ಬಾಯಾರುಪದವು: ವಿದ್ಯುತ್ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಮನವಿ

ಬಾಯಾರುಪದವು: ಬೋಳುಕಟ್ಟೆ, ಬಾಯಾರುಪದವು ನಿವಾಸಿಗಳ ವಿದ್ಯುತ್ ವೋಲ್ಟೇಜ್ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಸಿಪಿಎಂ ಬಾಯಾರು ಲೋಕಲ್ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿದ್ಯುತ್ ಇಲಾಖೆ ಸಚಿವ ಕೆ. ಕೃಷ್ಣನ್ ಕುಟ್ಟಿ ಅವರಿಗೆ ಮನವಿ ಸಮರ್ಪಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು ೨೦ ಮನೆಗಳು ಹಲವು ಕಾಲದಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಇದರ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳ ಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಭಾರ್ಗವಿ ಕುಟ್ಟಿ ಟೀಚರ್‌ಗೆ ಎಕೆಪಿಎ ಈಸ್ಟ್ ಘಟಕದಿಂದ ಗೌರವ

ಕಾಸರಗೋಡು: ವಿವಿಧ ರಂಗಗಳಲ್ಲಿ ಸಮಾಜಸೇವೆ ನಡೆಸುತ್ತಿರುವ  ಭಾರ್ಗವಿ ಕುಟ್ಟಿ ಟೀಚರ್‌ರನ್ನು ಎಕೆಪಿಎ ಕಾಸರ ಗೋಡು ಈಸ್ಟ್ ಘಟಕ ಸಮಿತಿ ವತಿ ಯಿಂದ ಗೌರವಿಸಲಾಯಿತು. ಮಹಿಳಾ ದಿನದಂಗವಾಗಿ ನಡೆದ  ಕಾರ್ಯಕ್ರಮ ದಲ್ಲಿ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುಜಿತ್,  ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ದಿನೇಶ್, ಮಣಿ ಭಾಗವಹಿಸಿದರು. ಬಡವರಿಗೆ ಬಲತುಂಬಲು, ವಸತಿ ಇಲ್ಲದವರಿಗೆ ಸ್ನೇಹ ಭವನ ನಿರ್ಮಿಸಿ ನೀಡಲು, ನಿರುದ್ಯೋಗಿಗಳಾದ ಮಹಿಳೆ ಯರಿಗೆ ಉದ್ಯೋಗ ವಲಯಕ್ಕೆ ತಲು ಪುವ ರೀತಿಯಲ್ಲಿ ಹಲವು ಯೋಜನೆ …

ಉರ್ಮಿ ಸೇತುವೆ ಕಂ ವಿಸಿಬಿ ನಿರ್ಮಾಣಕ್ಕೆ ಮೊತ್ತ ಮಂಜೂರು: ರಾಜ್ಯಸರಕಾರಕ್ಕೆ ಸಿಪಿಎಂ ಲೋಕಲ್ ಸಮಿತಿ  ಅಭಿನಂದನೆ

ಪೈವಳಿಕೆ: ಪೈವಳಿಕೆ ಪಂ. ವ್ಯಾಪ್ತಿಯ ಉರ್ಮಿಯಲ್ಲಿ ಸೇತುವೆ ಕಂ ವಿಸಿಬಿ ಪುನರ್ ನಿರ್ಮಿಸಲು ೧.೨೩ ಕೋಟಿ ರೂ. ಮಂಜೂರು ಮಾಡಿದ ರಾಜ್ಯ ಸರಕಾರಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಉರ್ಮಿ ಬ್ರಾಂಚ್ ಸಮಿತಿ ಅಭಿನಂದನೆ ಸಲ್ಲಿಸಿದೆ. ಈ ಸೇತುವೆ ಕುಸಿದು ಬಿದ್ದ ಕಾರಣ ಕುರುಡಪದವು, ಕೊಮ್ಮಂಗಳ, ಬಲ್ಲಂಗುಡೇಲು, ಕೊಳಚಪ್ಪು, ಬೋಳಂಗಳ ಮೊದಲಾದ ಪ್ರದೇಶಗಳ ನಾಗರಿಕರು, ಕೃಷಿಕರು ಸಂಕಷ್ಟಪಡುತ್ತಿದ್ದಾರೆ. ವಾಹನ ಸಂಚಾರಕ್ಕೂ ಸಮಸ್ಯೆ ಯಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ  …

