ಮತ್ತೆ ಚಿರತೆ ಕಾಟ: ಸಾಕು ನಾಯಿ ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಚಿರತೆ ಕಾಟ ತಲೆಯೆತ್ತಿದೆ. ರಾಜಪುರಂ ಸಮೀಪದ ಪನತ್ತಡಿ ಕಲ್ಲಾಪಳ್ಳಿ ದೊಡ್ಡಮನೆಯ ಬಾಬು ಎಂಬವರ ಹಿತ್ತಿಲಿಗೆ ನುಗ್ಗಿದ ಚಿರತೆ ಸಾಕು ನಾಯಿಯನ್ನು ಕಚ್ಚಿ ಕೊಂಡೊಯ್ದಿದೆ. ಮುಂಜಾನೆ 3 ಗಂಟೆಗೆ ಚಿರತೆ ಮನೆಯೊಳಗೆ ಬಂದಿತ್ತೆಂದೂ ಶಬ್ದ ಉಂಟಾದಾಗ, ನಾವು ಹೊರಬಂದು ನೋಡಿದಾಗ ನಾಯಿ  ನಾಪತ್ತೆಯಾಗಿದೆಯೆಂದೂ ಮನೆಯವರು ತಿಳಿಸಿದ್ದಾರೆ. ಮಾತ್ರವಲ್ಲ ಮನೆ ಪಕ್ಕದ ಹಲವೆಡೆಗಳಲ್ಲಿ ಚಿರತೆಯ ದ್ದೆಂದು ಸಂಶಯಿಸಲಾಗುತ್ತಿರುವ ಕಾಲ್ಗುರುತುಗಳು ಪತ್ತೆಯಾಗಿದೆ. ಅರಣ್ಯಇಲಾಖೆಯ ಪನತ್ತಡಿ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕಾಗಮಿ ಸಿ ಶೋಧ ನಡೆಸಿದರೂ ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. …

ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು

ಕಾಸರಗೋಡು: ಹಳದಿ ಕಾಮಾಲೆ ಬಾಧಿಸಿ ಯುವಕ ಮೃತಪಟ್ಟನು. ಚಿತ್ತಾರಿ ನಿವಾಸಿ ಶ್ರೀಹರಿ ವಾರಿಕ್ಕಾಡ್ (24) ಮೃತಪಟ್ಟ ದುರ್ದೈವಿ.  ಅಸೌಖ್ಯ ಬಾಧಿಸಿದ್ದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ.  ನಾರಾ ಯಣನ್ ವಾರಿಕ್ಕಾಡ್‌ತಾಯರು-ಶ್ರೀದೇವಿ ಅಂತರ್ಜನರ ಪುತ್ರನಾದ ಮೃತರು ಸಹೋದರ ಶ್ರೀನೇಶ್ ವಾರಿಕ್ಕಾಡ್, ಸಹೋದರಿ ಶ್ರೀರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆಯಿಂದ 15,000 ರೂ. ಕಳವು: ಮಗನ ಸ್ನೇಹಿತನ ವಿರುದ್ಧ ಕೇಸು

ಕಾಸರಗೋಡು: ಮನೆಗೆ ಬಂದ ಮಗನ ಸ್ನೇಹಿತ ಆ  ಮನೆಯಿಂದ 15,೦೦೦ ರೂ. ನಗದು ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ನಾಯಮ್ಮಾರಮೂಲೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅರ್ಫಾನಾ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರ ಮಗನ ಸ್ನೇಹಿತ ನೆಲ್ಲಿಕಟ್ಟೆಯ ಸುಹೈಲ್ ಎಂಬಾತನ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಜೂನ್ ೭ರಂದು ಕಳವು ನಡೆದಿದೆ. ಕುಟುಂಬಶ್ರೀಯ ಸಾಲ ಪಾವತಿಸ ಲೆಂದು ತಾನು ಪುಸ್ತಕವೊಂದರ ಒಳಭಾಗದಲ್ಲಿ ಹಣ ಇರಿಸಿ ಪುಸ್ತಕವನ್ನು ಕಪಾಟಿನ ಮೇಲೆ ಇರಿಸಿದ್ದೆ.   ಅದನ್ನು …

