ಕುಟುಂಬ ಆದಾಯ ಎರಡು ಲಕ್ಷ ರೂ. ಮೀರಿದಲ್ಲಿ ಆಶ್ರಿತ ನೇಮಕಾತಿ ಇಲ್ಲ

ತಿರುವನಂತಪುರ: ವಾರ್ಷಿಕ ಕುಟುಂಬ ಆದಾಯ ಎಂಟು ಲಕ್ಷ ರೂ. ಮೀರಿದಲ್ಲಿ ಅಂತಹ ಕುಟುಂಬ ಸದಸ್ಯರಿಗೆ ಆಶ್ರಿತ ನೇಮಕಾತಿ ನೀಡದಿರುವ ರೀತಿಯಲ್ಲಿ ಆಶ್ರಿತ ನೇಮಕಾತಿ ವ್ಯವಸ್ಥೆಯಲ್ಲಿ ಅಗತ್ಯದ ಬದಲಾವಣೆ ತರಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸರಕಾರಿ ಸಿಬ್ಬಂದಿಗಳು ನಿವೃತ್ತಿ ಸಮಯದೊಳಗಾಗಿ ಸಾವನ್ನಪ್ಪಿದಲ್ಲಿ ಅವರ ಕುಟುಂಬದ ೧೩ ವರ್ಷಕ್ಕಿಂತ ಮೇಲ್ಪಟ್ಟ ಯಾವುದಾದರೊಂದು ಸದಸ್ಯರಿಗೆ ಸರಕಾರಿ ಹುದ್ದೆ ನೀಡುವ ಆಶ್ರಿತ ನೇಮಕಾತಿ ಸಂಪ್ರದಾಯ ಈಗ ರಾಜ್ಯದಲ್ಲಿದೆ. ಆದರೆ ಅನುದಾನಿತ ಸಂಸ್ಥೆಗಳಲ್ಲಿ ಇಂತಹ ಸವಲತ್ತು ಇಲ್ಲ. ವಿವಾಹಿತರಾದ ಸರಕಾರಿ  ಸಿಬ್ಬಂದಿಗಳು …

ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಕೆ

ತಿರುವನಂತಪುರ: ರಾಜ್ಯದಲ್ಲಿ ಎಚ್ಐವಿ (ಏಡ್ಸ್) ಸೋಂಕಿತರ ಸಂಖ್ಯೆಯಲ್ಲಿ ಪ್ರತೀ ವರ್ಷ ಇಳಿಕೆಯಾಗುತ್ತಿರುವುದಾಗಿ ರಾಜ್ಯ ಆರೋಗ್ಯ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತಿವೆ.2006ರಲ್ಲಿ ರಾಜ್ಯದಲ್ಲಿ 3972 ಎಚ್ಐವಿ ಸೋಂಕಿತರಿದ್ದರು. ಇದು ವರ್ಷವೊಂದರಲ್ಲಿ ದಾಖಲಿಸಲಾದ ಎಚ್ಐವಿ ಸೋಂಕಿತರ ಗರಿಷ್ಠ ಸಂಖ್ಯೆಯಾಗಿತ್ತು. ಅದು ವರ್ಷವೊಂದರಲ್ಲಿ ದಾಖಲಿಸಲಾದ ಎಚ್ಐವಿ ಸೋಂಕಿತರ ಗರಿಷ್ಠ ಸಂಖ್ಯೆಯಾಗಿತ್ತು. ಅಂದು ರಾಜ್ಯದಲ್ಲಿ ಒಟ್ಟಾರೆಯಾಗಿ 1.5 ಲಕ್ಷ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. 2012ರ ಬಳಿಕ ಎಚ್ಐವಿ ಪೋಸಿಟಿವ್ ಸೋಂಕಿತರ ಸಂಖ್ಯೆ ವರ್ಷಕ್ಕೆ 200ಕ್ಕಿಂತಲೂ ಕೆಳಗೆ ಇಳಿಯತೊಡಗಿದೆ ಎಂದು ಆರೋಗ್ಯ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತಿವೆ.ರಾಜ್ಯದಲ್ಲಿ ಪ್ರತಿ …

