ಸಹಾಯ ಪಡೆಯಲು ಹೋದ ವ್ಯಕ್ತಿ ನಾಪತ್ತೆ-ದೂರು

ಕಾಸರಗೋಡು: ರಮ್ಜಾನ್ ಪ್ರಯುಕ್ತ ಸಹಾಯ ಪಡೆಯಲು ಹೋದ ವ್ಯಕ್ತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಮೊಗ್ರಾಲ್ ಪುತ್ತೂರು ಮೊಗರ್‌ನ ಅಬ್ದುಲ್ ಸಮದ್ (40) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಇವರ ಪತ್ನಿ ಎಂ. ಮೈಮೂನ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾರ್ಚ್ ೧೮ರಂದು ಬೆಳಿಗ್ಗೆ ೬.೩೦ಕ್ಕೆ ಸಹಾಯ ಪಡೆಯಲೆಂದು ತಿಳಿಸಿ ಅಬ್ದುಲ್ ಸಮದ್ ಮನೆಯಿಂದ ತೆರಳಿದ್ದಾರೆ. ಅನಂತರ ಮನೆಗೆ ಮರಳಿ ಬಂದಿಲ್ಲವೆಂದು ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸಹಾಯ ಪಡೆಯಲು ಬಳ್ಳೂರಿಗೆ …

ಕೇರಳಕ್ಕೆ ಇನ್ನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಾಧ್ಯತೆ

ಪಾಲಕ್ಕಾಡ್: ಕೇರಳಕ್ಕೆ ಮೂರನೇ ವಂದೇ ಭಾರತ್ ರೈಲುಗಾಡಿ ಶೀಘ್ರ ಲಭಿಸುವ ಸಾಧ್ಯತೆ ಇದೆ. ಆದರೆ ಈ ರೈಲು ಪ್ರಯಾಣ ಹೊರಡುವುದು ಅಥವಾ ಕೊನೆಗೊಳ್ಳುವುದು ಕೇರಳದಲ್ಲಲ್ಲ. ಮಂಗಳೂರು-ಕೊಯಂಬ ತ್ತೂರು ಮಧ್ಯೆ ಈ ರೈಲು ಸಂಚರಿಸ ಲಿದೆಯೆಂದು ಹೇಳಲಾಗತ್ತಿದೆ. ಈ ರೈಲು ಆರಂಭಗೊಂಡರೆ ಕೇರಳದಲ್ಲಿ ಕಾಸರಗೋಡು,  ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಎಂಬೀ ಜಿಲ್ಲೆಗಳ ಮೂಲಕ ಸಂಚರಿಸಲಿದೆ. ಇದು ಮಲಬಾರ್ ಪ್ರದೇಶದ ಪ್ರಯಾಣಕರಿಗೆ ಭಾರೀ ಪ್ರಯೋಜನಕಾರಿಯಾಗಲಿದೆ. ಪ್ರಸ್ತುತ ಕೇರಳದಲ್ಲಿ ಎgಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದೆ.  ತಿರುವನಂತಪುರ-ಕಾಸರಗೋಡು ವಂದೇ …

ಬಾಲಕಿ ಮುಂದೆ ನಗ್ನತಾ ಪ್ರದರ್ಶನ: ಆರೋಪಿಗೆ ಮೂರು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಬಾಲಕಿ ಮುಂದೆ ನಗ್ನತಾ ಪ್ರದರ್ಶನ ನಡೆಸಿದ  ಪ್ರಕರಣದ ಆರೋಪಿಯಾಗಿರುವ  ವಿಟ್ಲ ಸರೋಳಿ ಹೌಸ್‌ನ ಅಬ್ದುಲ್ ಹಕೀಂ (64) ಎಂಬಾತನಿಗೆ ಕಾಸರ ಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾ ಯಾಲಯದ ನ್ಯಾಯಾಧೀಶರಾದ ರಾಮುರಮೇಶ್ ಚಂದ್ರಭಾನು  ಮೂರು ವರ್ಷ ಕಠಿಣ ಸಜೆ ಹಾಗೂ 60,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019ರಲ್ಲಿ ಬಾಯಾರು ಪದವಿನಲ್ಲಿ 16 ವರ್ಷದ ಬಾಲಕಿಯ ಮುಂದೆ  ನಗ್ನತಾ ಪ್ರದರ್ಶನ …

ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ : ಎಲ್ಲಾ ಜಿಲ್ಲೆಗಳಲ್ಲೂ ಅದ್ದೂರಿಯಾಗಿ ಆಚರಣೆ ; ಎಪ್ರಿಲ್ 21ರಂದು ಕಾಸರಗೋಡಿನಿಂದ ಚಾಲನೆ

ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಡರಂಗ ಸರಕಾರದ ನಾಲ್ಕನೇ ವಾರ್ಷಿಕವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅದ್ದೂರಿಯಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ. ಇದರಂತೆ ಸ್ಥಳೀಯಾ ಡಳಿತ ಸಂಸ್ಥೆಗಳಿಂದ ಆರಂಭಗೊಂಡು ರಾಜ್ಯ ಮಟ್ಟದ ತನಕ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇದರ ಉದ್ಘಾಟನೆ ಎಪ್ರಿಲ್ 21ರಂದು ಕಾಸರಗೋಡಿನಲ್ಲಿ ನಡೆ ಯುವ ಮೂಲಕ ಈ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಲಾಗು ವುದು. ಇದು ಮೇ ೨೧ರಂದು ತಿರುವನಂ ತಪುರದಲ್ಲಿ ಸಮಾಪ್ತಿಹೊಂದಲಿದೆ. ವಯನಾಡು, ಪತ್ತನಂತಿಟ್ಟ, ಇಡುಕ್ಕಿ, …

ಕುಂಬಳೆ ರೈಲು ನಿಲ್ದಾಣ ಬಗ್ಗೆ ಅಧಿಕಾರಿಗಳ ಅವಗಣನೆ: ಲಿಫ್ಟ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ; ಪ್ರಯಾಣಿಕರಿಗೆ ಸಮಸ್ಯೆ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎರಡನೇ ಪ್ಲಾಟ್ ಫಾರ್ಮ್‌ಗೆ ತೆರ ಳಲು ನಿರ್ಮಿಸುವ ಲಿಫ್ಟ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗು ತ್ತಿದೆಯೆಂಬ ಆರೋಪ ಕೇಳಿಬರುತ್ತಿದೆ. ನಿರ್ಮಾಣ ಕಾಮಗಾರಿ ಆರಂಭ ಗೊಂಡು ಆರು ತಿಂಗಳಾಯಿತು. ಲಿಫ್ಟ್ ನಿರ್ಮಾಣಕ್ಕಿರುವ ಹೊಂಡ ತೋಡಿ ರುವುದಲ್ಲದೆ ಅನಂತರ ಯಾವುದೇ ಕೆಲಸ ನಡೆಯಲಿಲ್ಲ. ಮಹಿಳೆಯರು, ಮಕ್ಕಳು ಹಾಗೂ ವಯಸ್ಕರಿಗೆ ಎgಡನೇ ಫ್ಲಾಟ್ ಫಾರ್ಮ್‌ಗೆ ತೆರಳಲು ಪ್ರಸ್ತುತ ಮೇಲ್ಸೇತುವೆಯಿದೆ. ಅದರ ಮೆಟ್ಟಿಲೇರಲು ಪಡುತ್ತಿರುವ ಕಷ್ಟವನ್ನು ಪರಿಗಣಿಸಿ ರೈಲ್ವೇ ಇಲಾಖ ಲಿಫ್ಟ್ ಸೌಕರ್ಯ ಏರ್ಪಡಿಸಲು ನಿರ್ಧರಿಸಿತ್ತು.  …

ತೋಡಿಗೆ ಮಲಿನ ಜಲ ಹರಿಯಬಿಟ್ಟ ಮೂಲ ಪತ್ತೆಹಚ್ಚಿ ದಂಡ ವಸೂಲಿ

ಮಧೂರು: ಪಂಚಾಯತ್ ವ್ಯಾಪ್ತಿಯ ಚೂರಿತ್ತೋಡಿನಲ್ಲಿ ತ್ಯಾಜ್ಯಗಳು ಹಾಗೂ ಮಲಿನ ಜಲ ಕಟ್ಟಿನಿಂತು ಅಸಹನೀಯವಾದ ದುರ್ವಾಸನೆ, ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ಪರಿಶೀಲನೆಯಲ್ಲಿ ಗಂಭೀರ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ. ಕಾಸರಗೋಡು ನಗರಸಭೆಯ ಬಸ್ ನಿಲ್ದಾಣ ಸಮೀಪವಿರುವ ಕಾಂಪ್ಲೆಕ್ಸ್‌ನಿಂದ, ಸಮೀಪದ ಕಟ್ಟಡದಿಂದಿರುವ ಉಪಯೋಗಶೂನ್ಯ ಜಲವನ್ನು ಪ್ರತ್ಯೇಕ ವ್ಯವಸ್ಥೆ ಮಾಡಿ ಕೋಟೆಕಣಿ- ಸೂರ್ಲು ರಸ್ತೆಯ ಸಮೀಪದ ಸಾರ್ವಜನಿಕ ಚರಂಡಿಗೆ ಹರಿಯಬಿಟ್ಟಿರುವುದು ಪತ್ತೆಯಾಗಿದೆ. ಮಧೂರು ಪಂಚಾಯತ್‌ಗೊಳಪಟ್ಟ ಚೂರಿ ರೆಸ್ಟೋರೆಂಟ್‌ನಿಂದಲೂ, ಕೆಲವು ಮನೆಗಳಿಂದಲೂ ಇರುವ ಮಲಿನ …

ಪುತ್ತಿಗೆ ಪಂ. ಬಜೆಟ್ ವಸತಿ, ಕೃಷಿ ಯೋಜನೆಗಳಿಗೆ ಆದ್ಯತೆ

ಪುತ್ತಿಗೆ: ಪಂಚಾಯತ್ಗೆ 21,86,02,625 ರೂ.ಗಳ ಬಜೆಟನ್ನು ಉಪಾಧ್ಯಕ್ಷೆ ಬಿ.ಎಂ. ಜಯಂತಿ ಮಂಡಿಸಿದರು. 18,84,21,500 ರೂ. ವೆಚ್ಚ ನಿರೀಕ್ಷಿಸುವ ಕೃಷಿ ಅಭಿವೃದ್ಧಿ ಹಾಗೂ ಅಂಗನವಾಡಿಗಳಿಗೆ 70 ಲಕ್ಷ ರೂ.ನಂತೆಯೂ, ಆರೋಗ್ಯ ವಲಯಕ್ಕೆ 64 ಲಕ್ಷ ರೂ.ನಂತೆಯೂ ಮೀಸಲಿರಿಸಿದ ಬಜೆಟ್ನಲ್ಲಿ ಭಿನ್ನ ಸಾಮರ್ಥ್ಯದವರಿಗೆ, ಮಹಿಳಾ ಕ್ಷೇಮ ಪರಿಶಿಷ್ಟ ಜಾತಿ ಕ್ಷೇಮ, ಕುಡಿಯುವ ನೀರು ಯೋಜನೆಗಳು ಎಂಬಿವುಗಳಿಗೆ 24 ಲಕ್ಷ ರೂ.ನಂತೆ ಮೀಸಲಿಡಲಾಗಿದೆ. ಸಾರಿಗೆ ಸೌಕರ್ಯ, ವಯೋಜನ ಅಭಿವೃದ್ಧಿ, ಶಿಕ್ಷಣ ಚಟುವಟಿಕೆಗಳು ಎಂಬಿವುಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ …

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷೆ: ಶ್ವಾನಗಳ ಕಚ್ಚಾಟದಿಂದ ಸಂಚಾರ ಸಮಸ್ಯೆ, ದುರ್ವಾಸನೆ

