ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಗೆ ಎಂಟು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ಆರೋಪಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಎಂಟು ವರ್ಷ ಕಠಿಣ ಸಜೆ ಹಾಗೂ 50,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಾಲೋ ಅದಿರಾಂಬು ಕಾಲ ನಿಯ ಪಾಪಿನ್ ವೀಟಿಲ್ ಅನೀಶ್ (36) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಜೂನ್ …

ಕಲ್ಯಾಣ ಪಿಂಚಣಿ ವಂಚನೆ: ಕಂದಾಯ ಇಲಾಖೆಯ 16 ಸಿಬ್ಬಂದಿಗಳ ಅಮಾನತು ಕ್ರಮ ಹಿಂತೆಗೆತ

ತಿರುವನಂತಪುರ: ಬಡ ಕುಟುಂಬದ ವಯೋಜನರಿಗಾಗಿ ವಿತರಿಸಲಾಗುತ್ತಿರುವ ಸಾಮಾಜಿಕ ಪಿಂಚಣಿಯನ್ನು ಅನಧಿಕೃತವಾಗಿ  ಪಡೆದ ಆರೋಪದಂತೆ ಸರಕಾರಿ ಸೇವೆಯಿಂದ ಅಮಾನತುಗೊಳಿ ಸಲ್ಪಟ್ಟ ರಾಜ್ಯ ಕಂದಾಯ ಸರ್ವೇ ವಿಭಾಗದ ಸಿಬ್ಬಂದಿಗಳ ಮೇಲಿನ ಅಮಾನತು  ಕ್ರಮವನ್ನು  ಹಿಂತೆಗೆದು ಕೊಂಡು ಅವರನ್ನು ಮತ್ತೆ ಸರಕಾರಿ ಸೇವೆಗೆ ಸೇರ್ಪಡೆಗೊಳಿಸುವ ಕ್ರಮ ಸರಕಾರ ಆರಂಭಿಸಿದೆ.  ಅನಧಿಕೃತ ವಾಗಿ ಕಲ್ಯಾಣ ಪಿಂಚಣಿ ಪಡೆದ ಆರೋಪದಂತೆ ಕಂದಾಯ ಇಲಾಖೆಯ 38 ಸಿಬ್ಬಂದಿಗಳನ್ನು ಇತ್ತೀಚೆಗೆ ಸೇವೆಯಿಂದ ಅಮಾನತು ಗೊಳಿಸಲಾಗಿತ್ತು. ಆ ಪೈಕಿ 16 ಮಂದಿ ಯ ಅಮಾನತು ಕ್ರಮವನ್ನು ಕಂದಾ ಯ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸಂಚಾರ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಕಾಣಲು ಒತ್ತಾಯ

ಕಾಸರಗೋಡು: ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಷಟ್ಪಥವನ್ನು ಆಂಶಿಕವಾಗಿ ತೆರೆದುಕೊಟ್ಟಿರುವುದರಿಂದ ಕೆಎಸ್ ಆರ್‌ಟಿಸಿ ಹಾಗೂ ಖಾಸಗಿ ಬಸ್ ಗಳು ಇದೀಗ ಹೆದ್ದಾರಿ ಮೂಲ ಕವೇ ಸಂಚರಿಸುತ್ತಿದೆ. ಇದರಿಂದ ಈ ಬಸ್‌ಗಳಲ್ಲಿ ಬರುವ  ಸರಕಾರಿ ನೌಕ ರರು, ವಿದ್ಯಾರ್ಥಿಗಳು ಮೊದಲಾದ ವರಿಗೆ ಚೆರ್ಕಳದಿಂದ ಬಿಸಿರೋಡ್  ಮಧ್ಯೆಗಿರುವ ನಿಲುಗಡೆ ಸ್ಥಳಗಳಲ್ಲಿ ಇಳಿಯಲೋ, ಹತ್ತಲೋ ಸಾಧವಾ ಗದ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ (ಲಿಮಿಟೆಡ್ ಸ್ಟಾಪ್) ಸಹಿತ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಸಂ ಚರಿಸುವಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ  …