ಮೃಗಾಲಯದ ಜಿಂಕೆಗೆ ಹುಚ್ಚು: ನೌಕರರಿಗೆ ಚುಚ್ಚುಮದ್ದು

ತಿರುವನಂತಪುರ: ಮೃಗಾಲಯ ದಲ್ಲಿ ಸತ್ತ  ಜಿಂಕೆಗೆ ಹುಚ್ಚುಹಿಡಿ ದಿರುವುದನ್ನು ಖಚಿತಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನೌಕರರಿಗೆ ವ್ಯಾಕ್ಸಿನ್ ನೀಡಲು ತೀರ್ಮಾನಿ ಸಲಾಗಿದೆ. ನಿನ್ನೆ ಮೃಗಾಲಯದಲ್ಲಿ ನಡೆಸಿದ  ಪೋಸ್ಟ್ ಮಾರ್ಟಂನಲ್ಲಿ  ಹಾಗೂ ಆ ಬಳಿಕ  ಸ್ಟೇಟ್ ಇನ್‌ಸ್ಟಿಟ್ಯೂಟ್ ಫಾರ್ ಎನಿಮಲ್ ಡಿಸೀಸ್ ನಡೆಸಿದ ಸಮಗ್ರ ತಪಾಸಣೆಯಲ್ಲಿ ಜಿಂಕೆಗೆ ಹುಚ್ಚು ಹಿಡಿದಿರುವುದನ್ನು ಖಚಿತಪಡಿಸಲಾ ಯಿತು. ಬಳಿಕ ಮೃಗಾಲಯದ ನಿರ್ದೇಶಕಿ ಪಿ.ಎಸ್. ಮಂಜುಳಾ ದೇವಿ ನಡೆಸಿದ ತುರ್ತು ಸಭೆಯಲ್ಲಿ ಜಿಂಕೆಯೊಂದಿಗೆ ನಿಕಟವಾಗಿ ವ್ಯವಹರಿಸುತ್ತಿದ್ದ ಎಲ್ಲಾ ನೌಕರರಿಗೂ  ಪೋಸ್ಟ್ ಎಕ್ಸ್‌ಪೋಷರ್ ಆಂಟಿ ರ‍್ಯಾಬಿಟ್ ವ್ಯಾಕ್ಸಿನ್ …

ಮಂಜೇಶ್ವರ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮ: ಮಹಿಳಾ ವಿಚಾರಗೋಷ್ಠಿ

ಉಪ್ಪಳ: ಮಂಜೇಶ್ವರ ತಾಲೂಕಿ ನಲ್ಲಿ ಜ್ಞಾನವಿಕಾಸ ಕಾರ್ಯ ಕ್ರಮದ ಅಂಗವಾಗಿ ಮಹಿಳಾ ವಿಚಾರಗೋಷ್ಠಿ ಜರಗಿತು. ಕುಂಬ್ಳೆ ವಲಯದ ಒಕ್ಕೂಟಗಳ ವಲಯಾಧ್ಯಕ್ಷೆ ಜಯಂತಿ ಗೋಪಾಲಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕುಂಬ್ಳೆ ವಾರ್ಡ್ ಸದಸೆÀ್ಯ ಸುಲೋಚನಾ .ಪಿ ಉದ್ಘಾಟಿಸಿ ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಉದ್ಯಮಿ ನಾರಾ ಯಣ ಪ್ರಭು, ವಕೀಲ ಉದಯ ಕುಮಾರ್ ಗಟ್ಟಿ ಭಾಗವಹಿಸಿದ್ದರು. ಜನಜಾಗÀÈತಿ ವೇದಿಕೆ ಸ್ಥಾಪಕಾಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲ್, ಜನಜಾಗ್ರತಿ ಕುಂಬ್ಳೆ …

ಪೈವಳಿಕೆ: ನಾಪತ್ತೆಯಾಗಿದ್ದ 15ರ ಹರೆಯದ ಬಾಲಕಿ, ಆಟೋ ಚಾಲಕನ ಸಾವು:  ಮುಂದುವರಿದ ನಿಗೂಢತೆ; ಮರಣೋತ್ತರ ಪರೀಕ್ಷೆ ಇಂದು ಪರಿಯಾರಂನಲ್ಲಿ

ಕುಂಬಳೆ: ನಾಪತ್ತೆಯಾಗಿ 26 ದಿನಗಳ ಬಳಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನ ಮೃತದೇಹಗಳ ಸಮಗ್ರ ಮರಣೋತ್ತರ ಪರೀಕ್ಷೆ ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ.   ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ೧೫ರ ಹರೆಯದ ವಿದ್ಯಾರ್ಥಿನಿ ಹಾಗೂ  ಮಂಡೆಕಾಪು ನಿವಾಸಿಯಾದ ಪ್ರದೀಪ್ (42) ಎಂಬಿವರ ಮೃತದೇ ಹಗಳು ಮಂಡೆಕಾಪಿನ ಹಿತ್ತಿಲಿನಲ್ಲಿ ರುವ ಮರದಲ್ಲಿ ನೇಣುಬಿ ಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಈ ಇಬ್ಬರ ಸಾವಿನಲ್ಲಿ ನಿಗೂಢತೆಗಳು ಹುಟ್ಟಿಕೊಂಡಿವುದಾಗಿ ಪೊಲೀಸ್ ಮೂಲಗಳು …

ಮಾದಕದ್ರವ್ಯ ಪ್ರಕರಣದ ಆರೋಪಿ ಮನೆಯಿಂದ ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಪತ್ತೆ