ಉಪ್ಪಳ: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವ ಕೃತ್ಯ ವ್ಯಾಪಕ ಗೊಳ್ಳುತ್ತಿದ್ದು, ಇದನ್ನು ಶ್ವಾನಗಳು ಚೆಲ್ಲಾಪಿಲ್ಲಿಗೊಳಿಸಿ ಪಾದಚಾರಿಗಳ ಸಹಿತ ವಾಹನಗಳ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗುತ್ತಿರುವುದಾಗಿ ಆರೋಪಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಹಿದಾಯತ್ ನಗರ ಪರಿಸರದ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಕಂಡು ಬಂದಿದೆ.ಹಲವು ತಿಂಗಳುಗಳಿAದ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಲಾಗುತ್ತಿರುವುದಾಗಿ ದೂರಲಾಗಿದೆ. ದುರ್ವಾಸನೆಯಿಂದ ಸಮಸ್ಯೆ ಉಂಟಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳ ಸಹಿತ ಪಾದಚಾರಿಗಳು ಸಂಚಾರ ನಡೆಸುತ್ತಿದ್ದು, ನಾಯಿಗಳ ಗುಂಪು ಕಚ್ಚಾಡುತ್ತಿದ್ದು, ಪಾದಚಾರಿಗಳನ್ನು ಹಾಗೂ ವಾಹನ ಸವಾರರನ್ನು …

ವಿದ್ಯಾರ್ಥಿನಿಗೆ ದೌರ್ಜನ್ಯ: ಸಿಪಿಎಂ ಲೋಕಲ್ ಕಾರ್ಯದರ್ಶಿ ವಿರುದ್ಧ ಪೋಕ್ಸೋ ಕೇಸು

ತೃಶೂರು: ವಿದ್ಯಾರ್ಥಿನಿಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ನೀಡಿದ ದೂರಿನಂತೆ ಸಿಪಿಎಂ ಲೋಕಲ್ ಕಾರ್ಯದರ್ಶಿ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾ ಗಿದೆ. ಕೈಪಮಂಗಲಂ ಲೋಕಲ್ ಕಾರ್ಯದರ್ಶಿ ಬಿ.ಎಸ್. ಶಕ್ತೀಧರನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿ ದ್ದಾರೆ. ನಾಲ್ಕು ವರ್ಷದ ಹಿಂದೆ ವಿದ್ಯಾರ್ಥಿನಿಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. ಆರೋಪಿಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮಂಡಲ ಸಮಿತಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮಾರ್ಚ್ ನಡೆಸಲಾಗಿತ್ತು.

ಬಾಯಾರು ಗಾಳಿಯಡ್ಕ ಮೊಹಮ್ಮದ್ ಆಶಿಫ್‌ರ ಮರಣ ತನಿಖೆ: ಕ್ರೈಂಬ್ರಾಂಚ್ ಅನಾಸ್ಥೆ- ಕಾಂಗ್ರೆಸ್ ಆರೋಪ

ಪೈವಳಿಕೆ : ಜನವರಿ 15ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಾಯಾರು ಗಾಳಿಯಡ್ಕದ ಮೊಹ ಮ್ಮದ್ ಆಶಿಫ್‌ರÀ ಮರಣದ ಬಗ್ಗೆ ಜಿಲ್ಲಾ ಕ್ರೈಬ್ರಾಂಚ್ ನಡೆಸುತ್ತಿರುವ ತನಿಖೆ ತೃಪ್ತಿಕರವಲ್ಲವೆಂದೂ ತನಿಖಾಧಿಕಾ ರಿಗಳು ತನಿಖೆಯಲ್ಲಿ ತೋರಿಸುತ್ತಿರುವ ಅನಾಸ್ಥೆ ಸಂಶಯಾಸ್ಪದವೆAದೂ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಕಳೆದ ಎರಡು ತಿಂಗಳಿAದ ತನಿಖೆ ನಡೆಸುತ್ತಿರುವ ಕ್ರೈಬ್ರಾಂಚ್ ಅಧಿಕಾರಿಗಳಿಗೆ ಈವರೆಗೆ ಮರಣದ ಕಾರಣ ದೃಢೀಕರಿಸಲು ಸಾಧ್ಯವಾಗದೆ ಇರುವುದು ನಾಚಿಕೆಗೇ ಡಿನ ವಿಚಾರವೆಂದು ಸಭೆ ಅಭಿಪ್ರಾಯ ಪಟ್ಟಿದೆ. ಈ ವಿಚಾರದಲ್ಲಿ ಅಗತ್ಯದ ಕಾನೂನು ಸಲಹೆ ಪಡೆದು …