ಬಾರ್ ನೌಕರನನ್ನು ತಡೆದು ಹಣ, ಮೊಬೈಲ್ ಫೋನ್ ಅಪಹರಣ: ತಂಡಕ್ಕಾಗಿ ಹುಡುಕಾಟ

ಕೊಚ್ಚಿ:ಆಲುವಾದಲ್ಲಿ ಬಾರ್ ನೌಕರನನ್ನು ತಡೆದು ನಿಲ್ಲಿಸಿ ಮೊಬೈಲ್ ಫೋನ್, ಹಣ ಅಪಹರಿಸಲಾಗಿದೆ. ಕಣ್ಣೂರು ನಿವಾಸಿ ಶ್ರೀಜೇಶ್‌ನ ಮೊಬೈಲ್ ಹಾಗೂ 4000 ರೂ.ವನ್ನು ನಾಲ್ಕು ಮಂದಿಯ ತಂಡ ಅಪಹರಿಸಿದೆ. ಆಲುವಾದಲ್ಲಿರುವ ಅಲಂಕಾರ್ ಬಾರ್‌ನ ನೌಕರ ಶ್ರೀಜೇಶ್ ನಿನ್ನೆ ಮುಂಜಾನೆ ರೈಲಿನಿಂದ ಇಳಿದು ಹಳಿ ಮೂಲಕ ವಾಸ ಸ್ಥಳಕ್ಕೆ  ನಡೆದುಕೊಂಡು ಹೋಗುತ್ತಿದ್ದಾಗ ದರೋಡೆ ತಂಡ ಇವರನ್ನು ತಡೆದು ನಿಲ್ಲಿಸಿದೆ. ಬಳಿಕ ಮೊಬೈಲ್ ಫೋನ್ ಹಾಗೂ ಕೈಯಲ್ಲಿದ್ದ ನಗದನ್ನು ಅಪಹರಿಸಿದೆ. ಪ್ರಕರಣದಲ್ಲಿ ಆಲುವಾ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಯೂರ ಕಳತ್ತೂರು ಸಭೆ, ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಮಯೂರ ಕಳತ್ತೂರು ಇದರ ವಿಶೇಷ ಸಭೆ ಹಿರಿಯ ಕಲಾವಿದ ಮಹಾಬಲ ಭಟ್ ಇವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಸಂಘದ ಆಶ್ರಯದಲ್ಲಿ ದಿ| ಮಂಜುನಾಥ ಭಂಡಾರಿ ಪಂಜಳ, ದಿ| ನಾರಾಯಣ ಮಾಸ್ತರ್ ಕಮಾರ್ತೆ ಇವರ ಸ್ಮರಣಾರ್ಥ ಸಮಾಜಮುಖಿ ಕಾರ್ಯ ಕ್ರಮ, ನೂತನ ಸ್ಮಾರಕ ಮಂದಿರ ಗ್ರಂಥಾಲಯದ ರೂಪದಲ್ಲಿ ನಿರ್ಮಿಸಲು, ಸಂಘವನ್ನು ನೂತನವಾಗಿ ನೋಂದಾ ಯಿಸಲು ತೀರ್ಮಾನಿಸಲಾಯಿತು. ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸಲಾಗಿದ್ದು, ಜಗನ್ನಾಥ ಶೆಟ್ಟಿ ಕುಂಬಳೆ ಗೌರವಾಧ್ಯಕ್ಷರಾಗಿ ಆಯ್ಕೆ ಯಾದರು. ಅಧ್ಯಕ್ಷರಾಗಿ …

ಶೇಷವನ: ಸುತ್ತು ಗೋಪುರಕ್ಕೆ ಶಿಲಾನ್ಯಾಸ

ಕೂಡ್ಲು: ಶೇಷವನ ಶ್ರಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ತೆಂಕು ಭಾಗದ ಸುತ್ತು ಗೋಪುರಕ್ಕೆ ಅರವತ್ ನಾರಾಯಣ ತಂತ್ರಿ ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಾಯ ಕಾರಂತ ಭೂಮಿ ಪೂಜೆ ನೆರವೇರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಉದ್ಘಾಟಿಸಿ ದೇವಸ್ಥಾನಗಳಲ್ಲಿ ಸುತ್ತು ಗೋಪುರಗಳ ಪ್ರಾಧಾನ್ಯತೆಗಳನ್ನು ವಿವರಿಸಿದರು. ಶೇಷವನ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಅನುವಂಶಿಕ ಮೊಕ್ತೇಸರ ಸದಾಶಿವ, ಟ್ರಸ್ಟ್ ಕಾರ್ಯದರ್ಶಿ ಗೋಪಾಲಕೃಷ್ಣ ಪಾಯಿಚಲ್, ವಾರ್ಡ್ ಸದಸ್ಯ ಸಂಪತ್ ಪೆರ್ನಡ್ಕ, …

