ಹದಿನಾಲ್ಕು ತಿಂಗಳಲ್ಲಾಗಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದು 885 ಮೊಬೈಲ್ ಫೋನ್‌ಗಳು: 475ನ್ನು ಪತ್ತೆಹಚ್ಚಿದ ಪೊಲೀಸರು

ಕಾಸರಗೋಡು: ಕಳೆದ 14 ತಿಂಗಳಲ್ಲಿ ಜಿಲ್ಲೆಯಲ್ಲಿ 885 ಮೊಬೈಲ್ ಫೋನ್‌ಗಳು ನಾಪತ್ತೆಯಾಗಿವೆ. ಅದರಲ್ಲಿ 475 ಫೋನ್‌ಗಳು ಪತ್ತೆಹಚ್ಚಿ ಮರು ವಶಪಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇದರಲ್ಲಿ ಹೆಚ್ಚಿನವುಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಿಂದ ಪತ್ತೆಹಚ್ಚಲಾಗಿದೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಜನನಿಬಿಢತೆ ಹೊಂದಿರುವ ಪ್ರದೇಶಗಳು, ಉತ್ಸವ ಇತ್ಯಾದಿ ಆಚರಣೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಮೊಬೈಲ್ ಫೋನ್‌ಗಳು ನಷ್ಟಗೊಳ್ಳುತ್ತಿವೆ. ಇದರ ಹೊರತಾಗಿ ಮೊಬೈಲ್ ಫೋನ್‌ಗಳನ್ನು ಕಳವುಗೈಯ್ಯುವ ತಂಡವೂ ಜಿಲ್ಲೆಯಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಜಿಲ್ಲೆಯಿಂದ ಕಳವುಗೈಯ್ಯಲಾಗುತ್ತಿರುವ ಮೊಬೈಲ್ ಫೋನ್‌ಗಳನ್ನು ಇತರ ರಾಜ್ಯಗಳಿಗೆ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಾರ್ಷಿಕೋತ್ಸವ ನಾಳೆ ಆರಂಭ

ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ವಾರ್ಷಿಕ ಜಾತ್ರೆ ನಾಳೆ ಆರಂಭಗೊಳ್ಳಲಿದ್ದು, ಈ ತಿಂಗಳ ೨೩ರವರೆಗೆ ನಡೆಯಲಿದೆ. ನಾಳೆ ಬೆಳಿಗ್ಗೆ ಗಣಪತಿ ಹೋಮ, ಬಳಿಕ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಭಜನೆ, ಚೆಂಡೆಮೇಳ, ರಾತ್ರಿ ಉತ್ಸವ ಬಲಿ ನಡೆಯಲಿದೆ. 20ರಂದು ರಾತ್ರಿ 7ಕ್ಕೆ ರಂಗಪೂಜೆ, ನಡುದೀಪೋತ್ಸವ, 21ರಂದು ರಾತ್ರಿ 7ಕ್ಕೆ ಕಟ್ಟೆಪೂಜೆ, 22ರಂದು ರಾತ್ರಿ 7ಕ್ಕೆ ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, 23ರಂದು ಸಂಜೆ 6ರಿಂದ  ಕಟ್ಟೆಪೂಜೆ, ಅವಭೃತ …

