ಮಾಜಿ ಅನಿವಾಸಿ ಗೋಕುಲನ್ ನಿಧನ

ಕಾಸರಗೋಡು: ಈ ಹಿಂದೆ ಕೊಲ್ಲಿಯಲ್ಲಿದ್ದ ಪೆರಿಯಾ ಮಠದ ಗೋಕುಲನ್ (57) ನಿಧನ ಹೊಂದಿದರು. ದಿ| ಚೇವಿರಿ ಕುಞಂಬು ನಾಯರ್-ಮೇಲತ್ತ್ ಲಕ್ಷ್ಮಿಯಮ್ಮ ದಂಪತಿ ಪುತ್ರರಾಗಿದ್ದಾರೆ. ಮೃತರು ಪತ್ನಿ ಪುಷ್ಪ, ಮಕ್ಕಳಾದ ಸ್ನೇಹ, ಶ್ವೇತಾ, ಸಹೋದರರಾದ ಕೃಷ್ಣನ್ ನಾಯರ್, ರವೀಂದ್ರನ್ ನಾಯರ್, ಸಹೋದರಿಯರಾದ ಕಮಲಾಕ್ಷಿ, ತಂಗಮಣಿ, ರಾಗಿಣಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಕುಞಂಬು ನಾಯರ್ ಈ ಹಿಂದೆ ನಿಧನ ಹೊಂದಿದ್ದಾರೆ.

ಮನೆ ಮುಂದೆಯೇ ಸಾಕು ನಾಯಿಯನ್ನು ಕೊಂದು ತಿಂದ ಚಿರತೆ

ಕಾಸರಗೋಡು: ಜಿಲ್ಲೆಯಲ್ಲಿ ಚಿರತೆ ಭೀತಿ ಇನ್ನೂ ದೂರವಾಗಿಲ್ಲ. ಎರಡು ಚಿರತೆಗಳನ್ನು ಸೆರೆಹಿಡಿದು ಸಾಗಿಸಿದ ಬೆನ್ನಲ್ಲೇ, ಅಂಬಲತರಕ್ಕೆ ಸಮೀಪದ ಪರಕಳಾಯಿ ಕಲ್ಲಡ ಚಿಟ್ಟದ ವಿಕಾಸ್ ಎಂಬವರ ಮನೆ ಅಂಗಳಕ್ಕೆ ಪ್ರವೇಶಿಸಿದ ಚಿರತೆಯೊಂದು ಸಾಕು ನಾಯಿಯನ್ನು ಕೊಂದು ತಿಂದಿದೆ. ರಾತ್ರಿ ಸುಮಾರು 11 ಗಂಟೆ ವೇಳೆ ಚಿರತೆ ಮನೆ ಅಂಗಳದಲ್ಲಿರುವ ನಾಯಿಯನ್ನು  ಕೂಡಿ ಹಾಕಿದ ಗೂಡಿನತ್ತ ಸಾಗುತ್ತಿರುವ  ದೃಶ್ಯ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿದೆ. ಇದನ್ನು ಪರಿಶೀಲಿಸಿದ ಅರಣ್ಯಪಾಲಕರು ಕ್ಯಾಮರಾದಲ್ಲಿ  ಪತ್ತೆಯಾಗಿರುವುದು ಚಿರತೆಯ ದೃಶ್ಯವೆಂದು ಸ್ಪಷ್ಟಪಡಿಸಿದ್ದಾರೆ. ಚಿರತೆ ಕೊಂದು …

ಮಧೂರು: ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಇಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅವಸ್ರುತ ಬಲಿ, ಮಹಾ ಮೂಡಪ್ಪಸೇವೆಯ ಪ್ರಾರ್ಥನೆ, ಧ್ವಜಾರೋಹಣ ಮೊದಲಾದ ಕಾರ್ಯಕ್ರಮ ನಡೆಯಿತು. ಬಳಿಕ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ಆರಂಭಗೊAಡಿತು.ಸಂಜೆ 6ಕ್ಕೆ ಉತ್ಸವಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ. ಇಂದು ಬೆಳಿಗ್ಗೆ ಚಿನ್ಮಯ ಮಿಶನ್ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸಿದ್ದು, ಅವರಿಗೆ ಪೂರ್ಣಕುಂಭ …

