ಮಧೂರು: ಶ್ರೀ ಅಮೃತಕೃಪಾನಂದಪುರಿ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ; ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಂಜೆ ಆಗಮನ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮಗಳು ಸಂಭ್ರಮದಿAದ ಮುಂದುವರಿಯುತ್ತಿದ್ದು, ಊರ-ಪರವೂರ ಸಹಸ್ರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿ ದ್ದಾರೆ. ಈಗಾಗಲೇ ಸ್ವಾಮೀಜಿಯವರು, ಗಣ್ಯರು ಸಹಿತ ಹಲವರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮಲೆಯಾಳ ಚಲನಚಿತ್ರ ರಂಗದ ಖ್ಯಾತ ನಟ ಪದ್ಮಶ್ರೀ ಜಯರಾಂ, ಕೊಲ್ಲಂ ಮಾತಾ ಅಮೃತಾನಂದಮಯಿ ಮಠದ ಶ್ರೀ ಅಮೃತ ಕೃಪಾನಂದಪುರಿ ಸ್ವಾಮೀಜಿಯವರು ಇಂದು ಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿದರು.ವೈದಿಕ ಕಾರ್ಯಕ್ರಮದಂಗವಾಗಿ ಇಂದು ಬೆಳಿಗ್ಗೆ ದೀಪದ ಬಲಿ, …

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ; ರಾಜ್ಯಸಭೆಯಲ್ಲಿ ಭವಿಷ್ಯ ಇಂದು ನಿರ್ಧಾರ

ದೆಹಲಿ: ಸತತ 12 ಗಂಟೆಗಳ ಚರ್ಚೆ ನಂತರ ಲೋಕಸಭೆ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀ ಡಿದೆ. ಈ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಅದರ ಭವಿಷ್ಯ ಇಂದೇ ನಿರ್ಧಾರವಾಗಲಿದೆ.12 ತಾಸುಗಳ ಚರ್ಚೆ ಬಳಿಕ ಇಂದು ಮುಂಜಾನೆ ಸುಮಾರು1.56ರ ವೇಳೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆಯೆAಬ ಮಹತ್ವದ ಘೋಷಣೆಯನ್ನು ಲೋಕ ಸಭಾ ಸ್ಪೀಕರ್ ಓಂಬಿರ್ಲಾ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು ಹಾಗೂ ಅದರ ವಿರುದ್ಧ 232 ಮತಗಳು ಚಲಾಯಿಸಲ್ಪಟ್ಟಿದೆ ಯೆಂದು …

ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಓರ್ವ ಸೆರೆ

ಮಂಜೇಶ್ವರ: ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಾಕ್ರಬೈಲು  ಬಾಳ್ತಾಜೆ ನಿವಾಸಿ ಮುಹಮ್ಮದ್ ಪಿ. (60)ನನ್ನು 51 ಪ್ಯಾಕೆಟ್ ಪಾನ್ ಮಸಾಲೆ ಸಹಿತ ನಿನ್ನೆ ರಾತ್ರಿ ಹೊಸಂಗಡಿ ಬಸ್ ನಿಲ್ದಾಣ ಬಳಿಯಿಂದ ಎಸ್‌ಐ ರತೀಶ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದ್ದು, ಕೇಸು ದಾಖಲಿಸಿದ್ದಾರೆ. ಪೊಲೀಸರು ಗಸ್ತು ನಡೆಸುತ್ತಿದ್ದ ಮಧ್ಯೆ ಸಂಶಯಾಸ್ಪದವಾಗಿ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ.

ಬಡಕುಟುಂಬಕ್ಕೆ ಮನೆ ನಿರ್ಮಿಸಲು ಮಾನವ ಸ್ನೇಹಿಗಳುರಂಗಕ್ಕಿಳಿಯುವುದರೊಂದಿಗೆ ಫಲಾನುಭವಿ ಬೀದಿ ಪಾಲಾಗುವ ಸ್ಥಿತಿಯತ್ತ-ಆರೋಪ

ಪೆರ್ಲ:  ವಾಸಿಸಲು ಮನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಬಡವನಾದ ಕೂಲಿ  ಕಾರ್ಮಿ ಕನಿಗೆ ಸ್ವಂತವಾಗಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆಯೊಡ್ಡಿ ಲೀಗ್ ನೇತಾರರು ಚಾರಿಟಿ ಚಟುವಟಿಕೆಗಿಳಿದಾಗ ಫಲಾನುಭವಿಯಾದ ಎಣ್ಮಕಜೆ ಪಂಚಾಯತ್ ೧೩ನೇ ವಾರ್ಡ್‌ನ ಅಬ್ದುಲ್ ರಜಾಕ್ ಶೇಣಿ ಎಂಬವರು ಬೀದಿ ಪಾಲಾಗುವ ಸ್ಥಿತಿಗೆ ತಲುಪಿದೆಯೆಂದು  ನಾಗರಿಕರು ಆರೋಪಿಸುತ್ತಿದ್ದಾರೆ. ಅಬ್ದುಲ ರಜಾಕ್, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಮನೆ ನಿರ್ಮಿಸಲು ಮಾನವೀಯ ತೆಯುಳ್ಳ ವ್ಯಕ್ತಿಯೊಬ್ಬರು ಐದು ಸೆಂಟ್ ಸ್ಥಳ ನೀಡಿರುವುದಾಗಿ  ಹೇಳಲಾಗುತ್ತಿದೆ. ಆ ಸ್ಥಳದಲ್ಲಿ ನಾವು ಮನೆ …

