ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿ ನಿಧನ

ಉಪ್ಪಳ: ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟರು. ಕರ್ನಾಟಕದ ಉಡುಪಿ ಕುಂಜಿಬೆಟ್ಟು ನಿವಾಸಿ ಸುರೇಶ್ (58) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮಂಜೇಶ್ವರ ಉದ್ಯಾವರದಲ್ಲಿರುವ ಪತ್ನಿಯ ಸಹೋದರಿ ಮೀನ ಎಂಬವರ ಮನೆಗೆ ಮೊನ್ನೆ ಬಂದಿದ್ದರು.  ನಿನ್ನೆ ಸಂಜೆ ಇವರಿಗೆ ವಾಂತಿ ಉಂಟಾಗಿತ್ತೆನ್ನಲಾ ಗಿದೆ. ಇದರಿಂದ ಕೂಡಲೇ ಮಂಗ ಳೂರಿನ ಆಸ್ಪತ್ರೆಗೆ ಕೊಂಡೊಯ್ಯು ತ್ತಿದ್ದಂತೆ ಸಾವು ಸಂಭವಿಸಿದೆ. ಮೃತರು ಪತ್ನಿ ಮಾಲತಿ, ಪುತ್ರ ಋಷಿಕೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೈವಳಿಕೆ: ಬಾಲಕಿ, ಆಟೋ ಚಾಲಕನ ಸಾವು ಪ್ರಕರಣ ಕೊಲೆ ಕೃತ್ಯವೇ ಎಂದು ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ

ಕೊಚ್ಚಿ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ೧೫ರ ಹರೆಯದ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಎಂಬಿವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವೆಂದು ಹೈಕೋರ್ಟ್ ತಿಳಿಸಿದೆ.  ಬಾಲಕಿ ನಾಪತ್ತೆಯಾದ ಬಗ್ಗೆ ತಾಯಿ ನೀಡಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು  ಪರಿಗಣಿಸಿ ನ್ಯಾಯಾಲಯ ಈ ರೀತಿ ಅಭಿ ಪ್ರಾಯಪಟ್ಟಿದೆ. ಬಾಲಕಿ ಹಾಗೂ ಯುವಕನ ಸಾವು ಆತ್ಮಹತ್ಯೆಯಾಗಿ ದೆಯೆಂ ಬುದಾಗಿ  ತನಿಖಾ ತಂಡ  ಪ್ರಾಥಮಿಕವಾಗಿ ಅಂದಾಜಿಸಿದೆ. ಆದರೆ ಅದು …

ಕೆಎಸ್‌ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶನ: ಕರಾರು ನೌಕರನ ವಿರುದ್ಧ ಕೇಸು

ಕಾಸರಗೋಡು: ಕೆಎಸ್‌ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶಿಸಿ ಅಶ್ಲೀಲ ಭಾಷೆಯಲ್ಲಿ ಬೈಗುಳದ ಸುರಿಮಳೆಗೈದಿರುವುದಾಗಿ ದೂರಲಾಗಿದೆ. ವರ್ಕಾಡಿ ಸೆಕ್ಷನ್ ಇಂಜಿನಿಯರ್, ಎಂ.ಪಿ. ಸಂದೀಪ್‌ರ ದೂರಿ ನಂತೆ ಕರಾರು ನೌಕರ ಜಯ ರಾಜ್ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೋಮವಾರ ಸಂಜೆ ೬ ಗಂಟೆಗೆ ಪ್ರಕರಣಕ್ಕೆ ಆಸ್ಪದ ವಾದ ಘಟನೆ ಸಂಭವಿಸಿದೆ. ಮದ್ಯದಮಲಿನಲ್ಲಿ ಕಚೇರಿಗೆ ತಲುಪಿದ ಕರಾರು ನೌಕರ ಜಯರಾಜ್ ನನ್ನನ್ನು ಹಾಗೂ ಉಳಿದ ಸ್ಟಾಫ್‌ಗಳನ್ನು ಅಶ್ಲೀಲ ಭಾಷೆಯಲ್ಲಿ ಬೈದಿದ್ದು ಬಳಿಕ ನಗ್ನತೆ ಪ್ರದರ್ಶಿಸಿ ಹಲ್ಲೆಗೈಯ್ಯುವುದಾಗಿ ಬೆದರಿಕೆ …

