ಆಟೋರಿಕ್ಷಾ ಅಪಘಾತ: ಕೇಸು ದಾಖಲು

ಉಪ್ಪಳ: ಆಟೋ ರಿಕ್ಷಾ ಅಪಘಾತಕ್ಕೀಡಾಗಿ ಇಬ್ಬರು ಮಹಿ ಳೆಯರು ಗಾಯಗೊಂಡ  ಸಂಬಂಧ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಈ ತಿಂಗಳ 7ರಂದು ಬೆಳಿಗ್ಗೆ 8.10ರ ವೇಳ ಮೊರತ್ತಣೆಯಿಂದ ಹೊಸಂಗಡಿ ಭಾಗಕ್ಕೆ ತೆರಳತ್ತಿದ್ದ ರಿಕ್ಷಾ ಕಡಂಬಾರ್ ಮಿಲ್ಲಿನ ಬಳಿ  ಮಗುಚಿ ಬಿದ್ದಿತ್ತು. ಈ ವೇಳೆ ರಿಕ್ಷಾದಲ್ಲಿ ಕಡಂಬಾರು ಕೊಳಕೆಗದ್ದೆಮೂಲೆಯ ಸುಮತಿ (47) ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಸಂಘ ಪರಿವಾರ ಮುಖಂಡ, ಹಿರಿಯ ಪತ್ರಕರ್ತ ಕಿದೂರು ಶಂಕರನಾರಾಯಣ ಭಟ್ ನಿಧನ

ಉಪ್ಪಳ: ಆರ್‌ಎಸ್‌ಎಸ್ ಹಿರಿಯ ಸ್ವಯಂಸೇವಕ, ಹೊಸದಿಗಂತ ಪತ್ರಿಕೆಯ ಕಾಸರಗೋಡು ಜಿಲ್ಲಾ ನಿವೃತ್ತ ವರದಿಗಾರ, ಹಿರಿಯ ಪತ್ರಕರ್ತ, ಕ್ಯಾಂಪ್ಕೋದ ಮಾಜಿ ನಿರ್ದೇಶಕ, ಕಳತ್ತೂರು ಬಳಿಯ ಮಾಳಿಗೆ ಮನೆ ನಿವಾಸಿ ಕಿದೂರು ಶಂಕರನಾರಾಯಣ ಭಟ್ (72) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ರಾಷ್ಟಿçÃಯ ಸ್ವಯಂಸೇವಕ ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ಅಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕöÈತಿಕ ಹಾಗೂ ಸಹಕಾರಿ ರಂಗದ ಮಾರ್ಗದರ್ಶಕರಾಗಿದ್ದರು. ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಕುಂಬಳೆ ಬಿಲ್ಡಿಂಗ್ ಕೋ-ಓಪರೇಟಿವ್ ಸೊಸೈಟಿಯ …

ಮಾದಕವಸ್ತು ವಶ : ಓರ್ವ ಸೆರೆ

ಕಾಸರಗೋಡು: ಚೆಂಗಳ ಚೂರಿ ಮೂಲೆ ಜಂಕ್ಷನ್‌ನಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಡಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.856 ಗ್ರಾಂ ಮೆಥಾಫಿಟಾಮಿನ್ ಮಾದಕವಸ್ತು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೂರಿಮೂ ಲೆಯ ಕ್ವಾಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ  ಮೊಹಮ್ಮದ್ ರಫೀಕ್ (35) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ (ಗ್ರೇಡ್) ಗಳಾದ ಸಂತೋಷ್ ಕುಮಾರ್ ವಿ.ವಿ, ಜನಾರ್ದನನ್ ಕೆ.ಎ, ಐ.ಬಿ ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ, ಸಿವಿಲ್ ಎಕ್ಸೈಸ್ …

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: 57ರ ವ್ಯಕ್ತಿ ಸೆರೆ

ಮಂಗಳೂರು: ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಸತತವಾಗಿ ದೌರ್ಜನ್ಯಗೈದ 57ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದ್ರಿ ಅಜಂಕಲ್ಲು ನಿವಾಸಿ ಪ್ರಕಾಶ್‌ನನ್ನು ಪೋಕ್ಸೋ ಕಾನೂನು ಪ್ರಕಾರ ಬಂಧಿಸಲಾಗಿದೆ.  ಮೂಡಬಿದ್ರಿಯಲ್ಲಿ ವಾಸಿಸುತ್ತಿ ರುವ ಬಾಲಕಿಯನ್ನು ಈತ ದೌರ್ಜನ್ಯಗೈದಿದ್ದಾನೆನ್ನಲಾಗಿದೆ. ಬಾಲಕಿ ವಾಸಿಸುವ ಮನೆ ಸಮೀಪ ಬಾಡಿಗೆಗೆ ವಾಸ ಮಾಡುತ್ತಿರುವ ಈತ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿ ರುವಾಗ ಅಲ್ಲಿಗೆ ತೆರಳಿ ದೌರ್ಜನ್ಯಗೈ ಯ್ಯುತ್ತಿದ್ದನೆಂದು ಬಾಲಕಿಯ ಹೆತ್ತವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಮೂಡಬಿದ್ರಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಸಹೋದರರಿಗೆ ತಂಡದಿಂದ ಹಲ್ಲೆ : 10 ಮಂದಿ ವಿರುದ್ಧ ಕೇಸು

