ಯುವತಿ ನಾಪತ್ತೆ

ಹೊಸದುರ್ಗ:  ಚಿತ್ತಾರಿ ಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲವಯಲ್‌ನಲ್ಲಿ ಯುವತಿ ನಾಪತ್ತೆಯಾ ಗಿರುವುದಾಗಿ ದೂರಲಾಗಿದೆ. ಇಲ್ಲಿನ ವಡಕ್ಕುನ್ನೇಲ್ ಥೋಮಸ್ ಅಬ್ರಹಾಂರ ಪುತ್ರಿ ಅಲೀನಾ ಥೋಮಸ್ (22) ನಾಪತ್ತೆಯಾದ ಯುವತಿ. ನಿನ್ನೆ ಬೆಳಿಗ್ಗೆ 9 ಗಂಟೆ ಹಾಗೂ ಸಂಜೆ ೪ರ ಮಧ್ಯೆ ಗಿನ ಸಮಯದಲ್ಲಿ ಪುತ್ರಿ ನಾಪತ್ತೆ ಯಾಗಿರುವುದಾಗಿ ಥೋಮಸ್ ಅಬ್ರ ಹಾಂ ಚಿತ್ತಾರಿಕ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯುವತಿಯ ಪತ್ತೆಗೆ ಸೈಬರ್ ಸೆಲ್‌ನ ಸಹಾಯದೊಂದಿಗೆ ತನಿಖೆ ಆರಂಭಿಸಲಾಗಿದೆ.

ವಿವಿಧೆಡೆಗಳಿಗೆ ಅಬಕಾರಿ ದಾಳಿ : ಮದ್ಯ, ವಾಶ್, ಗಾಂಜಾ ವಶ

ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ಹಲವೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ, ವಾಶ್ ಮತ್ತು ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಹೊಸದುರ್ಗ ರೈಲು ನಿಲ್ದಾಣ ರಸ್ತೆ ಬಳಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 18  ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿದ ಪಯ್ಯನ್ನೂರು ಕೋರೋಂ ನಿವಾಸಿ ಅಭಿಮನ್ಯು ಕೆ.ವಿ. (24) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂದಡ್ಕ ನರಂಬಿಲಕಂಡದಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜನಾರ್ದನನ್ …

ಚಿಕಿತ್ಸೆಗಾಗಿ ತಲುಪಿದ ಯುವತಿಗೆ ಕಿರುಕುಳ: ವೈದ್ಯನಿಂದ ನಿರೀಕ್ಷಣಾ ಜಾಮೀನು ಅರ್ಜಿ; ಪೊಲೀಸರಿಂದ ವರದಿ ಕೇಳಿದ ನ್ಯಾಯಾಲಯ

ಕಾಸರಗೋಡು: ಕಿಡ್ನಿ ಸಂಬಂಧ ರೋಗಕ್ಕೆ ಚಿಕಿತ್ಸೆಗಾಗಿ ತಲುಪಿದ ಯುವತಿಗೆ ಕಿರುಕುಳ ನೀಡಲಾಯಿ ತೆಂಬ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರಿಂದ ವರದಿ ಕೇಳಿದೆ. ಆರೋಪಿಯಾದ ವೈದ್ಯ ನಿರೀಕ್ಷಣಾ ಜಾಮೀನು ಅರ್ಜಿಯೊಂ ದಿಗೆ ನ್ಯಾಯಾಲ ಯವನ್ನು ಸಮೀಪಿ  ಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.  ಅಂಬಲತ್ತರ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಇರಿಯ ಎಂಬಲ್ಲಿ ಕ್ಲಿನಿಕ್ ನಡೆಸುವ ಡಾ| ಜೋಸ್ ಎಸ್ ಡೋನ್ ಆರೋಪಿ ಯೆನ್ನಲಾಗಿದೆ. ಚಿಕಿತ್ಸೆಗಾಗಿ ತಲುಪಿದ ಇಬ್ಬರು ಮಕ್ಕಳ ತಾಯಿಯಾದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವು ದಾಗಿ ಆರೋಪಿಸಿ …

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ವೈದ್ಯರ 2.23 ಕೋಟಿ ರೂ. ಲಪಟಾಯಿಸಿದ ಪ್ರಕರಣ: ರಾಜಸ್ಥಾನ ನಿವಾಸಿ ಸೆರೆ

