ವಕ್ಫ್ ತಿದ್ದುಪಡಿ ಮಸೂದೆ ನಾಳೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ ಲೋಕಸಭೆ ಯಲ್ಲಿ ಮಂಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ದಿ ಕೆಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಈ ಮಸೂದೆಗೆ ಬೆಂಬಲ ಸೂಚಿಸಿದೆ. ಅದು ಕಾಂಗ್ರೆಸ್‌ನ್ನು ಗೊಂದಲಕ್ಕೆ ಸಿಲುಕುವಂತೆಯೂ ಮಾಡಿದೆ. ಕೇರಳದ ವಕ್ಫ್ ಮಂಡಳಿಯು ಮುನಂಬಂ  ಪ್ರದೇಶದ ೬೦೦ಕ್ಕೂ ಹೆಚ್ಚು ಕುಟುಂ ಬಗಳ ಪಿತ್ರಾರ್ಜಿತ ಆಸ್ತಿಗಳನ್ನು ವಕ್ಫ್ ಭೂಮಿ  ಎಂದು ಘೋಷಿಸಿದೆ. ಅದಕ್ಕೆ ಅದು ಅಸ್ತಿತ್ವದಲ್ಲಿರುವ ಕಾನೂನನ್ನು ಬಳಸಿಕೊಂಡಿದೆ. ಕಳೆದ ಮೂರು ವರ್ಷ ಗಳಿಂದ …

ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ : 3 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶ ; ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು:  ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಮೊಹಮ್ಮದ್ ಶರೀಫ್ (25) ಎಂಬಾತನನ್ನು ಬಂಧಿಸಲಾಗಿದೆ. ಈತ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ ಆತನ ಟ್ರೋಲಿ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ತುಂಬಿಸಿ ಬಚ್ಚಿಡಲಾಗಿದ್ದ ಮಾದಕದ್ರವ್ಯ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅದರಲ್ಲಿ 3.004 ಕಿಲೋ ಗ್ರಾಂ ಮಾದಕವಸ್ತು ಇತ್ತೆಂದೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ …

8 ತಿಂಗಳ ಗರ್ಭಿಣಿ ಮೃತದೇಹ ಪತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೋಟಯಂ: 8 ತಿಂಗಳ ಗರ್ಭಿಣಿ ಯುವತಿ ಪತಿ ಗೃಹದಲ್ಲಿ ನೇಣು ಬಿಗಿದು  ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಟಯಂ ಮಾಞೂರ್ ಕಂಡಾಟುಪಾಡಂ ಮುದುಕ್ಕಾಡ್ ನಿವಾಸಿ ಅಖಿಲ್ ಮ್ಯಾನ್ವಲ್‌ರ ಪತ್ನಿ ಅಮಿತ ಸನ್ನಿ (32) ಮೃತ ಪತ್ತ ಗರ್ಭಿಣಿ. ಮನೆಯ ಮೇಲಿನ ಮಹಡಿಯ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅಮಿತ ಕಂಡು ಬಂದಿದ್ದಾರೆ. ಈ ವೇಳೆ ಪತಿ ಅಖಿಲ್ ಮನೆಯಲ್ಲಿ ರಲಿಲ್ಲವೆನ್ನಲಾಗಿದೆ. ಸಾಯುವುದಕ್ಕಿಂತ ಮುಂಚಿತ ತವರು ಮನೆಯಲ್ಲಿರುವ ತಾಯಿಯನ್ನು ಫೋನ್‌ನಲ್ಲಿ ಕರೆದು ತಾನಿನ್ನು ನೇಣು ಬಿಗಿದು ಆತ್ಮಹತ್ಯೆಗೈಯ್ಯುತ್ತಿರುವುದಾಗಿ …

