ನಾಪತ್ತೆಯಾದ 13ರ ಬಾಲಕಿ ಸಂಬಂಧಿಕನ ಜೊತೆ ಬೆಂಗಳೂರಿನಲ್ಲಿ ಪತ್ತೆ

ಕಲ್ಲಿಕೋಟೆ: ತಾಮರಶ್ಶೇರಿ ಪೆರುಂಬಳ್ಳಿಯಿಂದ ನಾಪತ್ತೆಯಾಗಿದ್ದ 13ರ ಹರೆಯದ ಬಾಲಕಿಯನ್ನು ಪತ್ತೆಹಚ್ಚಲಾಗಿದೆ. ಸಂಬಂಧಿಕನಾದ ಯುವಕನ ಜೊತೆ ಬೆಂಗಳೂರಿನಿಂದ ಬಾಲಕಿಯ ಪತ್ತೆಹಚ್ಚಲಾಗಿದೆ. ಈ ತಿಂಗಳ 11ರಂದು ಬೆಳಿಗ್ಗೆ ೮ನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ನಾಪತ್ತೆಯಾಗಿದ್ದಳು. ಈಕೆ ಓರ್ವ ಯುವಕನ ಜೊತೆ ಬೆಂಗಳೂರಿ ನಲ್ಲಿದ್ದಾಳೆಂಬ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಬಳಿಕ ನಡೆಸಿದ ತನಿಖೆಯಲ್ಲಿ ಕರ್ನಾಟಕ ಪೊಲೀಸರು ತಾಮರಶ್ಶೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಾಲಕಿಯನ್ನು ಕರೆತರಲು ತಾಮರಶ್ಶೇರಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

4 ತಿಂಗಳ ಮಗುವನ್ನು ಬಾವಿಗೆಸೆದು ಕೊಲೆ

ಪಯ್ಯನ್ನೂರು: ನಾಲ್ಕು ತಿಂಗಳ ಹೆಣ್ಣುಮಗುವನ್ನು ಬಾವಿಗೆಸೆದು ಕೊಲೆಗೈದ ಘಟನೆ ವಳಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪಿನಿಶ್ಶೇರಿ ಮಾಂಕಡವು ಪಾರಕ್ಕಲ್ ಎಂಬಲ್ಲಿ ನಡೆದಿದೆ. ಇದೇ ವೇಳೆ ಮಗುವನ್ನು ಕೊಲೆಗೈದವರು ಯಾರೆಂದು ತಿಳಿಯಲು ತಂದೆ, ತಾಯಿ, ಸಂಬಂಧಿಕರು ಹಾಗೂ ನೆರೆಮನೆ ನಿವಾಸಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ತಮಿಳುನಾಡು ನಿವಾಸಿಗಳಾದ ಮುತ್ತು-ಅಕ್ಕಮ್ಮಲ್ ದಂಪತಿಯ ಮಗು ಯಾಸಿಕ ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ತಂದೆ, ತಾಯಿ, ಸಂಬಂಧಿ ಕರಾದ ಇಬ್ಬರು …

ಜನರು ನೋಡುತ್ತಿದ್ದಂತೆ ಯುವಕ ಬಾವಿಗೆ ಹಾರಿ  ಸಾವು

ಕಾಸರಗೋಡು: ಜನರು ನೋಡುತ್ತಿದ್ದಂತೆಯೇ ಯುವಕನೋ ರ್ವ ಇಲಿವಿಷ ಸೇವಿಸಿದ ಬಳಿಕ ಬಾವಿಗೆ ಹಾರಿ ಸಾವಿಗೀಡಾದ ಘಟನೆ ನಡೆದಿದೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಬ್ರಕಾನದ ಅನೀಶ್ (36) ಸಾವಿಗೀಡಾದ ಯುವಕ. ನಿನ್ನೆ ರಾತ್ರಿ 12 ಗಂಟೆಗೆ ಘಟನೆ ನಡೆದಿದೆ. ಈತ ನಿನ್ನೆ ಸಂಜೆ ಮನೆಯಲ್ಲಿ ಗಲಾಟೆಯೆಬ್ಬಿಸಿದ್ದನೆನ್ನಲಾಗಿದೆ.  ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಸ್ಥಳಕ್ಕೆ ತಲುಪಿ ಅನೀಶ್‌ಗೆ ತಾಕೀತು ನೀಡಿದ್ದರೆನ್ನಲಾಗಿದೆ. ರಾತ್ರಿ ಮತ್ತೆ ಗಲಾಟೆ ಮಾಡಿದ್ದಾನೆನ್ನಲಾಗಿದೆ. ಇದರಿಂದ ಸ್ಥಳೀಯರು ಅಲ್ಲಿಗೆ ತಲುಪಿ ನೋಡುತ್ತಿದ್ದಂತೆ ಅನೀಶ್ ಬಾವಿಗೆ  ಹಾರಿದ್ದಾನೆ. …

ಗಾಂಜಾ ಸಹಿತ ಯುವಕ ಸೆರೆ

ಕಾಸರಗೋಡು: 8 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಕಳ್ಳಾರು ಒಕ್ಲಾವ್ ನಿವಾಸಿ ಸುಬೈರ್ ಎ. (22) ಎಂಬಾತನನ್ನು ನೀಲೇಶ್ವರ ಅಬಕಾರಿ ತಂಡ ಹೊಸದುರ್ಗ ಬಲ್ಲದಿಂದ ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ಎ.ವಿ.ಯವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ನಾಳೆ ಮುಂಜಾನೆ ಭೂಮಿಗೆ

ನವದೆಹಲಿ: ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ನಾಳೆ ಮುಂಜಾನೆ ಭೂಮಿಗೆ ಮರಳಲಿದ್ದಾರೆ.ಭಾರತೀಯ ಕಾಲಮಾನ ಮಾರ್ಚ್ 19ರ ಮುಂಜಾನೆ 3.27ಕ್ಕೆ ಅಮೆರಿಕಾದ ಗಗನಯಾತ್ರಿಕರ ವಾಹಕ ಪ್ಲೋರಿಡಾದ ಸಾಗರದಲ್ಲಿ ಪತನಗೊಳ್ಳ ಲಿದೆ ಮತ್ತು ಅವರಿಬ್ಬರನ್ನು ಅಲ್ಲಿಂದ ಸುರಕ್ಷಿತ ತಾಣಕ್ಕೆ ಸಾಗಿಸಲಾಗುವುದೆಂದು ನಾಸಾ ತಿಳಿಸಿದೆ.ನವೀಕರಿಸಿದ ರಿಟರ್ನ್ ಟಾರ್ಗೆಟ್ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳಿಗೆ ಹಸ್ತಾಂತರ ಕರ್ತವ್ಯಗಳನ್ನು ಪೂರ್ಣ ಗೊಳಿಸಲು ಸಮಯ ನೀಡುತ್ತದೆ. ಈ ಇಬ್ಬರು …

