ಬಿದ್ದು ಸಿಕ್ಕಿದ ಎಟಿಎಂ ಕಾರ್ಡ್ ಉಪಯೋಗಿಸಿ ಹಣ ಅಪಹರಣ: ಬಿಜೆಪಿ ನೇತಾರೆ ಸಹಿತ ಇಬ್ಬರು ಸೆರೆ

ಆಲಪ್ಪುಳ:  ಬಿದ್ದು ಸಿಕ್ಕಿದ ಎಟಿಎಂ ಕಾರ್ಡ್ ಉಪಯೋಗಿಸಿ ಹಣ ಅಪಹರಿಸಿದ ಪ್ರಕರಣದಲ್ಲಿ ಬಿಜೆಪಿ ನೇತಾರೆ, ಬ್ಲೋಕ್ ಪಂಚಾಯತ್ ಸದಸ್ಯೆ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿದ್ದ ಸುಜನ್ಯಾ ಗೋಪಿ (42) ಮತ್ತು ಸಹಾಯಕ ಕಲ್ಲಿಶ್ಶೇರಿಯ ಸಲೀಶ್ ಮೋನ್ (46) ಎಂಬಿವರನ್ನು ಬಂಧಿಸಲಾಗಿದೆ. ಚೆಂಗನ್ನೂರು ನಿವಾಸಿ ವಿನೋದ್ ಎಬ್ರಹಾಂರ ದೂರಿನಂತೆ ಆರೋಪಿಗಳ ಬಂಧಿಸಲಾಗಿದೆ. ಮಾರ್ಚ್ ೧೪ರಂದು ವಿನೋದ್‌ರ ಎಟಿಎಂ ಕಾರ್ಡ್ ಸಹಿತವಿದ್ದ ಪರ್ಸ್ ಕಳೆದುಹೋಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ನೌಕರೆಯಾದ ಪತ್ನಿಯನ್ನು ಮನೆಗೆ ಕರೆದೊಯ್ದ ಬಳಿಕ ಹಿಂತಿರುಗುತ್ತಿದ್ದ ಮಧ್ಯೆ ಪರ್ಸ್ ಕಳೆದುಹೋಗಿತ್ತು. …

ಪೈವಳಿಕೆ ಪಂ.ನಲ್ಲಿ ಉದ್ಯೋಗ ಖಾತರಿ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಒತ್ತಾಯ

ಪೈವಳಿಕೆ : ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೈವಳಿಕೆ ಮಂಡಲ ಕಾಂಗ್ರೆಸ್ ಆಗ್ರಹಿಸಿದೆ. ಪಂಚಾಯತ್ ಸದಸ್ಯರು ತಮಗೆ ಇಷ್ಟ ಬಂದ ರೀತಿಯಲ್ಲಿ ಕೆಲಸ ನಡೆಸುತ್ತಿದ್ದು ಯಾವುದೇ ಮಾನದಂಡ ಪಾಲಿಸುತ್ತಿಲ್ಲ. ಕೆಲವು ವಾರ್ಡಿನಲ್ಲಿ ಪಂಚಾಯತ್ ಸದಸ್ಯರ ಕೃಷಿ ಕೆಲಸಕ್ಕೆ ಉದ್ಯೋಗ ಖಾತರಿ ಯೋಜನೆಯನ್ನು ಬಳಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದೆ. ಸ್ವಜನ ಪಕ್ಷಪಾತ ನಡೆಸುತ್ತಿರುವ ಸದಸ್ಯರ ಬಗ್ಗೆ …

