ಕುಂಬಳೆಯಲ್ಲಿ ಬೀದಿನಾಯಿಗಳ ಉಪಟಳ ತಡೆಗೆ ಕ್ರಮ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕುಂಬಳೆ ಪೇಟೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಲೆದಾಡುತ್ತಿರುವ ಬೀದಿ ನಾಯಿ ಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದು ನಾಗರಿಕರು ಹಾಗೂ ವ್ಯಾಪಾರಿಗಳಿಗೆ ನೆಮ್ಮದಿ ಮೂಡಿಸಿದೆ. ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಂಬಳ  ಪಂಚಾಯತ್ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಂಡಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚುವುದನ್ನು ತಡೆಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮೂಲಕ ಸಾಧ್ಯವಿದೆಯೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಬೀದಿ ನಾಯಿಗಳ ಉಪಟಳ ತೀವ್ರಗೊಂಡ ಪಂಚಾಯತ್‌ನ ಎಲ್ಲಾ ಸ್ಥಳಗಳಲ್ಲೂ …

ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ, ಕಣ್ಣೂರು ವಿಭಾಗ ಸಮಿತಿ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕೇರಳ ಪ್ರಾಂತೀಯ ಸಮಿತಿ ನೇತೃತ್ವದಲ್ಲಿ ಕೋಟಯಂ ತಿರುನಕ್ಕರದಲ್ಲಿರುವ ಇಂದ್ರಪ್ರಸ್ತ ಸಭಾಂಗಣದಲ್ಲಿ ಮೂರು ದಿನ ಜರಗಿದ ವಾರ್ಷಿಕ ಪ್ರಾಂತೀಯ ಬೈಟೆಕ್‌ನಲ್ಲಿ ಜಿಲ್ಲೆಗಳ ನೂತನ ಸಮಿತಿಗಳನ್ನು ಘೋಷಿಸಲಾಯಿತು. ಇದರಲ್ಲಿ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಜಯದೇವ ಖಂಡಿಗೆ, ಕಾರ್ಯಾಧ್ಯಕ್ಷರಾಗಿ ಗೋಪಾಲ ಶೆಟ್ಟಿ ಅರಿಬೈಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ಪದ್ಮಾ ಮೋಹನ ದಾಸ್ ಐಲ, ಪ್ರಧಾನ ಕಾರ್ಯದರ್ಶಿ ಯಾಗಿ ಗಣೇಶ ಮಾವಿನಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ, ಶರ್ಮಿಳಾ ಮಂಗಲ್ಪಾಡಿ, ಹರೀಶ್ ರೈ ಪುತ್ರಕಳ, ಸುರೇಶ್ ಬಾಬು …

ಕ್ಯಾನ್ಸರ್: 10 ಲಕ್ಷಕ್ಕೂ ಹೆಚ್ಚು ಮಹಿಳೆಯರ ಸ್ಕ್ರೀನಿಂಗ್; 86 ಮಂದಿಯಲ್ಲಿ ಕ್ಯಾನ್ಸರ್ ಪತ್ತೆ

ಕಾಸರಗೋಡು: ಕ್ಯಾನ್ಸರ್ ರೋಗ ಪ್ರತಿರೋಧಕ ಚಿಕಿತ್ಸೆಗಾಗಿ ರಾಜ್ಯ ಆರೋಗ್ಯ ಇಲಾಖೆ ಆರೋಗ್ಯ ಹಾಗೂ ‘ಆರೋಗ್ಯ ಆನಂದ ದೂರೀಕರಿಸಿ ಅರ್ಬುದ’ ಎಂಬ ಹೆಸರಲ್ಲಿ ಜ್ಯಾರಿಗೊಳಿಸಲಾಗಿರುವ ಕ್ಯಾನ್ಸರ್ ರೋಗ ತಡೆ ಅಭಿಯಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 10,69,703 ಮಂದಿ ಮಹಿಳೆಯರನ್ನು ಸ್ಕ್ರೀನಿಂಗ್ಗೊಳಪಡಿಸಲಾಗಿದೆ ಎಂದು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಇದರಲ್ಲಿ 86 ಮಂದಿಗೆ ಕ್ಯಾನ್ಸರ್ ರೋಗ ತಗಲಿರುವುದಾಗಿ ಖಾತರಿಪಡಿಸಲಾಗಿದೆ. ರಾಜ್ಯದ 1577 ಆಸ್ಪತ್ರೆಗಳಲ್ಲಾಗಿ ಈ ಸ್ಕ್ರೀನಿಂಗ್ ನಡೆಸಲಾಗಿದೆ. ಹೀಗೆ ಸ್ಕ್ರೀನಿಂಗ್ಗೊಳಪಟ್ಟವರಲ್ಲಿ 42,049 ಮಂದಿಯನ್ನು ಎರಡನೇ …

