ಎಂ.ಡಿ.ಎಂ.ಎ ಸಾಗಾಟ : ತಾಯಿ, ಮಗ ಸಹಿತ ನಾಲ್ವರ ಸೆರೆ

ಪಾಲಕ್ಕಾಡ್: ಮಾರಕ ಮಾದಕ ವಸ್ತುವಾದ ಎಂಡಿಎAಎ ಸಾಗಿಸುತ್ತಿದ್ದ ವೇಳೆ ತಾಯಿ, ಮಗ ಸಹಿತ ನಾಲ್ಕು ಮಂದಿಯನ್ನು ಅಬಕಾರಿ ಅಧಿಕಾರಿ ಗಳು ಸೆರೆಹಿಡಿದಿದ್ದಾರೆ. ತೃಶೂರು ನಿವಾಸಿಗಳೂ ಎರ್ನಾಕುಳಂನಲ್ಲಿ ವಾಸಿಸುವ ಅಶ್ವತಿ (39), ಮಗ ಶೋನ್ಸಣ್ಣಿ (20), ಕಲ್ಲಿಕೋಟೆ ನಿವಾಸಿಗಳಾದ ಮೃದುಲ್ (29), ಅಶ್ವಿನ್ಲಾಲ್ (24) ಎಂಬಿವರು ಸೆರೆಗೀಡಾದ ಆರೋಪಿಗಳು, ಇವರ ಕೈಯಿಂದ 12 ಗ್ರಾಂ ಎಂಡಿಎAಎ ವಶಪಡಿಸಲಾಗಿದೆ. ಬೆಂಗಳೂರಿನಿAದ ಕಾರಿನಲ್ಲಿ ಮಾದಕವಸ್ತು ಕೇರಳಕ್ಕೆ ಸಾಗಿಸುತ್ತಿದ್ದ ವೇಳ ವಾಳಯಾರ್ ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇವರು ಸಿಕ್ಕಿಬಿದ್ದಿದ್ದಾರೆ. ಕಾರಿನಿಂದ …

ಪಾಕ್ ಭಯೋತ್ಪಾದಕರಿಂದ ಕೇರಳ ಸಹಿತ ದೇಶದಲ್ಲಿ ರೈಲು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್

ತಿರುವನಂತಪುರ: ಪಾಕಿಸ್ತಾನದ ಬೇಹುಗಾರಿಕಾ ವಿಭಾಗವಾದ ಐಎಸ್‌ಐ ತನ್ನ ಸಹ ಸಂಸ್ಥೆಗಳಾದ ಪಾಕಿಸ್ತಾನದ ಹಲವು ಭಯೋತ್ಪಾಕರ ಸಂಘಟನೆಗಳನ್ನು ಬಳಸಿ ಕೇರಳ ಸೇರಿ ದೇಶದಲ್ಲಿ ರೈಲು ಬುಡಮೇಲು ನಡೆಸುವ ಸ್ಕೆಚ್‌ಗೆ ರೂಪು ನೀಡಿದೆ ಎಂಬ ಕಳವಳಕಾರಿ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಲಷ್ಕರ್-ಎ ತೊಬಾದಂತಹ ಭಯೋತ್ಪಾದಕ ಸಂಘಟನೆಗಳ ಮೂಲಕ ಐಎಸ್‌ಐ ಇಂತಹ ಸಂಚಿಗೆ ರೂಪು ನೀಡಿದೆ. ರೈಲು ಬುಡಮೇಲು ಕೃತ್ಯ ಮಾತ್ರವಲ್ಲ ವಿಧ್ವಂಸಕ ಕೃತ್ಯಗಳ ಸಂಚನ್ನೂ ಐಎಸ್‌ಐ ಹಾಕಿಕೊಂಡಿದೆ ಎಂದು ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಈ ಬಗ್ಗೆ …