ಕಾಸರಗೋಡು: ವರ್ಕ್ ಫ್ರಂ ಹೋಮ್ ಉದ್ಯೋಗ ಭರವಸೆ ನೀಡಿ ಹಾಗೂ ಆನ್‌ಲೈನ್ ಟ್ರೇ ಡಿಂಗ್ ಮೂಲಕ ವೈದ್ಯರೋರ್ವರ 2.23 ಕೋಟಿ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯಾಗಿರುವ ರಾಜಸ್ಥಾನ ನಿವಾಸಿಯನ್ನು ಕಾಸರಗೋಡು ಸೈಬರ್ ಸೆಲ್ ಪೊಲೀಸರ ತಂಡ ಬಂಧಿಸಿದೆ. ರಾಜಸ್ಥಾನ ಜೋಧ್‌ಪುರ್ ಕುಡಿ ಭಗಸ್ತಾನಿ ಬಳಿಯ ಸುನಿಲ್ ಕುಮಾರ್ ಜಾನ್ವರ್ (24) ಬಂಧಿತನಾದ ಆರೋಪಿ. ಕಾಸರಗೋಡು ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ಅವರ ಮೇಲ್ನೋಟದಲ್ಲಿ ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿಯ  ಹೊಣೆಗಾರಿಕೆ ಹೊಂದಿರುವ ಎಂ. ಸುನಿಲ್ ಕುಮಾರ್‌ರ …

ಐಷಾರಾಮಿ ಜೀವನದ ಜೊತೆಗೆ ಬಿಸಿಎ ಕಲಿಕೆ : ಬೆಂಗಳೂರಿನಲ್ಲಿ ಸೆರೆಯಾದ ಪ್ರಿನ್ಸಿ ರಾಜ್ಯಕ್ಕೆ ಮಾದಕಪದಾರ್ಥ ಸಾಗಿಸುವ ಕೊಂಡಿ

ಬೆಂಗಳೂರು: ರಾಜ್ಯಕ್ಕೆ ಮಾದಕ ಪದಾರ್ಥಗಳನ್ನು ತಲುಪಿಸುವ ಪ್ರಮುಖ ಕೊಂಡಿ ಟಾನ್ಸಿಯಾ  ಪ್ರಜೆಯನ್ನು ಬೆಂಗಳೂರಿನಿಂದ  ವಯ ನಾಡು ಪೊಲೀಸರು ಸೆರೆಹಿಡಿದಿದ್ದಾರೆ. ಗೋಬಾ ವಿಲ್ಲೇಜ್‌ನ ಪ್ರಿನ್ಸ್ ಸಂಸಾನ್ (25)ನನ್ನು  ಮಾದಕಪದಾರ್ಥ ವಿರುದ್ಧ ತಂಡ ಹಾಗೂ ಬತ್ತೇರಿ ಪೊಲೀಸರು ಜಂಟಿಯಾಗಿ ಸೆರೆಹಿಡಿದಿ ದ್ದಾರೆ. ಎಂ.ಎಸ್. ನಗರದಲ್ಲಿ ಈತ ವಾಸಿಸುವ ಪ್ಲ್ಯಾಟ್‌ನಿಂದ ಬತ್ತೇರಿ ಇನ್‌ಸ್ಪೆಕ್ಟರ್ ರಾಘವನ್‌ರ ನೇತೃತ್ವದಲ್ಲಿ ರುವ ಪೊಲೀಸ್ ತಂಡ ಈತನನ್ನು ಕಸ್ಟಡಿಗೆ ತೆಗೆದಿದೆ.  ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿ ದ್ದಾನೆ. ಕಳೆದ ತಿಂಗಳ 24ರಂದು  ಮುತ್ತಂಙದಲ್ಲಿ ಮಾದಕಪದಾರ್ಥ ಸಹಿತ …

ಅಸೌಖ್ಯ: ನಿವೃತ್ತ ಅಧ್ಯಾಪಕ ನಿಧನ

ಮಂ ಜೇಶ್ವರ: ಮೂಲತಃ ಮೀಯ ಪದವು ನಿವಾಸಿ ಪ್ರಸ್ತುತ ಕೀರ್ತೇ ಶ್ವರದಲ್ಲಿ ವಾಸಿಸುತ್ತಿದ್ದ ನಿವೃತ್ತ ಅಧ್ಯಾಪಕ ಜಯಂತ (60) ನಿನ್ನೆ ಸಂಜೆ ದೇರಳ ಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಎಸ್‌ಟಿಎ ಮಂಜೇಶ್ವರ ಉಪಜಿಲ್ಲಾ ಸಮಿತಿ ಮಾಜಿ ಕೋಶಾಧಿಕಾರಿ, ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಸದಸ್ಯ, ಮೀಯಪದವು ವಿದ್ಯಾವರ್ಧಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಸ್ಥಾಪಕ ಸದಸ್ಯ, ಕೆಎಸ್‌ಎಸ್‌ಪಿಯು ಮಂಜೇಶ್ವರ ಘಟಕ ಸದಸ್ಯ ಹಾಗೂ  ಹಲವು ವಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಯೋಗಿತ (ಮೀಯ ಪದವು ಶಾಲೆಯಲ್ಲಿ …

ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಪೊಲೀಸ್ ಭದ್ರತೆ ಆಗ್ರಹಿಸಿ ಹೈಕೋರ್ಟ್‌ನಲ್ಲಿ ಅರ್ಜಿ

