ಮಾನಂತವಾಡಿಯಲ್ಲಿ ಅಬಕಾರಿ ಕಾರ್ಯಾಚರಣೆ : ಎಂಡಿಎಂಎ ಸಹಿತ ಕಾಸರಗೋಡಿನ ಇಬ್ಬರ ಸೆರೆ: ಕಾರು ವಶ

ಕಾಸರಗೋಡು: ವಯನಾಡು ಜಿಲ್ಲೆಯ ಮಾನಂತವಾಡಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾರಕ ಮಾದಕದ್ರವ್ಯವಾದ ಎಂಡಿಎಂಎ ಸಹಿತ ಕಾಸರಗೋಡಿನ ಇಬ್ಬರನ್ನು ಬಂಧಿಸಲಾಗಿದೆ. ಕಾಸರ ಗೋಡು ಚೆರ್ಕಳ ಬಂಬ್ರಾಣಿ ವೀಟಿಲ್ ಕೆ.ಎಂ. ಜಾಬೀರ್ (33) ಮತ್ತು ಮುಳಿಯಾರು ನುಸ್ರತ್ ನಗರದ ಮೂಲಡ್ಕ ವೀಟಿಲ್ ಮೊಹಮ್ಮದ್ ಕುಂಞಿ (36) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.  6.897 ಗ್ರಾಂ ಎಂಡಿಎಂಎ ಯನ್ನು ಇವರಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ. ಮಾದಕದ್ರವ್ಯ ಸಾಗಿಸಲು ಆರೋಪಿಗಳು ಬಳಸಿದ ಕಾರು ಮತ್ತು ಅವರ ಮೊಬೈಲ್ ಫೋನ್‌ಗಳನ್ನೂ ಅಬಕಾರಿ …

ಬಿಜೆಪಿ ನೇತಾರನನ್ನು ಗುಂಡಿಕ್ಕಿ ಕೊಲೆ: ಆರೋಪಿ ಸೆರೆ

ಮಾದಮಂಗಲಂ: ನಿರ್ಮಾಣ ಹಂತದಲ್ಲಿರುವ ಮನೆಯ ಮಾಲಕ ನಾದ ಬಿಜೆಪಿ ನೇತಾರನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ನಡೆದಿದೆ. ಮಾದಮಂಗಲಂ ಪೊನಿಯಂ ಗೋಡು ನಿವಾಸಿ ಗೂಡ್ಸ್ ಆಟೋ ಚಾಲಕ  ಹಾಗೂ  ಬಿಜೆಪಿ ಮಾದ ಮಂಗಲಂನ ಸ್ಥಳೀಯ ನೇತಾರನಾಗಿರುವ  ಕೆ.ಕೆ. ರಾಧಾಕೃಷ್ಣನ್ (51) ಎಂಬವರನ್ನು ಕೊಲೆಗೈಯ್ಯಲಾಗಿದೆ. ನಿನ್ನೆ ರಾತ್ರಿ 7ಗಂಟೆಗೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಪೆರುಂಬಡವು ಅಡ್ಕ ನಿವಾಸಿ  ಸಂತೋಷ್ ಎಂಬಾ ತನನ್ನು  ಪರಿಯಾರಂ ಪೊಲೀಸರು ಬಂಧಿಸಿದ್ದಾರೆ. ಕಾಡುಹಂದಿಗಳನ್ನು ಗುಂಡಿ ಕ್ಕಲು ಪಂ ಚಾಯತ್ ನೇಮಿ ಸಿರುವ ಶೂಟರ್ಸ್ …

ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆ: ವಿದ್ಯಾರ್ಥಿಗಳು ಸಂಕಷ್ಟದಲ್ಲಿ

ಮೊಗ್ರಾಲ್: ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿ ಸಿರುವುದು ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗೆ ಕಾರಣವಾಗಿದೆ.  ಪರೀಕ್ಷೆ ಮುಗಿಯುವವರೆಗೆ ರಸ್ತೆ ಮುಚ್ಚುಗ ಡೆಗೊಳಿಸಕೂಡದೆಂಬ ಬೇಡಿಕೆಯನ್ನು ಸಂಬಂಧಪಟ್ಟವರು ನಿರ್ಲಕ್ಷಿಸಿ ದ್ದಾರೆಂದು ದೂರಲಾಗಿದೆ. ರಸ್ತೆ ಮುಚ್ಚುಗಡೆಗೊಳಿಸಿ ರುವುದರಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ. ಮೊಗ್ರಾಲ್ ಪೇಟೆಯ ಸರ್ವೀಸ್ ರಸ್ತೆಯನ್ನು ಕಾಮಗಾರಿಯ ಹೆಸರಲ್ಲಿ ಬುಧವಾರದಿಂದ ಒಂದು ವಾರಕ್ಕೆ ಮುಚ್ಚಲಾಗಿದೆ. ಶಾಲಾ ಪರೀಕ್ಷೆ, ರಮ್ಜಾನ್ ವ್ರತಾಚರಣೆ, ಮಿತಿಮೀರಿದ ಉಷ್ಣತೆ ಮೊದಲಾದವುಗಳನ್ನು ಪರಿಗಣಿಸಿ ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿಸಿರುವುದನ್ನು  …

