ಪೆರಿಂಗಡಿಯಲ್ಲಿ ಮುಂದುವರಿಯುತ್ತಿರುವ ಕಡಲ್ಕೊರೆತ: ಹಲವು ವಿದ್ಯುತ್ ಕಂಬಗಳು ಸಮುದ್ರ ಪಾಲು; ಸಂಕಷ್ಟದಲ್ಲಿ ಸ್ಥಳೀಯರು
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಡಲ್ಕೊರೆತ ತೀವ್ರ ರೀತಿಯಲ್ಲಿ ಮುಂದುವರಿಯುತ್ತಿದ್ದು, ನಿನ್ನೆ ಸುಮಾರು ೫ರಷ್ಟು ವಿದ್ಯುತ್ ಕಂಬಗಳು ಸಮುದ್ರ ಪಾಲಾಗಿವೆ. 20ರಷ್ಟು ಕಂಬಗಳು ಇನ್ನೂ ಅಪಾಯದಂಚಿನಲ್ಲಿದೆ. ಈ ಪರಿಸರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಸುಮಾರು ೫೦ರಷ್ಟು ಮನೆಗಳು ಅಪಾಯದಂಚಿನಲ್ಲಿವೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವಿಚ್ಛೇದಿಸಲಾಗಿದೆ. ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಪೆರಿಂಗಡಿ ಮುಟ್ಟಂ ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ. ನಿನ್ನೆ ಸಂಜೆ ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್, ಮಂಗಲ್ಪಾಡಿ ಪಂಚಾಯತ್ ಅಧಿಕಾರಿಗಳು, ವಿದ್ಯುತ್ ಇಲಾಖೆ ಅಧಿಕಾರಿಗಳು …