ಕಾಸರಗೋಡು ರೈಲು ನಿಲ್ದಾಣದಿಂದ ಇನ್ನು ಉಚಿತ ಸೈಕಲ್ ಸವಾರಿ

ಕಾಸರಗೋಡು: ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ರೈಲು ನಿಲ್ದಾಣದಿಂದ ಸೈಕಲ್‌ನಲ್ಲಿ ಉಚಿತವಾಗಿ ಕೆಎಸ್‌ಆರ್‌ಟಿಸಿ ಡಿಪ್ಪೋ ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣಕ್ಕೆ ತಲುಪಬಹುದು. ಚಿಕ್ಕಾಸು ಖರ್ಚಿಲ್ಲದೆ ಈ ಪ್ರಯಾಣ ಮಾಡಬಹುದು. ಎಲ್ಲಿ ಪ್ರಯಾಣ ಕೊನೆಗೊಳಿಸುತ್ತಾರೋ ಅಲ್ಲಿ ಸೈಕಲ್ ಇರಿಸಿ ಪ್ರಯಾಣಿಕನಿಗೆ ತೆರಳಬಹುದಾಗಿದೆ. ಮತ್ತೆ ಹಿಂತಿರುಗುವಾಗ ಆ ಸೈಕಲನ್ನು ಉಪಯೋಗಿಸಬಹುದು. ಕಾಸರಗೋಡು ನಗರಸಭೆ ಈ ಸೌಕರ್ಯವನ್ನು ಏರ್ಪಡಿಸುತ್ತಿದೆ. ಈ ಬಾರಿಯ ಮುಂಗಡಪತ್ರದಲ್ಲಿ ಕಾಸರಗೋಡು ನಗರಸಭೆ ಇದಕ್ಕಾಗಿ ೬ ಲಕ್ಷ ರೂ. ಮೀಸಲಿರಿಸಿದೆ. ಸವಾರರಿಗಾಗಿ ಮೊದಲ ಹಂತದಲ್ಲಿ 30 ಸೈಕಲ್‌ಗಳನ್ನು ಖರೀದಿಸಲಾಗುವುದು. …

ಕೊಡಗರ ಕಪ್ಪು ಹಣ ಪ್ರಕರಣ: ಎನ್‌ಫೋರ್ಸ್‌ಮೆಂಟ್ ತನಿಖಾ ತಂಡದ ಕ್ರಮದ ವಿರುದ್ಧ ಹೊಸಂಗಡಿಯಲ್ಲಿ ಸಿಪಿಎಂ ಪ್ರತಿಭಟನೆ

ಮಂಜೇಶ್ವರ:  ಕೊಡಗರ ಕಪ್ಪು ಹಣ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ತನಿಖೆ ಕೈಗೊಳ್ಳದ ಬಗ್ಗೆ ನ್ಯಾಯಾಲಯ ಟೀಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಬಿಜೆಪಿ ನಾಯಕರನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಿಪಿಎಂ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ೨೦೨೧ರಲ್ಲಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ರನ್ನು ವಿಚಾರಣೆಗೊಳಪಡಿಸಲಾಗಿತ್ತು. ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಕೆ. ಕಮಲಾಕ್ಷ, ಡಿ. ಕಮಲಾಕ್ಷ, ಅಶೋಕ ಭಂಡಾರಿ, ಪ್ರಶಾಂತ್ ಕನಿಲ, ಕೆ. ಕರುಣಾಕರ ಶೆಟ್ಟಿ ನೇತೃತ್ವ ನೀಡಿದರು.

ಉಪ್ಪಳದಲ್ಲಿ ಮದ್ರಸ ಶಿಕ್ಷಕರಿಗೆ ಕಿಟ್ ವಿತರಣೆ, ಪ್ರಾರ್ಥನಾ ಸದಸ್

ಉಪ್ಪಳ: ಸಮಸ್ತ ಕೇರಳ ಮದ್ರಸ್ ಮೆನೇಜ್‌ಮೆಂಟ್ ಅಸೋಸಿಯೇಶನ್ ಉಪ್ಪಳ ರೇಂಜ್ ಸಮಿತಿ ವ್ಯಾಪ್ತಿಯ ಮದ್ರಸ ಮುಅಲ್ಲಿಂರಿಗೆ ರಂಜಾನ್ ಸ್ನೇಹ ಉಡುಗೊರೆ ವಿತರಣೆ ಹಾಗೂ ಪ್ರಾರ್ಥನಾ ಸದಸ್ ನಡೆಯಿತು. ಸಿರಾಜುದ್ದೀನ್ ಫೈಸಿ ಪೇರಾಲ್ ಉದ್ಘಾಟಿಸಿದರು. ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದರು. ಮೂಫಾತಿಶ್ ಅಬ್ದುಲ್ ಖಾದರ್ ಫೈಸಿ ಪಳ್ಳಂಗೋಡು ಪ್ರಾರ್ಥನೆ ನಡೆಸಿದರು. ಇಸ್ಮಾಯಿಲ್ ಮೂಸ್ಲಿಯರ್ ಪ್ರಸ್ತಾಪಿಸಿದರು. ಹಲವರು ಭಾಗವಹಿಸಿದರು.

ವಿದ್ಯುತ್ ವಿತರಣೆ ಆಂಶಿಕ ಮೊಟಕು

ಕಾಸರಗೋಡು: 110 ಕೆ.ವಿ. ಮೈಲಾಟಿ-ವಿದ್ಯಾನಗರ ಫ್ರೀಡರ್‌ನಂಗವಾಗಿರುವ ಕಾಮಗಾರಿಗಳು ನಡೆಸುವುದರ ಹಿನ್ನೆಲೆಯಲ್ಲಿ ಇಂದಿನಿಂದ ಎಪ್ರಿಲ್ 10ರ ವರೆಗೆ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ 110 ಕೆ.ವಿ ಸಬ್ ಸ್ಟೇಶನ್‌ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33 ಕೆ.ವಿ. ಸಬ್‌ಸ್ಟೇಶನ್‌ಗಳಾದ ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಎಂಬೆಡೆಗಳಿಗಿರುವ ವಿದ್ಯುತ್ ವಿತರಣೆ ಆಂಶಿಕವಾಗಿ ಮೊಟಕುಗೊಳ್ಳಲಿದೆ. ಈ ಬಗ್ಗೆ ಮೈಲಾಟಿ ಲೈನ್ ಮೈಂಟನನ್ಸ್ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ಸ್ವಂತ ಕಟ್ಟಡವಿರುವ ಅಂಗನವಾಡಿಗಳಲ್ಲಿ ಶೀಥಲೀಕರಣ: ನಗರಸಭೆ ತೀರ್ಮಾನ

ಕಾಸರಗೋಡು: ನಗರಸಭೆಯಲ್ಲಿ ಸ್ವಂತ ಕಟ್ಟಡವಿರುವ ಅಂಗನವಾಡಿಗಳನ್ನು ಶೀಥಲೀಕರಣಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಕಾಸರಗೋಡು ನಗರಸಭೆಯ ಬಜೆಟ್‌ನಲ್ಲಿ ಇದಕ್ಕಾಗಿ 12 ಲಕ್ಷ ರೂ. ಮೀಸಲಿಡಲಾಗಿದೆ. ಮುಂದಿನ ಎಪ್ರಿಲ್ ಮುಂಚಿತವಾಗಿ ಯೋಜನೆ ಜಾರಿಗೆ ಬರಲಿದೆ. ಅವಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾರೀ ಬಿಸಿಯನ್ನು ಸಹಿಸಿಕೊಂಡು ಮಕ್ಕಳು ಸಂಕಷ್ಟಪಡುವುದನ್ನು ತಪ್ಪಿಸಲು ಹಾಗೂ ಅವರ ಆರೋಗ್ಯದ ಬಗ್ಗೆ ಗಮನಹರಿಸಿ ಈ ತೀರ್ಮಾನ ಕೈಗೊಂಡಿರುವುದಾಗಿ ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ. 31 ಅಂಗನವಾಡಿಗಳಿಗೆ ನಗರಸಭೆಯಲ್ಲಿ ಸ್ವಂತ ಕಟ್ಟಡ ಇದ್ದು, ಇದರಲ್ಲಿ ಈಗ ಯಾವುದೇ ಅಂಗನವಾಡಿಯಲ್ಲಿಯೂ ಎ.ಸಿ. …

ಗಡಿ ಭಾಗಗಳಲ್ಲಿ ಮಲೆಯಾಳೀಕರಣಗೊಳ್ಳುತ್ತಿರುವ ಕನ್ನಡ ಸ್ಥಳ ನಾಮಗಳು: ವರದಿ ನೀಡಲು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಸೂಚನೆ

ಬೆಂಗಳೂರು: ಹೊರನಾಡ ಕನ್ನಡಿಗರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನಿನ್ನೆ ಕರ್ನಾಟಕ ವಿಧಾನಸೌಧದಲ್ಲಿ ಚರ್ಚೆ ನಡೆಸಲಾಯಿತು. ಕೇರಳದಲ್ಲಿ ಕೇರಳದ ಗಡಿಭಾಗದಲ್ಲಿ ಕನ್ನಡ ಪ್ರದೇಶಗಳ ಹೆಸರುಗಳನ್ನು ಮಲೆಯಾಳೀಕರಣಗೊಳಿಸುತ್ತಿರುವ ಬಗ್ಗೆ ಕಾನೂನಾತ್ಮಕ ಅವಕಾಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಭೆಯಲ್ಲಿ ಸರಕಾರದ ಮುಖ್ಯಮಂತ್ರಿ ಕಾರ್ಯದರ್ಶಿ ಶಾಲಿನಿ ರಜಿನೀಶ್ ಅವರು ಸಂಸದೀಯ ವ್ಯವಹಾರಗಳ ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಒಂದೊಂದು ಇಲಾಖೆಗೆ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಿ ಗಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು …

ಒಂದನೇ ತರಗತಿ ಪ್ರವೇಶ ವಯೋಮಿತಿ ಇನ್ನು ಆರು ವರ್ಷ

ತಿರುವನಂತಪುರ: ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶ ಕ್ಕಿರುವ ಕನಿಷ್ಠ ವಯೋಮಿತಿಯನ್ನು ಆರು ವರ್ಷವಾಗಿ ರಾಜ್ಯ ಸರಕಾರ ನಿಗದಿಪಡಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಈ ಹೊಸ ಸಂಪ್ರದಾ ಯವನ್ನು ಜ್ಯಾರಿಗೊಳಿಲಾಗುವು ದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ವೈಜ್ಞಾನಿಕ ಅಧ್ಯಯನಗಳು ಹಾಗೂ ಇತರ ಸಲಹೆಗಳ ಪ್ರಕಾರ ಔಪಚಾರಿಕ ಶಿಕ್ಷಣಕ್ಕೆ ಮಕ್ಕಳನ್ನು ಸಜ್ಜುಗೊಳಿಸುವ ಕನಿಷ್ಠ ವಯೋಮಿತಿ ಆರು ವರ್ಷ ವಾಗಿದೆ. ಇದರಂತೆ 2026 ಜೂನ್ ತಿಂಗಳಲ್ಲಿ ಆರು ವರ್ಷ ಪೂರ್ತಿಯಾಗುವ ಮಕ್ಕಳಿಗೆ 2026-27ನೇ ಶೈಕ್ಷಣಿಕ ವರ್ಷದಿಂದ …

ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ಬೆಳೆಸಿದ ಬೆಳ್ಳೂರು ಕುಟುಂಬಾರೋಗ್ಯ ಕೇಂದ್ರ ನೌಕರರು

ಬೆಳ್ಳೂರು: ಎಂಡೋಸಲ್ಫಾನ್ ವಿಷಮಳೆಸುರಿದ ಪ್ರದೇಶದಲ್ಲಿ ಸಂತ್ರಸ್ತರಿಗೆ ಔಷಧಗಳ ಜೊತೆಗೆ  ಜೈವಿಕ ತರಕಾರಿ ನೀಡುವ ಉದ್ದೇಶದೊಂದಿಗೆ ಕುಟುಂಬ ಆರೋಗ್ಯ ಕೇಂದ್ರ ನೌಕರರ ಜೊತೆಗೆ ಪಂಚಾಯತ್ ಆಡಳಿತ ಸಮಿತಿ ಮತ್ತು ಇತರ ಸರಕಾರಿ ಇಲಾಖೆಗಳು ಜಂಟಿಯಾಗಿ ಆರಂಭಿಸಿದ ಬಂಜರು ಭೂಮಿಯಲ್ಲಿ ತರಕಾರಿ ಕೃಷಿ ಗಮನಸೆಳೆದಿದೆ. ಬೆಳ್ಳೂರು ಕುಟುಂಬಾರೋಗ್ಯ ಕೇಂದ್ರದ ನೌಕರರು ಹಾಗೂ ಪಂಚಾಯತ್‌ನ ಕೃಷಿ ಇಲಾಖೆ ಮತ್ತು ಇತರ ಸರಕಾರಿ ಇಲಾಖೆಗಳ ಸಹಕಾರದೊಂದಿಗೆ  ವಿಷರಹಿತ ತರಕಾರಿ ಬೆಳೆ ಬೆಳೆಸಲಾಗಿದೆ. ಬಡ ರೋಗಿಗಳಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ವಿಷ ರಹಿತ ತರಕಾರಿ ಉಚಿತವಾಗಿ …