ಆರ್ಎಸ್ಎಸ್ ಕಾರ್ಯಕರ್ತನ ಕೊಲೆ ಪ್ರಕರಣ : 8 ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ ಸಜೆ

ಕಣ್ಣೂರು: ಆರ್ಎಸ್ಎಸ್ ಕಾರ್ಯಕರ್ತ ಕಣ್ಣೂರು ಜಿಲ್ಲೆಯ ಮುಳಪ್ಪಿಲಂuಟಿಜeಜಿiಟಿeಜಡ್ ನಿವಾಸಿ ಎಳಂಬಿಲಾಯಿ ಸೂರಜ್ (32)ರನ್ನು ಕೊಲೆಗೈದ ಪ್ರಕರಣದ 8 ಮಂದಿ ಸಿಪಿಎಂ ಕಾರ್ಯಕರ್ತರಿಗೆ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ತಲಾ 50,000 ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.ಕಣ್ಣೂರು ಜಿಲ್ಲೆಯ ಪಾತಕುನ್ನು ಕಾಯಿಂಡಡಿ ವೀಡ್ ನಿವಾಸಿ ಆರ್ಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿರುವ ಟಿ.ಕೆ. ರಜೀಶ್ …

ಕಲ್ಲಿಕೋಟೆಯಲ್ಲಿ ಪುತ್ರನಿಂದ ಇರಿತಕ್ಕೊಳಗಾಗಿ ತಂದೆ ಸಾವು

ಕಲ್ಲಿಕೋಟೆ: ಬಾಲುಶ್ಶೇರಿ ಪನಾಯಿಯಲ್ಲಿ ಪುತ್ರನಿಂದ ಇರಿತಕ್ಕೊಳಗಾಗಿ ತಂದೆ ಮೃತಪಟ್ಟರು. ಬಾಲುಶ್ಶೇರಿ ಚಾಣೋರ ಅಶೋಕನ್ (71) ಮೃತಪಟ್ಟವರು. ಆರೋಪಿಯಾದ ಪುತ್ರ ಸುಧೀಶ್‌ನನ್ನು ಸ್ಥಳೀಯರ ಸಹಾಯದೊಂದಿಗೆ ಬಾಲುಶ್ಶೇರಿ ಠಾಣೆಗೆ ಕೊಂಡೊಯ್ಯಲಾಗಿದೆ. 10 ವರ್ಷಗಳ ಹಿಂದೆ ಅಶೋಕನ್‌ರ ಪತ್ನಿಯನ್ನು ಕಿರಿಯ ಪುತ್ರ ಇರಿದು ಕೊಲೆಗೈದ ಬಳಿಕ ಆತ್ಮಹತ್ಯೆಗೈದಿದ್ದನು. ನಿನ್ನೆ ಸಂಜೆ ತಂದೆಯನ್ನು ಹಿರಿಯ ಪುತ್ರ ಇರಿದು ಕೊಲೆಗೈದಿದ್ದು, ರಾತ್ರಿ ಮನೆಯಲ್ಲಿ ಬೆಳಕು ಕಾಣದ ಹಿನ್ನೆಲೆಯಲ್ಲಿ ನೆರೆಮನೆಯವರು ಬಂದು ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಅಶೋಕನ್ ಕಂಡು ಬಂದಿದ್ದಾರೆ. ಮಧ್ಯಾಹ್ನದ ಮುಂಚಿತವಾಗಿಯೇ ಕೊಲೆ ನಡೆದಿರಬೇಕೆಂದು …