ಕುಂಟಾರು ದೇಗುಲ ಜಾತ್ರೋತ್ಸವ ಮಾ. 29ರಿಂದ

ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಮಾರ್ಚ್ 29ರಿಂದ 31ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.29ರಂದು ಬೆಳಿಗ್ಗೆ 8.30ರಿಂದ ಗಣಪತಿಹೋಮ, ನವಕ, 9ರಿಂದ ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು, 10ರಿಂದ ಶ್ರೀ ಮೂಕಾಂಬಿಕಾ ಭಜನಾ ಸಂಘ ಉಯಿತ್ತಡ್ಕ, 11ಕ್ಕೆ ಹರಿಪ್ರಿಯಾ ಮಹಿಳಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ ಶ್ರೀಕೃಷ್ಣ ಮಹಿಳಾ ಕುಣಿತ ಭಜನಾ ಸಂಘ ಕುಂಟಾರು, 3ರಿಂದ ಗಜಕರ್ಣ ಕುಣಿತ …

ಪ್ರತಾಪನಗರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂ. ಪ್ರತಾಪನಗರದ 7ನೇ ವಾರ್ಡ್ನಲ್ಲಿ ಚರಂಡಿ, ರಸ್ತೆಗಳ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರತಾಪನಗರ ಪುಳಿಕುತ್ತಿ ಮೊಗೇರ ದೈವಸ್ಥಾನ ರಸ್ತೆಯಲ್ಲಿ 322 ಮೀಟರ್ ರಸ್ತೆಗೆ ಸುಮಾರು 5ಲಕ್ಷ ರೂ ವೆಚ್ಚದಲ್ಲಿ ಮರು ಡಾಮರೀಕರಣ, ಬೀಟಿಗದ್ದೆ-ತಿಂಬರದ ಬಯಲು ರಸ್ತೆಯಲ್ಲಿ 96 ಮೀಟರ್ ಕಾಂಕ್ರೀಟ್ ಕಾಮಗಾರಿ ಪೂರ್ತಿ ಗೊಂಡಿದೆ. ಅಲ್ಲದೆ ಗುಳಿಗ ಬನದ ಬಳಿಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಪ್ರತಾಪ ನಗರದಲ್ಲಿ ರಸ್ತೆ ಶೋಚನೀಯ ವಸ್ಥೆಯಿಂದ ಸಂಚಾರಕ್ಕೆ ಸಮಸ್ಯೆ ಯÁಗಿತ್ತು. ಪಂ. ಸದಸ್ಯೆ ಸುಧಾ ಗಣೇಶ್ …

ನಾಡಿನಾದ್ಯಂತ ಮಧೂರು ಕ್ಷೇತ್ರ ಬ್ರಹ್ಮಕಲಶದ ಸಂಭ್ರಮ

ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಕಾರ್ಯಕ್ರಮಗಳು ಇಂದು ಬೆಳಿಗ್ಗೆ ಸಂಭ್ರಮದಿಂದ ಆರಂಭಗೊಂಡಿತು. ಇಂದು ಬೆಳಿಗ್ಗೆ  ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿ ದೇರೆಬೈಲು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ವಾಸ್ತುಶಿಲ್ಪಿ ಶ್ರೀಕೃಷ್ಣ ಪ್ರಸಾದ ಮುನಿಯಂಗಳ ಅವರಿಗೆ ಶಿಲ್ಪಿ ಮರ್ಯಾದೆ, ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀ ದೇವರ ಉಗ್ರಾಣ ಮುಹೂರ್ತ,  ಅನ್ನಸಂತರ್ಪಣೆಯ …