ಕಾಸರಗೋಡು: ರಾಜ್ಯದಲ್ಲಿ ಮಾದಕದ್ರವ್ಯ ಮಾರಾಟ, ಸಾಗಾಟ ಹಾಗೂ ಅವುಗಳ ವ್ಯಸನಿಗಳು ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಅದನ್ನು ತಡೆಗಟ್ಟಲು ಪೊಲೀಸರು ಮತ್ತು ಅಬಕಾರಿ ತಂಡಗಳು ರಾಜ್ಯದಾ ದ್ಯಂತ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿರುವಂತೆಯೇ ಮಲಪ್ಪುರಂ ನಲ್ಲಿ ಪೊಲೀಸರು ಇಂದು ಮುಂಜಾನೆ ನಡೆಸಿದ  ಬೃಹತ್ ಕಾರ್ಯಾಚರ ಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಒಂದೂವರೆ ಕಿಲೋ  ಮಾದಕದ್ರವ್ಯ ವಾದ ಎಂಡಿಎಂಎ ಪತ್ತೆಹಚ್ಚಿದ್ದಾರೆ. ಎಂಡಿಎಂಎ ಸಾಗಾಟ ಪ್ರಕರಣ ವೊಂದಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತನಾಗಿದ್ದ ಮಲಪ್ಪುರಂ ಕರಿಪ್ಪೂರ್ ಮುಕ್ಕೂಟ್ ನಿವಾಸಿ  ಮುಳ್ಳನ್ …

ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕೆ ನಂಬ್ಯಾರ್ ನಿಧನ

ಕಾಸರಗೋಡು: ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಭಾರತೀಯ ಸೇನಾ ಪಡೆಯ ನಿವೃತ್ತ  ಸೇನಾಧಿಕಾರಿ ಕಾಸರಗೋಡು ಕೇಳುಗುಡ್ಡೆ ಅಯ್ಯಪ್ಪ ನಗರ ಹರಿಶ್ರೀ ನಿವಾಸದ ಕ್ಯಾಪ್ಟನ್ ಕೆ.ಎಂ.ಕೆ ನಂಬ್ಯಾರ್ (ಕೆ.ಎಂ. ಕುಂಞಿಕಣ್ಣನ್ ನಂಬ್ಯಾರ್ 87) ನಿನ್ನೆ ನಿಧನಹೊಂದಿದರು. ಗೋವಾ ವಿಮೋಚನೆ ಹೋರಾಟ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕೆ.ಎಂ.ಕೆ ನಂಬ್ಯಾರ್ ಆ ಹೋರಾಟದಲ್ಲಿ ಜೈಲುವಾಸವನ್ನು  ಅನುಭವಿಸಿದ್ದರು. ಗೋವಾ ರಾಜ್ಯ ಸ್ವತಂತ್ರಗೊಂಡು ಭ ಭಾರತದ ಅವಿಭಾಜ್ಯ ಅಂಗವಾಗಿ ಸೇರ್ಪಡೆಗೊಂಡ ಬಳಿಕ ನಂಬ್ಯಾರ್ ಭಾರತೀಯ ಸೇನಾ ಪಡೆಗೆ ಸೇರ್ಪಡೆಗೊಂಡ  ಓರ್ವ ಯೋಧನಾಗಿ ವರ್ಷಗಳ ತನಕ ಸೇವೆ …

ನಿಲ್ಲಿಸದೆ ಪರಾರಿಯಾದ ಕಾರು: ಚಾಲಕನ ವಿರುದ್ಧ ಕೇಸು

ಮಂಜೇಶ್ವರ: ವಾಹನ ತಪಾಸಣೆ ವೇಳೆ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ 5.45ರ ವೇಳೆ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರ ಠಾಣೆಯ ಎಸ್.ಐ. ಸುಮೇಶ್ ರಾಜ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿ ನತ್ತ ಆಗಮಿಸುತ್ತಿದ್ದ ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಿದರೂ ಪರಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.

ಪತ್ರಿಕೆ ಓದುತ್ತಿದ್ದ ವೇಳೆ ಕುಸಿದುಬಿದ್ದು ಕೂಲಿ ಕಾರ್ಮಿಕ ನಿಧನ

ಪೆರ್ಲ: ಪತ್ರಿಕೆ ಓದುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟರು. ಸ್ವರ್ಗ ಬೆದ್ರಕ್ಕಾಡ್ ಬಳಿಯ  ಮಲ್ಲತ್ತಡ್ಕ ನಿವಾಸಿ  ಕೇಶವ ನಾಯ್ಕ್ (ನಾರಾಯಣ) (62) ನಿಧನ ಹೊಂದಿದರು. ಇವರು ನಿನ್ನೆ ಬೆಳಿಗ್ಗೆ ಚಹಾ ಕುಡಿದು ಪತ್ರಿಕೆ ಓದುತ್ತಿದ್ದಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಪೆರ್ಲದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಮೃತಪಟ್ಟಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ರಾಜೇಶ್, ಸುಮಲತಾ, ಅನುಶ್ರೀ, ಅಳಿಯ ಕಾರ್ತಿಕ್, ಸಹೋದರ ಶ್ರೀಕೃಷ್ಣ, ಸಹೋದರಿಯರಾದ ಸುಂದರಿ, ಸುಗಂಧಿ, ಸತ್ಯ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು …