿ ಮುಹೂರ್ತ ನಡೆಯಿತು. ಸಂಜೆ 6 ಗಂಟೆಗೆ ನಡುದೀಪೋತ್ಸವ, ಸುತ್ತು ಸೇವೆಗಳು, ಶ್ರೀ ಮಹಾಗಣ ಪತಿ ಮಂತ್ರಾನುಷ್ಠಾನ ನಡೆಯಲಿ ರುವುದು. ನಾಳೆ ಬೆಳಿಗ್ಗೆ 5 ಗಂಟೆಗೆ ದೀಪದಬಲಿ, ದರ್ಶನಬಲಿ, ರಾಜಾಂ ಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾ ಗಣಪತಿಯಾಗ, ಕಲಶಾಭಿಷೇಕ, 9ಕ್ಕೆ ಮಹಾಮೂಡಪ್ಪ ಸೇವೆಯ ಅರಿ …

ಮನೆಗೆ ನುಗ್ಗಿ ಮಹಿಳೆ, ಪುತ್ರನಿಗೆ ಹಲ್ಲೆ: ಆರೋಪಿ ಬಂಧನ

ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿ ಮಹಿಳೆ ಹಾಗೂ ಅವರ ವಿಕಲಚೇತನನಾದ ಪುತ್ರನಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಅಂಗಡಿಮೊಗರು ನಿವಾಸಿ  ರಜಾಕ್ (31) ಎಂಬಾತ ಬಂಧಿತ ಆರೋಪಿ ಯಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಡಾಲುಮೇ ರ್ಕಳ ಕಂಬಾರು ಕಾನಡ್ಕ ಎಂಬಲ್ಲಿನ ಕುಸುಮ (65) ಹಾಗೂ ಅವರ ಪುತ್ರ ದಿನೇಶ್‌ಗೆ ಹಲ್ಲೆಗೈದ ಆರೋಪದಂತೆ  ರಜಾಕ್‌ನನ್ನು ಬಂಧಿಸಲಾಗಿದೆ. ಎಪ್ರಿಲ್ ೨ರಂದು  ಆರೋಪಿ ರಜಾಕ್  ಮನೆಗೆ ನುಗ್ಗಿ ಕುಸುಮ ಹಾಗೂ ಪುತ್ರನಿಗೆ ಹಲ್ಲೆಗೈದಿದ್ದನು. ಈ ಸಂಬಂಧ …

ಎಂಬುರಾನ್ ನಿರ್ಮಾಪಕರಲ್ಲೋರ್ವರಾಗಿರುವ ಗೋಕುಲಂ ಗೋಪಾಲನ್‌ರ ಸಂಸ್ಥೆಗೆ ಇ.ಡಿ ದಾಳಿ

ಚೆನ್ನೈ: ತೆರೆಕಂಡ ಕೇವಲ ನಾಲ್ಕುದಿನಗಳಲ್ಲೇ 200 ಕೋಟಿ ರೂ. ಗಳಿಕೆಯೊಂದಿಗೆ  ಇಡೀ ಮಲೆಯಾಳ ಚಿತ್ರರಂಗವನ್ನೇ ಬೆಚ್ಚು ಬೀಳಿಸಿದ ಮೋಹನ್‌ಲಾಲ್ ನಟಿಸಿ ರುವ ಎಂಬುರಾನ್ ಮಲೆಯಾಳ ಸಿನಿಮಾದ  ನಿರ್ಮಾಪಕರಲ್ಲೋರ್ವ ನಾಗಿರುವ ಗೋಕುಲಂ ಗೋಪಾಲ ನ್‌ರ  ಸಂಸ್ಥೆಗೆ ಇ.ಡಿ ಇಂದು ಬೆಳಿಗ್ಗೆ ದಿಢೀರ್ ದಾಳಿ ನಡೆಸಿದೆ. ಚೆನ್ನೈಯ ಕೋದಂಬಾಗತ್‌ನಲ್ಲಿರುವ ಗೋಕುಲಂ ಚಿಟ್ ಫಂಡ್ ಸಂಸ್ಥೆಗೆ  ಈ ದಾಳಿ ನಡೆಸಲಾಗಿದ್ದು,ಪರಿಶೀಲನೆ ಇನ್ನೂ ಮುಂದುವರಿಯುತ್ತಿದೆ.  ಜಾರಿ ನಿರ್ದೇಶನಾಲಯದ ಕೊಚ್ಚಿ ಯೂನಿಟ್ ಘಟಕದ ಅಧಿಕಾರಿಗಳ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ರಸ್ತೆ ಬದಿ ನಿಂತಿದ್ದ ಯುವಕನ ಕೈಯಲ್ಲಿ ಎಂಡಿಎಂಎ ಪತ್ತೆ

