ರಾಸಾಯನಿಕ ಸಾಮಗ್ರಿ ಸಾಗಿಸುತ್ತಿದ್ದ ಲಾರಿ ಬೈಕ್‌ಗೆ ಢಿಕ್ಕಿ: ಬೆಂಕಿ ತಗಲಿ ಬೈಕ್ ಸವಾರ ಸಾವು

ತೃಶೂರು: ಇಲ್ಲಿಗೆ ಸಮೀಪದ ಚಾಲಕ್ಕುಡಿ ಪೊಟ್ಟಾ ಆಶ್ರಮ ಸಿಗ್ನಲ್ ಬಳಿ ರಾಸಾಯನಿಕ ಸಾಮಗ್ರಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದು ಬೆಂಕಿಎದ್ದ  ಪರಿಣಾಮ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 7.30ರ ವೇಳೆಗೆ ನಡೆದಿದೆ. ಚಾಲಕ್ಕುಡಿ ವಿ.ಆರ್.ಪುರಂ ಞರಕ್ಕಲ್ ಅಶೋಕನ್ ಎಂಬವರ ಪುತ್ರ ಅನೀಶ್ (40) ಸಾವನ್ನಪ್ಪಿದ ದುರ್ದೈವಿ ಯುವಕ. ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದಿದ್ದು ತಕ್ಷಣ ಲಾರಿಯಲ್ಲಿ ಬೆಂಕಿ ಎದ್ದಿದೆ. ಇದರಿಂದಾಗಿ ಅದು ರಕ್ಷಣಾ ಕಾರ್ಯಾಚರಣೆ ವಿಳಂಬಗೊಳ್ಳು …

ಶಿಕ್ಷಣ, ಆರೋಗ್ಯ, ರೈತರ ಕಲ್ಯಾಣ, ಮುಲಭೂತ ಸೌಕರ್ಯ ಅಭಿವೃದ್ಧಿ: ಕಡು ಬಡತನ ನಿರ್ಮೂಲನೆಗೆ ಜಿಲ್ಲಾ ಪಂ. ಬಜೆಟ್‌ನಲ್ಲಿ ಆದ್ಯತೆ

ಕಾಸರಗೋಡು: ಕಡು ಬಡತನ ನಿರ್ಮೂಲನೆಗೆ ಆದ್ಯತೆ ನೀಡಿ ಕಾಸರಗೋಡು ಜಿಲ್ಲಾ ಪಂಚಾಯತ್ 2025-26ನೇ ವಾರ್ಷಿಕ ಬಜೆಟನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮಂಡಿಸಿದರು. ಜಿಲ್ಲಾ ಪಂ.ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಇಂದು ಸಂಜೆ ನಡೆಯುವ ಸಭೆಯಲ್ಲಿ ಬಜೆಟ್ಗೆ ಅಂಗೀಕಾರ ನೀಡಲಾಗುವುದು. 972,761,211 ರೂ. ಆದಾಯ ನಿರೀಕ್ಷಿಸಿರುವ, 960,121,000 ರೂ. ವೆಚ್ಚ ಅಂದಾಜಿಸಿರುವ ಬಜೆಟ್ ಮಂಡಿಸಲಾಗಿದೆ. ಮೂಲಭೂತ ಅಭಿವೃದ್ಧಿಗೆ ಮಾತ್ರವಲ್ಲದೆ ಜನರ ಆದಾಯವನ್ನು ಹೆಚ್ಚಿಸಿ ಜೀವನ …

