ಕೂಡ್ಲು: ಪುರಂಬೋಕ್ ಹಕ್ಕುಪತ್ರ ಲಭಿಸಿದವರ ಭೂಮಿ ಸರ್ವೆ

ಕೂಡ್ಲು: ಪುರಂಬೋಕ್ನಲ್ಲಿ ಪಟ್ಟಾ ಲಭಿಸಿ ತೆರಿಗೆ ಪಾವತಿಸಲು ಸಾಧ್ಯವಾಗದೆ ಕೈವಶವಿರುವ ಭೂಮಿ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಾಣುವುದಕ್ಕಾಗಿ ಭೂಮಿಯನ್ನು ಅಳತೆ ಮಾಡಿ ರೀ ಸರ್ವೆ ದಾಖಲೆ ಸಿದ್ಧಪಡಿಸಲು ಆರಂಭಿಸಿದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಉದ್ಘಾಟಿಸಿದರು. ಈ ಮೊದಲು ರೀ ಸರ್ವೆ ಪೂರ್ತಿಗೊಳಿಸಿ ಕೂಡ್ಲು ವಿಲ್ಲೇಜ್ನಲ್ಲಿ ಸಮುದ್ರ ಪುರಂಬೋಕ್ನಲ್ಲಿ ಹಕ್ಕುಪತ್ರ ನೀಡಿದ 394, 395, 396, 397 ಎಂಬೀ ಸರ್ವೆ ನಂಬ್ರಗಳ ಕೈವಶವಿರುವ ಭೂಮಿಯನ್ನು ರೀಸರ್ವೆ ನಡೆಸಿ ರೆವೆನ್ಯೂ ದಾಖಲೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಸರ್ವೆ ಕಾರ್ಯ ಮುಂದಿನ …

ಕಟ್ಟಡದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಿಧನ

ಹೊಸದುರ್ಗ: ಕಟ್ಟಡದಿಂದ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮೃತಪಟ್ಟರು. ಮಡಿಯನ್ ಕುಲೋಂ ಕ್ಷೇತ್ರ ಬಳಿಯ ನಿವಾಸಿ ರಂಜು (42) ಮೃತಪಟ್ಟ ದುರ್ದೈವಿ. ಒಂದೂವರೆ ತಿಂಗಳ ಹಿಂದೆ ಹೊಸದುರ್ಗದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನಡೆದ ಮದುವೆ ಅತಿಥಿಸತ್ಕಾರ ಕಾರ್ಯಕ್ರಮ ವೇಳೆ ರಂಜು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ರಾತ್ರಿ ಮೃತಪಟ್ಟರು. ಇವರು ಕಾಞಂಗಾಡಿನ ಮಹಿಂದ್ರ ಫಿನಾನ್ಸ್ ನೌಕರನಾಗಿದ್ದರು.

ಜೋಯಿಂಟ್ ಕೌನ್ಸಿಲ್ ಮಂಜೇಶ್ವರ ವಲಯ ಸಮ್ಮೇಳನ

ಮಂಜೇಶ್ವರ: ಜೋಯಿಂಟ್ ಕೌನ್ಸಿಲ್ ಜಿಲ್ಲಾ ಸಮ್ಮೇಳನದಂಗವಾಗಿ ಮಂಜೇಶ್ವರ ವಲಯ ಸಮ್ಮೇಳನ ಜರಗಿತು. ಮಂಜೇಶ್ವರದ ಟಿ.ವಿ. ಥೋಮಸ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮವನ್ನು ಜೋಯಿಂಟ್ ಕೌನ್ಸಿಲ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎ. ಗ್ರೇಶಿಯಸ್ ಉದ್ಘಾಟಿಸಿದರು. ರಾಜ್ಯದ ಸರಕಾರಿ ನೌಕರರು, ಅಧ್ಯಾಪಕರ ೧೨ನೇ ವೇತನ ಪರಿಷ್ಕರಣೆ ಆಯೋಗ ರೂಪೀಕರಿಸಲು ಕ್ರಮ ಕೈಗೊಳ್ಳಬೇಕೆಂದು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾ ಯಿತು. ಅಧ್ಯಕ್ಷೆ ಸುಷ್ಮಾ ರಾವ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರಿಯಾಸ್ ಹುಸೈನ್ ಸ್ವಾಗತಿಸಿದರು.  ಜೋಯಿಂಟ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಇ. ಮನೋಜ್ ಕುಮಾರ್ ಚಟುವ ಟಿಕಾ …