ಮಗಳ ಮನೆಗೆ ಹೋದ ವ್ಯಕ್ತಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಮಗಳ ಮನೆಗೆ ಹೋದ ವ್ಯಕ್ತಿ ಹೃದಯಾಘಾತದಿಂದ ನಿಧನಹೊಂದಿದರು. ಬೆದ್ರಡ್ಕ ಬಳಿಯ ದೇಶಮಂಗಲ ನಿವಾಸಿ ಸುರೇಂದ್ರ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಆದಿತ್ಯವಾರ ಉಪ್ಪಳ ಕೋಡಿಬೈಲಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಅಲ್ಲಿಂದ ಸಂಜೆ ಹೊರಡುತ್ತಿದ್ದಂತೆ  ಉಸಿರಾಟ ತೊಂದರೆ ಅನುಭವಗೊಂಡಿತ್ತೆನ್ನ ಲಾಗಿದೆ. ಕೂಡಲೇ ಅವರನ್ನು ಮಂಗಲ್ಪಾಡಿ ತಾಲೂಕು  ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಕುಳಿತಿದ್ದಾಗ  ಕುಸಿದು ಬಿದ್ದು ಮೃತಪಟ್ಟರ. ಹೃದಯಾ ಘಾತದಿಂದ ಸಾವು ಸಂಭವಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆನ್ನಲಾಗಿದೆ.  ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ …

ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಬಗ್ಗೆ ದೂರು: ನರಹತ್ಯಾ ಯತ್ನ ಪ್ರಕರಣ ದಾಖಲು 

ಕಾಸರಗೋಡು: ವಾಹನಕ್ಕೆ ಸರಕು ಹೇರುತ್ತಿದ್ದ ವೇಳೆ ಸಾರಿಗೆ ಅಡಚಣೆ ಸೃಷ್ಟಿಸಲಾಗಿದೆಯೆಂದು ಆರೋಪಿಸಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ  ಕಾಸರಗೋಡು ಪೊಲೀಸರು ಓರ್ವನ ವಿರುದ್ಧ  ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಶಿರಿಬಾಗಿಲು ರೆಹ್ಮತ್ ನಗರದ ತಾಯತ್ ವಳಪ್ಪಿನ ಅಬೂಬಕ್ಕರ್ ಸಿದ್ದಿಕ್ (25) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಮಧ್ಯಾಹ್ನ ಕರಂದಕ್ಕಾಡ್  ಉಮಾ ನರ್ಸಿಂಗ್ ಹೋಂ ರಸ್ತೆಯಲ್ಲಿ ತಾನು ವಾಹನಕ್ಕೆ ಸರಕು ಹೇರುತ್ತಿದ್ದ …

ಪಾರೆಕ್ಕೋಡಿ ಮಂಟಮೆ ರಸ್ತೆಗೆ ಸುರಿದದ್ದು 3 ಲಕ್ಷ ರೂ.: ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ರೋಷ

ಪೈವಳಿಕೆ: 3 ಲಕ್ಷ ರೂ. ವೆಚ್ಚ ಮಾಡಿ ಇತ್ತೀಚೆಗೆ ದುರಸ್ತಿಗೊಳಿಸಿದ ರಸ್ತೆಯೊಂದು ಉಪಯೋಗಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೈವಳಿಕೆ ಪಂಚಾಯತ್‌ನ 1ನೇ ವಾರ್ಡ್ ಪಾರೆಕ್ಕೋಡಿ ಮಂಟಪಮೆಯಿಂದ ಕುರುಡಪದವುಗೆ ಸಂಪರ್ಕಿಸುವ ರಸ್ತೆಯಲ್ಲಿ 150 ಮೀಟರ್ ಮಣ್ಣಿನ ರಸ್ತೆಯನ್ನು ಡಾಮರು ಹಾಕಿ ಅಭಿವೃದ್ಧಿಪಡಿಸ ಲಾಗಿತ್ತು. ಇದಕ್ಕೆ 3 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ ದುರಸ್ತಿಗೊಳಿಸಿ ಒಂದು ತಿಂಗಳೊಳಗೆ ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಡಾಮರು ಎದ್ದು ಹೋಗಿ ಹೊಂಡ ಬಿದ್ದು ಮಣ್ಣಿನ ರಸ್ತೆಗಿಂತಲೂ ಕಡೆಯಾಗಿ …

