ಇಬ್ಬರು ಬಾಲಕಿಯರಿಗೆ ಕಿರುಕುಳ: ತಂದೆ ವಿರುದ್ಧ ಕೇಸು

ಮಂಜೇಶ್ವರ:  14 ಮತ್ತು 16 ವರ್ಷದ ಬಾಲಕಿಯರಿಗೆ ಲೈಂಗಿಕ  ಉದ್ದೇಶದಿಂದ  ದೇಹ ಸ್ಪರ್ಶಿಸಿರು ವುದಾಗಿ ಆರೋಪಿಸಿ ಬಾಲಕಿಯರ  ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದಾರೆ. ಇದರಂತೆ ಬಾಲಕಿಯರ  42 ವರ್ಷದ  ತಂದೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಳೆದು ಹೋದ ಮೊಬೈಲ್ ಫೋನ್ ಲಭಿಸಿದ ಸಂತೋಷದಲ್ಲಿ ಭಾಸ್ಕರನಗರದ ಫಹ್‌ಮ ಆಯಿಷಾ

ಕುಂಬಳೆ: ಕಳೆದುಹೋಗಿದ್ದ ಮೊಬೈಲ್ ಲಭಿಸಿದ ಸಂತೋಷದಲ್ಲಿದ್ದಾಳೆ ಕುಂಬಳೆ ಭಾಸ್ಕರನಗರದ  ಫಹ್‌ಮ ಆಯಿಷಾ. ಈಕೆ ಕುನಿಲ್ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾಗಿದ್ದು, ಕಳೆದ ತಿಂಗಳ 26ರಂದು ಮಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದಳು. ಈ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿದ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದ ಮಧ್ಯೆ ಈ ತಿಂಗಳ ೪ರಂದು ಫೋನ್ ಆನ್ ಆದ ಬಗ್ಗೆ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ಮರುದಿ ಪಿ., ಕಾನ್‌ಸ್ಟೇಬಲ್ ಮಂಜುನಾಥ ಮೊಬೈಲ್‌ನ ಮೂಲವನ್ನು ಹುಡುಕಿ ಪತ್ತೆಹಚ್ಚಿದ್ದರು. ಆ ವೇಳೆ …

ವಶಕ್ಕೆ ತೆಗೆದುಕೊಂಡ ಆರೋಪಿಯನ್ನು ಪೊಲೀಸ್ ವಾಹನದಿಂದ ಇಳಿಸಲು ತಡೆಯೊಡ್ಡಿದ ಬಗ್ಗೆ ಕೇಸು

ಕಾಸರಗೋಡು: ವಶಕ್ಕೆ ತೆಗೆದ ಆರೋಪಿಯನ್ನು ವಾಹನದಲ್ಲಿ ಪೊಲೀಸ್ ಠಾಣೆಗೆ ತಂದು  ಅಲ್ಲಿ ಆತನನ್ನು ಇಳಿಸಲೆತ್ನಿಸಿದಾಗ ಅದಕ್ಕೆ ತಡೆಯೊಡ್ಡಿದ ಆರೋಪದಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉದುಮ ಞ್ಞಾಣಿಕಡವಿನ ಅನೂಪ್ (37), ಮುನ್ನಾಡಿನ ಸಿ. ರಾಜೇಂದ್ರನ್ (34), ಪೆರಿಯಾದ ಎ. ಶಮೀರ್ (32) ಮತ್ತು ಪೆರಿಯಾ ಮೊಯ್ಯಾಲದ ಟಿ. ರಾಹುಲ್ (23) ಎಂಬವರ ವಿರುದ್ಧ ಬೇಕಲ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರೊಂದಕ್ಕೆ ಸಂಬಂಧಿಸಿ ತನಿಖೆ ನಡೆಸಲೆಂದು ಹೋದ ಬೇಕಲ ಪೊಲೀಸರನ್ನು ಅಲ್ಲಿ ಆರೋಪಿ ಅನೂಪ್ …

ಬದಿಯಡ್ಕದ ಅನ್ನಪೂರ್ಣ ಹೋಟೆಲ್ ಮಾಲಕನಿಗೆ ಕಂಬನಿಯ ವಿದಾಯ

ಬದಿಯಡ್ಕ: ಅಸೌಖ್ಯ ಹಿನ್ನೆಲೆಯಲ್ಲಿ ಪತ್ನಿ ಮೃತಪಟ್ಟ ಮನೋವೇದನೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಹೋಟೆಲ್ ಮಾಲಕರಿಗೆ ಸ್ಥಳೀಯರಿಂದ ಕಣ್ಣೀರ ಕೋಡಿ. ಬದಿಯಡ್ಕದ ಅನ್ನಪೂರ್ಣ ಹೋಟೆಲ್ ಮಾಲಕ ಬಾರಡ್ಕ ಕನಕಪ್ಪಾಡಿ ದುರ್ಗಾ ನಿಲಯ ನಿವಾಸಿ ಇ.ವಿ. ಮಧುಸೂಧನ  (54). ನಿನ್ನೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸ್ಥಳೀಯರಿಗೆ ಬಿಟ್ಟುಕೊಡಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಯಿತು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರ ಪತ್ನಿ ಹರಿಣಾಕ್ಷಿಅಸೌಖ್ಯ ಹಿನ್ನೆಲೆಯಲ್ಲಿ …

