ಹೆಣ್ಮಕ್ಕಳಿಗೆ ಮದ್ಯ ನೀಡಿರುವುದು ತಾಯಿ, ತಾಯಿಯ ಗೆಳೆಯ: ಕ್ಲಾಸ್ ಟೀಚರ್‌ರ ನಿರ್ಣಾಯಕ ಹೇಳಿಕೆ

ಕೊಚ್ಚಿ: ಕುರುಪ್ಪಂಪಡಿ ದೌರ್ಜನ್ಯ ಪ್ರಕರಣದಲ್ಲಿ 10, 12  ವರ್ಷ ಪ್ರಾಯದ ಹೆಣ್ಮಕ್ಕಳಿಗೆ ತಾಯಿ ಹಾಗೂ ತಾಯಿಯ ಗೆಳೆಯ ಮದ್ಯ ನೀಡಿರುವುದಾಗಿ ಹೇಳಿಕೆ ದಾಖಲಿಸಲಾಗಿದೆ. ಆರೋಪಿ ಧನೇಶ್ ಮನೆಗೆ ತಲುಪುವಾಗಲೆಲ್ಲ ಒತ್ತಾಯಪೂರ್ವಕ ಮದ್ಯ ನೀಡಿರುವುದಾಗಿಯೂ ಹೆಣ್ಮಕ್ಕಳು ತಿಳಿಸಿದ್ದಾರೆ. ಗೆಳತಿಗೆ ಬರೆದ ಪತ್ರವನ್ನು ಓದಿದ ಕ್ಲಾಸ್‌ಟೀಚರ್‌ರಲ್ಲಿ 12 ವರ್ಷದ ಬಾಲಕಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಳು. ಮದ್ಯ ನೀಡಿದ್ದಾರೆ ಎಂದು ಟೀಚರ್ ತಿಳಿಸಿದ ಮಾಹಿತಿ ರಹಸ್ಯ ಹೇಳಿಕೆಯಲ್ಲಿ ದಾಖಲಾಗದ ಕಾರಣ ಹೆಣ್ಮಕ್ಕಳ ಹೇಳಿಕೆಯನ್ನು ಪೊಲೀಸರು ಮತ್ತೆ ಪಡೆದುಕೊಂಡಿದ್ದಾರೆ. ದೌರ್ಜನ್ಯದ ಬಗ್ಗೆ ಮರೆ …

ಪಿಕಪ್ ವ್ಯಾನ್ ಕ್ರೇನ್‌ಗೆ ಢಿಕ್ಕಿ: ಯುವಕನಿಗೆ ಗಾಯ ಗಂಟೆಗಳ ಕಾಲ ವಾಹನದಲ್ಲಿ ಸಿಲುಕಿದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕದಳ

ಕುಂಬಳೆ: ಪಿಕಪ್ ವ್ಯಾನ್ ಕ್ರೇನ್‌ಗೆ ಢಿಕ್ಕಿ ಹೊಡೆದು ಸಂಭ ವಿಸಿದ ಅಪಘಾತದಲ್ಲಿ ಯುವಕ ನೋರ್ವ ಗಾಯಗೊಂಡಿದ್ದಾನೆ. ನಿನ್ನೆ ಮಧ್ಯಾಹ್ನ ಪೆರುವಾಡ್‌ನಲ್ಲಿ ಅಪಘಾತವುಂಟಾಗಿದೆ. ಇದರಿಂದ ಗಾಯಗೊಂಡ ನಿಯಾಸ್ ಎಂಬ ಯುವಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹಾನಿಗೊಂಡ ಪಿಕಪ್ ವ್ಯಾನ್‌ನಲ್ಲೇ ಯುವಕ ಗಂಟೆಗಳ ಕಾಲ ಸಿಲುಕಿದ್ದನು. ಕೊನೆಗೆ ಅಗ್ನಿಶಾಮಕದಳ ತಲುಪಿ  ಹೈಡ್ರೋಲಿಕ್ ಕಟ್ಟರ್ ಬಳಸಿ ಪಿಕಪ್ ವಾಹನದ ಬಾಡಿಯನ್ನು ತುಂಡರಿಸಿ ಯುವಕನನ್ನು ಹೊರತೆಗೆಯಲಾಯಿತು. ಯುವಕನ ಎರಡೂ ಕಾಲುಗಳಿಗೆ ಗಾಯಗಳಾಗಿವೆಯೆಂದು ತಿಳಿದುಬಂ ದಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸಣ್ಣಿ …