28 ವರ್ಷ ಹಿಂದೆ ರ‍್ಯಾಗಿಂಗ್‌ಗೆ ತುತ್ತಾಗಿ ಮಾನಸಿಕವಾಗಿ ಕುಗ್ಗಿದ್ದ ಸಾವಿತ್ರಿ ಸಾವಿಗೆ ಶರಣು

ಹೊಸದುರ್ಗ: ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿ ಕಣ್ಣು ಕಳೆದುಕೊಂಡ ವೆಂಞಾಟೆ ಎಂ.ವಿ. ಸಾವಿತ್ರಿ (45) ನಿನ್ನೆ ಮೃತಪಟ್ಟರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಶಾಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ನಡೆಸುತ್ತಿದ್ದ ಇವರು ಯುವಜನೋತ್ಸವ ನೃತ್ಯವೇದಿಕೆ ಗಳಲ್ಲಿ ಬಹುಮಾನಗಳನ್ನು ಪಡೆಯುತ್ತಿದ್ದರು. 1996ರಲ್ಲಿ ಕಾಞಂಗಾಡ್ ನೆಹರೂ ಕಾಲೇಜ್‌ನ ವಿದ್ಯಾರ್ಥಿನಿಯಾಗಿದ್ದ ಸಾವಿತ್ರಿ ರ‍್ಯಾಗಿಂಗ್‌ಗೆ ತುತ್ತಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಅಂಕ ಗಳಿಸಿದ ಇವರು ನೆಹರು ಕಾಲೇಜ್‌ನಲ್ಲಿ ಪದವಿಪೂರ್ವ  ಶಿಕ್ಷಣಕ್ಕೆ ಸೇರಿದ್ದರು. ನಾಲ್ಕು ಹೆಣ್ಣುಮಕ್ಕಳಿರುವ ಕುಟುಂಬದ ನಿರೀಕ್ಷೆಯಾಗಿದ್ದರು ಇವರು. …

ರೈಲ್ವೇ ಗೇಟ್‌ಗೆ ರಿಕ್ಷಾ ಢಿಕ್ಕಿ: ತಪ್ಪಿದ ಅಪಾಯ

ಉಪ್ಪಳ: ಹೊಸಂಗಡಿ ರೈಲ್ವೇ ಗೇಟ್‌ಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದು ಹಾನಿಗೀಡಾಗಿದೆ. ನಿನ್ನೆ ಬೆಳಿಗ್ಗೆ 11.30ರ ವೇಳೆ ಬಂಗ್ರಮಂ ಜೇಶ್ವರದಿಂದ ಹೊಸಂಗಡಿ ಪೇಟೆಗೆ ತೆರಳುತ್ತಿದ್ದ ರಿಕ್ಷಾ ಅಪಘಾತಕ್ಕೀ ಡಾಗಿದೆ. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ರೈಲುಗಾಡಿ ಯೊಂದು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಸೈರನ್ ಮೊಳಗಿಸಿ ರೈಲ್ವೇ ನೌಕರರು ಗೇಟ್ ಮುಚ್ಚುಗಡೆಗೊಳಿ ಸುತ್ತಿದ್ದಂತೆ ಆಟೋ ರಿಕ್ಷಾ ಸಂಚರಿಸಿದೆ. ಘಟನೆಯಿಂದ ರಿಕ್ಷಾ ಹಾಗೂ ಗೇಟ್ ಹಾನಿಗೀಡಾಗಿದೆ. ಮಂ ಗಳೂರಿನಿಂದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಗೋವಿಂದ ನಾಯ್ಕ್ ನೇತೃತ್ವದಲ್ಲಿ ರೈಲ್ವೇ ಪೊಲೀಸರು ತಲುಪಿ ಪರಿಶೀಲನೆ …

ಹೊಂಡಕ್ಕೆ ಬಿದ್ದ ಶಾಲಾ ವಾಹನ: ತಪ್ಪಿದ ಅಪಾಯ

ಕಾಸರಗೋಡು: ವಿದ್ಯಾನಗರ-ಮಾನ್ಯ ರಸ್ತೆಯ ಬಾರಿಕ್ಕಾಡ್ ತಿರುವಿನಲ್ಲಿ ಶಾಲಾ ವ್ಯಾನ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಇಂದು ಬೆಳಿಗ್ಗೆ  8.30ರ ವೇಳೆ ಮಾನ್ಯದ ಖಾಸಗಿ ಶಾಲೆಯ ವ್ಯಾನ್ ಅಪಘಾತಕ್ಕೀಡಾಗಿದೆ. ಘಟನೆ  ವೇಳೆ ವ್ಯಾನ್‌ನಲ್ಲಿ 6ಮಂದಿ ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾ ಗಿವೆ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಈ ರಸ್ತೆಯ ವಿವಿಧೆಡೆ  ತಿರುವುಗಳಿದ್ದು, ಇದು ವಾಹನಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ.   ವಾಹನಗಳು ಅಪರಿಮಿತ ವೇಗದಲ್ಲಿ  ಸಂಚರಿಸುತ್ತಿರುವುದರಿಂದ ಕೆಲವೊಮ್ಮೆ ವಾಹನಗಳು ನಿಯಂತ್ರಣ ತಪ್ಪಲು ಕಾರಣವಾಗುತ್ತಿದೆಯೆಂದು …