ಬಾಯಿಕಟ್ಟೆ ಶಂಸುಲ್ ಉಲಮ ನಗರದಲ್ಲಿ ಧಾರ್ಮಿಕ ಪ್ರವಚನ 23ರಿಂದ

ಕುಂಬಳೆ: ಉಳುವಾರು ಶಂಸುಲ್ ಉಲಮ ಇಸ್ಲಾಮಿಕ್ ಸೆಂಟರ್ ಹಾಗೂ ಶಾಖಾ ಎಸ್‌ವೈಎಸ್, ಎಸ್‌ಕೆಎಸ್ ಎಸ್‌ಎಫ್ ಇದರ ಜಂಟಿ ಆಶ್ರಯದಲ್ಲಿ ರಂಜಾನ್ ಪ್ರವಚನ ಆಯೋಜಿಸಲಾಗು ವುದು. ಆದಿತ್ಯವಾರದಿಂದ ಮಂಗಳವಾರದವರೆಗೆ ಬಾಯಿಕಟ್ಟೆ ಶಂಸುಲ್ ಉಲಮಾ ನಗರದಲ್ಲಿ ಪ್ರವಚನ ನಡೆಯಲಿದೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 23ರಂದು ಬೆಳಿಗ್ಗೆ 8.30ಕ್ಕೆ ಮಖಾಂ ಸಿಯಾರತ್ ಬಳಿಕ 2 ಗಂಟೆಗೆ ಎಸ್‌ವೈಎಸ್ ಶಾಖಾ ಅಧ್ಯಕ್ಷ ಕೆ.ಎಂ. ಮೊಹಮ್ಮದ್ ಧ್ವಜಾರೋಹಣ ಗೈಯ್ಯುವರು. ಬಳಿಕ ಮಜ್ಲಿಸುನ್ನೂರ್‌ಗೆ ಹಾದಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. 10 ಗಂಟೆಯಿಂದ ಧಾರ್ಮಿಕ …

ಚೀಮೇನಿ ತೆರೆದ ಜೈಲಿನಲ್ಲಿ ಮೊಬೈಲ್ ಪತ್ತೆ: ಇಬ್ಬರು ಖೈದಿಗಳ ವಿರುದ್ಧ ಕೇಸು

ಕಾಸರಗೋಡು: ಚೀಮೇನಿ ತೆರೆದ ಜೈಲಿನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ವಶಪಡಿಸಿ ದ್ದಾರೆ. ಜೈಲ್ ಸುಪರಿಂಟೆಂಡೆಂಟ್ ಕೆ.ಸಿ. ಅನ್ಸಾರ್ ನೀಡಿದ ದೂರಿನಂತೆ ಇಬ್ಬರು ಖೈದಿಗಳ ವಿರುದ್ಧ ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಬು, ಅರುಣ್ ಪಿಲಿಪ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಫೋನ್ ಜೈಲಿಗೆ ತಲುಪಿಸಿದ್ದು ಯಾರೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಳಕೆ ದೈವಸ್ಥಾನ: ವಾರ್ಷಿಕ ನೇಮೋತ್ಸವ 23ರಿಂದ

ಮಂಜೇಶ್ವರ: ಉದ್ಯಾವರ ಮಾಡ ಕೊಳಕೆ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಕೋಮರಾಯ ಚಾಮುಂಡೇಶ್ವರೀ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.23ರಿಂದ ಜರಗಲಿದೆ. 23ರಂದು ಪ್ರಾತ:ಕಾಲ 6ಕ್ಕೆ ಭಂಡಾರ ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಹೊರಡುವುದು, 8ಕ್ಕೆ ಗಣಹೋಮ, ಸಂಜೆ 7ಕ್ಕೆ ಭಂಡಾರ ಏರುವುದು, ರಾತ್ರಿ 9ರಿಂದ ಶ್ರೀ ಉಳ್ಳಾಲ್ತಿ, ಶ್ರೀ ಬಿಲ್ಲಾರ, ಶ್ರೀ ಬಬ್ಬರ್ಯ, ಶ್ರೀ ಕೋಮಾರು ಚಾಮುಂಡೇಶ್ವರೀ ದೈವಗಳ ನೇಮೋತ್ಸವ, 24ರಂದು ಬೆಳಿಗ್ಗೆ 7ಕ್ಕೆ ಶ್ರೀ ಪಿಲಿಚಾಮುಂಡಿ ದೈವ, 10ಕ್ಕೆ ಶ್ರೀ ಗುಳಿಗ ದೈವದ ನೇಮೋತ್ಸವ, ಮಧ್ಯಾಹ್ನ ಶ್ರೀ ದೈವಗಳ …

ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣ: ಮಂಗಳೂರಿನ ವೈದ್ಯನೋರ್ವನ ವಿರುದ್ಧ ಪೋಕ್ಸೋ ಕೇಸು ದಾಖಲು