ಯೆಮನ್ ಜೈಲಿನಲ್ಲಿರುವ ನಿಮಿಷಪ್ರಿಯರ ಗಲ್ಲುಶಿಕ್ಷೆ ರದ್ದುಗೊಳಿಸಲು ಒಪ್ಪಂದ: ಶಿಕ್ಷೆ ಕೂಡಲೇ ಜ್ಯಾರಿಗೊಳಿಸಬೇಕೆಂದು ತಲಾಲ್ ಕುಟುಂಬ ಆಗ್ರಹ

ಕಲ್ಲಿಕೋಟೆ: ಯೆಮನ್‌ನ ಜೈಲಿನಲ್ಲಿ ರುವ   ಕೇರಳೀಯ ದಾದಿ ನಿಮಿಷಪ್ರಿಯ ಎಂಬಾಕೆಯ ಗಲ್ಲುಶಿಕ್ಷೆಯನ್ನು ರದ್ದುಗೊ ಳಿಸಲು ಸಾಧ್ಯತೆ ಇದೆಯೆಂದು  ಚರ್ಚೆ ಯಲ್ಲಿ ಭಾಗವಹಿಸಿದ ಯೆಮನ್ ಪಂಡಿ ತರು ತಿಳಿಸಿರುವುದಾಗಿ ಕಾಂತಾಪುರಂರ ಕಚೇರಿ ಮೂಲಗಳು ತಿಳಿಸಿವೆ. ಇದೇ ವೇಳೆ  ಕ್ಷಮಾಧನದ ವಿಷಯದಲ್ಲಿ ಅಂತಿಮ ನಿರ್ಧಾರವುಂಟಾಗಿಲ್ಲ. ಆದರೆ ಕ್ಷಮೆ ನೀಡುವ ಬಗ್ಗೆ ಚರ್ಚೆಯಲ್ಲಿ ಒಪ್ಪಂದವಾಗಿ ರುವುದಾಗಿ ಹೇಳ ಲಾಗುತ್ತಿದೆ. ಅಂತಿಮ ನಿರ್ಧಾರ ಇನ್ನು ಕೆಲವೇ ಗಂಟೆಗ ಳೊಳಗೆ ಉಂಟಾಗಲಿದೆಯೆಂದೂ ಪಂಡಿತರು ತಿಳಿಸಿರುವುದಾಗಿ ಕಾಂತಾಪುರಂರ ಕಚೇರಿ ಮೂಲಗಳು ತಿಳಿಸಿವೆ. ನಿಮಿಷಪ್ರಿಯರ ಗಲ್ಲುಶಿಕ್ಷೆ ರದ್ದುಗೊಳಿಸಲಾಗುವುದು …

 ಎಂಡಿಎಂಎ ಪತ್ತೆ: ಓರ್ವ ಸೆರೆ

ಕಾಸರಗೋಡು: ವಾಹನ ವೊಂzರಲ್ಲಿ  ಮಾದಕದ್ರವ್ಯವಾದ 3.04 ಗ್ರಾಂ ಎಂಡಿಎಂಎ ಪತ್ತೆಯಾ ಗಿದ್ದು, ಇದಕ್ಕೆ ಸಂಬಂಧಿಸಿ ಹೊ ದುರ್ಗ ಮುರಿಯನಾವಿ ನಿವಾಸಿ ಸಾಜಿದ್ ಸಿ.ಎಚ್ (36) ಎಂಬಾತ ನನ್ನು ಬಂಧಿಸಲಾಗಿದೆ.  ಹೊಸದುರ್ಗ ಕುಶಾಲನಗರದಲ್ಲಿ   ಪೊಲೀಸರು ನಿನ್ನೆ ವಾಹನ ತಪಾಸಣೆ ನಿರತರಾಗಿದ್ದ ವೇಳೆ   ಬಂದ ಸಾಜಿದ್ ಚಲಾಯಿಸುತ್ತಿದ್ದ   ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ವಾಹನ ನಿಲ್ಲಿಸದೆ ಮುಂದಕ್ಕೆ ಸಾಗಿದೆ. ತಕ್ಷಣ ಪೊಲೀಸರು ವಾಹನವನ್ನು ಹಿಂಬಾಲಿಸಿ  ಆರೋಪಿ ಯನ್ನು ಬಂಧಿಸಿದ್ದರು.