ವಿದ್ಯುತ್ ಕಂಬದಿಂದ ಹಾರಿದ ಕಿಡಿ: ಹುಲ್ಲು ಉರಿದು ನಾಶ; ತಪ್ಪಿದ ಅಪಾಯ

ಮುಳ್ಳೇರಿಯ: ವಿದ್ಯುತ್ ಕಂಬದಿಂದ ಹಾರಿದ ಕಿಡಿ ಹುಲ್ಲಿಗೆ ಬಿದ್ದು ಬೆಂಕಿ ಆಕಸ್ಮಿಕ ಉಂಟಾಗಿದೆ. ಕಾರಡ್ಕ ಸರಕಾರಿ ಹೈಸ್ಕೂಲ್ ಸಮೀಪ ನಿನ್ನೆ ರಾತ್ರಿ ಅಪಾಯ ಸಂಭವಿಸಬಹುದಾದ ಸಾಧ್ಯತೆ ತಪ್ಪಿಹೋಗಿದೆ. ಒಣಗಿದ್ದ ಹುಲ್ಲಿಗೆ ಬೆಂಕಿ ತಗಲಿ ಹರಡಿದ ಕಾರಣ ಮೀಟರ್‌ಗಳಷ್ಟು ದೂರದಲ್ಲಿ ಹುಲ್ಲು ಭಸ್ಮವಾಗಿದೆ. ಸಮೀಪದ ಅಕೇಶಿಯಾ ಮರಗಳಿಗೆ ಬೆಂಕಿ ತಗಲುವುದನ್ನು ಸ್ಥಳೀಯರ ನೇತೃತ್ವದಲ್ಲಿ ಹಾಗೂ ಅಗ್ನಿಶಾಮಕದಳದ ಸಹಾಯದಿಂದ ನಂದಿಸಲು ಯತ್ನಿಸಲಾಗಿತ್ತು. ಈ ವೇಳೆ ಮಳೆ ಸುರಿದಿದ್ದು, ಬೆಂಕಿ ಹರಡುವುದಕ್ಕೆ ಕಡಿವಾಣ ಬಿತ್ತು. ಈ ಹಿನ್ನೆಲೆಯಲ್ಲಿ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿಹೋಗಿದೆ.

ರಾತ್ರಿ ವೇಳೆ ಮಹಿಳೆಯರಿಗೆ ಸಂದೇಶ: ಪ್ರಶ್ನಿಸಿದ ಯುವಕನಿಗೆ ಇರಿದು ಗಂಭೀರ ಗಾಯ

ಕಾಸರಗೋಡು: ರಾತ್ರಿ ಸಮಯಗಳಲ್ಲಿ ಮಹಿಳೆಯರಿಗೆ ಸಂದೇಶ ಕಳುಹಿಸುವುದರ ಬಗ್ಗೆ ಪ್ರಶ್ನಿಸಿದ ದ್ವೇಷದಿಂದ ಯುವಕನನ್ನು ಇರಿದು ಕೊಲ್ಲಲು ಯತ್ನಿಸಲಾಗಿದೆ. ನೀಲೇಶ್ವರ ಮಡಿಕೈ ಪುದುಕೈ ಆಲಿಂಗೀಳಿನ ಮುಹಮ್ಮದ್ ಮುಸಾಮಿಲ್ (೨೪)ರಿಗೆ ಇರಿಯಲಾಗಿದೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಬ್ದುಲ್ ಹಾರಿಸ್ (27) ಎಂಬಾತನ ವಿರುದ್ಧ ನೀಲೇಶ್ವರ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಮಡಿಕೈ ದಿವ್ಯಂಪಾರೆಯಲ್ಲಿ ಘಟನೆ ನಡೆದಿದೆ. ಮಹಿಳೆಯರಿಗೆ ರಾತ್ರಿ ವೇಳೆಗಳಲ್ಲಿ ಸಂದೇಶ ಕಳುಹಿಸುತ್ತಿದ್ದುದನ್ನು ಮುಹಮ್ಮದ್ ಮುಸಾಮಿಲ್ ಈ ಮೊ ದಲು …