ಉಪ್ಪಳ: ಎಂಡಿಎಂಎ ಸಹಿತ ರಸ್ತೆ ಬದಿ ನಿಂತಿದ್ದ ಯುವಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಉಪ್ಪಳ ಕೋಡಿಬೈಲು ಜೀನತ್ ಕೋಟೇಜ್‌ನ ಮೊಹಮ್ಮದ್ ರಹೀಸ್ (28) ಎಂಬಾತನನ್ನು ಮಂಜೇಶ್ವರ ಎಸ್.ಐ ರತೀಶ್ ನೇತೃತ್ವದಲ್ಲಿ ನಿನ್ನೆ ಸಂಜೆ ಸೆರೆ ಹಿಡಿಯಲಾಗಿದೆ. ಮೊಹಮ್ಮದ್ ರಹೀಸ್‌ನ ಕೈಯಿಂದ 2.53 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಸಂಜೆ ಉಪ್ಪಳ ಮಜಲ್‌ನಲ್ಲಿ ಎಸ್‌ಐ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮೊಹಮ್ಮದ್ ರಹೀಸ್ ರಸ್ತೆ ಬದಿ ನಿಂತಿದ್ದು ಆತನ ಮೇಲೆ ಸಂಶಯಗೊಂಡು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ …

ವಕ್ಫ್ ಮಸೂದೆ: ಕೇರಳದ ಕ್ರೈಸ್ತರಿಂದ ಸಂಭ್ರಮ; ಮೋದಿಗೆ ಜಿಂದಾಬಾದ್ ಘೋಷಣೆ

ಕೊಚ್ಚಿ: ವಕ್ಫ್ ಮಂಡಳಿಯ ಕೇರಳ ಘಟಕ ತಮ್ಮ ಆಸ್ತಿಗಳನ್ನು ಕಬಳಿಸುತ್ತಿದೆ ಎಂದು ಆರೋಪಿಸಿ ಕಳೆದ 173 ದಿನಗಳಿಂದ ಹೋರಾಟ ನಡೆಸುತ್ತಿರುವ ಮುನಂಬಂ ಗ್ರಾಮಸ್ತರು ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗುತ್ತಿರುವಂತೆಯೇ ಸಂಭ್ರಮಿಸಿದ್ದು, ಅದರ ಜೊತೆಗೆ ನರೇಂದ್ರ ಮೋದಿ ಜಿಂದಾಬಾದ್ ಎಂಬ ಜೈಕಾರವನ್ನು ಮೊಳಗಿಸಿದ್ದಾರೆ. ಹೀಗೆ ಪ್ರತಿಭಟನೆ ನಡೆಸಿದವರಲ್ಲಿ ಹೆಚ್ಚಿನವರು ಕ್ರೈಸ್ತರೇ ಆಗಿದ್ದಾರೆ ಎಂಬುವುದು ವಿಶೇಷ.

ಎಸ್‌ಡಿಪಿಐ ಕಾರ್ಯಕರ್ತರ ಮನೆಗೆ ಎನ್‌ಐಎ ದಾಳಿ

ಮಲಪ್ಪುರಂ: ಮಂಜೇರಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮನೆಗ ಳಿಗೆ ಎನ್‌ಐಎ ದಾಳಿ ನಡೆಸಿದೆ. ಇಂದು ಮುಂಜಾನೆ 3 ಗಂಟೆಗೆ ಎನ್‌ಐಎಯ ಕೊಚ್ಚಿ ಘಟಕದ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಒಂದು ತಾಸಿನ ತನಕ ಈ ಮನೆಗಳಲ್ಲಿ ತಪಾಸಣೆ ಮುಂದುವರಿಸಲಾಯಿತು. ದಾಳಿಯ ಬೆನ್ನಲ್ಲೇ ಎಸ್‌ಡಿಪಿಐಯ ನಾಲ್ವರು ಕಾರ್ಯಕರ್ತರನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಶಿಹಾಬ್, ಸೈಯಿದ್ ಅಲವಿ, ಖಾಲಿದ್ ಮತ್ತು ಇರ್ಷಾದ್ ಎಂಬವರನ್ನು ಈ ರೀತಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದರ ಹೊರತಾಗಿ ಇನ್ನೋರ್ವನನ್ನೂ ಎನ್‌ಐಎ ಕಸ್ಟಡಿಗೆ ತೆಗೆದುಕೊಂ ಡಿರುವುದಾಗಿ ಹೇಳಲಾಗುತ್ತಿದೆ. …

ಬಾಲಿವುಡ್ನ ಹಿರಿಯ ನಟ ಮನೋಜ್ ಕುಮಾರ್ ವಿಧಿವಶ

ಮುಂಬೈ: ದೇಶಭಕ್ತಿ ಚಲನಚಿತ್ರಗಳ ಮೂಲಕ ಖಾತಿ ಮತ್ತು ಭರತ್ ಕುಮಾರ್ ಎಂದೇ ವಿಶೇಷವಾಗಿ ಹೆಸರುವಾಸಿಯಾದ ಬಾಲಿವುಡ್ನ ಹಿರಿಯ ನಟ ಮತ್ತು ನಿರ್ದೇಶಕ ಮನೋಜ್ ಕುಮಾರ್ 87ನೇ ವಯಸ್ಸಿನಲ್ಲಿ ಮುಂಬೈಯ ಕೋಕಿಲಾ ಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.1937 ಜುಲೈ 24ರಂದು ಜನಿಸಿದ ಮನೋಜ್ ಕುಮಾರ್ರ ನಿಜವಾದ ಹೆಸರು ಹರಿಕೃಷ್ಣಗಿರಿ ಗೋಸ್ವಾಮಿ ಎಂದಾಗಿದೆ. ದೇಶಭಕ್ತಿ ಚಲನಚಿತ್ರಗಳು ಮತ್ತು ಭರತ್ ಕುಮಾರ್ ಎಂಬ ಅಡ್ಡ ಹೆಸರಿನಿಂದಲೇ ಅವರು ಹೆಸರುವಾಸಿ ಯಾಗಿದ್ದರು. ದೇಶಭಕ್ತಿ ಕಥಾವಸ್ತುವಿನ ಆಧಾರದಲ್ಲಿ ನಿರ್ಮಿಸಲಾದ ಶಹೀದ್, ಪೂರಬ್ ಔರ್ …

ಸಿಎಂಆರ್‌ಎಲ್ ಪ್ರಕರಣ, ಪ್ರೋಸಿಕ್ಯೂಶನ್‌ಗೆ ಕೇಂದ್ರ ಅನುಮತಿ: ಮುಖ್ಯಮಂತ್ರಿಯ ಮಗಳು ವೀಣಾ ವಿಜಯನ್  ಸೇರಿದಂತೆ ಹಲವರ ವಿರುದ್ಧ ಕೇಸು ದಾಖಲು

ತಿರುವನಂತಪುರ: ಕಪ್ಪು ಮರಳು ಕಂಪೆನಿಯಾದ ಸಿಎಂಆರ್‌ಎಲ್‌ನಿಂದ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್‌ರ ಮಗಳು ವೀಣಾ ವಿಜಯನ್ ಮತ್ತು ಅವರ ಮಾಲಕತ್ವದಲ್ಲಿರುವ ಕಂಪೆನಿಯಾದ ಎಕ್ಸೋಲೋಜಿಕ್ ಸೊಲ್ಯೂಶನ್ ಸೇರಿ ಅನಧಿಕೃತವಾಗಿ 2.7 ಕೋಟಿ ರೂ. ಪಡೆದು ವಂಚನೆ ನಡೆಸಿರುವ ಆರೋಪದಂತೆ    ಸೀರೀಸ್ ಫ್ರೋಡ್ ಇನ್‌ವೆಸ್ಟಿಗೇಶನ್ ಆಫೀಸ್ (ಎಸ್‌ಎಫ್‌ಐಒ) ಪ್ರಕರಣ ದಾಖಲಿ ಸಿಕೊಂಡಿದೆ. ಇದರ ಆಧಾರದಲ್ಲಿ ಮುಖ್ಯಮಂತ್ರಿ ಮಗಳು ವೀಣಾ ವಿಜ ಯನ್ ಮತ್ತು ಅವರ ಮಾಲಕತ್ವದಲಿ ರುವ ಎಕ್ಸೋಲೋಜಿಕ್ ಸೊಲ್ಯೂಶನ್ ಆ ಸಂಸ್ಥೆಯ ಎಂ.ಡಿ ಶಶಿಧರನ್ ಕಾರ್ತೋ, ಸಿಎಂಆರ್‌ಎಲ್ ಫಿನಾನ್ಸ್ …

ಎರಿಯಾಲ್ ನಿವಾಸಿ ದುಬಾಯಿಯಲ್ಲಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಎರಿಯಾಲ್ ಬಳಿಯ ಬುಳಾರ್‌ಕೋಡ್ ನಿವಾಸಿಯಾದ ಯುವಕ ದುಬಾಯಿಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ದುಬಾಯಿಯ ಕರಾಮ ಹಲ್‌ಹತ್ತಾರ್ ಸೆಂಟರ್‌ನ ನೌಕರನಾದ ಮುಹಮ್ಮದ್ ರಿಶಾಲ್ (25) ಮೃತ ಪಟ್ಟ ಯುವಕ. ನಿನ್ನೆ ಸಂಜೆ ೭ ಗಂಟೆ ವೇಳೆ  ವಾಸಸ್ಥಳದಲ್ಲಿ ಕುಸಿದು ಬಿದ್ದ ಮುಹಮ್ಮದ್ ರಿಶಾಲ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿದ್ದು, ಅಷ್ಟರೊಳಗೆ ನಿಧನ ಸಂಭವಿಸಿತ್ತು. ಮೃತದೇಹವನ್ನು ಊರಿಗೆ ತಲುಪಿಸಲಿರುವ ಕ್ರಮ ಆರಂಭಿಸಲಾಗಿದೆ. ಒಂದೂವರೆ ವರ್ಷ ಹಿಂದೆ ರಿಶಾಲ್ ಊರಿನಿಂದ ದುಬಾಯಿಗೆ ಹೋಗಿದ್ದರು. ಈ ತಿಂಗಳು ಊರಿಗೆ ಬರುವ ಸಿದ್ಧತೆಯಲ್ಲಿದ್ದಾಗಲೇ ನಿಧನ …