ಮುನಂಬಂ ನ್ಯಾಯಾಂಗ ಆಯೋಗವನ್ನು ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು 

ಕೊಚ್ಚಿ: ಮುನಂಬಂನಲ್ಲಿ ವಕ್ಫ್ ಮಂಡಳಿಗೆ ಸೇರಿದ ವಿವಾದಾತ್ಮಕ ಜಮೀನಿಗೆ ಸಂಬಂಧಿಸಿ ಸರಕಾರ ನೇಮಿಸಿದ್ದ ನ್ಯಾಯಾಂಗ ಆಯೋ ಗವನ್ನು  ರಾಜ್ಯ ಹೈಕೋರ್ಟ್ ಇಂದು ಬೆಳಿಗ್ಗೆ ಅಸಿಂಧುಗೊಳಿಸಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಬೆಚ್ಚು ಕುರಿಯನ್ ಥೋಮಸ್‌ರನ್ನೊ ಳಗೊಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ಇಂದು ಈ ತೀರ್ಪು ನೀಡಿದೆ. ಮುನಂಬಂನಲ್ಲಿ ವಕ್ಫ್ ಮಂಡಳಿಗೆ ಸೇರಿದ ವಿವಾದಾತ್ಮಕ ಭೂಮಿಯ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಸಿ.ಎಂ. ರಾಮಚಂದ್ರನ್ ನಾಯರ್ ಅಧ್ಯಕ್ಷರಾಗಿರುವ ನ್ಯಾಯಾಂಗ ಆಯೋಗವನ್ನು ರಾಜ್ಯ ಸರಕಾರ ಈ ಹಿಂದೆ ನೇಮಿಸಿತ್ತು.  ಅದು …

ಬೆಳ್ಳೂರಿನಲ್ಲಿ ‘ನೆಟ್ಟಣಿಗೆ ರೈಸ್’ ಬಿಡುಗಡೆ ನಾಳೆ

ಬೆಳ್ಳೂರು: ಪಂಚಾಯತ್ ಕೃಷಿಭವನದ ನೇತೃತ್ವದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳೆಸಲಾದ ಅಕ್ಕಿಯನ್ನು ಗ್ರಾಹಕರಿಗೆ ದೊರಕಿಸಿಕೊಡುವ ಪ್ರಯತ್ನದ ಅಂಗವಾಗಿ ನೆಟ್ಟಣಿಗೆ ರೈಸ್ ಎಂಬ ಹೆಸರಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಅಕ್ಕಿ ಬಿಡುಗಡೆ ಕಾರ್ಯಕ್ರಮ ನಡೆಯ ಲಿದೆ. ಕೃಷಿ ತಂತ್ರಜ್ಞಾನ ನಿರ್ವಹಣಾ ಏಜೆನ್ಸಿ ಸಾಮರ್ಥ್ಯ ಉತ್ತಮಪಡಿಸಲು ತರಬೇತಿ ಕಾರ್ಯಕ್ರಮ, ಕೃಷಿಕರ ಒಕ್ಕೂಟ ರಚನೆ ನಾಳೆ ನಡೆಯಲಿದೆ. ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸುವರು. ಪದ್ಮಶ್ರೀ ಪುರಸ್ಕೃತ, ಭತ್ತದ ತಳಿ  ಸಂರಕ್ಷಕ ಸತ್ಯನಾರಾಯಣ ಬೆಳೇರಿ ಬ್ರಾಂಡ್ ಬಿಡುಗಡೆಗೊಳಿಸುವರು. ಗಣಪತಿ ಭಟ್ ಕುಂಜತ್ತೋಡಿ, …

ಸಿಗರೇಟ್, ಸೋಡ ಸಾಲ ನೀಡದ ದ್ವೇಷ: ಅಂಗಡಿಯ ಗೋದಾಮಿಗೆ ಸೀಮೆ ಎಣ್ಣೆ ಸುರಿದು ಕಿಚ್ಚು: 4 ಲಕ್ಷ ರೂ.ಗಳ ಸೊತ್ತು ಉರಿದು ನಾಶ

ಬದಿಯಡ್ಕ: ಸಿಗರೇಟ್,  ಸೋಡ ಸಾಲವಾಗಿ ನೀಡದ ದ್ವೇಷದಿಂದ ವ್ಯಕ್ತಿಯೋರ್ವ ಅಂಗಡಿಯ ಗೋದಾಮಿಗೆ ಕಿಚ್ಚಿಟ್ಟ ಪ್ರಕರಣ ನಡೆದಿದೆ. ಕನ್ಯಪ್ಪಾಡಿಯಲ್ಲಿರುವ ಜೆ.ಕೆ. ಬೇಕರ್ಸ್ ಮತ್ತು ಜೆ.ಕೆ. ಅರೇಂಜರ್ಸ್ ಎಂಬ ವ್ಯಾಪಾರ ಸಂಸ್ಥೆಯ ಗೋದಾಮಿಗೆ ಕಿಚ್ಚಿಡಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಅಂಗಡಿಯ ಮಾಲಕ ಕುಂಟಿಕಾನದ ಲ್ಯಾನ್ಸರ್ ಡಿಸೋಜಾ ನೀಡಿದ ದೂರಿನಂತೆ ತಲ್ಪನಾಜೆಯ ಸಂತು ಯಾನೆ ಸಂತೋಷ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಸಂತೋಷ್ …

