ಪುತ್ತಿಗೆ ಪಂಚಾಯತ್ ಕರಡು ಮತದಾರರ ಯಾದಿಯಲ್ಲಿ ಲೋಪದೋಷ- ಮುಸ್ಲಿಂ ಲೀಗ್ ಆರೋಪ

ಪುತ್ತಿಗೆ: ಪುತ್ತಿಗೆ ಪಂಚಾಯತ್ನ ಮತದಾರ ಯಾದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮುಸ್ಲಿಂ ಲೀಗ್ ಆರೋಪಿಸಿದೆ. 23-07-2025ರಂದು ಪ್ರಕಟಿಸಿದ ಕರಡು ಮತದಾರರ ಯಾದಿಯನ್ನು ಪರಿಶೀಲಿಸಿದಾಗ ಹಲವು ವಾರ್ಡ್ಗಳಲ್ಲಿ ಮತದಾರರ ಯಾದಿಯ ವಾರ್ಡ್ ವಿಭಜನೆ ಅಂತಿಮ ವಿಜ್ಞಾಪನೆಯಲ್ಲಿ ತಿಳಿಸಿದ ಮನೆ ನಂಬ್ರ ಗಡಿ ಪ್ರಕಾರ ಅಲ್ಲವೆಂದು ತಿಳಿದು ಬಂದಿದೆ. ಆದರೆ ಪ್ರಸ್ತುತ ವಾರ್ಡ್ಗಳಿಂದ ಹೊಸ ವಾರ್ಡ್ಗಳಿಗೆ, ಪೋಲಿಂಗ್ ಸ್ಟೇಷನ್ಗಳಿಗೆ ಕ್ರಮೀಕರಿಸಿದಾಗ ಡಿ ಲಿಮಿಟೇಶನ್ ಹೊರಡಿಸಿದ ಆದೇಶದ ಗಡಿಗಿಂತಲೂ ಹೊರಗಿರುವ ಮತದಾರರನ್ನು ಸೇರಿಸಲಾಗಿದೆ. 11ನೇ ವಾರ್ಡ್ ಅನಂತಪುರದಲ್ಲಿ ಗಡಿ ಪ್ರಕಾರ ಸೇರಬೇಕಾದ …

ಸರಕಾರಿ ಶಾಲೆಗಳಲ್ಲಿ ಸ್ಥಳೀಯಾಡಳಿತ ಇಲಾಖೆಯ ಪರಿಶೀಲನೆ: 100 ಶಾಲಾ ಕಟ್ಟಡಗಳನ್ನು ಕೆಡವಲು ಶಿಫಾರಸ್ಸು

ಕಾಸರಗೋಡು: ಸರಕಾರಿ ಶಾಲೆಗಳ ಸುದೃಢತೆಗಳ ಬಗ್ಗೆ ಸ್ಥಳೀಯಾಡಳಿತ ಇಲಾಖೆ ನೇರವಾಗಿ ಪರಿಶೀಲನೆ ಆರಂಭಿಸಿದ್ದು, ಇದರಂತೆ ಈತನಕ ನಡೆಸಿದ ಪರಿಶೀಲನೆಯಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ನೂರರಷ್ಟು ಶಾಲಾ ಕಟ್ಟಡಗಳು ಅನ್‌ಫಿಟ್ ಆಗಿದ್ದು ಆ ಹಿನ್ನೆಲೆಯಲ್ಲಿ ಅವುಗಳನ್ನು ಕೆಡಹುವಂತೆ ಸರಕಾರಕ್ಕೆ ವರದಿ ಸಲ್ಲಿಸಿದೆ. ಸ್ಥಳೀಯಾಡಳಿತ ಖಾತೆಯ ಕಟ್ಟಡ ನಿರ್ಮಾಣ ವಿಭಾಗದ ಇಂಜಿನಿಯರ್ ಗಳ ತಂಡಗಳು ಶಾಲೆಗಳ ದೃಢತೆಯ ಬಗ್ಗೆ  ಪರಿಶೀಲನೆ ನಡೆಸುತ್ತಿದೆ.  ಅನನು ದಾನಿತ ಕಟ್ಟಡಗಳ ಸುದೃಢ ತೆಯ ಬಗ್ಗೆಯೂ ಸ್ಥಳೀಯಾಡಳಿತ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ. ಅದು ಮುಗಿದಲ್ಲಿ ರಾಜ್ಯದಲ್ಲಿ …

ಸೀತಾಂಗೋಳಿ ನಿವಾಸಿಯನ್ನು ಗಲ್ಫ್‌ನಿಂದ ಊರಿಗೆ ಕರೆಸಿ ಕೊಲೆಗೈದ ಪ್ರಕರಣ: ಇನ್ನೋರ್ವ ಮುಖ್ಯ ಆರೋಪಿ ಬಂಧನ