ಚಂದ್ರಗಿರಿ ರಾಜ್ಯ ಹೆದ್ದಾರಿ ಕೂಡಲೇ ಸಂಚಾರಯೋಗ್ಯಗೊಳಿಸಲು ಎಂ.ಎಲ್. ಅಶ್ವಿನಿ ಆಗ್ರಹ

ಕಾಸರಗೋಡು: ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ 57 ಸ್ಥಳಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ನಡೆಸಿ ಕೂಡಲೇ ಸಂಚಾರಯೋಗ್ಯ ಗೊಳಿಸಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿ ದರು. ದುರಸ್ತಿ ಕಾಮಗಾರಿಗಳನ್ನು ನಡೆಸಲು ಸರಕಾರ ಹಣ ಮಂಜೂರು ಮಾಡು ವುದಿಲ್ಲವೆಂದು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಇಂಜಿನಿಯರ್ ಒಪ್ಪಿಕೊಂಡಿದ್ದಾರೆ. ರಾಜ್ಯ ಹೆದ್ದಾರಿಯ ಪುನರ್ ನಿರ್ಮಾಣ ನಡೆದು ಆರು ವರ್ಷ ಕಳೆದರೂ ದುರಸ್ತಿ ಕಾಮ ಗಾರಿಗಳನ್ನು ಸರಿಯಾಗಿ ನಡೆಸಲಾಗಿಲ್ಲ. ಪ್ರಸ್ತುತ ಈ ರಸ್ತೆಯಲ್ಲಿ 300ಕ್ಕೂ ಅಧಿಕ ಹೊಂಡಗಳು ಇದೆ …

ಮಾದಕದ್ರವ್ಯ ಮಾರಾಟ ಮಾಫಿಯಾ ವಿರುದ್ಧ ಡಿಫಿ ಪ್ರತಿರೋಧ

ಮಿಂಜ: ಮಾದಕ ದ್ರವ್ಯ ಮಾರಾಟ ಹಾಗೂ ಉಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ಡಿಫಿ ನೇತೃತ್ವದಲ್ಲಿ ರಾಜ್ಯದಾದÀ್ಯಂತ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ಮೀಯಪದವುನಲ್ಲಿ ಮಾದಕ ದ್ರವ್ಯ ವಿರುದ್ಧ ಜಾಗೃತ ಪರೇಡ್ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾತ್ ಉದ್ಘಾಟಿಸಿದರು. ನಾಡಿನಲ್ಲಿ ನಡೆಯುತ್ತಿ ರುವ ಮಾದಕ ವಸ್ತುಗಳ ಹೆಚ್ಚಳ ಹಾಗೂ ಆಕ್ರಮಣಗಳು ನಾಡಿನ ಶಾಂತಿಯನ್ನು ಕೆಡಿಸುತ್ತಿದೆ. ಇದು ಖಂಡನೀಯ ವಾಗಿದೆ. ಆಕ್ರಮಣಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಊರಿನ ಸಮಾಧಾನ ಕೆಡೆಸುವ …

ನ್ಯಾಯಾಲಯಗಳ ಮೂಲಭೂತ ಸೌಕರ್ಯ ಹೆಚ್ಚಿಸಲು ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮ್ಮೇಳನ ಆಗ್ರಹ

ಕಾಸರಗೋಡು: ಕಾಸರಗೋಡು, ಹೊಸದುರ್ಗ ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕೆಂದು ಹಾಗೂ ನೂತನ ನ್ಯಾಯಾಲಯ ಕಟ್ಟಡಗಳ ನಿರ್ಮಾಣ ಕೂಡಲೇ ಆರಂಭಿಸಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಅಭಿಭಾಷಕ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಆರ್. ರಾಜೇಂದ್ರನ್ ಸಮ್ಮೇಳನ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮಾತನಾಡಿದರು. ನ್ಯಾಯವಾದಿ ಪಿ. ಮುರಳೀಧರನ್ ಸ್ವಾಗತಿಸಿ, ನ್ಯಾಯವಾದಿ ಕೆ.ಎಂ. ಬೀನ ವಂದಿಸಿದರು. …

