ನಿಧನ

ಕುಂಬಳೆ: ಕಳತ್ತೂರು ಕಾರಿಂಜೆ ನಿವಾಸಿ ವಸಂತ ಆಳ್ವ (75) ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಮಹಾದೇವ ಭಜನಾ ಸಂಘದ ಸ್ಥಾಪಕ ಸದಸ್ಯರೂ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸಿಪಿಎಂ ಬಂಬ್ರಾಣ ಲೋಕಲ್ ಸಮಿತಿ ಮಾಜಿ ಸದಸ್ಯ, ಕರ್ಷಕ ಸಂಘ ಕುಂಬಳೆ ಏರಿಯಾ ಸದಸ್ಯನಾಗಿ ಇವರು ಸೇವೆ ಸಲ್ಲಿಸಿದ್ದರು. ಮೃತರು  ಪತ್ನಿ ಜಲಜಾಕ್ಷಿ, ಮಕ್ಕಳಾದ ಅರುಣ್ ಕುಮಾರ್  ಆಳ್ವ, ನ್ಯಾಯವಾದಿ ಸತ್ಯನಾರಾಯಣ ಆಳ್ವ, ಸೊಸೆಯಂದಿರಾದ ಅಶ್ವಿತಾ, ಸುಶ್ಮಿತಾ  ಸಹೋದರಿ ರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೇರಳ ಮರಾಟಿ ಸಂರಕ್ಷಣ ಸಮಿತಿ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಕೇರಳ ಮಾರಾಟಿ ಸಂರಕ್ಷಣಾ ಸಮಿತಿ ಮಹಾಸಭೆ ಪಿಲÁಂಕಟ್ಟೆ ಮಾರಾಟಿ ಸಭಾ ಭವನ ಬಳಿ ನಡೆಯಿತು. ಬೆಂಗಳೂರು ಮಾರಾಟಿ ಸಮಿತಿ ನೇತಾರೆ ಚಂದ್ರ ಮತಿ ಉದ್ಘಾಟಿಸಿ, ಮಾತನಾಡಿ ವಿದ್ಯಾ ರ್ಥಿಗಳು ವಿದ್ಯಾಭ್ಯಾಸ ವಲಯದಲ್ಲಿ ಉತ್ತಮವಾಗಿ ಕಲಿತು ಜೀವನ ವನ್ನು ರೂಪಿಸಬೇಕೆಂದು ಕರೆ ನೀಡಿದರು. ಪಿಲÁಂಕಟ್ಟೆಯಲ್ಲಿ ನಿರ್ಮಾಣಗೊಳ್ಳುವ ಸಭಾ ಭವನದ ಕೆಲಸ ಅತೀ ಶೀಘ್ರದಲ್ಲಿ ನಡೆಸಲು ಸಮಾಜದ ಪ್ರತಿಯೊಬ್ಬರೂ ಕೂಡ ಮುಂದೆ ನಿಂತು ಶ್ರಮಿಸಬೇಕಾಗಿ ತಿಳಿಸಿದರು. ಸಮಿತಿಯ ಅಧ್ಯಕ್ಷ ಸುಬ್ರಾಯ ನಾಯ್ಕ್ ಟಿ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷ …

ಮಂಜಕ್ಕಲ್‌ನಲ್ಲಿ ಗೂಡಿನಲ್ಲಿದ್ದ ನಾಯಿಯನ್ನು ಕೊಂದು ತಿಂದ ಚಿರತೆ: ಸ್ಥಳೀಯರಲ್ಲಿ ಭೀತಿ

ಮುಳಿಯಾರು: ಈ ಪರಿಸರದಲ್ಲಿ  ಭೀತಿ ಸೃಷ್ಟಿಸಿ ಮತ್ತೆ ಚಿರತೆ ದಾಳಿ ನಡೆಸಿದೆ. ಮಂಜಕ್ಕಲ್ ತಾಯತ್ತಮೂಲೆ ಎಂಬಲ್ಲಿ ನಾರಾಯಣ ಎಂಬವರ ಮನೆಯ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ಕೊಂದು ತಿಂದಿದೆ. ನಾಯಿಯ ತಲೆ ಮಾತ್ರ ಗೂಡು ಪರಿಸರದಲ್ಲಿ ಕಂಡು ಬರುತ್ತಿದೆ. ಸ್ಥಳಕ್ಕೆ ಅರಣ್ಯಪಾಲಕರು, ಸ್ಥಳೀಯರು ತಲುಪಿ ಪರಿಶೀಲಿಸಿದ್ದಾರೆ. ಶನಿವಾರ ರಾತ್ರಿ ಘಟನೆ ನಡೆದಿದೆ. ರಾತ್ರಿ ಸತತವಾಗಿ ನಾಯಿ ಬೊಗಳಿದ್ದರೂ ಮನೆ ಮಂದಿ ಅಷ್ಟಾಗಿ ಗಮನಹರಿಸಿರಲಿಲ್ಲ. ಆದಿತ್ಯವಾರ ಬೆಳಿಗ್ಗೆ ನೋಡುವಾಗ ನಾಯಿಯ ತಲೆ ಭಾಗ ಮಾತ್ರ ಗೂಡಿನಿಂದ ಹೊರಗೆ ಕಂಡು ಬಂದಿದೆ. …