ಕಾಸರಗೋಡು: ಗಲ್ಪ್ ಉದ್ಯೋಗಿ ಯಾದ ಯುವಕನನ್ನು  ಅಪಹರಿಸಿ  ಗಂಭೀರ ಹಲ್ಲೆಗೊಳಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಕಾರಿನಲ್ಲಿ ಕೊಂ ಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾ ತನನ್ನು ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್ ಹಾಗೂ ತಂಡ ಬಂಧಿಸಿದೆ. ಗಲ್ಫ್ ನಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ …

ಮಗುವಿಗೆ ಜನ್ಮನೀಡಿದ 10ನೇ ತರಗತಿ ವಿದ್ಯಾರ್ಥಿನಿ: ತಂದೆ ಸೆರೆ

ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಬಾಲಕಿಯ ತಂದೆ 48ರ ಹರೆಯದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕರ್ನಾಟಕ ನಿವಾಸಿ ಹಾಗೂ ಕಾಞಂಗಾಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿ ಸೆರೆಯಾಗಿದ್ದಾನೆ. ಪತ್ನಿ ಹಾಗೂ ಐದು ಮಕ್ಕಳ ಜೊತೆಯಲ್ಲಿ ಆರೋಪಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದು, ಈ ಮಧ್ಯೆ ಬಾಲಕಿಗೆ ದೌರ್ಜನ್ಯಗೈಯ್ಯ ಲಾಗಿದೆ. ದೌರ್ಜನ್ಯದ ಬಗ್ಗೆ ಅಥವಾ ಗರ್ಭಿಣಿಯಾದ ಬಗ್ಗೆ ತಾಯಿ ಅಥವಾ ಶಾಲಾ ಅಧ್ಯಾಪಿಕೆಯರು ತಿಳಿದಿರಲಿಲ್ಲವೆನ್ನಲಾಗಿದೆ. ಇತ್ತೀಚೆಗೆ …

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಕೃಷಿಕ, ದನ ಸಾವು

ಕಾಸರಗೋಡು: ದನ ಮೇಯಿಸಲೆಂದು ಹೋದ ಹೈನುಗಾರಿಕಾ ಕೃಷಿಕ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಜೊತೆಗೆ ದನವೂ ಶಾಕ್ ತಗಲಿ ಸತ್ತಿದೆ. ಚೆಮ್ನಾಡ್ ಪಂಚಾಯತ್‌ನ ಕೋಳಿಯಡ್ಕ ವಲಯಂಕುಳಿ ಪಚ್ಚಳಂಕರೆ ವೀಟಿಲ್‌ನ ಮೇಲತ್ತ್  ಕುಂಞಕುಂಡನ್ ನಾಯರ್ ಅಲಿಯಾಸ್ ಕುಂಞುಂಡನ್ ನಾಯರ್ (84) ಸಾವನ್ನಪ್ಪಿದ ವ್ಯಕ್ತಿ. ತಮ್ಮ ಮನೆಯಿಂದ ಸುಮಾರು 100 ಮೀಟರ್‌ನಷ್ಟು ದೂರವಿರುವ ವಯಲಂಕುಳಿಯ ಕೆ.ಕೆ. ಪಾಂಡಿ ಬಯಲಿನಲ್ಲಿ ಕುಂಞಿ ಕುಂಡನ್ ನಾಯರ್ ನಿನ್ನೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ …

ಮನೆಯೊಳಗೆ ನಾಗರಹಾವು ಪ್ರತ್ಯಕ್ಷ

ಮುಳ್ಳೇರಿಯ: ಮನೆಯ ಅಡುಗೆ ಕೊಠಡಿಯೊಳಗೆ ಹಾವು ಪತ್ತೆಯಾ ಗಿದ್ದು ಇದರಿಂದ ಮನೆಯವರು ಭಯಭೀತರಾದ ಘಟನೆ ನಡೆದಿದೆ. ಕಾರಡ್ಕ ಅಡ್ಕ ನಿವಾಸಿ ನಿವೃತ್ತ ಅಧ್ಯಾಪಕ ಎ.ಕೆ. ಸದಾನಂದ ಎಂಬ ವರ ಮನೆಯ ಅಡುಗೆ ಕೊಠಡಿಯಲ್ಲಿ ನಿನ್ನೆ ಬೆಳಿಗ್ಗೆ ಹಾವು ಪತ್ತೆಯಾಗಿದೆ. ಅಡುಗೆ ಕೊಠಡಿಯೊಳಗೆ  ಶಬ್ದ ಉಂಟಾಗಿದ್ದು, ಮನೆಯವರು ನೋಡಿ ದಾಗ ನಾಗರಹಾವು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಪಾಲಕರು ಆಗಮಿಸಿದ್ದು, ಸರ್ಪ ವಲಂಟಿಯರ್ ಸನಿಲ್ ಬಾಳಕಡಂ  ಹಾವನ್ನು ಸೆರೆಹಿಡಿಯುವಲ್ಲಿ ಸಫಲರಾದರು. ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಾಗುತ್ತಿದ್ದು, ಅದರಿಂದ …