ಬದಿಯಡ್ಕ: ನೆಲ್ಲಿಕಟ್ಟೆಯಲ್ಲಿ ಇಬ್ಬರು ಸಹೋದರರಿಗೆ ತಂಡ ವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ನೆಲ್ಲಿಕಟ್ಟೆ ನಿವಾಸಿಗಳಾದ ನಿಜಾಮುದ್ದೀನ್  (23), ಸಹೋದರ ಅಜ್ಮಲ್ ಎಂಬಿವರಿಗೆ ಮೊನ್ನೆ ತಂಡ ಹಲ್ಲೆಗೈದು ಕಲ್ಲಿನಿಂದ ಜಜ್ಜಿ  ಗಾಯಗೊಳಿಸಿರುವುದಾಗಿ ದೂರಲಾಗಿದೆ. ಗಾಯಗೊಂಡ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಇಬ್ಬರು ಸಹೋದರರು ನೆಲ್ಲಿಕಟ್ಟೆ ತಾಜ್  ಕಾಂಪ್ಲೆಕ್ಸ್ ಬಳಿ ನಿಂತಿದ್ದ ವೇಳೆ ಅಲ್ಲಿಗೆ ತಲುಪಿದ 10 ಮಂದಿ ತಂಡ ಹಲ್ಲೆಗೈದಿದೆ. ಈ ಸಂಬಂಧ ಸಕರಿಯ, ಅಶ್ರಫ್, ಶರೀಫ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಐದು ಮಂದಿ …

ಹುಟ್ಟಿನಿಂದಲೇ ಶಯ್ಯಾವಸ್ಥೆಯಲ್ಲಾದ ಬಾಲಕ ನಿಧನ

ಕಾಸರಗೋಡು: 16 ವರ್ಷ ದಿಂದ ಸಂಕಷ್ಟ ಜೀವನ ನಡೆಸುತ್ತಿದ್ದ ಶಹಾನ್ ರಿಯಾಸ್ ಅಬ್ದುಲ್ಲ (16) ನೋವಿಲ್ಲದ ಲೋಕಕ್ಕೆ ಪ್ರಯಾಣಿಸಿ ದನು. ರಾಜ್ಯ ಸರಕಾರದ ಎಂಡೋಸ ಲ್ಫಾನ್ ಸಂತ್ರಸ್ತ ಬಾಧಿತರ ಯಾದಿ ಯಲ್ಲಿ ಹೆಸರಿರುವ ಬಾಲಕನಾಗಿದ್ದಾನೆ ಪರಪ್ಪ ಬಾನಂ ರಸ್ತೆ ಬಳಿಯ ನಿವಾಸಿ ರಿಯಾಸ್- ರುಖಿಯಾ ದಂಪತಿ ಪುತ್ರ ಶಹಾನ್ ರಿಯಾಸ್. 16 ವರ್ಷವಾದರೂ ಜೀವನದಲ್ಲಿ ಒಮ್ಮೆ ಕೂಡಾ ನಡೆದಾಡಲು, ಎದ್ದು ನಿಲ್ಲಲು ಸಾಧ್ಯವಾಗದ ಈ ಬಾಲಕ ಸಂಕಷ್ಟ ಜೀವನ ನಡೆಸುತ್ತಿದ್ದನು. ನಿನ್ನೆ ಸಂಜೆ ತೀವ್ರ ಉಸಿರಾಟ ತೊಂದರೆ …

ಮುಷ್ಕರ ಇತ್ಯರ್ಥಗೊಳಿಸಲು ಇನ್ನೂ ಮುಂದಾಗದ ರಾಜ್ಯ ಸರಕಾರ: ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಕೇಂದ್ರ ತೀರ್ಮಾನ

ತಿರುವನಂತಪುರ: ಆಶಾ ಕಾರ್ಯ ಕರ್ತೆಯರು ವೇತನ ಹೆಚ್ಚಿಸಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿ ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ನಡೆಸುತ್ತಿರುವ  ಅನಿರ್ಧಿಷ್ಟಾವಧಿ ಮುಷ್ಕರ ಒಂದು ತಿಂಗಳು ದಾಟಿದೆ. ಅದು ಇನ್ನೂ ಮುಂದು ವರಿಯುತ್ತಿರುವಂತೆಯೇ  ಅದಕ್ಕೆ ಪರಿಹಾರ ಕಂಡುಕೊಳ್ಳುವ ಉಪಕ್ರಮಗಳು ರಾಜ್ಯ ಸರಕಾರದ ವತಿಯಿಂದ  ಈತನಕ ಉಂಟಾಗದಿರುವ ವೇಳೆಯಲ್ಲೇ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಿಸಲು ನಿರ್ಧರಿ ಸಿದೆ ಮತ್ತು ಸರಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿ …

ಉದುಮದ ಕಾಂಗ್ರೆಸ್ ಮುಖಂಡ ನಿಧನ

ಕಾಸರಗೋಡು: ಉದುಮದ ಕಾಂಗ್ರೆಸ್ ಮುಖಂಡ ಹೃದಯಾಘಾ ತದಿಂದ ನಿಧನ ಹೊಂದಿದರು. ಉದುಮ ಮಂಡಲ ಕಾಂಗ್ರೆಸ್ ಮಾಜಿ ಸೆಕ್ರೆಟರಿ, ಮಂಡಲ ಯೂತ್ ಕಾಂಗ್ರೆಸ್ ಮಾಜಿ ಸೆಕ್ರೆಟರಿಯಾಗಿದ್ದ ಮೇಲ್ಬಾರ ಕಿಳಕ್ಕೇಕರೆ ಸಿ. ಅರವಿಂದಾಕ್ಷನ್ (44) ಮೃತಪಟ್ಟವರು.  ನಿನ್ನೆ ರಾತ್ರಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ  ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ. ಫುಟ್ಬಾಲ್ ಆಟಗಾರನಾಗಿದ್ದರು. ದಿ| ಕರುವನ್- ಮಾಣಿಕ್ಕ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅನ್ಮಿ ಅರವಿಂದ್, ಸಾನ್ವಿ ಅರವಿಂದ್, ಸಹೋದರ ಸಿ. ವಿನೋದ್, ಸಹೋದರಿಯರಾದ …

ಕಂಚಿಕಟ್ಟೆ ಸೇತುವೆ ತೆರೆದುಕೊಡಲು ಮಾನವಹಕ್ಕು ಆಯೋಗಕ್ಕೆ ಸಮಾಜಸೇವಕ ಮನವಿ

ಕುಂಬಳೆ: ಕುಂಬಳೆ ಹೊಳೆಗೆ ಅಡ್ಡವಾಗಿ ನಿರ್ಮಿಸಿರುವ ಕಂಚಿಕಟ್ಟೆ ಸೇತವೆಯನ್ನು ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸಾಗುವ ರೀತಿಯಲ್ಲಿ ತೆರೆದುಕೊಡಬೇಕೆಂದು ಸಮಾಜಸೇವಕ ಐ ಮೊಹಮ್ಮದ್ ರಫೀಕ್ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಸೇತುವೆಯ  ಶೋಚನೀಯ ಸ್ಥಿತಿಯನ್ನು ಮನಗಂಡು 2024 ಮಾರ್ಚ್‌ನಲ್ಲಿ ಈ ಸೇತುವೆ ಮೂಲಕದ ಸಂಚಾರವನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಈ ಪ್ರದೇಶದ ಜನರ ಸಂಚಾರ ಸಮಸ್ಯೆ ತೀವ್ರಗೊಂಡಿತು. ಕಂಚಿಕಟ್ಟೆ, ಕುಂಡಾಪು, ಕೆಳಗಿನ ಆರಿಕ್ಕಾಡಿ, ಕೆಳಗಿನ ಕೊಡ್ಯಮ್ಮೆ, ಛತ್ರಂಪಳ್ಳ, ಚೂರಿತ್ತಡ್ಕ ಮೊದಲಾದ ಪ್ರದೇಶಗಳ ನೂರಾರು ಮಂದಿ ಕೃಷಿಕರು, ಕಾರ್ಮಿಕರು, ವ್ಯಾಪಾರಿಗಳು, …

ದೇವಸ್ಥಾನಗಳ ಉತ್ಸವಗಳಿಗೆ ಆನೆಯ ಬದಲಿಗೆ ರಥಗಳ ಬಳಕೆ

ತಿರುವನಂತಪುರ:  ರಾಜ್ಯದಲ್ಲಿ ದೇವಸ್ಥಾನಗಳ ಉತ್ಸವಕ್ಕೆ ಆನೆಗಳನ್ನು ಬಳಸುವ ಪರಂಪರಾಗತ ಸಂಪ್ರದಾ ಯ ರೀತಿಯನ್ನು ಕೈಬಿಟ್ಟು ರಥಗಳನ್ನು ಬಳಸುವ ಹೊಸ ಸಂಪ್ರದಾಯ ಅನು ಸರಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ. ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಉತ್ಸವ ವೇಳೆ ಉಪಯೋಗಿಸಿದ ಆನೆಗಳಿಗೆ ಮದವೇರಿದ ಪರಿಣಾಮ ಹಲವು ಭಕ್ತರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ  ಅದನ್ನು ತಡೆಗಟ್ಟುವ ಸಲುವಾಗಿ ಮಂಡಳಿ ಈ ಹೊಸ ತೀರ್ಮಾನಕ್ಕೆ  ಬಂದಿದೆ.  ಇದು ಮಾತ್ರವಲ್ಲ ಕ್ಷೇತ್ರೋತ್ಸವ ಗಳ ಅಂಗವಾಗಿ  ನಡೆಸಲಾಗುವ ಮೆರವಣಿಗೆಗಳಲ್ಲಿ  ಲೇಸರ್ ಶೋ, ಡಿಜೆ ಹಾಗೂ ನಾಸಿಕ್ ಡೋಲ್‌ಗಳ ಬಳಕೆಯ …