ರಾಣಿಪುರದಲ್ಲಿ ಮತ್ತೆ ಕಾರಿನಲ್ಲಿ ಸಾಹಸ ಪ್ರಯಾಣ: ಕರ್ನಾಟಕ ನಿವಾಸಿ ವಿರುದ್ಧ ಕೇಸು

ಹೊಸದುರ್ಗ: ರಾಣಿಪುರದಲ್ಲಿ ಮತ್ತೆ ಕಾರಿನಲ್ಲಿ ಸಾಹಸಯಾತ್ರೆ ನಡೆಸಲಾಗಿದೆ. ಈ ಬಗ್ಗೆ ಕರ್ನಾಟಕ ನಿವಾಸಿ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ರಾಣಿಪುರದಲ್ಲಿ ಕಾರಿನ ಢಿಕ್ಕಿಯಲ್ಲಿ ಕುಳಿತುಕೊಂಡು ಸಾಹಸ ಪ್ರಯಾಣ ನಡೆಸಲಾಗಿದೆ. ಸುಳ್ಯ ಅಜ್ಜಾವರ ನಿವಾಸಿ ಸತೀಶ್ ಕೆ. (26)ನ ಮಾಲಕತ್ವದಲ್ಲಿರುವ ಕರ್ನಾಟಕ ನೋಂದಾಯಿತ ವಾಹನವಾದ ಸ್ವಿಪ್ಟ್ ಕಾರಿನಲ್ಲಿ ಈ ಸಾಹಸ ಪ್ರಯಾಣ ನಡೆಸಲಾಗಿದೆ. ಭಾರೀ ಶಬ್ದದಲ್ಲಿ ಹಾಡು ಪ್ಲೇ ಮಾಡಿ ಢಿಕ್ಕಿ ತೆರೆದು ಅದರಲ್ಲಿ ಕುಳಿತು ಪ್ರಯಾಣ ನಡೆಸಲಾಗಿದೆ. ಅರಣ್ಯ ಸಂರಕ್ಷಣೆ ಸಮಿತಿ ಕಾರ್ಯಕರ್ತರು …

ರೇಶನ್ ಕಾರ್ಡ್ ಮಸ್ಟರಿಂಗ್ ಎಪ್ರಿಲ್ 30ರ ತನಕ ವಿಸ್ತರಣೆ

ತಿರುವನಂತಪುರ: ಆದ್ಯತಾ ವಿಭಾಗದ ರೇಶನ್ ಕಾರ್ಡುದಾರರ ಸದಸ್ಯರ ಮಸ್ಟರಿಂಗ್ ನಡೆಸಲಿರುವ ಅಂತಿಮ ದಿನಾಂಕವನ್ನು ಎಪ್ರಿಲ್ 30 ತನಕ ವಿಸ್ತರಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕಾ ಪೂರೈಕೆ ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.. ಮಾಸ್ಟರಿಂಗ್ ಸಮಯವನ್ನು ವಿಸ್ತರಿಸುವಂತೆ ಸಚಿವ ಅನಿಲ್ ಕೇಂದ್ರ ಆಹಾರ ಖಾತೆ ಸಚಿವ ಪ್ರಹಲ್ಲಾದ್ ಜೋಷಿಯವನ್ನು ದಿಲ್ಲಿಯಲ್ಲಿ ಭೇಟಿಯಾಗಿ ವಿನಂತಿಸಿಕೊಂಡಿದ್ದರು. ಅದಕ್ಕೆ ಕೇಂದ್ರ ಸಚಿವ ಅನುಮತಿ ನೀಡಿದ್ದಾರೆ. ಮಸ್ಟರಿಂಗ್ ನಡೆಸಲು 2024 ಡಿಸೆಂಬರ್ 30ರ ತನಕ ಕೇಂದ್ರ ಸರಕಾರ ಸಮಯವಕಾಶ ನೀಡಿತ್ತು. ಕೇರಳದಲ್ಲಿ …

ಬಸ್‌ಗಳಲ್ಲಿ ಚಾಲಕರ ಮೇಲೆ ನಿಗಾ ಇರಿಸಲು ಕ್ಯಾಮರಾ: ನಾಳೆಯ ಸಭೆಯಲ್ಲಿ ಪರಿಗಣನೆ

ತಿರುವನಂತಪುರ: ರಾಜ್ಯದಲ್ಲಿ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಚಾಲಕರ ಮೇಲೆ ನಿಗಾ ಇರಿಸಲು ಕ್ಯಾಮರಾ ಅಳವಡಿಸುವ ಬಗ್ಗೆ ಸರಕಾರ ಪರಿಗಣಿಸುತ್ತಿದೆ. ಈ ಬಗ್ಗೆ ನಾಳೆ ನಡೆಯುವ ರಾಜ್ಯ ಸಾರಿಗೆ ಅಥಾರಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಚಾಲಕರು ನಿದ್ದೆಯ ಮಂಪರಿನಲ್ಲಿ ಬಸ್ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ನಿರ್ಲಕ್ಷ್ಯವಾಗಿ ಡ್ರೈವಿಂಗ್, ಮೊಬೈಲ್ ಪೋನ್ ಬಳಕೆ ಮೊದಲಾದವುಗಳನ್ನು ಕ್ಯಾಮರಾ  ಅಳವಡಿಸಿದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲು ಮೋಟಾರ್ ವಾಹನ ಇಲಾಖೆ ಅಧಿಕಾರಿಗಳಿಗೆ …

ಸೇವೆ ಕೊನೆಗೊಳಿಸಿದ 3591 ಸರಕಾರಿ ವಾಹನಗಳು

ಕಾಸರಗೋಡು: ಹದಿನೈದು ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳನ್ನು ಸೇವೆಯಿಂದ ಹೊರತುಪಡಿಸುವಂತೆ ಕೇಂದ್ರ ಸಾರಿಗೆ ಸಚಿವಾಲಯ ನೀಡಿದದ ನಿರ್ದೇಶನದಂತೆ ಅದಕ್ಕೆ ಪೂರಕ ಕ್ರಮ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ.ಇದರಂತೆ ನೋಂದಾವಣೆ ನಡೆದು ಹದಿನೈದು ವರ್ಷ ಪೂರ್ಣಗೊಂಡ ಎಲ್ಲಾ ವಾಹನಗಳ ಸೇವೆಯನ್ನು ರಾಜ್ಯ ಸರಕಾರ ಕೊನೆಗೊಳಿಸ ತೊಡಗಿದೆ. ಇಂತಹ ಕ್ರಮದಂಗವಾಗಿ 3,591 ವಾಹನಗಳನ್ನು ಸರಕಾರ ಹಿಂತೆಗೆದುಕೊAಡಿದೆ. ಹೀಗೆ ಸೇವೆಯಿಂದ ಹಿಂತೆಗೆದುಕೊಳ್ಳುವ ಸರಕಾರಿ ವಾಹನಗಳಲ್ಲಿ ಬಹುಪಾಲು ಪೊಲೀಸ್ ಇಲಾಖೆಗೆ ಸೇರಿದವುಗಳಾಗಿವೆ. ಆದರೆ ಹೀಗೆ ಸೇವೆ ರದ್ದುಪಡಿಸಿದ ಸರಕಾರಿ ವಾಹನಗಳ ಪಟ್ಟಿಯಲ್ಲಿ ಕೆಎಸ್ ಆರ್ಟಿಸಿ ಬಸ್ಸುಗಳನ್ನು …

ನಿಧನ

ಕುಂಬಳೆ: ಕಂಚಿಕಟ್ಟೆ ಮಳಿ ನಿವಾಸಿ ಯೂ ಪ್ರಸ್ತು ತ ಸೂರಂಬೈ ಲಿನಲ್ಲಿ ವಾಸಿ ಸುತ್ತಿದ್ದ ದಿ| ಸಂಜೀವ ಎಂಬವರ ಪತ್ನಿ ಲೀಲಾ (87) ನಿಧನ ಹೊಂದಿದರು.  ಮೃತರು ಮಕ್ಕಳಾದ ಹರೀಶ, ಲತೇಶ, ಸಂ ತೋಷ್, ಗಿರಿಧರ, ಹರ್ಷ, ಗಣೇಶ, ಯಶೋ ಧ, ಸರೋ ಜ, ಶೈಲಜಾ, ಉಷಾ, ವರಲಕ್ಷ್ಮಿ, ಅಳಿಯ-ಸೊಸೆಯಂದಿರ ಸಹಿತ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ

ಮಂಜೇಶ್ವರ: ಮಜಿಬೈಲ್ ಜಿಎಲ್‌ಪಿ ಶಾಲೆ ಬಳಿಯ ನಿವಾಸಿ ದಿ| ಚಂದ್ರಶೇಖರ ಎಂಬವರ ಪತ್ನಿ ಸುಂದರಿ (81) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಗೀತಾ, ಉಷಾಲತಾ, ಜಯೇಶ್, ಬಬಿತ, ಅಳಿಯಂದಿರಾದ ಪದ್ಮನಾಭ, ಕೊರಗಪ್ಪ, ಕಿರಣ್, ಸೊಸೆ ನವ್ಯ, ಸಹೋದರ ವಿಶ್ವನಾಥ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.