ಹಣಕಾಸು ವರ್ಷದ ಮೊದಲ ದಿನವೇ ಸಿಹಿಸುದ್ದಿ: ವಾಣಿಜ್ಯ ಎಲ್‌ಪಿಜಿ ದರ ಇಳಿಕೆ

ನವದೆಹಲಿ: ಹೊಸ ಹಣಕಾಸು ವರ್ಷದ ಮೊದಲದಿನವಾದ ಇಂದು ಕೇಂದ್ರಸರಕಾರ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಂದಿನಿAದ 41 ರೂ. ಕಡಿಮೆಗೊಳಿಸಲಾಗಿದೆ. ಇದರಂತೆ 19 ಕೆ.ಜಿ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಬೆಲೆ ಹೊಂದಾಣಿಕೆಗಳು ಜಾಗತಿಕ ಕಚ್ಚಾ ಬೆಲೆಗಳು ಮತ್ತು ಇತರ ಮಾರುಕಟ್ಟೆ ಅಂಶಗಳ ಆಧಾರದ ಮೇಲೆ ನಿಯಮಿತ ಮಾಸಿಕ ಪರಿಷ್ಕರಣೆಗೆ ಭಿನ್ನವಾಗಿದೆ ಆದರೆ 16.2 ಕೆ.ಜಿ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ವಾಣಿಜ್ಯ ಎಲ್ಪಿಜಿ ದರಗಳನ್ನು …

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ 16ರ ಬಾಲಕಿಯನ್ನು ಕೊಂಡೊಯ್ದು ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ 16ರ ಬಾಲಕಿಯನ್ನು ತಳಿಪರಂಬ್‌ನ ವಸತಿಗೃಹಕ್ಕೆ ತಲುಪಿಸಿ ದೌರ್ಜನ್ಯಗೈದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದರು. ತಳಿಪರಂಬ್ ನಿವಾಸಿ ರಾಜೇಶ್ ಯಾನೆ ಅರ್ಜುನನ ವಿರುದ್ಧ ಚಿತ್ತಾರಿಕಲ್ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಬಾಲಕಿ ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾಳೆ. ಪತ್ನಿ ಹಾಗೂ ಮಕ್ಕಳಿರುವ ರಾಜೇಶ್ ಬಾಲಕಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಬಳಿಕ 2024 ಜುಲೈಯಲ್ಲಿ ಪ್ರಥಮವಾಗಿ ದೌರ್ಜನ್ಯಗೈದಿದ್ದಾನೆ ಎನ್ನಲಾಗಿದೆ. ಕಾರು ಸಹಿತ ತಲುಪಿ ಬಾಲಕಿಯನ್ನು ಕರೆದುಕೊಂಡು ಹೋಗಿ ತಳಿಪರಂಬ್‌ನಲ್ಲಿ …

ಯುವ ಸಿವಿಲ್ ಇಂಜಿನಿಯರ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವ ಸಿವಿಲ್ ಇಂಜಿನಿಯರ್ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಪೆರೋಲ್ ವಳ್ಳಿಕುನ್ನು ನಿವಾಸಿ ಪದ್ಮನಾಭನ್- ಬೇಬಿ ದಂಪತಿ ಪುತ್ರ ವಿನೀಶ್ (26) ಸಾವನ್ನಪ್ಪಿದ ಯುವಕ. ಪಳ್ಳಿಕ್ಕರೆ ಸೈಂಟ್ ಆನ್ಸ್ ಯುಪಿ ಶಾಲೆ ಬಳಿಯ ರೈಲು ಹಳಿ ಬಳಿ ಇವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಹೆತ್ತವರ ಹೊರತಾಗಿ ಸಹೋದರ ಪಿಪಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯೂತ್ ಲೀಗ್ ನೇತಾರ, ಕುಟುಂಬ ಸಂಚರಿಸಿದ ಕಾರನ್ನು ತಡೆದು ನಿಲ್ಲಿಸಿ  ಹಲ್ಲೆ

ಕಾಸರಗೋಡು: ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಕಾರ್ಯ ದರ್ಶಿ ಹಾಗೂ ಕುಟುಂಬ ಸಂಚರಿ ಸುತ್ತಿದ್ದ ಕಾರನ್ನು ತಂಡವೊಂದು ತಡೆದು ನಿಲ್ಲಿಸಿ  ಅವರ ಮೇಲೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಸಂಬಂಧ ನವಾಸ್ ಎಂಬಾತನ ಸಹಿತ 4 ಮಂದಿ ವಿರುದ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಮಧ್ಯಾಹ್ನ ಚೆಂಗಳ ಬಂಬ್ರಾಣಿನಗರದಲ್ಲಿ ಘಟನೆ ನಡೆದಿದೆ.  ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಹಾಶಿಂ ಬಂಬ್ರಾಣಿ ಹಾಗೂ ಅವರ ಪತ್ನಿ, ಮಕ್ಕಳು ಸಂಚರಿಸುತ್ತಿದ್ದ ಕಾರನ್ನು ನಿನ್ನೆ ಮಧ್ಯಾಹ್ನ ಬಂಬ್ರಾಣಿನಗರದಲ್ಲಿ ತಂಡವೊಂದು …