ನಿಧನ

ಕಾಸರ ಗೋ ಡು: ಮಧೂರು ಮನ್ನಿಪ್ಪಾಡಿ ವಿವೇಕಾನಂದ ನಗರದ ಕೆ. ಸುಧಾಕರನ್ ತೆರುವತ್ತ್ (63) ನಿಧನ ಹೊಂದಿ ದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯ ಲ್ಲಿದ್ದರು. ಸಿ. ಕೃಷ್ಣನ್-ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಶೋಭನ,  ಮಕ್ಕಳಾದ ರಂಜಿತ್, ಶ್ರೀಜಿತ್, ಸಜಿತ್, ಸಜನ, ಸೊಸೆಯಂ ದಿರಾದ ಅಭಿರಾಮಿ, ಖುಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ

ನೀರ್ಚಾಲು: ಏಣಿಯರ್ಪು ನಿವಾಸಿ ಎ.ಪಿ. ಕಾರ್ತ್ಯಾಯಿನಿ (80) ನಿಧನ ಹೊಂದಿದರು. ಪತಿ ಪಕೀರ ಚೆಟ್ಟಿಯಾರ್ ಅಗಲ್ಪಾಡಿ ಈ ಹಿಂದೆ ನಿಧನ ಹೊಂದಿದ್ದಾರೆ. ಪುತ್ರಿ ಶ್ಯಾಮಳಾ ಪುದುಕೋಳಿ, ಅಳಿಯ ಸಂಜೀವ ಚೆಟ್ಟಿಯಾರ್ ಮಾಯಿಪ್ಪಾಡಿ, ಸಹೋದರರಾದ ಕಮಲಾಕ್ಷಿ, ರಮಣಿ, ಅಶೋಕ ನೀರ್ಚಾಲು (ಪತ್ರಕರ್ತ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಧೂರು ಕ್ಷೇತ್ರ ಮಹಾದ್ವಾರ 26ರಂದು ಸುರೇಶ್ ಗೋಪಿ ಲೋಕಾರ್ಪಣೆ

ಮಧೂರು: ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಸಜ್ಜು ಗೊಂಡಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಮಧೂರು ಶ್ರೀ ಮದನಂತೆಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಕಳೆಯನ್ನು ಇಮ್ಮಡಿಗೊಳಿಸಿದ ಮಹಾ  ದ್ವಾರ  ರಾಜಗೋಪುರ ಮತ್ತು ರಾಜಾಂಗಣದ ಉದ್ಘಾಟನೆ ಮಾರ್ಚ್ 26ರಂದು ಪೂರ್ವಾಹ್ನ 10 ಗಂಟೆಗೆ ಜರಗಲಿದೆ. ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ಉದಾರ ದಾನಿ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ನಿರ್ಮಿಸಿ ಕೊಟ್ಟ ದ್ರಾವಿಡ ಶೈಲಿಯ ಮಹಾದ್ವಾರವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ ರಾಜ್ಯ …

ಮಧೂರು ಬ್ರಹ್ಮಕಲಶೋತ್ಸವ: ಕಾಸರಗೋಡು ನಗರದಲ್ಲಿ ಅಲಂಕಾರ ಬಗ್ಗೆ ವಿಶೇಷ ಸಭೆ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಕಾರ್ಯ ಕ್ರಮದ ಯಶಸ್ಸಿಗೆ ಕಾಸರಗೋಡು ನಗರ ಅಲಂಕಾರ, ಸ್ವಾಗತದ್ವಾರ, ವಿದ್ಯುತ್ ಅಲಂಕಾರ ತಯಾರಿಗೆ ನಗರದ ಎಲ್ಲಾ ಸಂಘ ಸಂಸ್ಥೆ ಹಾಗೂ ಆಟೋ, ಟ್ಯಾಕ್ಸಿ ಸ್ಟಾಂಡ್ ಇದರ ಪದಾಧಿಕಾರಿಗಳ ವಿಶೇಷ ಸಭೆ ಕರಂದಕ್ಕಾಡು ಶಿವಾಜಿ ನಗರದ ವೀರ ಹನುಮಾನ್ ಮಂದಿರ ದಲ್ಲಿ ಮಂದಿರದ ಅಧ್ಯಕ್ಷ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. 25ಕ್ಕಿಂತಲೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೊಸ ಬಸ್ ನಿಲ್ದಾಣ, ಅಡ್ಕತ್‌ಬೈಲು, …