ಕೂಟತ್ತಜೆ ದೈವಸ್ಥಾನ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶವರ: ಕೂಟತ್ತಜೆ ಕ್ಷೇತ್ರದಲ್ಲಿ ಉಳ್ಳಾಲ್ತಿ ಅಮ್ಮ, ಬಂಟ ಜಾವದೆ ಮತ್ತು ತೋಡಕುಕ್ಕಿನಾರ್ ಪರಿವಾರ ದೈವಗಳೊಂದಿಗೆ ನೆಲೆಗೊಂಡಿ ರುವ ಸ್ಥಾನ, ಮಾಡ ಮತ್ತು ಭಂಡಾರ ಮನೆಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದ್ದು, ಈ ತಿಂಗಳ 30ರಿಂದ ಎಪ್ರಿಲ್ 6ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಬಿಡುಗಡೆಗೊಳಿಸ ಲಾಯಿತು. 30ರಂದು ಅಪರಾಹ್ನ 3.30ಕ್ಕೆ ವಿವಿಧ ಪ್ರದೇಶಗಳಿಂದ ಹೊರೆಕಾಣಿಕೆ ಮೆರವಣಿಗೆ ದೈವಸ್ಥಾನಕ್ಕೆ ಆಗಮಿಸಲಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ವಾಮೀಜಿಗಳು, ನಾಡಿನ ಗಣ್ಯ ವ್ಯಕ್ತಿಗಳು ಭಾಗವಹಿಸುವರು ಎಂದು …

ಸಾಲದ ಹೊರೆ: ಕೊಡಕ್ಕಾಡ್‌ನಲ್ಲಿ ವೃದ್ಧ್ದ ನೇಣು ಬಿಗಿದು ಸಾವು

ಕಾಸರಗೋಡು: ಸಾಲ ಬಾಧೆ ಹಿನ್ನೆಲೆಯಲ್ಲಿ ಕೊಡಕ್ಕಾಡ್ ನಿವಾಸಿ ವೃದ್ಧ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಕ್ಕಾಡ್ ಓಲಾಟೆ ನಿವಾಸಿ ಒ. ರವೀಂದ್ರನ್ (70) ಆತ್ಮಹತ್ಯೆಗೈದವರು. ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮಧ್ಯೆ ಘಟನೆ ನಡೆದಿದೆ. ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಕಂಡು ಬಂದಿದ್ದರು. ಕೂಡಲೇ ಚೆರುವತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡುಹೋಗಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ …

ಆನ್‌ಲೈನ್ ಮೂಲಕ 2.5 ಲಕ್ಷ ರೂ. ಲಪಟಾವಣೆ: ಕೇಸು ದಾಖಲು

ಕಾಸರಗೋಡು: ಆನ್‌ಲೈನ್ ಮೂಲಕ ವ್ಯಾಪಾರದ ಮೂಲಕ ಭಾರೀ ಲಾಭ ಗಿಟ್ಟಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ಹಣ ಪಡೆದು ವಂಚಿಸಿದ ದೂರಿನಂತೆ ಎರ್ನಾಕುಳಂ ನಿವಾಸಿ ಮಹಿಳೆಯೋರ್ವೆಯ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಕಾಸರಗೋಡು ಆರ್‌ಡಿ ನಗರ ನಿವಾಸಿ 40ರ ಹರೆಯದ ಮಹಿಳೆ ಈಬಗ್ಗೆ ದೂರು ನೀಡಿದ್ದು, ಅದರಂತೆ ಎರ್ನಾಕುಳಂ ಕೋದಮಂಗಲ ನಿವಾಸಿ ಅನುಪಮ ಥೋಮಸ್ (35)  ವಿರುದ್ಧ ಕೇಸು ದಾಖಲಿಸ ಲಾಗಿದೆ. ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ಆರೋಪಿ ತನ್ನಿಂದ 2024 ಸೆಪ್ಟಂಬರ್‌ನಲ್ಲಿ ಮೊದಲು ಹಣ ಪಡೆದ ಬಳಿಕ ಅದರ …

ಹಾನಿಗೀಡಾದ ಚರಂಡಿ ದುರಸ್ತಿಗೆ ಕ್ರಮವಿಲ್ಲ : ನಗರದ ತ್ಯಾಜ್ಯ ನೀರು ಕರಂದಕ್ಕಾಡ್  ಬೀಜೋತ್ಪಾದನಾ ಕೇಂದ್ರದ ಗದ್ದೆಗೆ