ಮಂಜೇಶ್ವರ: ಪ್ರಾಯ ಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯನೋ ರ್ವನ ವಿರುದ್ಧ ಮಂಜೇಶ್ವರ ಪೊಲೀ ಸರು  ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಆಸ್ಪತ್ರೆಯೊಂದರ ವೈದ್ಯನಾದ  ಶಾಶ್ವತ್ ಕುಮಾರ್ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ: ಇದು  2023ರಲ್ಲಿ ದಾಖಲಿಸಿ ಕೊಂಡ ಪೋಕ್ಸೋ ಪ್ರಕರಣವಾಗಿದೆ. ಪ್ರಾಯ ಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಇದರಂತೆ …

ವ್ಯಾಪಾರ ಸಂಸ್ಥೆಯ ಗೋದಾಮಿಗೆ ಕಿಚ್ಚಿಟ್ಟ ಆರೋಪಿ ನ್ಯಾಯಾಲಯದಲ್ಲಿ ಶರಣು

ಬದಿಯಡ್ಕ: ಸಿಗರೇಟ್, ಸೋಡಾ ಸಾಲವಾಗಿ  ನೀಡದ ದ್ವೇಷದಿಂದ  ವ್ಯಾಪಾರ ಸಂಸ್ಥೆಯ ಗೋದಾಮಿಗೆ ಬೆಂಕಿ ಹಚ್ಚಿ ನಾಶನಷ್ಟವುಂಟುಮಾಡಿದ್ದ ಪ್ರಕರಣದ ಆರೋಪಿ ನ್ಯಾಯಾಲಯ ದಲ್ಲಿ ಶರಣಾಗಿದ್ದಾನೆ. ಕನ್ಯಪ್ಪಾಡಿ ಬಳಿಯ ತಲ್ಪನಾಜೆ ಎಂಬಲ್ಲಿನ ಸಂತು ಯಾನೆ ಸಂತೋಷ್ ಎಂಬಾತ ನ್ಯಾಯಾಲಯ ದಲ್ಲಿ  ಶರಣಾಗಿದ್ದು, ಈತನಿಗೆ ನ್ಯಾಯಾ ಲಯ 14 ದಿನಗಳ  ರಿಮಾಂಡ್ ವಿಧಿ ಸಿದೆ. ಈ ತಿಂಗಳ ೧೪ರಂದು ರಾತ್ರಿ ಕನ್ಯಪ್ಪಾಡಿಯಲ್ಲಿರುವ  ಜೆ.ಕೆ. ಬೇಕರ್ಸ್ ಹಾಗೂ ಜೆ.ಕೆ. ಅರೇಂಜರ್ಸ್ ಎಂಬ ವ್ಯಾಪಾರ ಸಂಸ್ಥೆಗಳ ಗೋದಾಮಿಗೆ ಆರೋಪಿ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟಿದ್ದ …

9 ತಿಂಗಳ ಬಳಿಕ ಸುರಕ್ಷಿತವಾಗಿ ಭೂಮಿಗಿಳಿದ ಸುನಿತಾ ವಿಲಿಯಮ್ಸ್

ಫ್ಲೋರಿಡಾ: ತಾಂತ್ರಿಕ ದೋಷದ ಕಾರಣದಿಂದ ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ. ಸ್ಪೇಸ್-ಎಕ್ಸ್-ಕ್ರೂ ಡ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.ಭಾರತೀಯ ಕಾಲಮಾನ ಪ್ರಕಾರ ಇಂದು ಮುಂಜಾನೆ 3.27ರ ಸುಮಾರಿಗೆ ಈ ಇಬ್ಬರು ಗಗನ ಯಾತ್ರಿಕರು ಫ್ಲೋರಿಡಾ ಸಮುದ್ರದ ಮೇಲೆ ಲ್ಯಾಂಡ್ ಆಗಿದ್ದಾರೆ. ಬಳಿಕ ನಾಸಾ …

ಬಸ್ ಕಂಡೆಕ್ಟರ್ ನಿಧನ

ಪೈವಳಿಕೆ: ಕುದ್ರೆಕೋಡ್ಲು ನಿವಾಸಿ ಗಂಗಾಧರರವರ ಪುತ್ರ ಬಸ್ ಕಂಡೆÀಕ್ಟರ್ ಹರೀಶ (45) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳಿಂದ ಉಪ್ಪಳ-ಬಾಯಾರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಹಲವು ತಿಂಗಳುಗಳಿAದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ವಸಂತಿ, ಸಹೋದರ ರಾಧಾಕೃಷ್ಣ, ಸಹೋದರಿಯರಾದ ಶ್ರೀಲತಾ, ಮಮತಾ, ಗೀತಾ, ಜ್ಯೋತಿ, ಸುಮನ, ಸ್ಮಿತಾ ಹಾಗೂ ಅಪಾರ ಬಂಧು- ಸ್ನೇಹಿತರನ್ನು ಅಗಲಿದ್ದಾರೆ. ಅಂತ್ಯಸAಸ್ಕಾರ ನಿನ್ನೆ ಸಂಜೆ ಮನೆ ಪರಿಸರದಲ್ಲಿ ನಡೆಯಿತು. …