ತಾಯಿಯ ನಿಧನದ ವೇದನೆ: ಪುತ್ರ ಆತ್ಮಹತ್ಯೆ

ಕಾಸರಗೋಡು: ತಾಯಿ ಮೃತಪಟ್ಟ ಮನೋವೇದನೆಯಿಂದ ಪುತ್ರ ಆತ್ಮಹತ್ಯೆಗೈದ ಘಟನೆ ವೆಳ್ಳರಿಕುಂಡ್ ಪರಪ್ಪ ಪಯ್ಯಾಳಂ ಉಪ್ಪಾಟಿಮೂಲೆಯಲ್ಲಿ ಸಂಭವಿಸಿದೆ. ಇಲ್ಲಿನ ರಾಜೇಶ್ (20) ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಯುವಕ. ಇಂದು ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿ ದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಕುಂಬ (ಮೀನಾಕ್ಷಿ) ಇವನನ್ನು ಸಾಕಿದ್ದರು. ತಾಯಿ ಕೂಡಾ ಆರು ತಿಂಗಳ ಹಿಂದೆ ನಿಧನ ಹೊಂದಿದರು. ಸಹೋದರರು ಯಾರೂ ಇಲ್ಲದ ರಾಜೇಶಗೆ …

ರೈಲು ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ಮೃತ್ಯು

ಹೊಸದುರ್ಗ: ತಲೆಹೊರೆ ಕಾರ್ಮಿಕ ಉದಿನೂರಿನಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಡಕ್ಕಾವ್ ನಿವಾಸಿ ಟಿ.ವಿ. ಶರತ್ (35) ಮೃತಪಟ್ಟವರು. ನಿನ್ನೆ ಸಂಜೆ ೪ ಗಂಟೆಗೆ ಉದಿನೂರು ರೈಲ್ವೇ ಗೇಟ್ ಸಮೀಪ ಘಟನೆ ನಡೆದಿದೆ. ಚಂದೇರ ಪೊಲೀಸರು ತಲುಪಿ ಮಹಜರು ಪೂರ್ತಿಗೊಳಿಸಿದರು. ಮೃತದೇಹವನ್ನು ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜ್‌ನ ಶವಾಗಾರದ ಲ್ಲಿರಿಸಲಾಗಿದೆ. ದಿ| ಕೆ. ಭಾಸ್ಕರರ ಪುತ್ರನಾಗಿದ್ದಾರೆ. ಮೃತರು ತಾಯಿ ಟಿ.ವಿ. ಉಷಾ, ಪತ್ನಿ ಆದಿರಾ, ಸಹೋದರ ಶನೂಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೇಂದ್ರೀಯ ವಿ.ವಿ. ಉಪಕುಲಪತಿಯಾಗಿ ಪ್ರೊ. ಸಿದ್ದು ಪಿ. ಅಲ್‌ಗುರಿ ನೇಮಕ

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕರ್ನಾಟಕದ ಧಾರವಾಡ ನಿವಾಸಿ ಪ್ರೊ. ಸಿದ್ದು ಪಿ. ಅಲ್‌ಗುರಿ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅಧಿಸೂಚನೆ ಜ್ಯಾರಿಗೊಳಿಸಿದ್ದಾರೆ. ಕರ್ನಾಟಕ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ ಇವರು ಈ ಹಿಂದೆ ಸೇವೆಸಲ್ಲಿಸಿದ್ದರು. ಡಾ. ಝಾನ್ಸಿ ಜೇಮ್ಸ್, ಡಾ. ಜಿ. ಗೋಪಕುಮಾರ್ ಮತ್ತು ಪ್ರೊ. ಎಚ್. ವೆಂಕಟೇಶ್ವರ ಬಳಿಕ ಪೆರಿಯ ಕೇಂದ್ರೀಯ ವಿ.ವಿಯ ನೇಮಿಸಲ್ಪಟ್ಟ ನಾಲ್ಕನೇ ಉಪಕುಲಪತಿ ಯಾಗಿದ್ದಾರೆ. ಪ್ರೊ. ಸಿದ್ದು. ಕಳೆದ ಎರಡು ವರ್ಷದಿಂದ …

ಬೆಳ್ಳೂರಿನಲ್ಲಿ ನೆಟ್ಟಣಿಗೆ ರೈಸ್ ಮಾರುಕಟ್ಟೆಗೆ ಬಿಡುಗಡೆ

ಬೆಳ್ಳೂರು: ಪಂಚಾಯತ್‌ನ ಕೃಷಿಭವನದ ನೇತೃತ್ವದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳೆಸಿದ ಅಕ್ಕಿಯನ್ನು ನೇರವಾಗಿ ಗ್ರಾಹಕರಿಗೆ ದೊರಕಿಸಿಕೊಡುವ ಪ್ರಯತ್ನದಂಗವಾಗಿ ನೆಟ್ಟಣಿಗೆ ರೈಸ್ ಎಂಬ ಹೆಸರಲ್ಲಿ ಅಕ್ಕಿ ಬಿಡುಗಡೆಗೊಳಿಸಲಾಯಿತು. ಪಂ. ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದು, ಪದ್ಮಶ್ರೀ ಪುರಸ್ಕೃತ, ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅಕ್ಕಿ ಬ್ರಾಂಡ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವೆಂಕಪ್ಪಮಣಿ ಭಟ್ ಕಿನ್ನಿಂಗಾರು, ಜಯ ಬೆಳೇರಿ ಭಾಗವಹಿಸಿದರು. ಕಾರಡ್ಕ ಬ್ಲೋಕ್ ಸಹಾಯಕ ಕೃಷಿ ನಿರ್ದೇಶಕಿ ಶೀನಾ ಕೆ.ವಿ. ಯೋಜನೆಯ ಬಗ್ಗೆ …

ಮಾದಕ ವ್ಯಸನಿ ಯುವಕನಿಂದ ಪತ್ನಿಯ ಕೊಲೆ: ತಡೆಯಲು ಬಂದ ಅತ್ತೆ-ಮಾವನಿಗೂ ಇರಿತ; ಆರೋಪಿ ಸೆರೆ

ಕಲ್ಲಿಕೋಟೆ: ಮಾದಕ ವ್ಯಸನಿಯಾದ ಯುವಕನೋರ್ವ ಪುಟ್ಟ   ಮಗಳ ಕಣ್ಮುಂದೆಯೇ ಪತ್ನಿಯನ್ನು ಇರಿದು ಬರ್ಭರವಾಗಿ ಕೊಲೆಗೈದಿದ್ದು ಮಾತ್ರವಲ್ಲದೆ ಅದನ್ನು ತಡೆಯಲು ಬಂದ ಆಕೆಯ ತಂದೆ ಮತ್ತು ತಾಯಿಗೂ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಲ್ಲಿಕೋಟೆ ಬಳಿ ನಡೆದಿದೆ. ಕಲ್ಲಿಕೋಟೆ ಉಂಙಾಪುಳ ಕಾಕ್ಕಾಡ್‌ನಲ್ಲಿ  ಘಟನೆ ನಡೆದಿದೆ. ಕಾಕ್ಕಾಡ್  ನಿವಾಸಿ ಶಿಬಿಲ (23) ಕೊಲೆಗೀಡಾದ ಯುವತಿ.   ಈ ದುಷ್ಕೃತ್ಯವನ್ನು ತಡೆಯಲು ಬಂದ ಆಕೆಯ ತಂದೆ ಅಬ್ದುಲ್ ರಹ್ಮಾನ್ (45) ಮತ್ತು ತಾಯಿ ಹಸೀನಾ (44)ರಿಗೂ ಆರೋಪಿ ಇರಿದು ಗಂಭೀರ ಗಾಯಗೊಳಿಸಿದ್ದು, ಅವರನ್ನು …

ಅಡಿಕೆ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಕಿಸಾನ್ ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ

ಕಾಸರಗೋಡು: ಅಡಿಕೆ ಕೃಷಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕಿಸಾನ್ ಸೇನೆ ಜಿಲ್ಲಾಧಿಕಾರಿಗೆ ಮನವಿ ನೀಡಿತು. ಜಿಲ್ಲಾಧಿಕಾರಿ ಜಿಲ್ಲಾ ಪ್ರಿನ್ಸಿಪಲ್ ಕೃಷಿ ಅಧಿಕಾರಿಯನ್ನು ಕರೆದು ವಿಷಯಗಳ ಬಗ್ಗೆ ತಿಳಿದುಕೊಂಡರು. ಸಮಸ್ಯೆಗೆ ಪರಿಹಾರ ಕಾಣಲು, ಕೃಷಿಕರೊಂದಿಗೆ ಚರ್ಚಿಸಲು ಜಿಲ್ಲಾಧಿಕಾರಿ ಕೃಷಿ ಅಧಿಕಾರಿಗೆ ನಿರ್ದೇಶ ನೀಡಿದರು. ಇದೇ ವೇಳೆ ಬದಿಯಡ್ಕದಲ್ಲಿ ಕೃಷಿ ಅಧಿಕಾರಿಯ ಉಪಸ್ಥಿತಿಯಲ್ಲಿ ಕೃಷಿಕರ ಜೊತೆ ಚರ್ಚೆ ನಡೆಸಲು ಅವಕಾಶ ಒದಗಿಸುವುದಾಗಿ ಕಿಸಾನ್ ಸೇನೆ ತಿಳಿಸಿದೆ. ಜಿಲ್ಲಾಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ, ಜೊತೆ ಕಾರ್ಯದರ್ಶಿ …

ಬೈಕ್‌ಗೆ ಲಾರಿ ಢಿಕ್ಕಿ: ಯುವಕನ ದಾರುಣ ಸಾವಿನಿಂದ ನಾಡಿನಲ್ಲಿ ಶೋಕಸಾಗರ

ಕುಂಬಳೆ: ವಾಹನ ಅಪಘಾತ ದಲ್ಲಿ ಪೇರಾಲ್ ಕಣ್ಣೂರು ನಿವಾಸಿ ಯಾದ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಪೇರಾಲ್ ಕಣ್ಣೂರು ನಿವಾಸಿ ತ್ಯಾಂಪಣ್ಣ ಪೂಜಾರಿಯವರ ಪುತ್ರ ರವಿಚಂದ್ರ (35) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮೆಡಿಕಲ್ ರೆಪ್ರಸೆಂಟೇ ಟಿವ್ ಆಗಿದ್ದರು. ನಿನ್ನೆ ಮಧ್ಯಾಹ್ನ 1.15ರ ವೇಳೆ ಶಿರಿಯ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತ ಸಂಭವಿಸಿತ್ತು. ರವಿಚಂದ್ರ ಸಂಚರಿಸುತ್ತಿದ್ದ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದ್ದು, ಇದರಿಂದ ಗಂಭೀರ ಗಾಯಗೊಂಡ ರವಿಚಂದ್ರ ಘಟನೆ ಸ್ಥಳದಲ್ಲೇ …

ಅಸೌಖ್ಯ ಬಾಧಿಸಿ ಎಎಸ್‌ಐ ನಿಧನ

ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಎಸ್‌ಐ ಪಳ್ಳಿಕ್ಕೆರೆ ನಿವಾಸಿ ರತೀಶ್ ಪಿ.ಕೆ (44) ಅಸೌಖ್ಯ ನಿಮಿತ್ತ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನಹೊಂದಿದರು. ಇವರು ಕರುಳು, ಕಿಡ್ನಿ ಅಸೌಖ್ಯ ದಿಂದ ಬಳಲುತ್ತಿದ್ದು  ಅವರನ್ನು ಅವ ಯವ ಬದಲಾವಣೆ ಶಸ್ತ್ರಕ್ರಿಯೆಗೆ ಒಳಪಡಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಹೃದಯಾಘಾತಕ್ಕೊಳ ಗಾಗಿದ್ದು, ತಕ್ಷಣ ತುರ್ತು ಚಿಕಿತ್ಸೆ ನೀಡ ಲಾ ಯಿತಾದರೂ ಫಲಕಾರಿಯಾಗದೆ ನಿಧನಹೊಂದಿದರು.  ಕೃಷ್ಣನ್-ಸಾವಿತ್ರಿ ದಂಪತಿಯ ಪುತ್ರನಾಗಿರುವ ಮೃತರು ಪತ್ನಿ ಶ್ರೀಲಕ್ಷ್ಮಿ, ಏಕಪುತ್ರಿ ಧನ್ಯ, ಸಹೋದರಿ ಸರಿತಾ (ಪೊಲೀಸ್ ಸಿಬ್ಬಂದಿ) …