ಕೊಚ್ಚಿ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಪೊಲೀಸರು ಪ್ರತ್ಯೇಕ ಭದ್ರತೆ ಏರ್ಪಡಿಸಬೇಕೆಂದು  ವಿನಂತಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕ್ಷೇತ್ರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಉತ್ಸವಕ್ಕಾಗಿ ಸಿದ್ಧತೆಗಳು ನಡೆಯುತ್ತಿರುವಂತೆ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಜಾಗ್ರತೆ ವಹಿಸಲು ಪೊಲೀಸ್ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಕೇಂದ್ರ- ರಾಜ್ಯ ಸಚಿವರು, ಸುಪ್ರಿಂ ಕೋರ್ಟ್- ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಖ್ಯಾತ ಕಲಾ-ಸಾಂಸ್ಕೃತಿಕ …

ಭಾರತೀಯ ಅಭಿಭಾಷಕ ಪರಿಷತ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಸಲಾಯಿತು. ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್  ನಂಬ್ಯಾರ್ ಉದ್ಘಾಟಿಸಿದರು.  ಜಿಲ್ಲಾ ಮಹಿಳಾ ಪ್ರಮುಖ್ ನ್ಯಾಯವಾದಿ ಕೆ.ಎಂ. ಬೀನಾ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಚೈತ್ರ, ಚೈತನ್ಯ ಎಂಬಿವರು ಮಾತನಾಡಿದರು. ಕಾಸರಗೋಡು ಘಟಕ ಕಾರ್ಯದರ್ಶಿ ನ್ಯಾಯವಾದಿ ಜಾಹ್ನವಿ ಸ್ವಾಗತಿಸಿ, ಸಂಗೀತ ವಂದಿಸಿದರು.

ಮಂಜೇಶ್ವರ ಪರಿಸರ ಚಿತ್ರೀಕರಿಸಿದ ತುಳು ಸಿನಿಮಾ ‘ಪಿದಯಿ’ಗೆ ದ್ವಿತೀಯ ಪ್ರಶಸ್ತಿ

ಬೆಂಗಳೂರು: ಮಂಜೇಶ್ವರ ಹಾಗೂ ಸುತ್ತು ಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಿದ ತುಳು ಸಿನಿಮಾಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮೇಳದಲ್ಲಿ ದ್ವಿತೀಯ ಉತ್ತಮ ಚಿತ್ರವಾಗಿ ಬಹುಮಾನ ಗಳಿಸಿದೆ.  ಫೆಸ್ಟಿವಲ್‌ನಲ್ಲಿ ಚಿತ್ರಭಾರತಿ, ಕರ್ನಾಟಕ ಸಿನಿಮಾ ಎಂಬ ಎರಡು ವಿಭಾಗಗಳಿಗಿರುವ  ಸ್ಪರ್ಧೆಯಲ್ಲಿ ‘ಪಿದಯಿ’  ಆಯ್ಕೆಯಾಗಿದೆ.  ಇದೇ ಪ್ರಥಮ ಬಾರಿಗೆ ತುಳು ಭಾಷಾ ಸಿನಿಮಾ ವೊಂದು ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವುದು. ನಮ್ಮ ಕನಸು ಬ್ಯಾನರ್‌ನಲ್ಲಿ ಕೆ. ಸುರೇಶ್ ನಿರ್ಮಿಸಿದ ಈ ಸಿನಿಮಾದ ಕಥೆ ಹಾಗೂ ಚಿತ್ರಕಥೆ, ಸಂಭಾಷಣೆಯನ್ನು ಮಂಜೇಶ್ವರ ನಿವಾಸಿ ರಮೇಶ್ ಶೆಟ್ಟಿಗಾರ್ ರಚಿಸಿದ್ದಾರೆ. …

ಕೂಲಿ ಕಾರ್ಮಿಕ ನಿಧನ

ಮಂಜೇ ಶ್ವರ: ಹೊಸಂ ಗಡಿ ಮಿತ್ತ ಕನಿಲ ನಿವಾಸಿ ದಿ| ನಾರಾ ಯಣ ಎಂಬವರ ಪುತ್ರ ತಾರಾನಾಥ (60) ನಿಧನ ಹೊಂದಿದರು.  ಕೂಲಿ ಕಾರ್ಮಿಕನಾಗಿ ದ್ದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆ ಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ತಲುಪಿಸಿದ ಅಲ್ಪ ಹೊತ್ತಿನಲ್ಲೇ ನಿಧನ ಸಂಭವಿಸಿದೆ. ಮೃತರು ಪತ್ನಿ ಶಿವಾನಿ, ಮಕ್ಕಳಾದ ಯಜ್ಞೇಶ್, ತನಿಶ್, ಸಹೋದರಿಯ ರಾದ ಪುಷ್ಪಾ, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಸುಂದರಿ, ಸಹೋದರ ಶ್ರೀಧರ ಈ ಹಿಂದೆ ನಿಧನಹೊಂದಿದ್ದಾರೆ.