ಕೋಳಿ ಅಂಕ: ಮೂವರ ಸೆರೆ

ಬದಿಯಡ್ಕ: ಬೆಳಿಂಜ ಬಸ್ ನಿಲ್ದಾಣ ಸಮೀಪ ನಿನ್ನೆ ಸಂಜೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಎರಡು ಕೋಳಿ ಗಳನ್ನು ವಶಪಡಿ ಸಲಾಗಿದೆ. ಬೆಳಿಂಜ ನಿವಾಸಿಗಳಾದ  ಕಿಶೋರ್ (34), ರಘುನಾಥ ಶೆಟ್ಟಿ (35), ಪ್ರಶಾಂತ್ ಶೆಟ್ಟಿ (40) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮೊಗ್ರಾಲ್ ರಾ. ಹೆದ್ದಾರಿಯಲ್ಲಿ ವಾಹನ ಅಪಘಾತ: ಗಾಯಗೊಂಡ ಯುವಕ ಮೃತ್ಯು

ಕಾಸರಗೋಡು: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಅಣಂಗೂರು ನಿವಾಸಿಯಾದ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಣಂಗೂರು ಬೆದಿರ ನಿವಾಸಿ ಬಿ.ಎಂ. ಇಬ್ರಾಹಿಂರ ಪುತ್ರ ನಿಯಾಸ್ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು. ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯಗಳಿಗಾಗಿ ನಿಲ್ಲಿಸಿದ್ದ ಕ್ರೇನ್‌ನ ಹಿಂಬದಿಗೆ ನಿಯಾಸ್ ಚಲಾಯಿಸಿದ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ನಿಯಾಸ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ …

ಮಸೀದಿ ಇಮಾಂರ 32,000 ರೂ. ಕಳವು: ತನಿಖೆ ತೀವ್ರ

ಕುಂಬಳೆ: ಮೊಗ್ರಾಲ್ ಕಡಪ್ಪುರ ಖಿಳರ್ ಮಸೀದಿಯ ಇಮಾಂರ 32,000 ರೂಪಾಯಿ ಕಳವಿಗೀಡಾ ದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕರ್ನಾಟಕದ ಬಂಟ್ವಾಳ ಮಂಜನಾಡಿಯ ಸಾಹಿದ್ ಎಂಬವರ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಶುಕ್ರವಾರದಂದು ಮಹಲ್ಲ್ ನಿವಾಸಿಗಳಿಂದ ಹಣ ಸಂಗ್ರಹಿಸಲು ಹೋದ ಸಂದರ್ಭದಲ್ಲಿ  ಕಳವು ನಡೆದಿದೆ.  ಕಪಾಟು ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಮೂರು ವರ್ಷಗಳಿಂದ ಕಡಪ್ಪುರ ಖಿಳರ್ ಮಸೀದಿಯಲ್ಲಿ ಇಮಾಂ ಆಗಿ ಕೆಲಸ ನಿರ್ವಹಿಸುತ್ತಿರುವ ಸಾಹಿದ್ ಮೊಗ್ರಾ ಲ್ ಮದ್ರಸದಲ್ಲಿ  ಅಧ್ಯಾಪಕನಾ ಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. …

ಐದನೇ ದಿನಕ್ಕೆ ಕಾಲಿರಿಸಿದ ಆಶಾ ಕಾರ್ಯಕರ್ತೆಯರ ಉಪವಾಸ ಸತ್ಯಾಗ್ರಹ: ಐಕ್ಯದಾರ್ಢ್ಯ ಪ್ರದರ್ಶಿಸಿ ಸಾಮಾಜಿಕ ಕಾರ್ಯಕರ್ತೆಯರಿಂದ,  ಮನೆಗಳಲ್ಲೂ ನಿರಶನ