ಒಂದು ವರ್ಷದಲ್ಲಿ ಭಾರತಕ್ಕೆ ತಲುಪಿಸಿದ್ದು 300 ಕಿಲೋ ಎಂಡಿಎಂಎ

ಕೊಲ್ಲಂ: ಒಂದು ವರ್ಷದಲ್ಲಿ 300 ಕಿಲೋ ಎಂಡಿಎಂಎ ಭಾರತಕ್ಕೆ ತಲುಪಿಸಿರುವುದಾಗಿ ಕೊಲ್ಲಂನಲ್ಲಿ ಸೆರೆಗೀಡಾದ ನೈಜೀರಿಯಾ ಪ್ರಜೆ ಅಗ್ಬೇಡೊ ಅಸೂಕ ಸೊಲಮನ್ (29) ಎಂಬಾತ ತಿಳಿಸಿದ್ದಾನೆ. ಪೊಲೀಸರು ಈತನನ್ನು ತನಿಖೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಈ ಮಾಹಿತಿ ಬಹಿರಂಗಪಡಿಸಿದ್ದಾನೆ.  ಎಂಡಿಎಂಎ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಂನ ಇರುವಿಪುರಂ ಪೊಲೀಸರು ಸೊಲಮನ್‌ನನ್ನು ಸೆರೆಹಿಡಿದಿದ್ದಾರೆ.  ನೈಜೀರಿಯಾ ಪ್ರಜೆಯಾದ ಫ್ರಾನ್ಸಿಸ್ ಎಂಬಾತ ಮಾದಕ ವಸ್ತು ದಂಧೆಯ ಪ್ರಧಾನ ಕೊಂಡಿಯಾಗಿದ್ದಾನೆ ಎಂದು ಸೊಲಮನ್ ತಿಳಿಸಿದ್ದಾನೆ.

ತಂದೆ ನಿಧನಹೊಂದಿದ ಮೂರನೇ ದಿನ ಪುತ್ರನೂ ನಿಧನ

ಕಾಸರಗೋಡು: ತಂದೆ ನಿಧನ ಹೊಂ ದಿದ ಮೂರನೇ ದಿನ ಪುತ್ರನೂ ನಿಧನ ಹೊಂ ದಿದ ಘಟನೆ ನಡೆದಿದೆ. ಕಾಸರಗೋಡು ಕಸಬಾ ಬೀಚ್ ನಿವಾಸಿ ಬೆಸ್ತ ಕೆ.ಬಾಬು (56) ಎಂಬವರು ಅನಾರೋಗ್ಯದಿಂದ ಮಾರ್ಚ್ 29ರಂದು ನಿಧನಹೊಂ ದಿದ್ದರು. ಅದಾದ ಮೂರನೇ ದಿನ ಅವರ ಹಿರಿಯ ಪುತ್ರ ಬಿ. ಶೈಜು (36) ಕೂಡ ನಿನ್ನೆ ನಿಧನಹೊಂದಿದ್ದಾರೆ. ತಂದೆಯ ಅಗಲುವಿಕೆಯಿಂದ ಶೈಜು ತೀವ್ರ ಆಘಾತಕ್ಕೊಳಗಾಗಿದ್ದರು. ಮಾರ್ಚ್ 31ರಂದು ರಾತ್ರಿ ತೀವ್ರ ವಾಂತಿ ಅನುಭವಗೊಂಡ ಅವರನ್ನು  ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು.  ಈ …

ವಕ್ಫ್ (ತಿದ್ದುಪಡಿ) ಮಸೂದೆ ಸಂಸತ್‌ನಲ್ಲಿ ಮಂಡನೆ

ನವದೆಹಲಿ: ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸಚಿವ ಕಿರಣ್ ರಿಜುಜಿ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯ ಮೇಲಿನ ಚರ್ಚೆಗಾಗಿ ಲೋಕಸಭಾಧ್ಯಕ್ಷರು ಎಂಟು ತಾಸುಗಳ ಸಮಯಾವಕಾಶ ನೀಡಿದ್ದಾರೆ. ರಾಜ್ಯ ಸಭೆಯಲ್ಲಿ ನಾಳೆ ಈ ವಿಷಯ ಚರ್ಚೆಗೆ ಬರಲಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಮತ ಹೊಂದಿರುವ  ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಎಲ್ಲಾ ಸದಸ್ಯರಿಗೂ ಈ ವೇಳೆ ಕಡ್ಡಾಯವಾಗಿ ಸಂಸತ್‌ನಲ್ಲಿ ಹಾಜರಿರಬೇಕೆಂದು  ನಿರ್ದೇಶಿಸಿ ವಿಪ್ ಜ್ಯಾರಿಗೊಳಿಸಿದೆ. ಎನ್‌ಡಿಎಯ ಪ್ರಮುಖ ಮಿತ್ರ ಪಕ್ಷಗಳಾದ  ತೆಲುಗುದೇಶಂ (ಟಿಡಿಪಿ), ಜನತಾದಳ ಯುನೈಟೆಡ್, ಶಿವಸೇನೆ …