ಯೋಧರಿಗಾಗಿ ಮೀಸಲಿಟ್ಟ  ಸ್ಥಳವನ್ನು ನಕಲಿ ಪಟ್ಟೆ ತಯಾರಿಸಿ ಮಾರಾಟ: ಮಾಹಿತಿ ನೀಡಿದ ನಿವೃತ್ತ ವಿಲ್ಲೇಜ್ ಆಫೀಸರ್‌ರನ್ನು ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲೆತ್ನ

ಕಾಸರಗೋಡು: ಮಂಜೇಶ್ವರ ತಾಲೂಕಿನ ಕಯ್ಯಾರು ವಿಲ್ಲೇಜ್ನಲ್ಲಿ ನಿವೃತ್ತ ಯೋಧರಿಗಾಗಿ ಮೀಸಲಿರಿಸಿದ 2 ಎಕರೆ 2ಸೆಂಟ್ ಸ್ಥಳಕ್ಕೆ ನಕಲಿ ಪಟ್ಟಾ ತಯಾರಿಸಿ ಲಪಟಾಯಿಸಿದ್ದು, 41 ವರ್ಷಗಳ ಬಳಿಕ ಅದಕ್ಕೆ ತಂಡಪ್ಪೇರ್ ಸರ್ಟಿಫಿಕೇಟ್ ತಯಾರಿಸಿ ತೆರಿಗೆ ಪಾವತಿಸಿದ ಬಳಿಕ ಮತ್ತೆ ವ್ಯಕ್ತಿಪಲ್ಲಟ ನಡೆಸಿ ಮಾರಾಟಗೈಯ್ಯಲಾಗಿದೆ.ಸರಕಾರಿ ಭೂಮಿಯನ್ನು ಈ ರೀತಿಯಲ್ಲಿ ಲಪಟಾಯಿಸಿ ಮಾರಾಟ ನಡೆಸುವ ಭಾರೀ ಮಾಫಿಯಾ ತಂಡ ಈಗಲೂ ಇದೆಯೆಂದು ಈ ಬಗ್ಗೆ ವಿಜಿಲೆನ್ಸ್ ಡೈರೆಕ್ಟರ್ಗೆ, ಲ್ಯಾಂಡ್ ರೆವಿನ್ಯೂ ಕಮಿಶನರ್ಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ ನಿವೃತ್ತ ವಿಲ್ಲೇಜ್ ಆಫೀಸರ್ …

ಶಿರಿಯ ಬಳಿ ಆಟೋ ರಿಕ್ಷಾ-ಕಾರು ಢಿಕ್ಕಿ ಹೊಡೆದು 8 ಮಂದಿಗೆ ಗಾಯ

ಕುಂಬಳೆ: ಕುಂಬಳೆ-ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಿಯ ಮುಟ್ಟ ಬಳಿ ಆಟೋ ರಿಕ್ಷಾ ಹಾಗೂ ಕಾರು ಢಿಕ್ಕಿ ಹೊಡೆದು ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಆಟೋ ರಿಕ್ಷಾ ಪೂರ್ಣವಾಗಿ ಹಾನಿಗೊಂಡಿದೆ. ಆಟೋ ರಿಕ್ಷಾ ಪ್ರಯಾಣಿಕರಾದ ಶಿರಿಯಾದ ಶುಹೈಬ (30), ಮಕ್ಕಳಾದ ಜನ್ನ (5), ಅಯಾನ್ (3) ಎಂಬಿವರು ಹಾಗೂ ಶುಹೈಬ್ (21) ಎಂಬವರನ್ನು ಮಂಗಳೂರಿನ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚೆರ್ವತ್ತೂರು ನಿವಾಸಿಗಳಾದ ವಿಲಾಸಿನಿ (59), ಉಣ್ಣಿಕೃಷ್ಣನ್ (63), ಸುರೇಶ್ಬಾಬು (43), …