ಬೀದಿನಾಯಿಗಳಿಗೆ ಚುಚ್ಚುಮದ್ದು ನೀಡಿಕೆ

ಕಾಸರಗೋಡು: ನಾಡಿನಾದ್ಯಂತ ಬೀದಿನಾಯಿಗಳ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿದು ಚುಚ್ಚುಮದ್ದು  ನೀಡುವ ಪ್ರಕ್ರಿಯೆ ವಿವಿಧೆಡೆ ನಡೆಯುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಪಶುಸಂಗೋಪನಾ ಇಲಾಖೆ ಈ ಕ್ರಮ ಕೈಗೊಂಡಿದೆ. ಇದರಂತೆ ಮಧೂರು ಪಂಚಾಯತ್ ವ್ಯಾಪ್ತಿಯ ಕೂಡ್ಲು ಗಂಗೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ಬೀದಿನಾಯಿಗಳನ್ನು ಹಿಡಿದು ಚುಚ್ಚುಮದ್ದು ನೀಡಲಾಯಿತು.

ತುಂಬಿ ತುಳುಕುತ್ತಿದೆ ರಾಜ್ಯದ ಜೈಲುಗಳು: ಜಿಲ್ಲೆಯಲ್ಲಿ 337 ಸೇರಿದಂತೆ ರಾಜ್ಯದಲ್ಲಿ 10593 ಖೈದಿಗಳು; 252 ಮಂದಿ ಮಹಿಳೆಯರು

ಕಾಸರಗೋಡು: ರಾಜ್ಯದಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊAಡು ರಾಜ್ಯದ ಜೈಲುಗಳಿಗೆ ಬಂದು ಸೇರುತ್ತಿರುವ ಖೈದಿಗಳ ಸಂಖ್ಯೆ ಯೂ ಇನ್ನೊಂದೆಡೆ ಹೆಚ್ಚಾಗತೊ ಡಗಿದೆ.ರಾಜ್ಯದಲ್ಲಿ ಒಟ್ಟು 57 ಜೈಲುಗ ಳಿದ್ದು, ಇದರಲ್ಲಿ 252 ಮಹಿಳಾ ಖೈದಿಗಳೂ ಸೇರಿದಂತೆ ಈಗ ಒಟ್ಟು 10,593 ಮಂದಿ ಖೈದಿಗಳು ಕಳೆಯು ತ್ತಿದ್ದಾರೆ. ಈ ಎಲ್ಲಾ ಜೈಲುಗಳಲ್ಲಿ ಒಟ್ಟಾರೆಯಾಗಿ 7200 ಖೈದಿಗಳನ್ನು ಕೂಡಿ ಹಾಕುವಷ್ಟು ಸೌಕರ್ಯ ಮಾತ್ರವೇ ಇದೆ. ಅದರ ಬದಲು ಈ ಜೈಲುಗಳಲ್ಲಿ 10,593 ಖೈದಿಗಳು ಈಗ ಕಳೆಯುತ್ತಿದ್ದು, …