ರೈಲು ಹಳಿಯಲ್ಲಿ ಮೃತದೇಹ ಪತ್ತೆ

ಕಾಸರಗೋಡು: ನೀಲೇಶ್ವರದಲ್ಲಿ ವೃದ್ಧರೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇವರು ತೈಕಡಪ್ಪುರಂ ನಿವಾಸಿಯೆಂದು ಶಂಕಿಸಲಾಗಿದೆ. ಇಂದು ಮುಂಜಾನೆ ಕಣ್ಣೂರು-ಮಂಗಳೂರು ಪ್ಯಾಸೆಂಜರ್ ರೈಲಿನಿಂದ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮುಲ್ಲಪಳ್ಳಿ ಶಾಲೆ ಹಾಗೂ ಕೊಯುಂದಿಲ್ ಮಧ್ಯೆ ಮೃತದೇಹ ಪತ್ತೆಯಾಗಿದೆ. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಭಾರತೀಯ ಕಿಸಾನ್ ಸಂಘ್ ರಾಜ್ಯ ಸಮಿತಿಯಿಂದ  ಕೃಷಿ ನವೋತ್ಥಾನ ಯಾತ್ರೆಗೆ ಮಂಜೇಶ್ವರದಿಂದ ಚಾಲನೆ

ಮಂಜೇಶ್ವರ: ಕೇರಳ ಕಿಸಾನ್ ಸಂಘ್ ರಾಜ್ಯ ಸಮಿತಿಯ ಕೃಷಿ ನವೋತ್ಥಾನ ಯಾತ್ರೆ ಮಂಜೇಶ್ವರ ದಿಂದ ಆರಂಭಗೊಂಡಿತು. ರಾಜ್ಯದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಕೇರಳ ಕೃಷಿ ನೀತಿಗೆ ಬದಲಿ ನಿರ್ದೇಶ ಮುಂದಿಟ್ಟು ಭಾರತೀಯ ಕಿಸಾನ್ ಸಂಘ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಡೆಸುವ ಕೃಷಿ ನವೋತ್ಥಾನ ಯಾತ್ರೆಗೆ ಮಂಜೇಶ್ವರ ದಿಂದ ಚಾಲನೆ ನೀಡಲಾಯಿತು. ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದಿಂದ ಪೈಗಳ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ ಮೆರವಣಿಗೆ ಆರಂಭಿಸಲಾಯಿತು. ಬಳಿಕ ಅನಂತೇಶ್ವರ ದೇವಸ್ಥಾನದ ಶ್ರೀ ವಿಭುದೇಂದ್ರ ಸಭಾಂಗಣದಲ್ಲಿ …

ಸಿಪಿಎಂ ಪಾರ್ಟಿ ಕಾಂಗ್ರೆಸ್‌ಗೆ ಚಾಲನೆ 

ಮಧುರೈ: ಸಿಪಿಎಂ 24ನೇ ಪಾರ್ಟಿ ಕಾಂಗ್ರೆಸ್‌ಗೆ  ಮಧುರೈಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಪಕ್ಷದ ಹಿರಿಯ ನೇತಾರ ಬಿಮಲ್ ಬೋಸ್ ಧ್ವಜಾರೋಹಣ ಗೈಯ್ಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂನ ಎಲ್ಲಾ ವರಿಷ್ಠ ನೇತಾರರೂ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ನಗರಸಭಾ ಕಚೇರಿಯ ಗಾಜು ಪುಡಿಗೈದು, ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ: ಕೇಸು ದಾಖಲು

 ಕಾಸರಗೋಡು: ಕಾಸರಗೋಡು ನಗರ ಸಭಾ ಕಚೇರಿಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿಯೋರ್ವ ಬೊಬ್ಬೆ ಹಾಕಿ ಇಂಜಿನಿಯರಿಂಗ್ ಸ್ಟೋರ್ ಕೊಠಡಿಯ ಗಾಜನ್ನು ಒಡೆದು ಹಾನಿಗೊಳಿಸಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ  ಅಡಚಣೆ ಸೃಷ್ಟಿಸಿದ ಘಟನೆ ನಡೆದಿದೆ. ಈ ಸಂಬಂಧ ನಗರಸಭೆಯ ಅಸಿಸ್ಟೆಂಟ್ ಕಾರ್ಯದರ್ಶಿ  ಶೈಲೇಶ್ ಎಂ ನೀಡಿದ ದೂರಿನಂತೆ  ಫೈಸಲ್ ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.  ನಿನ್ನೆ ಅಪರಾಹ್ನ ೩ ಗಂಟೆಗೆ ಆರೋಪಿ ನಗರಸಭಾ ಕಚೇರಿಗೆ ಅಕ್ರಮವಾಗಿ ನುಗ್ಗಿ ಈ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಸಿಸ್ಟೆಂಟ್ ಕಾರ್ಯದರ್ಶಿ …