ಕಾಸರಗೋಡು: ಚರಂಡಿಯಿಂದ ತ್ಯಾಜ್ಯನೀರು ಹರಿದು ಕೃಷಿ ಇಲಾಖೆ ಯ ಗದ್ದೆಯಲ್ಲಿ ತುಂಬಿಕೊಂಡ ಪರಿಣಾಮ ಕೃಷಿ ನಡೆಸಲಾಗದ ಸ್ಥಿತಿ ಉಂಟಾಗಿದೆ. ಕೃಷಿ ಇಲಾಖೆಯ ಕರಂದಕ್ಕಾಡ್ ನಲ್ಲಿರುವ ಬೀಜೋತ್ಪಾದನೆ ಕೇಂದ್ರದ ಬಯಲಿನಲ್ಲಿ ತ್ಯಾಜ್ಯ ನೀರು ಹಲವು ಕಾಲದಿಂದ ತುಂಬಿಕೊಳ್ಳುತ್ತಿದೆ. ನಗರ ದ ಬ್ಯಾಂಕ್ ರೋಡ್ ಮೂಲಕ ಸಾಗುವ ಚರಂಡಿಯಲ್ಲಿ ನಗರದ ಹೋಟೆಲ್, ವಸತಿ ಸಮುಚ್ಛಯ ಸಹಿತ ವಿವಿಧೆಡೆಗೆ ನೀರು ಹರಿದು ಹೋಗುತ್ತಿದೆ. ಕೃಷಿ ಇಲಾಖೆಯ ಗದ್ದೆಯ ಸಮೀಪ ಈ ಚರಂಡಿ ಬಿರುಕುಬಿಟ್ಟು ತ್ಯಾಜ್ಯ ನೀರು ನೇರವಾಗಿ ಗದ್ದೆಗೆ ಹರಿದು ಸೇರುತ್ತಿದೆ.  …

ಕೇಂದ್ರ ಹಣಕಾಸು ಸಚಿವೆ-ಮುಖ್ಯಮಂತ್ರಿ ಚರ್ಚೆ

ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗೆ ದೆಹಲಿಯಲ್ಲಿ ಚರ್ಚೆ ನಡೆಸಿದರು.  ಕೇರಳ ಹೌಸ್‌ನಲ್ಲಿ ನಡೆದ ಮಾತುಕತೆಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹಾಗೂ ಪ್ರೊ. ಕೆ.ವಿ. ಥೋಮಸ್ ಕೂಡಾ ಪಾಲ್ಗೊಂಡಿದ್ದರು. ವಯನಾಡು ಪುನರ್ವಸತಿಗಿರುವ ಸಾಲ ವಿನಿಯೋಗ ಕಾಲಾವಧಿ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು. ನಷ್ಟಗೊಂಡ ಕೇಂದ್ರ ಸಹಾಯವನ್ನು ಈ ಹಿಂದಿನ ಕಾಲಾವಧಿಗೆ ಅನುಸರಿಸಿ  ನೀಡಬೇಕೆಂದೂ ಆಗ್ರಹಪಡಲಾ ಯಿತು.  ವಯನಾಡ್, ವಿಳಿಂಞ್ಞಂ, ಸಾಲ ಮೊತ್ತ ಸಹಿತ ಕೇರಳದಲ್ಲಿ ಅಭಿವೃದ್ಧಿ ವಿಷಯಗಳ …

ವಾಹನ ತಪಾಸಣೆ ವೇಳೆ ಆಟೋ ರಿಕ್ಷಾ ನಿಲ್ಲಿಸದೆ ಪರಾರಿ

ಉಪ್ಪಳ: ಪೊಲೀಸರ  ವಾಹನ ತಪಾಸಣೆ ವೇಳೆ ನಿಲ್ಲಿಸದೆ ಪರಾರಿ ಯಾದ ಆಟೋ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಎಸ್‌ಐ ಉಮೇಶ್ ನೇತೃತ್ವದಲ್ಲಿ ಕಜೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿರುವುದಾಗಿ ದೂರಲಾಗಿದೆ.