ಸಂಪತ್ತಿನ ಅಧಿದೇವತೆ ರುದ್ರನ ಆರಾಧನೆ ಸಮೃದ್ಧಿಗೆ ಕಾರಣವಾಗುತ್ತದೆ- ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಮಧೂರು: ಭಗವಂತನ ಭಕ್ತರಲ್ಲಿ ಐಹಿಕ ಮತ್ತು ಪಾರಮಾರ್ಥಿಕ ಎಂಬೆ ರಡಕ್ಕೂ ಅನುಗ್ರಹ ಬೇಕು. ಸಂಪತ್ತಿನ ಅಧಿದೇವತೆಯಾದ ರುದ್ರನ ಆರಾಧನೆ ಸಮೃದ್ಧಿಗೆ ಕಾರಣವಾಗುತ್ತದೆ. ಜೊತೆಗೆ ಸಾರ್ಥಕ್ಯ ಸಾಯುಜ್ಯಕ್ಕೂ ಅವನ ಅನುಗ್ರಹ ಬೇಕು ಎಂದು ಉಡುಪಿ  ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ನುಡಿದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಯಾವ …

ವಿವಿಧ ಕಡೆಗಳಲ್ಲಿ ಮುಸ್ಲಿಂ ಬಾಂಧವರಿಂದ ಈದುಲ್ ಫಿತ್ರ್ ಆಚರಣೆ

ಮಂಜೇಶ್ವರ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ತೂಮಿನಾಡು, ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ, ಕಾಸರಗೋಡು ಸಹಿತ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಜು ನೆರವೇರಿಸಲಾಯಿತು. ಅರ್ಹರಿಗೆ ಫಿತ್ರ್ ಝಕಾತ್ ನೀಡಿ ಹೊಸಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕುಂಜತ್ತೂರು ಮಸ್ಜೀದಿನ್ನೂರು ಮಸೀದಿಯಲ್ಲಿ ಉಸ್ತಾದ್ ಸಮೀರ್ ಅನ್ಸಾರಿ, ದಾರುಸ್ಸಲಾಂ ಸಲಫಿ ಮಸೀದಿ ಈದ್ಗದಲ್ಲಿ ಮುಹಮ್ಮದಲಿ ಸಲಫಿ ನಮಾಜಿಗೆ ನೇತೃತ್ವ ನೀಡಿದರು. ಅದೇ ರೀತಿ …

ಧರ್ಮದಲ್ಲಿ ರಾಜಕೀಯ ಮಾಡಿದರೆ ಸಹಿಸುವುದಿಲ್ಲ-ಬಿಜೆಪಿ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದಂ ಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಅವರು ದೇಶದ ಪ್ರಧಾನಮಂತ್ರಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿರುವುದು ಅತ್ಯಂತ ದೌರ್ಭಾಗಕರವೆಂದು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ತಿಳಿಸಿದೆ. ಮಹಾಬಲೇಶ್ವರ ಭಟ್‌ಅವರಿಗೆ  ರಾಜಕೀಯ ಮಾಡುವ ಬಯಕೆಯಿದ್ದರೆ ಧರ್ಮದ ವೇದಿಕೆ ಬಿಟ್ಟು  ನೇರ ರಾಜಕೀಯದ ವೇದಿಕೆಗೆ ಬಂದಲ್ಲಿ ಕಾಸರಗೋಡಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಸಿದ್ಧವಿದೆ. ಕೇಂದ್ರ ಸರಕಾರದ ಧಾರ್ಮಿಕ ಟೂರಿಸಂ ಅಡಿಯಲ್ಲಿ …