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಇಬ್ಬರ ಸೆರೆ

ಕಾಸರಗೋಡು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಒಂದೂಮುಕ್ಕಾಲು ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಕೊಂಡೋಡಿ ನಿವಾಸಿ ಜಾಫರ್ ಎ.ಟಿ. (38) ಮತ್ತು ಕಣ್ಣೂರು ಕದಿರೂರು ಪೊಕಾಯಿ ಮುಕ್ ನಿವಾಸಿ ಮುದಾಸಿರ್ (35) ಬಂಧಿತ ಆರೋಪಿಗಳು. ಚಂದೇರ ಪೊಲೀಸರು ಇವರನ್ನು ಬಂಧಿಸಿದ್ದಾರೆ. 2024 ಡಿಸೆಂಬರ್ 7ರಂದು ಪಿಲಿಕ್ಕೋಡ್ ಎಚ್ಚಿಕೋವಲ್ ನಿವಾಸಿಯಾಗಿರುವ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಕುತ್ತಿಗೆಯಿಂದ ಇಬ್ಬರು ಚಿನ್ನದ ಸರ ಎಗರಿಸಿ ಪರಾರಿಯಾಗಿ ದ್ದರು. ಅದಕ್ಕೆ …

ಮತ್ತೆ ಎ.ಐ. ಕ್ಯಾಮರಾ: ಒಂದೇ ದಿನ ಸಿಕ್ಕಿಬಿದ್ದದ್ದು 500 ಮಂದಿ

ಕಾಸರಗೋಡು: ನಿರ್ಮಾಣ ಕೆಲಸದ ನಿಮಿತ್ತ ಕಳಚಿ ತೆಗೆಯಲಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳ ಎ.ಐ. ಕ್ಯಾಮರಾಗಳನ್ನು ಮರು ಸ್ಥಾಪಿಸಲಾಗಿದ್ದು, ಅದರ ಬೆನ್ನಲ್ಲೇ ಒಂದೇ ದಿನ ಟ್ರಾಫಿಕ್ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ 500ರಷ್ಟು ಮಂದಿ ಸಿಕ್ಕಿ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾವಣೆ, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ದ್ವಿಚಕ್ರ ವಾಹನದಲ್ಲಿ ಮೂವರ ಸವಾರಿ, ಸೀಟ್ ಬೆಲ್ಟ್ ಧರಿಸದೆ ವಾಹನದಲ್ಲಿ ಪ್ರಯಾಣ ಇತ್ಯಾದಿ ಟ್ರಾಫಿಕ್ ಉಲ್ಲಂಘನೆಗಳಿಗೆ ಸಂಬಂಧಿಸಿ ಇವರು ಸಿಕ್ಕಿ ಬಿದ್ದವರಾಗಿದ್ದಾರೆ.  ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ …

ನಾಟಿ ವೈದ್ಯೆ ನಿಧನ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬಳಿಯ ನಿವಾಸಿ ದಿ| ಕೃಷ್ಣ ಮಾರಾರ್‌ರ ಪತ್ನಿ  ಮಾಧವಿ ಮಾರಾರ್ (79) ನಿಧನ ಹೊಂದಿದರು. ನಾಟಿ ವೈದ್ಯೆಯಾಗಿ ಚಿರ ಪರಿಚಿತರಾಗಿದ್ದ ಇವರು ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದರು. ಮೃತರು ಮಕ್ಕಳಾದ ಸುರೇಶ್ ಮಾರಾರ್, ನಾರಾಯಣ ಮಾರಾರ್ (ಇಬ್ಬರೂ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಚೆಂಡೆ ವಾದಕರು), ಉಷಾ, ಧನಲಕ್ಷ್ಮಿ, ಅಳಿಯ- ಸೊಸೆಯಂದಿರಾದ ರಾಜನ್, ಗೋಪಿನಾಥ್, ವಸುಮತಿ, ಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಗರದಲ್ಲಿ ಬೈಕ್ ಕಳವು

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿದ್ದ ಬೈಕ್ ಕಳವುಗೈಯ್ಯಲ್ಪಟ್ಟಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೇಳುಗುಡ್ಡೆಯ ಪ್ರವೀಣ್ ಕುಮಾರ್ (45) ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾರ್ಚ್ 10 ಮತ್ತು 12ರ ದಿನದ ನಡುವೆ ಕಳವು ಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ನಗರದ ಕೋಟೆಕಣಿಯ ಕ್ವಾರ್ಟರ್ಸ್ ಒಂದರ ಬಳಿಯಿಂ ದಲೂ ಮೊನ್ನೆ ಬೈಕೊಂದು ಕಳವುಹೋಗಿತ್ತು.