ದೈವ ಕಲಾವಿದ ನಾಪತ್ತೆ

ಕುಂಬಳೆ: ಯುವಕನೋರ್ವ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಪೇರಾಲ್ ಕಣ್ಣೂರು ಚೋಡಲ ಎಂಬಲ್ಲಿನ ದಿ|  ಮಂಚ ಎಂಬವರ ಪುತ್ರ ಉಮೇಶ (27) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ದೈವ ಕಲಾವಿದನಾದ ಇವರು  ಕಳೆದ ಫೆಬ್ರವರಿ 16ರಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿಯೂ ಪತ್ತೆಯಾಗದ ಹಿನ್ನೆಲೆ ಯಲ್ಲಿ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಮೇಶ್‌ರ ಕುರಿತು ಮಾಹಿತಿ ಲಭಿಸಿದಲ್ಲಿ ಕುಂಬಳೆ ಪೊಲೀಸ್ ಠಾಣೆ (ಫೋನ್: 04998-213037) ತಿಳಿಸಬೇ ಕಾಗಿ ಪೊಲೀಸರು ವಿನಂತಿಸಿದ್ದಾರೆ.

ಐತಿಹಾಸಿಕ ದಾಖಲೆಯತ್ತ ಚಿನ್ನದ ಬೆಲೆ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಐತಿಹಾಸಿಕ ದಾಖಲಯತ್ತ ನೆಗೆಯುತ್ತಿದೆ. ಇಂದು ಒಂದು ಪವನ್ ಚಿನ್ನಕ್ಕೆ 65,840 ರೂ.ಗೇರಿದೆ. ನಿನ್ನೆಗಿಂತ ಇಂದು 880 ರೂ.ಗಳ ಹೆಚ್ಚಳ ಉಂಟಾಗಿದೆ. ಇದಕ್ಕೆ ಅನುಸರಿಸಿ ಗ್ರಾಂ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ನಿನ್ನೆಗಿಂತ ಇಂದು 110 ರೂ.ಗಳ ಹೆಚ್ಚಳವಾಗಿ ಒಂದು ಗ್ರಾಂಗೆ 8230ರೂ.ಗೇರಿದೆ. ಈ ತಿಂಗಳ ಆರಂಭದಲ್ಲಿ ಒಂದು ಪವನ್ ಚಿನ್ನಕ್ಕೆ 63,520 ರೂ. ಆಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ 60 ಸಾವಿರ ರೂಪಾಯಿ ದಾಟಿರುವುದು ಜನವರಿ 22ರಂದು ಆಗಿತ್ತು. ಅನಂತರ ಕೆಲವೇ ದಿನಗಳೊಳಗೆ …

ಜಿಲ್ಲೆಯಲ್ಲಿ ವ್ಯಾಪಕಗೊಂಡ ಮಾದಕವಸ್ತು ದಂಧೆ: ಗಾಂಜಾ ಸಹಿತ ಮತ್ತಿಬ್ಬರ ಸೆರೆ

ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಉಪಯೋಗದ ವಿರುದ್ಧ ಅಬಕಾರಿ ಇಲಾಖೆ ಕಾರ್ಯಾ ಚರಣೆ ತೀವ್ರಗೊಳಿಸಿರುವಾಗ ಜಿಲ್ಲೆಗೆ ಗಾಂಜಾ, ಎಂಡಿಎಂಎ ಸಹಿತ ಮಾದಕವಸ್ತುಗಳು ಯಥೇಷ್ಠವಾಗಿ ಹರಿದುಬರುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಭಾರೀ ಪ್ರಮಾ ಣದ ಮಾದಕವಸ್ತು ವಶಪಡಿಸಲಾಗಿದೆ. ಮಾದಕವಸ್ತು ದಂಧೆಗೆ ಶಾಶ್ವತ ಕಡಿವಾಣ ಹಾಕುವ ಉದ್ದೇಶದಿಂದ ಅಬಕಾರಿ ಇಲಾಖೆ ಹಾಗೂ ಪೊಲೀಸರು ಕ್ರಮ ಮುಂದುವರಿಸಿದ್ದು ಈ ಮಧ್ಯೆ ಗಾಂಜಾ ಕೈವಶವಿರಿಸಿಕೊಂಡ ಹಲವರು ಸೆರೆಗೀಡಾಗುತ್ತಿದ್ದಾರೆ.  ಚೆಂಗಳ ಕುಂಡಡ್ಕದಲ್ಲಿ ವಿದ್ಯಾನಗರ …

ಕ್ರಷರ್ ಮೆನೇಜರ್‌ಗೆ ಹಲ್ಲೆ ನಡೆಸಿ ಹಣ ದರೋಡೆಗೈದ ಪ್ರಕರಣ: ಆರೋಪಿಗಳು ಉಪಯೋಗಿಸಿದ ಬಂದೂಕು ಪೊದೆಯಿಂದ ಪತ್ತೆ

ಕಾಸರಗೋಡು: ಮಾರ್ಚ್ 5ರಂದು ಸಂಜೆ ಹೊಸದುರ್ಗ ದ ಕಲ್ಯಾಣ್-ಅಂಬಲತ್ತುAಗರ ಬಳಿ ಹೊಸದುರ್ಗದ ಜಾಸ್ ಗ್ರಾನೈಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಮೆನೇಜರ್ ಕಲ್ಲಿಕೋಟೆ ನಿವಾಸಿ ಪಿ.ಪಿ. ರವೀಂದ್ರನ್ (56)ರಿಗೆ ಬಂದೂಕು ತೋರಿಸಿ ಬೆದರಿಸಿ 10.2 ಲಕ್ಷ ರೂ. ಮತ್ತು ಮೊಬೈಲ್ ಫೋನ್ ದರೋಡೆಗೈದ ಪ್ರಕರಣದ ಆರೋಪಿಗಳು ಉಪಯೋಗಿಸಿದ ಬಂದೂಕನ್ನು ಪೊಲೀಸರು ಪೊದೆಯಿಂದ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದು ಆಟಿಕೆ ಬಂದೂಕು ಆಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ಈ ದರೋಡೆಗೆ ಸಂಬAಧಿಸಿ ಬಿಹಾರ ಕತ್ತಿಯಾರ್ ಜಿಲ್ಲೆಯ ಸಮಾಪುರ್ ನಿವಾಸಿಗಳಾದ ಇಬ್ರಾನ್ ಆಲಂ …

ಮದ್ಯದಮಲಿನಲ್ಲಿ ತಂದೆಯನ್ನು ಮೆಟ್ಟಿ ಕೊಂದ ಪುತ್ರ ಸೆರೆ

ಕೊಚ್ಚಿ: ಎರ್ನಾ ಕುಳಂನಲ್ಲಿ ಮದ್ಯದ ಮಲಿನಲ್ಲಿ ತಂದೆಯನ್ನು ಪುತ್ರ ಮೆಟ್ಟಿ ಕೊಲೆಗೈದಿ ದ್ದಾನೆ. ಪೆರುಂಬಾವೂರು ತೆಕ್ಕ್‌ತಲ ಮನೆಯ ಜೋನಿ (67) ಕೊಲೆಗೀಡಾದ ವ್ಯಕ್ತಿ. ಘಟನೆಯಲ್ಲಿ ಪುತ್ರ ಮೆಲ್ಜೋ (35)ನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ೯ ಗಂಟೆಗೆ ಘಟನೆ ನಡೆದಿದೆ. ತಂದೆ ಪ್ರಜ್ಞಾಹೀನನಾಗಿ ಬಿದ್ದಿರುವುದಾಗಿ ಮೆಲ್ಜೋ ಸಂಬಂಧಿಕರಿಗೆ ಹಾಗೂ ನೆರೆಮನೆಯವರಿಗೆ ತಿಳಿಸಿದ್ದನು.  ಸಂಬಂಧಿಕರು ಸಹೋದರಿಗೆ ಮಾಹಿತಿ ನೀಡಿದ್ದು, ಅವರು ತಲುಪಿದ ಬಳಿಕ ಮೂವಾಟುಪುಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ನಿನ್ನೆ ನಡೆದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಜೋನಿಯ ಪಕ್ಕೆಲುಬುಗಳು …