ಕಾಸರಗೋಡಿನಿಂದ ಎಂಡಿಎಂಎ ಸಹಿತ ತಿರುವನಂತಪುರಕ್ಕೆ ತೆರಳಿದ್ದ ಯುವಕ ಸೆರೆ

ತಿರುವನಂತಪುರ: ತಿರುವನಂತಪು ರದಲ್ಲಿ ಎಂಡಿಎಂಎ ಸಹಿತ ಸಿನಿಮಾ ಅಸಿಸ್ಟೆಂಟ್ ಡೈರೆಕ್ಟರ್ ಸೆರೆಯಾಗಿದ್ದಾನೆ. ವೆಳಿಂಞಂ ಟೌನ್‌ಶಿಪ್ ಕಾಲನಿಯಲ್ಲಿ ವಾಸಿಸುವ ಜಸಿಂ (35)ನನ್ನು ಶ್ಯಾಡೋ ಪೊಲೀಸರು ಹಾಗೂ ಕರಮನ ಪೊಲೀಸರು ಸೇರಿ ಬಂಧಿಸಿದ್ದಾರೆ. ಈತನಿಂದ 2.8 ಗ್ರಾಂ ಎಂಡಿಎಂಎ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದಿತ್ಯವಾರ ಬೆಳಿಗ್ಗೆ ಎಂಡಿಎಂಎ ಸಹಿತ ಕಾಸರಗೋಡಿನಿಂದ ರೈಲಿನಲ್ಲಿ ತಂಬಾನೂರಿಗೆ ತಲುಪಿದ ಜಸೀಂ ಬಸ್‌ನಲ್ಲಿ ಕೈಮನತ್ ಎಂಬಲ್ಲಿಗೆ ತಲುಪಿದ್ದಾನೆ. ಶ್ಯಾಡೋ ತಂಡಕ್ಕೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಈತನನ್ನು ಸೆರೆ ಹಿಡಿದಿದ್ದಾರೆ. ಆರೋಪಿಯನ್ನು ನ್ಯಾ ಯಾಲಯಕ್ಕೆ …

ಆರ್ಯ ಯಾನೆ ಮರಾಠ ಸಮಾಜದ ವತಿಯಿಂದ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಣೆ

ಮಧೂರು: ಆರ್ಯ ಮರಾಠ ಸಮಾಜದ 39 ದೇವರ ಮನೆಗಳ ಒಕ್ಕೂಟದಿಂದ ಮಧೂರು ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಆಕರ್ಷಕ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು, ವಿವಿಧ ಭಜನಾ ತಂಡಗಳು ಭಾಗವಹಿಸಿವೆ. ಆರ್ಯ ಯಾನೆ ಮರಾಠ ಸಮುದಾಯದ ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಅಧ್ಯಕ್ಷರಾದ ಮೋಹನ ರಾವ್ ಬೋಂಸ್ಲೆ, ಸಮುದಾಯ ಸಂಘದ ಅಧ್ಯಕ್ಷ ಗಿರಿಧರ್ ರಾವ್ ಚೊಟ್ಟೆ, ಪದಾಧಿಕಾರಿಗಳು, ದೇವರ ಮನೆಗಳ ಪದಾಧಿಕಾರಿಗಳು, ಒಕ್ಕೂಟದ ಸಂಚಾಲಕ ಪ್ರದೀಪ್‌ಚಂದ್ರ, ಉಪಸಂಚಾಲಕ ಪ್ರಮೋದ್ ಕುಮಾರ್, ಸಮಾಜ ಬಾಂಧವರು ಭಾಗವಹಿಸಿದರು.

ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಅರಣಿಮಥನದ ಮೂಲಕ ಅಗ್ನಿಜನನ; ಕ್ಷೇತ್ರಕ್ಕೆ ಭಕ್ತಜನ ಪ್ರವಾಹ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಅಷ್ಟಬಂಧ ನವೀಕರಣ ಬ್ರಹ್ಮಕಲಶ ಉತ್ಸವದಂಗವಾಗಿ ಅಗ್ನಿ ಜನನ ನಿನ್ನೆ ನಡೆಯಿತು. ದೇರೆಬೈಲು ಶಿವಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲಿ ಗರ್ಭಗುಡಿ ಮುಂಭಾಗ ನಮಸ್ಕಾರ ಮಂಟಪದಲ್ಲಿ ಪ್ರತ್ಯೇಕ ಪ್ರಾರ್ಥನೆ ಬಳಿಕ ಅರಣಿಮಥನದ ಮೂಲಕ ಅಗ್ನಿ ಜನನ ನಡೆಸಲಾಗಿದೆ. ಈ ಅಗ್ನಿಯನ್ನು ಸಮರ್ಪಿಸಿ ಸಂಜೀವಿನಿ ಮಹಾ ಮೃತ್ಯುಂಜಯ ಯಾಗ ನಡೆಸಲಾಯಿತು. ಆ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳಾದ ಬಿಂಬಶುದ್ಧಿ, ಪ್ರಾಯಶ್ಚಿತ ಹೋಮ, ದುರ್ಗಾ ನಮಸ್ಕಾರ ಪೂಜೆ, ಮಂಟಪ ಸಂಸ್ಕಾರ, ಅಂಕುರ ಪೂಜೆ ನಡೆಯಿತು.  …