ದೈಗೋಳಿ ಅಂಗನವಾಡಿ ಶಿಕ್ಷಕಿಗೆ ರಾಜ್ಯ ಪ್ರಶಸ್ತಿ

ವರ್ಕಾಡಿ: ಮೀಂಜ ಪಂಚಾಯತ್ ಕೋಳ್ಯೂರು ವಾರ್ಡ್‌ನ ದೈಗೋಳಿ ಅಂಗನವಾಡಿ ಟೀಚರ್ ವಿಶಾಲಾಕ್ಷಿಯವರಿಗೆ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆ ಗಿರುವ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ರೋಸಾ ಕುಟ್ಟಿ ಕೆ.ಸಿ. ವಿಶಾಲಾಕ್ಷಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ೨೭ ವರ್ಷಗಳಿಂದ ದೈಗೋಳಿ ಅಂಗನವಾಡಿಯಲ್ಲಿ ಇವರು ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೈಗೋಳಿ ಜ್ಞಾನೋದಯ ಸಮಾಜ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯೆಯಾಗಿರುವ ಇವರಿಗೆ ಸಂಘಟನೆಗಳು ಅಭಿನಂದನೆ …

ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ

ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಲಿಕೋತ್ಸವ ನಡೆಯಿತು. ಪಿಟಿಎ ಅಧ್ಯಕ್ಷ ಶಾಫಿ ಚೂರಿಪಳ್ಳ ಅಧ್ಯಕ್ಷತೆ ವಹಿಸಿದರು. ವಾರ್ಡ್ ಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಸಿಆರ್‌ಸಿ ಕೋ-ಆರ್ಡಿನೇಟರ್ ಭಾರತಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸ್ಟಾಫ್ ಕಾರ್ಯದರ್ಶಿ ಶಶಿಧರ ಮಾಸ್ಟರ್, ಹಿರಿಯ ಅಧ್ಯಾಪಕರಾದ ಕಾರ್ತಿಕ, ಸಿನಿ, ಪ್ರಭಾವತಿ ಶುಭ ಹಾರೈಸಿದರು. ವಿದ್ಯಾ ಟೀಚರ್, ತಂಗಮಣಿ, ಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಪ್ರಸ್ತಾಪಿಸಿದರು. ರಾಜೇಶ್ ಮಾಸ್ತರ್ …

ಬಾಡೂರಿನಲ್ಲಿ ಸಾಮೂಹಿಕ ಇಫ್ತಾರ್ ಕೂಟ

ಪುತ್ತಿಗೆ: ಬಾಡೂರು ನವಚೇತನ ಯೂತ್‌ಕ್ಲಬ್ ಮತ್ತು ನವಚೇತನ ಲೈಬ್ರೆರಿ ವತಿಯಿಂದ ನವಚೇತನ ಇಂಡೋರ್ ಮೈದಾನದಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು. ಕ್ಲಬ್‌ನ ಅಧ್ಯಕ್ಷ ಸಚಿನ್‌ರಾಜ್ ಎಂ., ಕಾರ್ಯದರ್ಶಿ ಕೃಪಾರಾಜ್ ಕೆ. ನೇತೃತ್ವ ನೀಡಿದರು. ಲೈಬ್ರೆರಿ ಅಧ್ಯಕ್ಷ ವಿಖ್ಯಾತ್ ರೈ, ಕಾರ್ಯದರ್ಶಿ ಪೂರ್ಣಚಂದ್ರ ಎಂ, ಕ್ಲಬ್‌ನ ಹಿರಿಯ ಸದಸ್ಯರು, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು.