ಭರದಿಂದ ನಡೆಯುತ್ತಿರುವ ಉಪ್ಪಳ ಪೇಟೆಯ ಫ್ಲೈಓವರ್ ಕಾಮಗಾರಿ

ಉಪ್ಪಳ: ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ತಲಪಾಡಿಯಿಂದ ಕಾಸರಗೋಡು ಮಧ್ಯೆ ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಇದರಂತೆ ಉಪ್ಪಳ ಪೇಟೆಯಲ್ಲಿ ಫ್ಲೆöÊಓವರ್ ಕಾಮಗಾರಿ ಭರದಿಂದ ನಡೆಯುತ್ತಿದೆ. ಉಪ್ಪಳ ಪೇಟೆಯಲ್ಲಿ ಸುಮಾರು 200 ಮೀಟರ್ ಉದ್ದದ ಫ್ಲೆöÊಓವರ್‌ನ ಕೆಲಸಗಳು ಹಾಗೂ ಕೈಕಂಬದ ಅಂಡರ್ ಪಾಸ್ ಮೇಲ್ಭಾಗ ಪರಿಸರದಲ್ಲಿ ಎತ್ತರಗೊಳಿಸುವ ಕೆಲಸಗಳು ಭರದಿಂದ ನಡೆಯುತ್ತಿದೆÀ. ಡಾಮರೀಕರಣ ಸಹಿತ ಇತರ ಕೆಲಸಗಳು ನಡೆದು ಇದೇ ತಿಂಗಳಲ್ಲಿ ಸಂಚಾರಕ್ಕೆ ತೆರೆದು ಕೊಡುವ ಸಿದ್ದತೆಯಲ್ಲಿದ್ದಾರೆ. ಸಂಚಾರ ಆರಂಭಗೊAಡರೆ ದಿನಿನಿತ್ಯ ವಾಹನಗಳ ದಟ್ಟಣೆಯ ಸಮಸ್ಯೆಯಿಂದ ಮುಕ್ತಿಹೊಂದಬಹುದು.ಉಪ್ಪಳ …

ಕುಂಬಳೆ ಪಂ.ನ ಪ್ರಥಮ ಪ್ರವಾಸಿ ತಾಣ ಕಿದೂರು ಪಕ್ಷಿ ಗ್ರಾಮ ನಿರೀಕ್ಷಕರನ್ನು ಕಾಯುತ್ತಿದೆ

ಕುಂಬಳೆ: ಕೇರಳದ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆಯಲು ಹಾತೊರೆದು ನಿಂತಿರುವ ಕಿದೂರು ಪಕ್ಷಿ ಗ್ರಾಮ ಅರಿಕ್ಕಾಡಿಯಿಂದ 7 ಕಿಲೋಮೀಟರ್ ಒಳಭಾಗದಲ್ಲಿರುವ ಪ್ರದೇಶವಾಗಿದೆ. ಕುಂಬಳೆ ಪಂಚಾಯತ್‌ನ ಪ್ರಥಮ ಪ್ರವಾಸಿ ತಾಣವಾಗಿದೆ. ಪಕ್ಷಿ ನಿರೀಕ್ಷಕರ ಹಾಗೂ ಸಂಶೋಧಕರ ಇಷ್ಟ ಕೇಂದ್ರವಾದ ಕಿದೂರಿನಲ್ಲಿ ಇದುವರೆಗೆ 152 ಬಗೆಯ ವಿವಿಧ ಪಕ್ಷಿಗಳನ್ನು ಕಂಡುಹಿಡಿಯಲಾಗಿದೆ. ವಂಶ ನಾಶದ ಭೀತಿಯಲ್ಲಿರುವ ಬೂದು ತಲೆಯ ಬುಲ್‌ಬುಲ್, ಬಿಳಿ ಕಿರೀಟದ ಕೊಕ್ಕರೆ, ನೀರುಕಾಗೆ, ಬೆಳ್ಳಕ್ಕಿ ಮತ್ತು ಕತ್ತಿ ಕೊಕ್ಕರೆ ಮೊದಲಾದ 38 ವಿಧದ ವಲಸೆ ಹಕ್ಕಿಗಳು ಇಲ್ಲಿ ಕಂಡುಬAದಿವೆ.ಪಶ್ಚಿಮ …

ತ್ಯಾಜ್ಯ ಸಂಸ್ಕರಣೆ ಉಲ್ಲಂಘನೆ ವಿರುದ್ಧ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ಕಠಿಣ ಕ್ರಮ: ವಿವಿಧೆಡೆಗಳಿಂದ ದಂಡ ವಸೂಲಿ