ಜೋಡುಕಲ್ಲಿನಲ್ಲಿ ಬೈಕ್‌ಗೆ ಥಾರ್ ಜೀಪು ಢಿಕ್ಕಿ: ಯುವಕ ಮೃತ್ಯು

ಉಪ್ಪಳ: ಪೈವಳಿಕೆ ಬಳಿ ಜೋಡುಕಲ್ಲಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಕರ್ನಾಟಕದ ಶಿವಮೊಗ್ಗ ನಿವಾಸಿಯೂ, ಉಪ್ಪಳ ಪ್ರತಾಪನಗರ ಪುಳಿಕುತ್ತಿಯಲ್ಲಿ ವಾಸಿಸುವ ಅಬ್ದುಲ್ ಗಫಾರ್ ಬಯಾಸಾಗಿ (35) ಎಂಬವರು  ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಅಬ್ದುಲ್ ಗಫಾರ್  ಬೈಕ್‌ನಲ್ಲಿ ಪೈವಳಿಕೆ ಭಾಗದಿಂದ  ಕೈಕಂಬ ಭಾಗಕ್ಕೆ ತೆರಳುತ್ತಿದ್ದಾಗ  ಎದುರಿನಿಂದ ಬಂದ ಥಾರ್ ಜೀಪ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ ಅಬ್ದುಲ್ ಗಫಾರ್‌ರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ …

ಮತ್ತೆ ಚಿರತೆ ಪ್ರತ್ಯಕ್ಷ: ಜನರು ಭೀತಿಯಲ್ಲಿ

ಕಾಸರಗೋಡು: ಜಿಲ್ಲೆಯಲ್ಲಿ ಎರಡು ಚಿರತೆಗಳು ಸತ್ತು ಎರಡು ಚಿರತೆಗಳು ಬೋನಿನಲ್ಲಿ ಸಿಲುಕಿದ ಬೆನ್ನಲ್ಲೇ ಇನ್ನೊಂದು ಚಿರತೆ ಪ್ರತ್ಯಕ್ಷಗೊಂಡಿದ್ದು, ಇದು ಜನರ ಭೀತಿಯನ್ನು ಇನ್ನೂ ಮುಂದುವರಿಸುವಂತೆ ಮಾಡತೊಡಗಿದೆ. ಅಂಬಲತ್ತರ ಒಡೆಯಂಚಾಲ್‌ನ ಕ್ರೈಸ್ತ ಭಗಿನಿಯರ ಕಾನ್ವೆಂಟ್‌ನ ಆವರಣದಲ್ಲಿ ನಿನ್ನೆ ಅಪರಾಹ್ನ ೩ ಗಂಟೆ ವೇಳೆಗೆ ಚಿರತೆಯೊಂದು ನಡೆದು ಹೋಗುತ್ತಿರುವುದನ್ನು  ಭಗಿನಿಯರು ಕಂಡಿದ್ದಾರೆ. ಚಿರತೆಯನ್ನು ಕಂಡಾಕ್ಷಣ ಅವರು ಅಲ್ಲಿಂದ ಒಳಗೆ ಓಡಿ ಬಾಗಿಲು ಜಡಿದಿದ್ದಾರೆ. ನಂತರ ಫೋನ್ ಮೂಲಕ ನೆರೆಮನೆಯವರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಯವರು ಆಗಮಿಸಿ ಆ …