ಆಶಾ ಕಾರ್ಯಕರ್ತೆಯರಅನಿರ್ಧಿಷ್ಟಾವಧಿ ಉಪವಾಸ

ತಿರುವನಂತಪುರ:  ಗೌರವಧನ ಹೆಚ್ಚಿಸಬೇಕು, ನಿವೃತ್ತಿ ಸೌಲಭ್ಯವಾಗಿ 5 ಲಕ್ಷ ರೂಪಾಯಿ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿ ರಿಸಿಕೊಂಡು ಒಂದು ತಿಂಗಳಿಗಿಂತ ಲೂ ಹೆಚ್ಚು ಕಾಲದಿಂದ ಸೆಕ್ರೆಟರಿ ಯೇಟ್ ಮುಂದೆ ಸತ್ಯಾಗ್ರಹ ನಡೆಸುತ್ತಿರುವ ಆಶಾ ಕಾರ್ಯಕರ್ತೆ ಯರು ನಿನ್ನೆ ಸೆಕ್ರೆಟರಿ ಯೇಟ್ ಮುತ್ತಿಗೆ ಚಳವಳಿ ನಡೆಸಿದರು. 7 ಗಂಟೆಗಳ ಕಾಲ ನಡೆದ ಮುತ್ತಿಗೆ ಚಳವಳಿಯಿಂದಾಗಿ ತಿರುವನಂತಪುರ ನಗರದ ಎಂ.ಜಿ. ರೋಡ್‌ನಲ್ಲಿ  ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಂಡಿತು. ಚಳವಳಿ ಮುಂದುವರಿಯು ತ್ತಿದ್ದರೂ ರಾಜ್ಯ ಸರಕಾರದಿಂದ ಅನುಕೂಲ ಕ್ರಮ ಉಂಟಾಗದಿರು ವುದರಿಂದ …

ಮಾದಕದ್ರವ್ಯ ಸಾಗಾಟ: ಜಿಲ್ಲೆಯ 10 ಮಂದಿ ಸೇರಿ 997 ಮಂದಿಯ ಯಾದಿ ವಿಧಾನಸಭೆಯಲ್ಲಿ ಮಂಡನೆ

ಕಾಸರಗೋಡು: ಅಬಕಾರಿ ಇಲಾಖೆಯ ತೀವ್ರ ನಿಗಾದಲ್ಲಿರುವ ಮಾದಕವಸ್ತು ಸಾಗಾಟ ದಂಧೆಗೆ ಸೇರಿದ 997 ಮಂದಿಯ ಯಾದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದರಲ್ಲಿ ಕಾಸರಗೋಡು ಜಿಲ್ಲೆಯ 10 ಮಂದಿಯ ಹೆಸರು ಕೂಡಾ ಒಳ ಗೊಂಡಿದೆ. ಈ ಪಟ್ಟಿಯಲ್ಲಿ ಒಳಗೊಂಡಿ ರುವವರಲ್ಲಿ 497 ಮಂದಿ ಖಾಯಂ ಮಾದಕ ವ್ಯವಹಾರ ದಂಧೆಯಲ್ಲಿ ನಿರತ ರಾದವರಾಗಿದ್ದಾರೆ. ಈ ಯಾದಿಯಲ್ಲಿ ಅತೀ ಹೆಚ್ಚು ಎಂಬAತೆ ಕೊಲ್ಲಂ ಜಿಲ್ಲೆಯ 74 ಮಂದಿ ಒಳಗೊಂಡಿದ್ದು 100ಕ್ಕೂ ಹೆಚ್ಚು ಮಾದಕವಸ್ತು ಸಾಗಾಟ ಪ್ರಕರಣದ 108 ಆರೋಪಿಗಳು …

ಕಾಸರಗೋಡು ತಾಲೂಕು ಎನ್‌ಎಸ್‌ಎಸ್ ಕರಯೋಗ ಪದಾಧಿಕಾರಿಗಳು

ಕಾಸರಗೋಡು: ಎನ್‌ಎಸ್‌ಎಸ್ ಕಾಸರಗೋಡು ತಾಲೂಕು ಕರಯೋಗ ಯೂನಿಯನ್ ಆಡಳಿತ ಸಮಿತಿಯ ಆಯ್ಕೆ ಇತ್ತೀಚೆಗೆ ಯೂನಿಯನ್ ಮಂದಿರದಲ್ಲಿ ಜರಗಿತು. ಅಧ್ಯಕ್ಷ ನ್ಯಾಯವಾದಿ ಎ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದರು. ಕೆ.ಕೆ. ವಿನೀಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದು, ೧೫ ಮಂದಿ ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಯೂನಿಯನ್ ಅಧ್ಯಕ್ಷರಾಗಿ ನ್ಯಾಯವಾದಿ ಎ. ಬಾಲಕೃಷ್ಣನ್ ನಾಯರ್,  ಉಪಾಧ್ಯಕ್ಷರಾಗಿ ಸಿ. ಭಾಸ್ಕರನ್ ನಾಯರ್ ಎಂಬಿವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಇ. ಅರವಿಂದಾಕ್ಷನ್ ಸ್ವಾಗತಿಸಿ, ಸಿ. ಭಾಸ್ಕರನ್ ವಂದಿಸಿದರು.

ಟ್ಯೂಷನ್‌ಗೆ ತೆರಳಲು ಉದಾಸೀನ: ಅಡಗಿ ಕುಳಿತು ಮನೆಮಂದಿಗೆ ಆತಂಕ ಸೃಷ್ಟಿಸಿದ 1ನೇ ತರಗತಿ ಬಾಲಕ

ತಿರುವನಂತಪುರ: ಟ್ಯೂಷನ್‌ಗೆ ತೆರಳಲು ಮನೆ ಮಂದಿ ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಮಗು ಅಡಗಿ ಕುಳಿತು ಮನೆಮಂದಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ವೆಂಗನೂರು ನೀಲಕೇಶಿ ನಿವಾಸಿ 1ನೇ ತರಗತಿ ವಿದ್ಯಾರ್ಥಿ ಗಂಟೆಗಳ ಕಾಲ ಅಡಗಿ ಕುಳಿತು ಮನೆಮಂದಿಯನ್ನು ಆತಂಕಕ್ಕೀಡುಮಾಡಿದ್ದನು. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸಂಜೆ ಶಾಲೆಯಿಂದ ಬಂದ ಬಳಿಕ ಆಟವಾಡುತ್ತಿದ್ದ ಮಧ್ಯೆ ಮಗು ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಸ್ಥಳೀಯರೆಲ್ಲರೂ ಸೇರಿ ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಲೆ ಪೊಲೀಸರು ತಲುಪಿ ಹುಡುಕಾಟ ಆರಂಭಿಸಿದರು. ಕೊನೆಯದಾಗಿ …

ಪೈವಳಿಕೆ ಪರಿಸರದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ: ಕಾಂಗ್ರೆಸ್ ಪ್ರತಿಭಟನೆಗೆ ಸಿದ್ಧತೆ

ಪೈವಳಿಕೆ: ಕಳೆದ ಒಂದು ತಿಂಗಳಿನಿAದ ಕುಬಣೂರು ಸಬ್‌ಸ್ಟೇಶನ್ ಪೈವಳಿಕೆ ಸೆಕ್ಷನ್ ವ್ಯಾಪ್ತಿಯಲ್ಲಿ ಪ್ರತಿ ದಿನ ವಿದ್ಯುತ್ ಕಣ್ಣು ಮುಚ್ಚಾಲೆ ನಡೆಸುತ್ತಿದೆ. ದಿನದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ವಿದ್ಯುತ್ ನಿಲುಗಡೆಯಾಗುತ್ತಿದ್ದು ಇದು ಇಲಾಖೆ ಉದ್ದೇಶಪೂರ್ವಕ ಮಾಡುತ್ತಿರುವ ಲೋಡ್ ಶೆಡ್ಡಿಂಗ್ ಎಂದು ದೂರಲÁಗಿದೆ. ಇದರಿಂದ ಅಡಿಕೆ ಕೃಷಿಕರು ಹಾಗೂ ಇತರ ಎಲ್ಲಾ ಕೃಷಿಕರಿಗೂ ಯಥಾ ಸಮಯ ನೀರಾವರಿ ಕೆಲಸ ನಡೆಸಲು ಅಸಾಧ್ಯವಾಗಿದ್ದು, ಇದು ಕೃಷಿಕರಿಗೆ ನಷ್ಟ ತಂದೊಡ್ಡುವ ಸಾಧ್ಯತೆ ಇದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ಪರಿಹಾರ ಕಂಡುಕೊಳ್ಳಬೇಕೆAದು ಪೈವಳಿಕೆ …