ಕಾಸರಗೋಡು: ತ್ಯಾಜ್ಯಮುಕ್ತ ಜಿಲ್ಲೆ ಎಂಬ ಘೋಷಣೆಯ ಅಂಗ ವಾಗಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ತ್ಯಾಜ್ಯ ಸಂಸ್ಕರಣೆ ಉಲ್ಲಂ ಘನೆಗಳ ವಿರುದ್ಧ ತಪಾಸಣೆ ತೀವ್ರಗೊ ಳಿಸಿದೆ. ಚೆಂಗಳ ಪಂಚಾಯತ್ನ ಬೇರ್ಕದಲ್ಲಿ ಕ್ವಾರ್ಟರ್ಸ್ಗಳಾಗಿ ಉಪಯೋಗಿಸುವ ಐದರಷ್ಟು ಕಟ್ಟಡ ಸಮುಚ್ಚಯಗಳಿಂದಿರುವ ಆಹಾರ ಪದಾರ್ಥಗಳ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯ ಕಟ್ಟಡ ವೊಂದರಲ್ಲಿ ರಾಶಿ ಹಾಕಿದ್ದು, ನಿರ್ಲಕ್ಷ್ಯ ವಹಿಸಿರುವುದಕ್ಕೆ ಹಾಗೂ ಒಂದು ಕಟ್ಟಡದಿಂದಿರುವ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟಿರು ವುದು ಪತ್ತೆಯಾದ ಹಿನ್ನೆಲೆಯಲ್ಲಿ ಮಾಲಕನಿಗೆ 15,000 ರೂ. …

ಸಿಪಿಐಯ ಹಿರಿಯ ಮುಖಂಡ ನಿಧನ

ಕಾಸರಗೋಡು: ಮಲೆನಾಡು ವಲಯದಲ್ಲಿ ಹಿರಿಯ ಸಿಪಿಐ ಮುಖಂಡನಾಗಿದ್ದ ನೀಲೇಶ್ವರ ಚಿರಿಪುರ ನಿವಾಸಿ ಮುಲ್ಲೂರ್ ಥೋಮಸ್ (88) ನಿಧನ ಹೊಂದಿ ದರು. ಪ್ರಸ್ತುತ ಸಿಪಿಐ ಚೋಯಂ ಗೋಡ್ ಬ್ರಾಂಚ್ ಸದಸ್ಯರಾಗಿದ್ದರು. ಇವರ ಪತ್ನಿ ರೋಸಮ್ಮ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಜೋರ್ಜ್ ಥೋಮಸ್, ಪೋಲ್ ಥೋಮಸ್, ಅಲ್ಲಿ ಥೋಮಸ್, ಲೆನಿನ್ ಥೋಮಸ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಶಾಲಾ ವಾಹನದಿಂದಿಳಿದ ವಿದ್ಯಾರ್ಥಿನಿಗೆ ಅದೇ ಬಸ್ ಢಿಕ್ಕಿಯಾಗಿ ಮೃತ್ಯು

ಕಲ್ಲಿಕೋಟೆ: ಶಾಲಾ ವಾಹನದಿಂದ ಇಳಿದ ವಿದ್ಯಾರ್ಥಿನಿ ಅದೇ ವಾಹನದ ಅಡಿಗೆ ಬಿದ್ದು ಮೃತಪಟ್ಟಿದ್ದಾಳೆ. ನಲ್ಲಳಂ ನಿವಾಸಿ ವಿ.ಪಿ. ಹಫ್ಸಲ್- ಸುಮಯ್ಯ ದಂಪತಿ ಪುತ್ರಿ ಸನ್ಹಾ ಮರಿಯಾ (8) ಮೃತಪಟ್ಟ ಬಾಲಕಿ. ನಿನ್ನೆ ಸಂಜೆ ನಾಲ್ಕೂವರೆ ವೇಳೆ ಕುಂಡಾಯಿ ತ್ತೋಡ್‌ನಲ್ಲಿ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿಯನ್ನು ಬಸ್‌ನಿಂದ ಇಳಿಸಿದ ಬಳಿಕ ವಾಹನವನ್ನು ಹಿಂದಕ್ಕೆ ತೆಗೆಯುವ ವೇಳೆ ಬಾಲಕಿಗೆ ಗುದ್ದಿದ್ದು, ಬಿದ್ದ ಬಾಲಕಿಯ ದೇಹದ ಮೇಲೆ ಬಸ್ ಹತ್ತಿ ಇಳಿದಿದೆ. ಬಾಲಕಿ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೃತದೇಹವನ್ನು ಶವಾಗಾರಕ್ಕೆ ತಲುಪಿಸಲಾಗಿದೆ. ಚೆರುವಣ್ಣೂರ್ …