ತಿರುವನಂತಪುರ: ವಿವಿಧ ಬೇಡಿಕೆ ಗಳನ್ನು ಮುಂದಿರಿಸಿಕೊಂಡು ಸೆಕ್ರೆಟರಿ ಯೇಟ್ ಮುಂದೆ ಆಶಾ ಕಾರ್ಯಕ ರ್ತರು ಆರಂಭಿಸಿರುವ ಉಪವಾಸ ಸತ್ಯಾಗ್ರಹ ಇಂದಿಗೆ ಐದನೇ ದಿನಕ್ಕೆ ಕಾಲಿರಿಸಿದ್ದು, ಅವರಿಗೆ ಐಕ್ಯದಾರ್ಢ್ಯ ಪ್ರದರ್ಶನದ ಹಲವು ಸಾಮಾಜಿಕ ಕಾರ್ಯಕರ್ತರೂ  ಇಂದು ಅವರ ಜೊತೆ ನಿರಾಹಾರ ಸತ್ಯಾಗ್ರಹ ಆರಂಭಿಸಿದ್ದಾರೆ. ಇದರ ಹೊರತಾಗಿ ನಿರಶನ ನಿರತರು ಮಾಡಿದ ಮನವಿ ಪ್ರಕಾರ ಎಲ್ಲಾ ಆಶಾ ಕಾರ್ಯಕರ್ತರ  ಮನೆಗಳಲ್ಲಿ  ಅವರ ಕುಟುಂಬದವರೂ ಇನ್ನೊಂದೆಡೆ ಇಂದು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. ತಿರುವನಂತಪುರಕ್ಕೆ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ಸಾಧ್ಯವಾಗದ ಆಶಾ …

ಕುಂಬಳೆ ಹೋಟೆಲ್ ಮಾಲಕ ನಿಧನ

ಕುಂಬಳೆ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಮಾಲಕ ಮೃತಪಟ್ಟರು. ಕುಂಬಳೆಯ ಅನ್ನಪೂರ್ಣ ಹೋಟೆಲ್ ಮಾಲಕ, ಕುಂಬಳೆ ಬದಿಯಡ್ಕ ರಸ್ತೆಯ ನಿವಾಸಿ ಪ್ರಭಾಕರ (62) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇವರು ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಸುಕನ್ಯ, ಮಕ್ಕಳಾದ ಡಾ| ಲಾವಣ್ಯ (ಶಿವಮೊಗ್ಗ) ಸುಪ್ರಭ (ಕೆನಡಾ), ಅಳಿಯಂದಿರಾದ ಡಾ| ಇಶಾನ್ (ಶಿವಮೊಗ್ಗ), ಅಕ್ರಾಶ್, ಸಹೋದರಿಯರಾದ ನಿರ್ಮಲ, ರಾಜೇಶ್ವರಿ, ಪುಷ್ಪಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಮೃತದೇಹದ ಅಂತ್ಯ …

ಭಜನಾ ಸಂಕೀರ್ತನೆಕಾರ ನಿಧನ

ಮುಳ್ಳೇರಿಯ: ಆದೂರು ಕೊಯಂಕೂಡ್ಲು ನಿವಾಸಿ ಅರಿಯಡ್ಕಗುತ್ತು ಗೋಪಾಲಕೃಷ್ಣ ರೈ (80) ನಿಧನ ಹೊಂದಿದರು. ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘದ ಅಧ್ಯಕ್ಷರಾಗಿದ್ದರು. ಭಜನಾ ಸಂಕೀರ್ತನಾಕಾರರಾಗಿದ್ದರು. ಮೃತರು ಪತ್ನಿ ಎ. ಚಂದ್ರಾವತಿ, ಮಕ್ಕಳಾದ ಚಿತ್ರಲೇಖ, ಲಕ್ಷ್ಮಿರತ್ನ, ಪ್ರಶಾಂತ್ ಕುಮಾರ್ ಎ, ಪ್ರಸಂಧ್ಯ ಕುಮಾರಿ, ಪ್ರಸನ್ನ ಕುಮಾರ ಎ, ಅಳಿಯಂದಿರಾದ ಧನಂಜಯ ಆದೂರು, ಡಾ. ಶಿವಪ್ರಸಾದ್ ಎನ್.ಕೆ. ನೆಲ್ಲಿಕುಂಜೆ, ಹರೀಶ ಉಡುಪಿ, ಸೊಸೆ ಶರಣ್ಯ ನಾರಾಯಣ ಪನತ್ತಡಿ, ಸಹೋದರ- ಸಹೋದರಿಯರಾದ ಅಜಿತ್ ಕುಮಾರ್ ರೈ, ಸುದರ್ಶನ ರೈ, ಸುಭಾಷಿಣಿ …

ಕಲ್ಯಾಣ ಪಿಂಚಣಿ ಮಾ. 27ರಿಂದ ವಿತರಣೆ

ತಿರುವನಂತಪುರ: ಮಾರ್ಚ್ ತಿಂಗಳ ಸಾಮಾಜಿಕ ಪಿಂಚಣಿಯನ್ನು ಈತಿಂಗಳ 27ರಿಂದ ವಿತರಿಸಲಾಗುವು ದೆಂದು  ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ. ಇದಕ್ಕಾಗಿ 817 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆ ಪ್ರಕಾರ 62 ಲಕ್ಷದಷ್ಟು ಪಿಂಚಣಿದಾರರಿಗೆ ತಲಾ 1600 ರೂ. ನಂತೆ ಪಿಂಚಣಿ ಲಭಿಸಲಿದೆ.