ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ 62 ಕಾಡು ಹಂದಿಗಳನ್ನು ಕೊಲ್ಲಲಾಗಿದೆ-ವಿಧಾನಸಭೆಯಲ್ಲಿ ಸಚಿವ ; ಕಳೆದ ಏಳು ವರ್ಷದಲ್ಲಿ ಜಿಲ್ಲೆಯಲ್ಲಿ ಕಾಡು ಹಂದಿಗಳಿAದ 7 ಮಂದಿಗೆ ಪ್ರಾಣಹರಣ
ಕಾಸರಗೋಡು: ಕಳೆದ ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಅಕ್ರಮಣಕಾರಿಯಾದ 62 ಕಾಡುಹಂದಿ ಗಳನ್ನು ಕೊಲ್ಲಲಾಗಿದೆ ಯೆಂದು ವಿಧಾನಸಭೆಯಲ್ಲಿ ಅರಣ್ಯ ಖಾತೆ ಸಚಿವಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗೆ ಸಚಿವರು ಈ ಲೆಕ್ಕಾಚಾರ ನೀಡಿದ್ದಾರೆ. ಇದರಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಮಂಜೇಶ್ವರ-8, ಕಾಸರಗೋಡು-8, ಉದುಮ-13, ಹೊಸದುರ್ಗ-29 ಮತ್ತು ತೃಕರಿಪುರ ದಲ್ಲಿ 4 ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಕಾಡು ಹಂದಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು …