ತತ್ವಮಸಿ ಕಲಾ ಸಮಿತಿಗೆ ನೂತನ ಪದಾಧಿಕಾರಿಗಳು

ಮಾವಿನಕಟ್ಟೆ: ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ತತ್ವಮಸಿ ಕಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ್ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಅಂಬುಜಾಕ್ಷನ್ ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಬೆಳ್ಳಿಗೆ, ಕೋಶಾಧಿಕಾರಿಯಾಗಿ ಮಹೇಶ್ ಮಾಣಿಮೂಲೆ, ಜೊತೆ ಕಾರ್ಯ ದರ್ಶಿಯಾಗಿ ಕೀರ್ತನ್ ಹಾಗೂ ಸದಸ್ಯರಾಗಿ ಮಣಿಕಂಠನ್, ಮಂಜು, ಗಣೇಶ್, ಅಕ್ಷತ್, ಶ್ರೀಕಾಂತ್ ಆಯ್ಕೆಯಾದರು. ತರಗತಿ ನಾಯಕನಾಗಿ ಪ್ರಜೀತ್ ಆಯ್ಕೆಯಾದರು.

ಪ್ರೊ. ಪಿ. ಶ್ರೀಕೃಷ್ಣ ಭಟ್‌ರಿಗೆ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿಯಿಂದ ಅಭಿನಂದನೆ

ಮಂಜೇಶ್ವರ: ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ 1970ರಿಂದ 1998ರ ತನಕ ಉಪನ್ಯಾಸಕರಾಗಿ, ಪ್ರೊಫೆಸರ್ ಆಗಿ, ಎಂ.ಫಿಲ್ ವಿಭಾಗದ ಕೋರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ ಕನ್ನಡ ಭಾಷಾತಜ್ಞ, ಅನನ್ಯ ಸಾಧಕ ಪ್ರೊ. ಪಿ. ಶ್ರೀಕೃಷ್ಣ ಭಟ್‌ರಿಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿ ನಲ್ಲಿ ಕನ್ನಡ ಪಠ್ಯ ಪುಸ್ತಕ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸ ಲಾಯಿತು. ಪಠ್ಯ ಪುಸ್ತಕ ಸಮಿತಿಯ ನಿರ್ದೇಶಕ, ಉಪನ್ಯಾಸಕ ಶಿವಶಂಕರÀ ಅಧ್ಯಕ್ಷತೆ ವಹಿಸಿದರು.ನಿವೃತ್ತ ಪ್ರಾಧ್ಯಾಪಕ ರಾಮ್ ಭಟ್, ಪದ್ಮನಾಭ ಪೂಜಾರಿ ಅತಿಥಿಗಳಾಗಿ ದ್ದರು. ಪಠ್ಯ ಪುಸ್ತಕ …

ಅಪಘಾತಕ್ಕೊಳಗಾದ ಕಾರಿನಲ್ಲಿ 25 ಲಕ್ಷ ರೂ. ಪತ್ತೆ

ಮಂಜೇಶ್ವರ: ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಆ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದಾಗ ಢಿಕ್ಕಿ ಹೊಡೆದ ಕಾರೊಂದರಲ್ಲಿ 25,88,000 ಪತ್ತೆಯಾದ ಘಟನೆ ಶನಿವಾರ ರಾತ್ರಿ ಮಂಜೇಶ್ವರ ಪೇಟೆಯಲ್ಲಿ ನಡೆದಿದೆ. ಮಂಗಳೂರಿನಿAದ ಹೊಸಂಗಡಿಗೆ ಹಣ್ಣುಹಂಪಲು ಹೇರಿಕೊಂಡು ಬರುತ್ತಿದ್ದ ಕಾರು ಮತ್ತು ಇನ್ನೊಂದು ಕಾರು ಮಂಜೇಶ್ವರ ಪೇಟೆಯಲ್ಲಿ ಮೊನ್ನೆ ರಾತ್ರಿ ಪರಸ್ಪರ ಢಿಕ್ಕಿ ಹೊಡೆದಿದೆ. ಆ ಎರಡೂ ಕಾರಿನ ಲ್ಲಿದ್ದವರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಈ ವಿಷಯ ತಿಳಿದ ಹೈವೇ ಪಟ್ರೋಲಿಂಗ್ ಪೊಲೀಸ್ ವಿಭಾಗದ ಎಸ್ಐ ಕೆ.ವಿ. ಸುಮೇಶ್ರಾಜ್ …