ಯುವಕ ನೇಣು ಬಿಗಿದು ಸಾವು

ಮಂಜೇಶ್ವರ: ಯುವಕನೋರ್ವ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿಹಾರ ನಿವಾಸಿ ಸುಭಾಶ್‌ರಾಮ್ ಎಂಬವರ ಪುತ್ರ, ಕಡಂಬಾರ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸೂರಜ್ ಕುಮಾರ್ (19) ಸಾವಿಗೀಡಾದ ಯುವಕನಾಗಿ ದ್ದಾನೆ. ಕಡಂಬಾರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಇತರ ಕೆಲವರೊಂದಿಗೆ ಕ್ವಾರ್ಟರ್ಸ್‌ನಲ್ಲಿ  ವಾಸಿಸುತ್ತಿದ್ದನು.  ನಿನ್ನೆ ಅಪರಾಹ್ನ ೩ ಗಂಟೆಗೆ ಸಂಬಂಧಿಕ ಆದಿತ್ಯ ಕುಮಾರ್ ಎಂಬಾತ ಕ್ವಾರ್ಟರ್ಸ್‌ಗೆ ಹೋದಾಗ ಸೂರಜ್ ಕುಮಾರ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆನ್ನ ಲಾಗಿದೆ. ಕೂಡಲೇ  ಆಸ್ಪತ್ರೆಗೆ ತಲುಪಿ ಸಿದರೂ ಜೀವ …

ಬೀದಿ ನಾಯಿಗಳಿಂದ ದಾಳಿ ಭೀತಿ: ಕುಂಬಳೆಯಲ್ಲಿ ವಿದ್ಯಾರ್ಥಿಗಳು ಆತಂಕದಲ್ಲಿ;ಕ್ರಮ ಕೈಗೊಳ್ಳದ ಅಧಿಕಾರಿಗಳು

ಕುಂಬಳೆ: ಕುಂಬಳೆಯಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂ ಡಿದ್ದು ಇದರಿಂದ ಶಾಲಾ ವಿದ್ಯಾರ್ಥಿ ಗಳ ಸಹಿತ ಜನರಿಗೆ ನಡೆದಾಡಲಾಗದ ಸ್ಥಿತಿ ಉಂಟಾಗಿದೆ. ಬೀದಿ ನಾಯಿ ಗಳಿಂದ ಸಮಸ್ಯೆ ತೀವ್ರಗೊಂಡರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ ಗಮನ ಹರಿಸುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ.  ಬೀದಿ ನಾಯಿಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದೂ ನಾಗರಿಕರು ದೂರುತ್ತಿದ್ದಾರೆ. ಕುಂಬಳೆ ಪಂಚಾಯತ್ ಕಚೇರಿ, ಪೊಲೀಸ್ ಠಾಣೆ ಪರಿಸರ ಹಾಗೂ ಶಾಲಾ ಮೈದಾನ ಕೇಂದ್ರೀಕರಿಸಿ  ಬೀದಿ …