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ : ಭರದಿಂದ ನಡೆಯುತ್ತಿರುವ ಸಿದ್ಧತೆ; ಮನೆಮನೆಗಳಿಗೆ ಆಮಂತ್ರಣ ಪತ್ರಿಕೆ ವಿತರಣೆ

ಮಧೂರು: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶ, ಮೂಡಪ್ಪ ಸೇವೆಗೆ ಇನ್ನು ಕೇವಲ 10 ದಿನಗಳಿದ್ದು, ಭರದ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯ ಉತ್ಸವವಾಗಿ ಬದಲಾಗುವ ಮಧೂರು ಬ್ರಹ್ಮಕಲಶೋತ್ಸವಕ್ಕೆ ವಿವಿಧ ಕಡೆಗಳಿಂದ ಈಗಾಗಲೇ ಕ್ಷೇತ್ರಕ್ಕೆ ಕಾರ್ಯಕರ್ತರು ತಲುಪುತ್ತಿದ್ದು, ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕ್ಷೇತ್ರ ಪರಿಸರ ಸ್ವಚ್ಛಗೊಳಿಸುವ, ಬ್ರಹ್ಮಕಲಶದ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಬೇಕಾದ  ಸ್ಥಳಾವಕಾಶವನ್ನು ಸಿದ್ಧಪಡಿಸುವ ಕೆಲಸಗಳು ಭರದಿಂದ ನಡೆಯುತ್ತಿದೆ. ಚಪ್ಪರ ಸಹಿತ ವಾಹನ ಪಾರ್ಕಿಂಗ್‌ಗಳಿಗೆ ಬೇಕಾದ ವ್ಯವಸ್ಥೆಗಳು ನಡೆಯುತ್ತಿವೆ. ದೇವಸ್ಥಾನದ ಪೈಂಟಿಂಗ್ …

ಗೂಗಲ್ ಮ್ಯಾಪ್ ನೋಡಿ ಸಂಚಾರ: ಹೊಳೆಗೆ ಬಿದ್ದ ಕಾರಿನಲ್ಲಿದ್ದ ಐದು ಮಂದಿ ಪಾರು

ತೃಶೂರು: ತಿರುವಿಲ್ಲಾ ಮಲದಲ್ಲಿ ಗೂಗಲ್ ಮ್ಯಾಪ್ ನೋಡಿ ಸಂಚರಿಸುತ್ತಿದ್ದ ಕಾರು ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದ ಐದು ಮಂದಿಯ ತಂಡ ಆಶ್ಚರ್ಯಕರವಾಗಿ ಪಾರಾಗಿದೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಮಲಪ್ಪುರಂ ಕೋಟೆಕ್ಕಲ್ ಚೆಂಗೋಟೂರು ನಿವಾಸಿ ಬಾಲಕೃಷ್ಣನ್ ಹಾಗೂ ಕುಟುಂಬ ಕಾರಿನಲ್ಲಿ  ಸಂಚರಿಸಿದೆ. ಮನೆಗೆ ಹಿಂತಿರುಗುತ್ತಿದ್ದ ಮಧ್ಯೆ ಅಪಘಾತ ಉಂಟಾಗಿದ್ದು, ಗಾಯತ್ರಿ ಹೊಳೆಗೆ ಅಡ್ಡವಾಗಿ ಕೊಂಡಾಳಿ ತಿರುವಿಲ್ಲಾಮಲ ಪಂಚಾಯತ್ ಗಳನ್ನು ಜೋಡಿಸುವ ಎಳುನಲ್ಲತ್ ಕಡವು ಅಣೆಕಟ್ಟಿನಲ್ಲಿ ಅಪಘಾತ ಸಂಭವಿಸಿದೆ. ರಾತ್ರಿ ಗೂಗಲ್ ಮ್ಯಾಪ್ ನೋಡಿ ಅಣೆಕಟ್ಟಿನ ಮೂಲಕ …

ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಾವೇಶ

ಉಪ್ಪಳ: ಡಿವೈಎಫ್‌ಐ ಮಂಜೇ ಶ್ವರ ಬ್ಲೋಕ್ ಮಟ್ಟದ ಕಾರ್ಯಕರ್ತರ ಸಭೆ ಮೀಯಪದವು ಮಾರ್ಕೆಟ್ ಹಾಲ್‌ನಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್ ಉದ್ಘಾಟಿಸಿದರು.ಬ್ಲೋಕ್ ಅಧ್ಯಕ್ಷ ವಿನಯ್ ಕುಮಾರ್ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ರಾಜ್ಯ ಮಾಜಿ ಕೋಶಾಧಿಕಾರಿ ವಿ.ವಿ ರಮೇಶನ್, ಜಿಲ್ಲಾ ಜತೆ ಕಾರ್ಯದರ್ಶಿ ಸಾದಿಕ್ ಚೇರುಗೋಳಿ ಮಾತನಾಡಿ ದರು. ಬ್ಲೋಕ್ ಸಮಿತಿ ಕಾರ್ಯದರ್ಶಿ ಹಾರಿಸ್ ಪೈವಳಿಕೆ ಸ್ವಾಗತಿಸಿದರು.ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕರಾಗಿ ಆಕಾಶ್ ಕೋರಿಕ್ಕಾರ್, ಉಪಾಧÀ್ಯಕ್ಷ ರಾಗಿ ಅಕ್ಷಯ್ ಕುಮಾರ್, ಪದ್ಮಜಾ ಕೂಳೂರು, ಕಾರ್ಯದರ್ಶಿಯಾಗಿ …

ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ: ಪುತ್ರ ಮೃತ್ಯು

ಕಲ್ಲಿಕೋಟೆ: ಕೆಲಸದ ಸ್ಥಳದಿಂದ ತಾಯಿ ಯನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಹಿಂತಿರುಗುತ್ತಿ ದ್ದಾಗ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪುತ್ರ ಮೃತಪಟ್ಟನು. ಕುಟ್ಯಾಡಿ ನರಿಕ್ಕೂ ಟುಂಚಾಲ್ ನಿವಾಸಿ ಬಾಲನ್ ಎಂಬವರ ಪುತ್ರ ರೋಹಿನ್ (19) ಮೃತಪಟ್ಟ ಯುವಕ. ಮೋಕೇರಿ ಸರಕಾರಿ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾ ಗಿದ್ದಾನೆ. ಶನಿವಾರ ರಾತ್ರಿ 11 ಗಂಟೆಗೆ ಅಪ ಘಾತ ಸಂಭವಿಸಿದೆ. ಖಾಸಗಿ ಟೆಕ್ಸ್‌ಟೈಲ್ ಶೋರೂಂನಲ್ಲಿ ಕೆಲಸ ಮಾಡುವ ತಾಯಿ ಯನ್ನು ಕರೆದುಕೊಂಡು ಬರುತ್ತಿರುವಾಗ ನರಿಕ್ಕೋಟುಂಚಾಲ್‌ನಲ್ಲಿ ಬೈಕ್‌ಗೆ ನಿಯಂತ್ರಣ ತಪ್ಪಿದ …

ಸ್ನೇಹಿತ-ಪೊಲೀಸ್ ಸ್ಟೇಷನ್ ಎಕ್ಸ್‌ಟೆನ್ಶನ್ ಕೇಂದ್ರ ಉದ್ಘಾಟನೆ

ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್, ಸ್ನೇಹಿತ ಜೆಂಡರ್ ಹೆಲ್ಪ್ ಡೆಸ್ಕ್, ಕಾಸರಗೋಡು ಜಿಲ್ಲಾ ಪೊಲೀಸ್ ಇಲಾಖೆ ಜಂಟಿ ಆಶ್ರಯದಲ್ಲಿ ಸ್ನೇಹಿತ- ಪೊಲೀಸ್ ಸ್ಟೇಷನ್ ಎಕ್ಸ್‌ಟೆನ್ಶನ್ ಸೆಂಟರ್‌ನ್ನು ಕಾಸರಗೋಡು ಡಿವೈಎಸ್‌ಪಿ ಕಚೇರಿಯಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಮುಖ್ಯ ಅತಿಥಿಯಾಗಿದ್ದರು. ಕುಟುಂಬಶ್ರೀ ಎಡಿಎಂಸಿ ಕಿಶೋರ್ ಕುಮಾರ್ ಸ್ವಾಗತಿಸಿದರು. ಸ್ಮಿಜಾ, ಸುನಿಲ್ ಕುಮಾರ್ ಸಿ.ಕೆ, ಅಜಿತಾ ಕೆ, ಸುನಿತ, ಆಯಿಷಾ ಇಬ್ರಾಹಿಂ …

ಕೃಷಿಕ ನಿಧನ

ಮುಳ್ಳೇರಿಯ: ಕಾನಕ್ಕೋಡು ಬೇತಾಳಮೂಲೆ ನಿವಾಸಿ ಕೃಷಿಕ ವಳಮಲೆ ಜನನ ವಿಶ್ವನಾಥ ರೈ (72) ನಿನ್ನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಕುಸುಮಾವತಿ ವಿ. ರೈ, ಮಕ್ಕಳಾದ ಚಂದ್ರನಾಥ ರೈ, ಸಚ್ಚಿದಾನಂದ ರೈ, ವಿದ್ಯಾಮಣಿ ಎ. ಶೆಟ್ಟಿ, ಸೊಸೆಯಂದಿರಾದ ಶಶಿಕಲ ಸಿ. ರೈ, ರಶ್ಮಿ ಎಸ್. ರೈ, ಅಳಿಯ ಅಮರನಾಥ ಶೆಟ್ಟಿ ಚಟ್ಲ, ಸಹೋದರಿಯರಾದ ಸುಂದರಿ ಎನ್. ರೈ ಬೆಳಿಂಜ, ರಾಜೀವಿ ಬಿ. ರೈ ಮಲ್ಲಾವರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಿವಿಧ ಸಂಘಸಂಸ್ಥೆಗಳ …