ಪೈವಳಿಕೆ ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರವೆಂಬ ಕಾಂಗ್ರೆಸ್ ಆರೋಪ ಅಸತ್ಯ- ಪಂ. ಅಧ್ಯಕ್ಷೆ

ಪೈವಳಿಕೆ: ಪೈವಳಿಕೆ ಪಂಚಾಯತ್‌ನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ವಾರ್ಡ್ ಪ್ರತಿನಿಧಿಗಳು ತಮಗೆ ಇಷ್ಟವಾದ ರೀತಿಯಲ್ಲಿ ಕೃಷಿ ಕೆಲಸವನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಸುತ್ತಿದ್ದಾರೆ ಎಂಬ ರೀತಿಯ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದ ವಿಚಾರವೆಂದು ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ. ತಿಳಿಸಿದ್ದಾರೆ. ಇದು ಕಾಂಗ್ರೆಸ್‌ನ ರಾಜಕೀಯ ಕಪಟತನವಾಗಿದ್ದು, ಆರೋಪವಿದ್ದರೆ ಯಾವ ವಾರ್ಡ್‌ನ ಸದಸ್ಯರು ಯಾವ ರೀತಿ ಆರೋಪ ನಡೆಸಿದ್ದಾರೆ ಎಂದು ಸ್ಪಷ್ಟವಾಗಿ ಪುರಾವೆ ನೀಡಿ ಮೇಲಧಿಕಾರಿಗಳಲ್ಲಿ ತನಿಖೆ ನಡೆಸಲು ಒತ್ತಾಯಿಸಬೇಕೆಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ …

ಮಂಗಲ್ಪಾಡಿ ಮಂಡಲ ಕಾಂಗ್ರೆಸ್‌ನಿಂದ ರಂಜಾನ್ ಕಿಟ್ ವಿತರಣೆ

ಉಪ್ಪಳ: ಮಂಗಲ್ಪಾಡಿ ಮಂಡಲ ಕಾಂಗ್ರೆಸ್(ಐ) ಸಮಿತಿ ನೇತೃತ್ವದಲ್ಲಿ ರಂಜÁನ್ ಕಿಟ್ ವಿತರಣೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿ ದರು. ಮಂಡಲ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಯು.ಡಿ.ಎಫ್. ಮಂಡಲ ಸಂಚಾಲಕ ಮಂಜುನಾಥ ಆಳ್ವ, ಕುಂಬಳೆ ಬ್ಲೋಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು, ಹಿರಿಯ ಮುಖಂಡ ಖಾದರ್ ಸೇರಿದಂತೆ ಬ್ಲೋಕ್ ಹಾಗೂ ಮಂಡಲದ ಪದಾಧಿಕಾರಿಗಳು ಭಾಗವಹಿಸಿದರು.

ಬಜಕೂಡ್ಲು ಕ್ಲಬ್ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಪದ್ಮನಾಭ ಸುವರ್ಣ, ಅಧ್ಯಕ್ಷರಾಗಿ ಚಂದ್ರ ಅಮೆಕ್ಕಳ, ಉಪಾಧ್ಯಕ್ಷರಾಗಿ ಮಹೇಶ್ ಬಜಕೂಡ್ಲು, ದಯಾನಂದ ರೈ ಬಜಕೂಡ್ಲು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಖಂಡಿಗೆ, ಕಾರ್ಯದರ್ಶಿಗಳಾಗಿ ಅಶ್ವಥ್ ಪೂಜಾರಿ, ಪ್ರವೀಣ್ ರೈ ಬಜಕೂಡ್ಲು, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ ಬಜಕೂಡ್ಲು, ಕ್ರೀಡಾ ಕಾರ್ಯದರ್ಶಿಯಾಗಿ ಭರತ್‌ರಾಜ್, …