ಪ್ರಯಾಣಿಕರ ಕಣ್ಮುಂದೆ ವ್ಯಕ್ತಿ ರೈಲು ಗಾಡಿ ಮುಂದೆ ಹಾರಿ ಸಾವು

ಕಾಸರಗೋಡು: ರೈಲು ನಿಲ್ದಾಣ ದಲ್ಲಿ ಪ್ರಯಾಣಿಕರ ಕಣ್ಮುಂದೆಯೇ ಮಧ್ಯವಯಸ್ಕನೋರ್ವ ರೈಲು ಗಾಡಿ ಮುಂದೆ ಜಿಗಿದು ಸಾವಿಗೀಡಾದ  ಘಟನೆ ನಡೆದಿದೆ. ಕಣ್ಣೂರು ಇರಿಟ್ಟಿ ನಿವಾಸಿಯೂ ಪುಣೆ ವಿಜಯನ್ ನಗರದಲ್ಲಿ ವಾಸಿಸುವ ಜೋಳಿ ಥೋಮಸ್ (68) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 5.30ರ ವೇಳೆ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ಹೋಗುತ್ತಿದ್ದ ಗೂಡ್ಸ್ ರೈಲಿನಡಿಗೆ ಜೋಳಿ ಥೋಮಸ್  ಹಾರಿ  ಸಾವಿಗೀಡಾಗಿದ್ದಾರೆ. ರೈಲು ಬರುತ್ತಿದ್ದಂತೆ ಇವರು ಹಳಿಗೆ ಹಾರಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ರೈಲ್ವೇ ಪೊಲೀಸರು ತಲುಪಿ ಮೃತದೇಹವನ್ನು …

ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿಯನ್ನು ಕೊಲೆಗೈದು ರೈಲಿನಡಿ ಹಾರಿ ಆತ್ಮಹತ್ಯೆಗೈದ ಯುವಕ

ಕೊಲ್ಲಂ:  ಮನೆಯೊಳಗೆ ನುಗ್ಗಿ  ಕಾಲೇಜು ವಿದ್ಯಾರ್ಥಿಯನ್ನು ಇರಿದು ಕೊಲೆಗೈದ ಯುವಕ ನಂತರ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಕೊಲ್ಲಂ ನಗರದಲ್ಲಿ ನಡೆದಿದೆ. ಕೊಲ್ಲಂ ಉಳ್ಳಿಯಕೋವಿಲ್ ವಿಳಿಪುರಂ ಮಾತೃಕಾ ನಗರದ ಜೋರ್ಜ್ ಗೋಮಸ್ ಎಂಬವರ ಪುತ್ರ ಫಾತಿಮಾ ಮಾತಾ ನೇಶನಲ್ ಕಾಲೇಜಿನ ದ್ವಿತೀಯ ವರ್ಷ ಬಿಸಿಎ ವಿದ್ಯಾರ್ಥಿ ಫೆಬಿನ್ ಜೋರ್ಜ್ ಗೋಮಸ್ (21) ಕೊಲೆಗೈಯ್ಯಲ್ಪಟ್ಟ ದುರ್ದೈವಿ. ಜಿಲ್ಲಾ ಕ್ರೈಂ ಬ್ರಾಂಚ್ ವಿಭಾಗದ ಗ್ರೇಡ್ ಎಸ್‌ಐ ನೀಂಡಕರದ ಪುತ್ತ್ತನ್‌ಪುರ ತೆಕಡತ್ತ್ ರಾಜು ಎಂಬವರ ಪುತ್ರ ತೇಜಸ್ ರಾಜ್ (23) ಎಂಬಾತ …