ಮಹಾದ್ವಾರ ನಾಳೆ ಲೋಕಾರ್ಪಣೆ 

ಮಧೂರು  ಕ್ಷೇತ್ರ ಕಳೆಯನ್ನು ಇಮ್ಮಡಿಗೊಳಿಸುವ ಮಹಾದ್ವಾರ ರಾಜಗೋಪುರ ಹಾಗೂ  ರಾಜಾಂಗಣದ ಉದ್ಘಾಟನೆ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸುಮಾರು ಒಂದೂವರೆ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತ ವ್ಯಯಿಸಿ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು  ಕೊಡುಗೆಯಾಗಿ ನೀಡಿದ ದ್ರಾವಿಡ ಶೈಲಿಯ ಮಹಾದ್ವಾರವನ್ನು ಕೇಂದ್ರ ಸಚಿವ ಸುರೇಶ್‌ಗೋಪಿ ಲೋಕಾರ್ಪಣೆಗೊಳಿಸುವರು.  ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ| ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸುವರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ …

ಮಧೂರು ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆ ಕಾರ್ಯಕ್ರಮಗಳಿಗೆ ಸಿದ್ಧತೆ ಪೂರ್ಣ

ಕಾಸರಗೋಡು: ಕುಂಬಳೆ ಸೀಮೆಯ ಹಾಗೂ ಉತ್ತರ ಕೇರಳದ ಪ್ರಸಿದ್ಧ ದೇವಾಲಯವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಸಂಭ್ರಮ ಸಡಗರದಲ್ಲಿದೆ. ಮಾರ್ಚ್ ೨೭ರಿಂದ ಆರಂಭಗೊಂಡು ಎಪ್ರಿಲ್ ೭ರ ವರೆಗೆ ಜರಗುವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ  ಕಾರ್ಯಕ್ರಮಗಳ ಯಶಸ್ವಿಯಾಗಿ ನೆರವೇರಲು ಸಕಲ ಸಿದ್ಧತೆಗಳು ಪೂರ್ಣಗೊಂಡಿ ರುವುದಾಗಿ ಸಂಬಂಧಪಟ್ಟವರು ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾ ಗೋಷ್ಠ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ೧೩ ವರ್ಷಗಳಿಂದ ದೇವ ಸ್ಥಾನದ ನವೀಕರಣ ಕಾಮಗಾರಿಗಳು ನಡೆಯುತ್ತಿದೆ. ಮಲಬಾರ್ ದೇವಸ್ವಂ ಮಂಡಳಿ …

ಎನ್‌ಟಿಯುನಿಂದ ಮಾದಕ ಪದಾರ್ಥ ವಿರುದ್ಧ ಕಾರ್ಯಕ್ರಮ

ಕಾಸರಗೋಡು: ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾದಕ ಪದಾರ್ಥಗಳ ಉಪಯೋಗದ ವಿರುದ್ಧ ರಾಷ್ಟ್ರೀಯ ಅಧ್ಯಾಪಕ ಪರಿಷತ್ ನೇತೃತ್ವದಲ್ಲಿ ಮಾದಕ ಪದಾರ್ಥ ವಿರುದ್ಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾದಕ ಮಾಫಿಯಾ ವಿರುದ್ಧ ಸಮಾಜ ಪ್ರತಿಕ್ರಿಯಿಸಲು ಇನ್ನೂ ವಿಳಂಬವಾದರೆ ಮತ್ತೆಂದೂ ಹಿಂತಿರುಗಲಾಗದ ರೀತಿಯಲ್ಲಿ ನಮ್ಮ ನಾಡು ನಾಶವಾಗಲಿದೆ ಎಂದು ಅವರು ಸೂಚಿಸಿದರು. ಜಿಲ್ಲಾಧ್ಯಕ್ಷ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕೆ. ಪ್ರಭಾಕರನ್ …