ಕ್ವಾರ್ಟರ್ಸ್‌ನಿಂದ ಹಾಡಹಗಲೇ ಹಣ ಕಳವು

ಬದಿಯಡ್ಕ: ಬದಿಯಡ್ಕ ಚೆನ್ನಾರ್‌ಕಟ್ಟೆಯಲ್ಲಿ ಕ್ವಾರ್ಟರ್ಸ್‌ಗೆ ಕಳ್ಳರು ನುಗ್ಗಿ 10,000 ರೂಪಾಯಿ ಗಳನ್ನು ದೋಚಿದ ಬಗ್ಗೆ ದೂರಲಾ ಗಿದೆ. ಈ ಬಗ್ಗೆ ಮೂಡಬಿದ್ರೆ ನಿವಾಸಿ ಕೃಷ್ಣ ಕುಲಾಲ್ (55) ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೃಷ್ಣ ಲಾಲ್ ವಾಸಿಸುವ ಕ್ವಾರ್ಟರ್ಸ್‌ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಹಣ ದೋಚಿದ್ದಾರೆ. ಈ ತಿಂಗಳ ೨೫ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪೋಕ್ಸೋ ಪ್ರಕರಣ: ಆರೋಪಿ ಸೆರೆ

ಉಪ್ಪಳ: ಪೋಕ್ಸೋ ಪ್ರಕ ರಣದಲ್ಲಿ ಆರೋಪಿಯಾದಾತನನ್ನು ಮಂಜೇ ಶ್ವರ ಪೊಲೀಸರು ಬಂ ಧಿಸಿದ್ದಾರೆ. ಬಾಯಾರು ಗಾಳಿಯಡ್ಕ ನಿವಾಸಿ ಶುಭರಾಜ್ (21) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ.  ಈತನಿಗೆ ನ್ಯಾಯಾ ಲಯ ರಿಮಾಂಡ್ ವಿಧಿಸಿದೆ. ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಆರೋ ಪದಂತೆ ಶುಭರಾಜ್ ವಿರುದ್ದ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು.

ಮನೆಯಿಂದ 15,೦೦೦ ರೂ. ಕಳವು: ಮಗನ ಸ್ನೇಹಿತನ ವಿರುದ್ಧ ಕೇಸು

ಕಾಸರಗೋಡು: ಮನೆಗೆ ಬಂದ ಮಗನ ಸ್ನೇಹಿತ ಆ  ಮನೆಯಿಂದ 15,೦೦೦ ರೂ. ನಗದು ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ನಾಯಮ್ಮಾರಮೂಲೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅರ್ಫಾನಾ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರ ಮಗನ ಸ್ನೇಹಿತ ನೆಲ್ಲಿಕಟ್ಟೆಯ ಸುಹೈಲ್ ಎಂಬಾತನ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಜೂನ್ 7ರಂದು ಕಳವು ನಡೆದಿದೆ. ಕುಟುಂಬಶ್ರೀಯ ಸಾಲ ಪಾವತಿಸ ಲೆಂದು ತಾನು ಪುಸ್ತಕವೊಂದರ ಒಳಭಾಗದಲ್ಲಿ ಹಣ ಇರಿಸಿ ಪುಸ್ತಕವನ್ನು ಕಪಾಟಿನ ಮೇಲೆ ಇರಿಸಿದ್ದೆ.   ಅದನ್ನು …

ಬಸ್ ನಿರ್ವಾಹಕ ನಿಧನ

ಕಾಸರಗೋಡು: ಖಾಸಗಿ ಬಸ್‌ನ ಕಂಡಕ್ಟರ್ ಹಾಗೂ ನೆಲ್ಲಿಕುಂಜೆ ನಿವಾಸಿ, ಕೂಡ್ಲು ವಿವೇ ಕಾನಂದ ನಗರದಲ್ಲಿ ವಾಸಿಸುತ್ತಿದ್ದ ಬಾಲಚಂದ್ರನ್ (64) ನಿಧನ ಹೊಂ ದಿದರು. ಮೃತರು ಪತ್ನಿ ನಾರಾಯಣಿ (ನರ್ಸ್), ಮಕ್ಕಳಾದ ಜಿಶಾ, ಅನುಷಾ, ಅಳಿಯಂದಿರಾದ ಸುರೇಶ್, ಕಣ್ಣನ್, ಸಹೋದರ ಜಯರಾಮನ್, ಸಹೋದರಿಯ ರಾದ ಸುಗಂಧಿ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.