ಆಟೋರಿಕ್ಷಾದಲ್ಲಿ ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾ ದಲ್ಲಿ ಬಚ್ಚಿಡಲಾಗಿದ್ದ ೫೦ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಶಿರಿಬಾಗಿಲು ಪೆರಿಯಡ್ಕ ನಿವಾಸಿ ಶಿಹಾಬುದ್ದೀನ್ (40) ಎಂಬಾತನನ್ನು ಅಬಕಾರಿ ತಂಡ ಬಂಧಿಸಿದೆ. ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ವಿ. ಮುರಳಿ, ಪ್ರಿವೆಂಟಿವ್ ಆಫೀಸರ್ ಕೆ.ಆರ್. ಪ್ರಜಿತ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್  ವಿ,  ರಾಜೇಶ್ ಪಿ, ಸೋನು ಸೆಬಾಸ್ಟಿಯನ್, ಅತುಲ್ ಟಿ.ವಿ. ಎಂಬಿವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ …

ಯುವಕನಿಗೆ ಹಲ್ಲೆ ನಡೆಸಿ ರೈಲಿಗೆ ಕಲ್ಲೆಸೆದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಮಂಗಳೂರು-ತಿರುವನಂತಪುರ ಮಧ್ಯೆ ಸಂಚರಿಸುವ ಮಲಬಾರ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಯುವಕನಿಗೆ ಹಲ್ಲೆ ನಡೆಸಿ ಬಳಿಕ ರೈಲಿಗೆ ಕಲ್ಲೆಸೆದ ಪ್ರಕರಣದ ಆರೋ ಪಿಯನ್ನು ಘಟನೆ ನಡೆದ ತಾಸುಗಳೊಳಗೆ  ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.ಚಟ್ಟಂಚಾಲ್‌ಗೆ ಸಮೀಪದ ತೆಕ್ಕಿಲ್ ಮೈಲಾಟಿ ನಿವಾಸಿ ಎಸ್. ಅನಿಲ್ ಕುಮಾರ್ (41) ಬಂಧಿತ ಆರೋಪಿ. ಮಲಪ್ಪುರಂ ವಳಯಂ ಕೋಡ್ ನಿವಾಸಿ ಕೆ. ರಿಜಾಸ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ರೈಲಿನಲ್ಲಿ ಮೊನ್ನೆ ರಾತ್ರಿ ನಾನು ಮತ್ತು ಸ್ನೇಹಿತೆಯರಾದ ಇಬ್ಬರು ಯುವತಿ ಪ್ರಯಾಣಿಸುತ್ತಿದ್ದ ವೇಳೆ  …

ಪ್ರಿಯತಮೆ ಜೊತೆ ವಶಕ್ಕೆ ತೆಗೆದ ಯುವಕ ಪೊಲೀಸ್ ಠಾಣೆಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ವಯನಾಡು: ಪ್ರಿಯತಮೆ ಜೊತೆ ಪೊಲೀಸರು ವಶಕ್ಕೆ ತೆಗೆದುಕೊಂಡ ಯುವಕ ಬಳಿಕ ಪೊಲೀಸ್ ಠಾಣೆಯ ಶೌಚಾಲ ಯದೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವಯನಾಡು ಅಂಬಲವಯಲ್ ನಿವಾಸಿ ಗೋಕುಲ್ (26) ಸಾವನ್ನಪ್ಪಿದ ಯುವಕ.  ಮಾರ್ಚ್ 26ರಂದು ಕಲ್ಪೆಟ್ಟ ನಿವಾಸಿಯಾಗಿರುವ ಯುವತಿಯೋರ್ವೆ ನಾಪತ್ತೆಯಾ ಗಿದ್ದಳು. ಆ ಬಗ್ಗೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ನಡೆಸಿದ ಶೋಧ ಕಾರ್ಯಾಚರ ಣೆಯಲ್ಲಿ ಆ ಯುವತಿಯನ್ನು ಕಲ್ಲಿಕೋಟೆಯಿಂದ ಪತ್ತೆಹಚ್ಚಿದ್ದರು. ಆಗ ಆಕೆಯ  ಪ್ರಿಯತಮನಾದ ಗೋಕುಲ್‌ನನ್ನೂ ಪೊಲೀಸರು ವಶಕ್ಕೆ  ತೆಗೆದುಕೊಂಡು ಇಬ್ಬರನ್ನು ಪೊಲೀಸ್ …