ಸ್ಕೂಟರ್‌ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಯುವಕ ಮೃತ್ಯು: ಇನ್ನೋರ್ವನಿಗೆ ಗಾಯ

 ಉಪ್ಪಳ: ಸ್ಕೂಟರ್‌ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಮೊಬೈಲ್ ಅಂಗಡಿ ನೌಕರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಜತೆಗಿದ್ದ ಸ್ನೇಹಿತ ಗಾಯಗೊಂಡಿದ್ದು ಅವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ಕನ್ನಟಿಪಾರೆ ಕೆದಕ್ಕಾರು ನಿವಾಸಿ ಹನೀಫ್ ಎಂಬವರ ಪುತ್ರ ಮುಹಮ್ಮದ್ ಅನ್ವಾಸ್ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಂಗಡಿಮೊಗರು ನಿವಾಸಿ ಫಸಲ್ ರಹಿಮಾನ್ ಎಂಬವರು ಗಾಯಗೊಂ ಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ೪ ಗಂಟೆಗೆ ಮಂಜೇಶ್ವರ ಉದ್ಯಾವರ ರಫಾ ಹಾಲ್ ಬಳಿಯ ರಾಷ್ಟ್ರೀಯ …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಅಂಗನವಾಡಿ ಸಹಾಯಕಿ ಮೃತ್ಯು

ಬದಿಯಡ್ಕ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಂಗನ ವಾಡಿ ಸಹಾಯಕಿ ಮೃತಪಟ್ಟರು. ಬದಿಯಡ್ಕ ಬಳಿಯ ಬಾರಡ್ಕ ನಿವಾಸಿ   ಅರುಣ್ ಕುಮಾರ್ ಎಂಬವರ ಪತ್ನಿ ಲೀಲಾವತಿ (52) ಎಂಬವರು ಮೃತಪಟ್ಟವರು. ಇವರು ಬದಿಯಡ್ಕ ಚೆನ್ನಾರಕಟ್ಟೆ ಅಂಗನವಾಡಿಯ ಸಹಾಯಕಿ ಯಾಗಿದ್ದರು. ಕಳೆದ ಶನಿವಾರ ಇವರು ಜ್ಯೂಸ್‌ನಲ್ಲಿ ವಿಷ ಬೆರೆಸಿ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ …

ಸ್ಕೂಟರ್‌ಗೆ ಕಾರು ಢಿಕ್ಕಿ: ಗಾಯಗೊಂಡ ಯುವಕ ಮೃತ್ಯು

ಕುಂಬಳೆ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯ ಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವಕ ಮೃತಪಟ್ಟರು. ಕುಂಬಳೆ ಮುಳಿಯಡ್ಕ ನಿವಾಸಿ ರಾಜು ಎಂಬವರ ಪುತ್ರ ಪ್ರಮೋದ್ (35) ಮೃತಪಟ್ಟ ದುರ್ದೈವಿ. ಮೊನ್ನೆ ಮಧ್ಯಾಹ್ನ ನಾಯ್ಕಾಪಿನಲ್ಲಿ  ಅಪಘಾತ ಸಂಭವಿ ಸಿದೆ.  ಪ್ರಮೋದ್ ಹಾಗೂ  ಸ್ನೇಹಿತ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿತ್ತು. ಇದ ರಿಂದ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತಿದ್ದ ಪ್ರಮೋದ್ ಗಂಭೀರ ಗಾಯಗೊಂ ಡಿದ್ದರು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ …

ಪೈವಳಿಕೆ: ಬಾಲಕಿ, ಆಟೋ ಚಾಲಕನ ಸಾವು ಪ್ರಕರಣ: ಬಾಲಕಿ ನಾಪತ್ತೆಯಾದಂದು ರಾತ್ರಿ ಮನೆ ಸಮೀಪ ಸುತ್ತಾಡುತ್ತಿದ್ದ ಬೈಕ್ ಯಾರದ್ದು? ನಿಗೂಢತೆ ಪತ್ತೆಹಚ್ಚಲು ಪೊಲೀಸ್ ಕ್ರಮ

ಕುಂಬಳೆ: ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ನಿವಾಸಿಯಾದ 15ರ ಹರೆಯದ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (೪೨)ರ ಸಾವಿನ ಕಾರಣ ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವು ಆತ್ಮಹತ್ಯೆಯಾಗಿದೆಯೆಂದು ದೃಢೀಕರಿಸಲಾಗಿದೆ. ಆದರೆ ಆತ್ಮಹತ್ಯೆಗೆ  ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಬಾಲಕಿ ನಾಪತ್ತೆಯಾದ ಫೆಬ್ರವರಿ ೧೨ರಂದು ಮುಂಜಾನೆ 1.45ರ ವೇಳೆ ಆಕೆಯ  ಮನೆ ಸಮೀಪದಲ್ಲಿ  ರಸ್ತೆಯಲ್ಲಿ ಒಂದು ಬೈಕ್ …