ಸ್ಥಳೀಯಾಡಳಿತ ಚುನಾವಣೆ: ಮತಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಆರಂಭ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗಳಿ ಗಿರುವ ಮತ ಯಂತ್ರಗಳ ಪ್ರಥಮ ಹಂತದ ತಪಾಸಣೆ ಆರಂಭ ಗೊಂಡಿದೆ. ಮತದಾನಕ್ಕೆ 5970 ಬ್ಯಾಲೆಟ್ ಯೂನಿಟ್‌ಗಳು, 2110 ಕಂಟ್ರೋಲ್ ಯೂನಿಟ್‌ಗಳನ್ನು ಸಿದ್ಧಪಡಿಸಲಾಗುವುದು. ಕಲೆಕ್ಟ್ರೇಟ್‌ನ ಜಿಲ್ಲಾ ವೇರ್ ಹೌಸ್ ಸಮೀಪ ಸಿದ್ಧಪಡಿಸಿದ ಪ್ರತ್ಯೇಕ ಸಭಾಂಗಣದಲ್ಲಿ ತಪಾಸಣೆ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಕೆ. ಇಂಬಶೇಖರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇಲೆಕ್ಟ್ರೋನಿಕ್ ಮತ ಯಂತ್ರವನ್ನು ತೆರೆದು ಮೊದಲ ಹಂತದ ತಪಾಸಣೆ ನಡೆಸಲಾಯಿತು. 20 ತಂಡಗಳು ತಪಾಸಣೆ ನಡೆಸುತ್ತಿವೆ. ಎಡಿಎಂ ಪಿ. ಅಖಿಲ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. …

ರಾಜ್ಯದಲ್ಲಿ ಬೆಲೆಯೇರಿಕೆ ಪಿಣರಾಯಿ ವಿಜಯನ್ ಸರಕಾರ ನಿರ್ಮಿಸಿದ ದುರಂತ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಉಂಟಾಗಿರುವ ಬೆಲೆಯೇರಿಕೆ ಪಿಣರಾಯಿ ವಿಜಯನ್ ಸರಕಾರ ನಿರ್ಮಿಸಿದ ದುರಂತವೆಂದು ಇದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸರಕಾರಕ್ಕೆ ಅವಕಾಶ ನೀಡುವುದಿಲ್ಲ ವೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಮಹಿಳಾಮೋರ್ಚಾ ತಾಲೂಕು ಸಮಿತಿ ಮುಂಭಾಗ ನಡೆಸಿದ ಗಂಜಿ ಸಿದ್ಧಪಡಿಸಿ ಪ್ರತಿಭಟನೆಯನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. 2016ರಲ್ಲಿ ಅಧಿಕಾರಕ್ಕೇರುವಾಗ ಇನ್ನು ಬೆಲೆಯೇರಿಕೆ ಉಂಟಾಗದೆಂದು ಘೋಷಿಸಿದ್ದ ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೇ ವೇಳೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ …

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಪಿರಾರಮೂಲೆ ನಿವಾಸಿ, ಕಡಂಬಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಗೋವಿಂದ ಶೆಟ್ಟಿಗಾರ್ (78) ನಿಧನ ಹೊಂದಿದರು. ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಸಿಪಿಎಂ ಮಂಜೇಶ್ವರ ಪ್ರಾದೇಶಿಕ ಮುಖಂಡರಾಗಿದ್ದರು. ಕೆಎಸ್‌ಕೆಟಿಯು ನೇತಾರರಾಗಿದ್ದು, ಹೊಸಂಗಡಿಯಲ್ಲಿ ಬಿ.ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯದ ಸ್ಥಾಪನೆಗೆ ಶ್ರಮ ವಹಿಸಿದ್ದರು. ಪದ್ಮಶಾಲಿ ಸಮಾಜದ ಹಿರಿಯರಾಗಿದ್ದರು. ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷ, ಕೆಎಸ್‌ಎಸ್‌ಪಿಯು ಮಂಜೇಶ್ವರ ಘಟಕ ಸದಸ್ಯರಾಗಿದ್ದರು. ಮೃತರು ಪತ್ನಿ ಗೀತಾರತ್ನ (ನಿವೃತ್ತ ಮಂಜೇಶ್ವರ ತಾಲೂಕು …