ಕಾರು ತಡೆದು ನಿಲ್ಲಿಸಿ ಯುವಕ, ಪೊಲೀಸರ ಮೇಲೆ ಹಲ್ಲೆ: 20ಮಂದಿ ವಿರುದ್ಧ ಕೇಸು; ನಾಲ್ವರ ಸೆರೆ

ಕಾಸರಗೋಡು: ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಮಂಗಳೂರು ನಿವಾಸಿ ಮೇಲೆ ಹಲ್ಲೆ ನಡೆಸಿ ಆತನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲೆತ್ನಿಸಿದಾಗ ಆಕ್ರಮಿಗಳ ತಂಡ ಅವರ ಮೇಲೂ ಹಲ್ಲೆ ನಡೆಸಿದ ಘಟನೆ ಮೊಗ್ರಾಲ್ ಪುತ್ತೂರಿನ ಬಳಿ ನಡೆದಿದೆ. ಇದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ದಾಖಲೆಸಿಕೊಂಡ  ಎರಡು ಪ್ರಕರಣಗಳಲ್ಲಾಗಿ ಒಟ್ಟು 20 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕೋಟೆಕ್ಕಾರ್ ಕೊಲ್ಯ ನಿವಾಸಿ ಮುಹಮ್ಮದ್ ಮುಫೀದ್ (31) ಗಾಯಗೊಂಡ ಯುವಕ. …

ಬೈಕ್‌ನಲ್ಲಿ ಸಾಗಿಸುತ್ತಿದ್ದ ಪ್ಯಾಕೆಟ್ ಮದ್ಯ ಸಹಿತ ಮಣಿಯಂಪಾರೆ ನಿವಾಸಿ ಸೆರೆ

ಪೆರ್ಲ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ನಿರ್ಮಿತ ಪ್ಯಾಕೆಟ್ ಮದ್ಯ ಸಹಿತ ಯುವಕನನ್ನು ಬಂಧಿಸಲಾಗಿದೆ. ಎಣ್ಮಕಜೆ ಮಣಿಯಂಪಾರೆ ಅರಮಂಗಾಲ್ ನಿವಾಸಿ ಎಸ್. ಜಗದೀಶ್ (42ನನ್ನು ಬದಿಯಡ್ಕ ಅಬಕಾರಿ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎಂ. ಕೃಷ್ಣ ಹಾಗೂ ತಂಡ ಸೆರೆ ಹಿಡಿದಿದೆ. ಪೆರ್ಲ ಸಮೀಪದ ಇಡಿಯಡ್ಕದಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಜಗದೀಶ್ ಸೆರೆಯಾಗಿದ್ದಾನೆ. ಈತನಿಂದ 180 ಮಿಲ್ಲಿಯ ೪೦ ಟೆಟ್ರಾ ಪ್ಯಾಕ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಬಕಾರಿ ತಂಡದಲ್ಲಿ ಐಬಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎಸ್. ಜೇಕಬ್, …

ಅರ್ಧ ಬೆಲೆಗೆ ಸಾಮಗ್ರಿಗಳ ಮಾರಾಟ: 231 ಕೋಟಿ ರೂ. ವಂಚನೆ: 1343 ಪ್ರಕರಣ ದಾಖಲು-ಮುಖ್ಯಮಂತ್ರಿ

ತಿರುವನಂತಪುರ: ಅರ್ಧ ಬೆಲೆಗೆ ಸಾಮಗ್ರಿಗಳನ್ನು ಮಾರಾಟ ಮಾಡಿ ವಂಚನೆ ನಡೆಸಿದುದಕ್ಕೆ ಸಂಬAಧಿಸಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಲ್ಲಾಗಿ ಈತನಕ ಒಟ್ಟು 1343 ಪ್ರಕರ ಣಗಳನ್ನು ದಾಖಲಿಸಲಾಗಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯ ನ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.ಆಮೂಲಕ ಒಟ್ಟು 231 ಕೋಟಿ ರೂ.ಗಳ ವಂಚನೆ ನಡೆಸಲಾಗಿದೆ. ಇದಕ್ಕೆ ಸಂಬAಧಿಸಿ ಈತನಕ ದಾಖಲಿಸಲಾದ ಒಟ್ಟು 1343 ಕೇಸುಗಳ ಪೈಕಿ 665 ಕೇಸುಗಳ ತನಿಖೆಯನ್ನು ಕ್ರೈಂ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿ ಸಲಾಗಿದೆ. ಒಟ್ಟು 48,384 ಮಂದಿ ಇಂತಹ ವಂಚನೆಗೊಳಗಾಗಿ …

ನೇಣು ಬಿಗಿದು ಯುವಕ ಮೃತ್ಯು

ಕಾಸರಗೋಡು: ಯುವಕ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾವುಂಗಾಲ್ ಕಾಟುಪ್ಪುಳಂಗರ ನಿವಾಸಿ ಬಾಲಚಂದ್ರನ್- ಶ್ರೀಜ ದಂಪತಿ ಪುತ್ರ ಶ್ರೀಜೇಶ್ (28) ಮೃತಪಟ್ಟ ಯುವಕ. ಇಂದು ಬೆಳಿಗ್ಗೆ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತ ಯುವಕ ತಂದೆ, ತಾಯಿ, ಸಹೋದರ ವಿಜೇಶ್ ಹಾಗೂ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಾಲ್ನಡೆಯಾಗಿ ಸಂಚರಿಸಿ ಗಾಂಜಾ ಮಾರಾಟ: ತೃಕರಿಪುರ ನಿವಾಸಿ ಸೆರೆ