ಸಿಐಟಿಯು ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ಉಪ್ಪಳದಲ್ಲಿ ಧರಣಿ

ಮಂಜೇಶ್ವರ: ಕೇಂದ್ರ ಸರ್ಕಾರ 2005ರಲ್ಲಿ ಆಶಾ ಯೋಜನೆ ಯನ್ನು ಜಾರಿಗೆ ತಂದ ಬಳಿಕ ಸಾಮಾಜಿಕ ಕಾರ್ಯಕರ್ತರಾಗಿ ನೇಮಕ ಗೆೆÆಂಡ ಆಶಾಕಾರ್ಯಕತÉðಯರನ್ನು ಕೇಂದ್ರ ಸರ್ಕಾರ ಸ್ಥಿರ ಕಾರ್ಮಿಕರಾಗಿ ನೇಮಿಸಬೇಕು, ಕನಿಷ್ಠ ವೇತನ 26000ರೂ. ಕೊಡಬೇಕು, ಪಿ ಎಫ್, ಪೆನ್‌ಶನ್ ಗ್ರಾಟಿವಿಟಿ ನೀಡಬೇಕು, ಇನ್‌ಶೂರೆನ್ಸ್ ಪುನರ್‌ಸ್ಥಾಪಿಸಬೇಕು, ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ನೀಡುವ ಅರ್ಹವಾದ ಪಾಲು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ನಿನ್ನೆ ಬೆಳಿಗ್ಗೆ ಉಪ್ಪಳ ಪೋಸ್ಟ್ ಆಫೀಸ್ ಮುಂದೆ ಧರಣಿ ನಡೆಯಿತು. …

ಮಧೂರು ಬ್ರಹ್ಮಕಲಶ: ಸಮವಸ್ತ್ರ ಸೀರೆ ಎ.2ರಂದು ಧರಿಸಲು ಸೂಚನೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯಂಗವಾಗಿ ಮಹಿಳೆಯರಿಗೆ ಧರಿಸಲು ವಿತರಿಸಿದ್ದ ಸೀರೆಯನ್ನು ಬ್ರಹ್ಮಕಲಶ ದಿವಸವಾದ ಎಪ್ರಿಲ್ 2ರಂದು ಧರಿಸುವಂತೆ ವಿನಂತಿಸಲಾಗಿದೆ. ಈ ಮೊದಲು ನಿರ್ಧರಿಸಿದ್ದ ದಿನಾಂಕ ವನ್ನು ಬದಲಾಯಿಸಲಾಗಿದ್ದು, ಮಹಿಳೆಯರು ಗಮನಿಸಬೇಕೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಶಿಶು ಸೌಹಾರ್ದ ಚಟುವಟಿಕೆ :ವಿದ್ಯಾನಗರ ಠಾಣೆಗೆ ಅಂಗೀಕಾರ; ವಿಜಯನ್ ಮೇಲತ್, ಶೈಲಜಾ ಉತ್ತಮ ಪೊಲೀಸ್ ಅಧಿಕಾರಿಗಳು

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಶಿಶು ಸೌಹಾರ್ದ ಚಟುವಟಿಕೆ ನಡೆಸಿದ ಪೊಲೀಸ್ ಠಾಣೆಯಾದ ವಿದ್ಯಾನಗರ ಪೊಲೀಸ್ ಠಾಣೆಯನ್ನು ಹಾಗೂ ಶಿಶು ಸೌಹಾರ್ದ ಪೊಲೀಸ್ ಆಫೀಸರ್ ಆಗಿ ವಿದ್ಯಾನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯನ್ ಮೇಲತ್, ಬೇಕಲ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಶೈಲಜಾ ಎಂಬಿವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು  ಹೆಚ್ಚುವರಿ ಪೊಲೀಸ್ ಅಧಿಕಾರಿ ಪಿ. ಬಾಲಕೃಷ್ಣನ್ ನಾಯರ್ ಇವರಿಬ್ಬರನ್ನು ಅಭಿನಂದಿಸಿದರು. ವಿದ್ಯಾನಗರ ಠಾಣೆ ವ್ಯಾಪ್ತಿಯ  ದೀನ್‌ದಯಾಳ್ ಬಡ್ಸ್ …