ಪಿಕಪ್ ವ್ಯಾನ್ ಸ್ಕೂಟರ್‌ಗೆ ಢಿಕ್ಕಿ: ಜವುಳಿ

ವ್ಯಾಪಾರಿಯ ನಿಧನದಿಂದ ಶೋಕಸಾಗರಕುಂಬಳೆ: ಮೊಗ್ರಾಲ್ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವ್ಯಾನ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಜವುಳಿ ವ್ಯಾಪಾರಿ  ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಉಪ್ಪಳ ಮೂಸೋಡಿ ನಿವಾಸಿ ಯೂ, ಉಪ್ಪಳದಲ್ಲ್ಲಿ ಐಸೋಡ್ ಎಂಬ ಜವುಳಿ ಅಂಗಡಿ ಮಾಲಕನಾದ ಅಬ್ದುಲ್ ಅಸೀಸ್ (48) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಸಂಜೆ 5.30ರ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಆಘಾತದಿಂದ ಸ್ಕೂಟರ್‌ನಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅಬ್ದುಲ್  ಅಸೀಸ್‌ರನ್ನು ಕೂಡಲೇ ಕುಂಬಳೆ ಜಿಲ್ಲಾ …

16ರ ಹರೆಯದ ಬಾಲಕಿಯ ಮನೆಗೆ ತಲುಪಿದ ಯುವಕನನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರ: ಯುವಕನ ವಿರುದ್ಧ ಪೋಕ್ಸೋ; ಕಸ್ಟಡಿಗೆ

ಕಾಸರಗೋಡು: 16ರ ಹರೆಯದ ಬಾಲಕಿಯ ಮನೆಗೆ ಸಂಶಯಾಸ್ಪದವಾದ ರೀತಿಯಲ್ಲಿ ತಲುಪಿದ ಯುವಕನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಯುವಕನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಪರಪ್ಪ ನಿವಾಸಿಯಾದ ಕರುಣಾಕರನ್‌ರ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ನಿನ್ನೆ ಸಂಜೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. 16ರ ಬಾಲಕಿ ವಾಸಿಸುವ ಮನೆಗೆ ಕರುಣಾಕರನ್ ನಿರಂತರ ಬರುತ್ತಿದ್ದನೆನ್ನಲಾಗಿದೆ. ಇದರಲ್ಲಿ ಶಂಕೆ ತೋರಿದ ಸ್ಥಳೀಯರು ಯುವಕನ ಮೇಲೆ ನಿಗಾ ಇರಿಸಿದ್ದರು. …

ಕಾಸರಗೋಡಿನಲ್ಲಿ ಅಬಕಾರಿ ತಂಡದ ಮಿಂಚಿನ ಕಾರ್ಯಾಚರಣೆ: ಹ್ಯಾಶಿಶ್, ಗಾಂಜಾ ಪತ್ತೆ; ಓರ್ವ ಸೆರೆ

ಕಾಸರಗೋಡು: ಕಾಸರಗೋಡು ತಳಂಗರೆ ಪಳ್ಳಿಕ್ಕಾಲ್ನಲ್ಲಿ ರೈಲು ನಿಲ್ದಾಣ ಪರಿಸರದಲ್ಲಿ ಅಬಕಾರಿ ತಂಡ ಇಂದು ಬೆಳಿಗ್ಗೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಹ್ಯಾಶಿಶ್ ಮತ್ತು ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.ಇದಕ್ಕೆ ಸಂಬAಧಿಸಿ ತಳಂಗರೆ ಬಾಂಗೋಡು ಝೀನತ್ ನಗರದ ಅಸ್ಕರ್ಅಲಿ ಬಿ (38) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. 212 ಗ್ರಾಂ ಹ್ಯಾಶಿಶ್ ಮತ್ತು 112 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಹ್ಯಾಶಿಶ್ಗೆ 1,50,000 ರೂ. ಹಾಗೂ ಗಾಂಜಾಕ್ಕೆ 5000 ರೂ. ಬೆಲೆ ಇರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ …

1.195 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.195 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಕುಬಣೂರು ಕನ್ನಾಟಿಪಾರೆಯ ಅಬ್ದುಲ್ಲ ಕೆ. (46) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕನ್ನಾಟಿಪಾರೆಯಲ್ಲಿ ಕುಂಬಳೆ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಮ್ಯಾಥ್ಯು ಕೆ.ಡಿ. ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎA, ಬಿಜಿಲ ವಿ. ಮತ್ತು ಚಾಲಕ ಪ್ರವೀಣ್ ಕುಮಾರ್ ಎಂಬಿವರು ಒಳಗೊಂಡಿದ್ದರು.