ರಿಕ್ಷಾ ಢಿಕ್ಕಿಹೊಡೆಸಿ  ಬಾಲಕನ ಮೇಲೆ ದಾಳಿ: ನರಹತ್ಯಾ ಪ್ರಕರಣ ದಾಖಲು

ಕಾಸರಗೋಡು: ಬಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಆತನಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆಸಿ ಗಾಯ ಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕಾಸರಗೋ ಡು ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಅಣಂಗೂರು ಬೆದಿರಾದ ಬಾಡಿಗೆ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುತ್ತಿರುವ ಮುಹಮ್ಮದ್ ಶಮೀರ್ 17) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಇದರಂತೆ ನಿಯಾಸ್ ಪುಳಿಕ್ಕೂರು ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಾರ್ಚ್ 17ರಂದು ಮೊಗ್ರಾಲ್ ಪುತ್ತೂರು ಚೌಕಿ ಕಂಬಾರ್ …

ಅಧ್ಯಾಪಕನ ಚಿಕಿತ್ಸೆಗೆ ಸಂಗಮ್ ಬಸ್‌ನಿಂದ ಸ್ಪಂದನೆ: ಕಾರುಣ್ಯ ಯಾತ್ರೆ ಪಳ್ಳಂನಿಂದ ಆರಂಭ

ನೀರ್ಚಾಲು: ಮುಂಡಿತ್ತಡ್ಕ ಶಾಲೆಯ ಹಿಂದಿ ಅಧ್ಯಾಪಕ ಪ್ರಶಾಂತ್ ರೈ ಪಿಲಾಂಕಟ್ಟೆಯವರ ಚಿಕಿತ್ಸೆಗೆ ಧನಸಹಾಯಾರ್ಥವಾಗಿ ಮುಂಡಿತ್ತಡ್ಕದ ಸಂಗಮ್ ಬಸ್ ಕಾರುಣ್ಯ ಯಾತ್ರೆ ನಡೆಸಿ ಸ್ಪಂದಿಸಿದೆ. ಇಂದು ಬೆಳಿಗ್ಗೆ ಮುಂಡಿತ್ತಡ್ಕ ಪಳ್ಳಂನಿಂದ ಹೊರಟ ಬಸ್‌ನ ಕಾರುಣ್ಯ ಸಂಚಾರಕ್ಕೆ ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬದಿಯಡ್ಕ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್, ಪುತ್ತಿಗೆ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್, ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಎಣ್ಮಕಜೆ …

ಸಹೋದರಿಯಿಂದ 4 ತಿಂಗಳ ಮಗುವಿನ ಕೊಲೆ: ತನಗೆ ಪರಿಗಣನೆ ಕಡಿಮೆಯಾದೀತೆಂಬ ಭಯದಿಂದ 12ರ ಬಾಲಕಿಯ ಕೃತ್ಯ

ಕಣ್ಣೂರು: 4 ತಿಂಗಳ ಪ್ರಾಯದ ಮಗು ಬೆಳೆದರೆ ತನಗೆ ಲಭಿಸಬಹುದಾದ ಪರಿಗಣನೆ ಇಲ್ಲದಾಗಲಿದೆ ಎಂಬ ಭಯದಲ್ಲಿ ಬಾಲಕಿ ಮಗುವನ್ನು ಕೊಲೆಗೈದ ಬಗ್ಗೆ ತಿಳಿದು ಬಂದಿದೆ.  ಪಾಪಿನಿಶ್ಶೇರಿಯಲ್ಲಿ  ನಾಲ್ಕು ತಿಂಗಳ ಪ್ರಾಯದ ಮಗುವನ್ನು ಕೊಲೆಗೈದಿರುವುದಾಗಿ ಖಚಿತಪಡಿಸಲಾಗಿದೆ. ಕೊಲೆ ಪ್ರಕರಣದ ಹಿಂದೆ ಸಂಬಂಧಿಕೆಯಾದ 12ರ ಬಾಲಕಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ನಿನ್ನೆ ಬೆಳಿಗ್ಗೆ ಮನೆ ಸಮೀಪದ ಬಾವಿಯಲ್ಲಿ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಮಗುವಿನ ಸಾವಿನಲ್ಲಿ ಹೆತ್ತವರನ್ನೂ ಪೊಲೀಸರು ಪ್ರಶ್ನಿಸಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ 12ರ ಬಾಲಕಿ ಕೊಲೆ ನಡೆಸಿರುವುದಾಗಿ …

ಮಹಿಳೆಯರ ಸಹಾಯದಿಂದ ಕಾರಿನಲ್ಲಿ ಎಂಡಿಎಂಎ ಸಾಗಾಟ: ಇನ್ನೋರ್ವ ಸೆರೆ

ಕಾಸರಗೋಡು: ಮಹಿಳೆ ಯರನ್ನು ಬಳಸಿ ಕಾರಿನಲ್ಲಿ ಮಾದಕ ವಸ್ತು ಸಾಗಾಟ ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಕರ್ನಾಟಕದ ಕೊಡಗು ವಿರಾಜ ಪೇಟೆ ಹಾಲುಗುಂಡಿ ಎಂಬಲ್ಲಿನ ಎ.ಕೆ. ಆಬಿದ್ ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ತಂಡಕ್ಕೆ ಎಂಡಿಎAಎ ಹಸ್ತಾಂತರಿಸಿರುವುದು ಈತನಾಗಿದ್ದಾನೆನ್ನಲಾಗಿದೆ.ಫೆಬ್ರವರಿ 25ರಂದು ರಾತ್ರಿ ಆದೂರು ಎಸ್ಐ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತಂಡ ಪಟ್ರೋಲಿಂಗ್ ನಡೆಸುತ್ತಿದ್ದಾಗ ಕೊಟ್ಯಾಡಿ ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರನ್ನು ನಿಲ್ಲಿಸು ವಂತೆ ಪೊಲೀಸರು ಸೂಚಿಸಿದ್ದರು. ಅದನ್ನು ಲೆಕ್ಕಿಸದೆ ಕಾರು ವಿವಿಧ ರಸ್ತೆಗಳಲ್ಲಿ ಪರಾರಿಯಾಗಲೆತ್ನಿಸಿದೆ. …

ಶಬರಿಮಲೆಯಲ್ಲಿ ಮಮ್ಮುಟ್ಟಿಗೆ ಬೇಕಾಗಿ ಮೋಹನ್‌ಲಾಲ್‌ರಿಂದ ಸೇವೆ

ಪತ್ತನಂತಿಟ್ಟ: ಮಮ್ಮುಟ್ಟಿ ಶೀಘ್ರ ಗುಣಮುಖ ಹೊಂದಲೆಂದು ಹಾರೈಸಿ ಶಬರಿಮಲೆಯಲ್ಲಿ ಮೋಹನ್‌ಲಾಲ್ ಪ್ರತ್ಯೇಕ ಸೇವೆ ನಡೆಸಿದರು. ಮುಹಮ್ಮದ್ ಕುಟ್ಟಿ, ವಿಶಾಖ ನಕ್ಷತ್ರದ ಹೆಸರಲ್ಲಿ ಮೋಹನ್ ಲಾಲ್ ಸೇವೆ ನಡೆಸಿದ್ದಾರೆ. ಶಬರಿಮಲೆಗೆ ತೆರಳುವುದಕ್ಕೂ ಮುಂಚಿತ ಮೋಹನ್ ಲಾಲ್ ಮಮ್ಮುಟ್ಟಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸೂಪರ್ ಸ್ಟಾರ್ ಪದವಿಯ ಹೊರತಾಗಿ ಇವರಿಬ್ಬರೂ ಹತ್ತಿರದ ಸ್ನೇಹಿತರಾಗಿದ್ದರು. ಎಂಬುರಾನ್ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲಿ ಮೋಹನ್‌ಲಾಲ್ ಶಬರಿಮಲೆ ಕ್ಷೇತ್ರ ಸಂದರ್ಶನ ನಡೆಸಿದ್ದಾರೆ. ಪಂಪಾದಿಂದ ಇರುಮುಡಿ ಕಟ್ಟು ಕಟ್ಟಿ ಮೋಹನ್‌ಲಾಲ್ ಸನ್ನಿಧಾನಕ್ಕೆ ತಲುಪಿದ್ದಾರೆ. …

ರಸ್ತೆ ಬದಿ ಅಗಲ, ಚರಂಡಿ ನಿರ್ಮಿಸದೆ ಅಭಿವೃದ್ಧಿ ಬಾಯಾರುಪದವು- ಪೆರ್ಮುದೆ ರಸ್ತೆ ದುಸ್ಥಿತಿ

ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯÁರು ಪದವು ಪೆರ್ಮುದೆ ರಸ್ತೆಗೆ ನಬಾರ್ಡ್ ಮೂಲಕ ರೂ. 33,949,172 ಬಿಡು ಗಡೆಗೊಂಡಿತ್ತು. ಈಗ ಸಜಂಕಿಲ ದಿಂದ ಬಾಯರುಪದವು ತನಕ 3 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊAಡಿದೆ. ರಸ್ತೆಯ ಬದಿ ವಿಸ್ತರಿಸದೆ ಚರಂಡಿ ನಿರ್ಮಿಸದೆ ಹಳೆ ಚರಂಡಿ ಮೇಲೆ ಜಲ್ಲಿ ಕಲ್ಲು ಹಾಕಲಾ ಗಿದೆ. ಚರಂಡಿ ನಿರ್ಮಿಸದಿದ್ದರೆ ಮಳೆ ಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯ ಬಹುದು. 5.5 ಮೀಟರ್ ಅಗಲದಲ್ಲಿ ಮೆಕ್ಕಡಾಮ್ ಡಾಮರೀಕರಣೆಗೊಳ್ಳುವ ಈ ರಸ್ತೆಯು ಅಲ್ಲಲ್ಲಿ ತಿರುವು …

ಕೃಷಿಕ ನಿಧನ

ಪೆರ್ಲ: ದೇರಡ್ಕ ಬಳಿಯ ಸಂಟನಡ್ಕ ನಿವಾಸಿ ಬಾಬು ಪೂಜಾರಿ (85) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದರು. ಮೃತರು ಪತ್ನಿ ದಾರಕ್ಕು, ಮಕ್ಕಳಾದ ಪದ್ಮನಾಭ, ತಿಮ್ಮಣ್ಣ, ಲಕ್ಷ್ಮಿ, ಜಯರಾಮ, ಶಾರದ, ರವಿ ಎಸ್.ಎಂ, ಜಯಪ್ರಕಾಶ, ಸೊಸೆಯಂದಿರಾದ ಊರ್ಮಿಳ, ಜಯಂತಿ, ಶಾರದ, ಪದ್ಮಾವತಿ, ಸುಜಾತ, ರಶ್ಮಿ, ಅಳಿಯಂದಿರಾದ ಆನಂದ ಬೆಜ್ಜ, ದಯಾನಂದ ಮಣಿಯಂಪಾರೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.