ಬ್ಯಾಂಕ್ ಮುಷ್ಕರ ಹಿಂತೆಗೆತ

ಬೆಂಗಳೂರು: ಸೋಮವಾರ ಹಾಗೂ ಮಂಗಳವಾರ ನಡೆಸಲು ನಿಶ್ಚಯಿಸಿದ್ದ ಅಖಿಲ ಭಾರತ ಬ್ಯಾಂಕ್ ಕೆಲಸ ಸ್ಥಗಿತ ಮುಷ್ಕರವನ್ನು ಮುಂದೂಡಲಾಗಿದೆ. ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೆಲಸ ಸ್ಥಗಿತ ಮುಷ್ಕರ ಘೋಷಿಸಿತ್ತು.  ಲೇಬರ್ ಕಮಿಷನರ್‌ರೊಂದಿಗೆ ನಡೆಸಿದ ಚರ್ಚೆಯ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತ ಮುಷ್ಕರವನ್ನು ಮುಂದೂಡಲಾಗಿದೆ. ಕೆಲಸದ ದಿನ ವಾರಕ್ಕೆ ೫, ನೇಮಕಾತಿ ಪಿಎಲ್‌ಐ ಎಂಬಿವು ಸಹಿತವಿರುವ ಪ್ರಧಾನ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿರುವುದಾಗಿ ಯುಎಫ್ ಬಿಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್, ಫಿನಾನ್ಶಿಯಲ್ ಸರ್ವೀಸಸ್ ಇಲಾಖೆ ಎಂಬಿವುಗಳ ಪ್ರತಿನಿಧಿಗಳು …

ಸುಳ್ಯದಲ್ಲಿ ವಿರಾಜ್ ಅಡೂರ್‌ಗೆಚಂದನ ಸಾಹಿತ್ಯರತ್ನ ಪ್ರಶಸ್ತಿ ಪ್ರದಾನ ನಾಳೆ

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ನಾಳೆ ಬೆಳಗ್ಗೆ 10ರಿಂದ ಜರಗಲಿದೆ. ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಹಿತ್ಯ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಯ ಸಾಹಿತಿ ವಿರಾಜ್ ಅಡೂರುರಿಗೆ ಈ ವರ್ಷದ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ …

ಎನ್‌ಜಿಒ ಸಂಘ್ ಜಿಲ್ಲಾ ಸಮ್ಮೇಳನ ಇಂದು ಅಪರಾಹ್ನ ಆರಂಭ

ಕಾಸರಗೋಡು: ಕೇರಳ ಎನ್‌ಜಿಒ ಸಂಘದ ಜಿಲ್ಲಾ ಸಮ್ಮೇಳನ ಇಂದು ಅಪರಾಹ್ನ ಆರಂಭಗೊ ಳ್ಳಲಿದೆ. ಸಮ್ಮೇಳನದಂಗವಾಗಿ ನಗರದ ಕರಂದಕ್ಕಾಡ್‌ನಲ್ಲಿರುವ ಎನ್‌ಜಿಒ ಸಂಘ್ ಹಾಲ್‌ನಲ್ಲಿ ಇಂದು ಅಪರಾಹ್ನ ಸಂಘದ ರಾಜ್ಯ ಕೌನ್ಸಿಲ್ ಸಭೆ ಜರಗಲಿದ್ದು, ಅದನ್ನು ಸಂಘದ ರಾಜ್ಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪಿ. ಪೀತಾಂಭರನ್ ಉದ್ಘಾಟಿಸು ವರು. ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸುವರು. ನಾಳೆ ಬೆಳಿಗ್ಗೆ 10ಗಂಟೆಗೆ ಕಾಸರಗೋಡು ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿರುವ ಪ್ರತಿನಿಧಿ ಸಮ್ಮೇಳನವನ್ನು ಸಂಘಟ ನೆಯ ರಾಜ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್ ಉದ್ಘಾಟಿಸುವರು.