ಕಾಸರಗೋಡು: ಕಾಲ್ನಡೆ ಯಾಗಿ ಸಂಚರಿಸಿ ಅಗತ್ಯದವರಿಗೆ ಗಾಂಜಾ ತಲುಪಿಸಿಕೊಡುವ ಯುವಕ ಸೆರೆಯಾಗಿದ್ದಾನೆ. ಬಿಹಾರ್ ಪೂರ್ಣಿಯ ಬಾಂತ್ ತೋಲಾ ವಾಬ್ ನಿವಾಸಿ, ಪ್ರಸ್ತುತ ತೃಕರಿಪುರ ಈಸ್ಟ್ ಮೊಟ್ಟಮ್ಮಲ್‌ನ ಸೈನುದ್ದೀನ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಲೀಂ ಅನ್ಸಾರಿ (45)ನನ್ನು ಚಂದೇರ ಎಸ್‌ಐ ಕೆ.ಪಿ. ಸತೀಶ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಸಂಜೆ ಮೊಟ್ಟಮ್ಮಲ್ ಮಧುರಕೈ ರಸ್ತೆ ಬದಿಯಲ್ಲಿ ಅನ್ಸಾರಿ ನಿಂತಿದ್ದನು. ಈ ಮಧ್ಯೆ ಎಸ್‌ಐ ಹಾಗೂ ತಂಡ ಸಂಚರಿಸಿದ ಪೊಲೀಸ್ ವಾಹನವನ್ನು ಕಂಡು ಅನ್ಸಾರಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಶಂಕೆ ತೋರಿ ಆತನನ್ನು …

ಚೌಕಿ ಕೆ.ಕೆ.ಪುರಂನಲ್ಲಿ ಅಪಘಾತ ಭೀತಿ:  ಕುಸಿದ ರಸ್ತೆ ಬದಿ ದುರಸ್ತಿಗೆ ಕ್ರಮವಿಲ್ಲ

ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ಚೌಕಿ ಉಳಿಯತ್ತಡ್ಕ ಕೋಪಾ ರಸ್ತೆಯಲ್ಲಿ ಚೌಕಿ ಕೆ.ಕೆ.ಪುರಂ ಜಂಕ್ಷನ್ ಬಳಿ ರಸ್ತೆಯ ಒಂದು ಭಾಗ ಕುಸಿದು ಹಲವು ತಿಂಗಳು ಕಳೆದರೂ ಯಾವುದೇ ದುರಸ್ತಿ ಕಾರ್ಯ ನಡೆಸದ ಬಗ್ಗೆ ಸ್ಥಳೀಯರು ರೋಷಗೊಂಡಿದ್ದಾರೆ. ಇತ್ತೀಚೆಗೆ ಇಲ್ಲಿ ಆಟೋರಿಕ್ಷಾ ಮತ್ತು ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಗಾಯಗೊಂಡ ಚೌಕಿಯ ಪತ್ರಿಕೆ ವಿತರಣೆಗಾರ ಹಮೀದ್ ಬದರ್‌ನಗರ ಚಿಕಿತ್ಸೆಯಲ್ಲಿದ್ದಾರೆ. ಇದಲ್ಲದೆ ಇಲ್ಲಿ ರಸ್ತೆಯ ಒಂದು ಭಾಗದಲ್ಲಿ ಸ್ಥಾಪಿಸಿದ ಕಾಲುದಾರಿಯ ಸ್ಲ್ಯಾಬ್ ಮುರಿದ ಸ್ಥಿತಿಯಲ್ಲಿದೆ. ಹಲವು …

ಬೆಸ್ತ  ಮೀನುಗಾರಿಕೆ ವೇಳೆ ಕುಸಿದು ಬಿದ್ದು ಸಾವು

ಕಾಸರಗೋಡು: ಮೀನುಗಾರಿಕೆ ವೇಳೆ  ದೋಣಿಯಲ್ಲಿ ಕುಸಿದುಬಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬೆಸ್ತ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಕಸಬಾ ಕಡಪ್ಪುರದ ಆರ್. ಗಿರೀಶನ್ (42) ಸಾವನ್ನಪ್ಪಿದ ವ್ಯಕ್ತಿ. ಇವರು ಕೀಯೂರು ಕಡಪ್ಪುರದ ಕೆ. ಮಾಧವನ್ ಎಂಬವರ ಫೈಬರ್ ಬೋಟ್‌ನಲ್ಲಿ ಮೀನುಗಾರಿಕೆಗೆ ಈ ತಿಂಗಳ 14ರಂದು ಬೆಳಿಗ್ಗೆ   ಚೆಂಬರಿಕದಿಂದ ಸಮುದ್ರಕ್ಕಿಳಿದಿದ್ದರು. ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಅವರು ದೋಣಿಯಲ್ಲೇ ಕುಸಿದುಬಿದ್ದಿ ದ್ದಾರೆ. ತಕ್ಷಣ ಅವರನ್ನು ಇತರ ಬೆಸ್ತರು ಸೇರಿ ದಡಕ್ಕೆ ತಂದು ನಂತರ ಮಂಗಳೂರಿನ ಆಸ್ಪತ್ರೆಗೆ …